Viral Video: ಜೇನುಗೂಡಿನ ಜೊತೆ ಪ್ರಯಾಣ ಬೆಳೆಸ್ತಾನೆ ಈತ!

By Suvarna NewsFirst Published Apr 12, 2023, 6:06 PM IST
Highlights

ಜೇನುನೊಣ ನೋಡಿದ್ರೆ ಜನರು ಓಡ್ತಾರೆ. ಇನ್ನು ನೂರಾರು ಜೇನಿರುವ ಜೇನು ಗೂಡಿನ ಜೊತೆ ಪ್ರಯಾಣ ಬೆಳೆಸೋದು ಸಾಮಾನ್ಯ ವಿಷ್ಯವಲ್ಲ. ಚೀನಾದ ವ್ಯಕ್ತಿಯೊಬ್ಬ ಈ ಸಾಹಸಕ್ಕೆ ಕೈ ಹಾಕಿದ್ದು, ಅದ್ರ ವಿಡಿಯೋ ವೈರಲ್ ಆಗಿದೆ. 
 

ಜೇನು ತುಪ್ಪ ಎಲ್ಲರಿಗೂ ಇಷ್ಟವಾಗುತ್ತೆ. ಆಹಾರದ ರೂಪದಲ್ಲಿ ಔಷಧಿ ರೂಪದಲ್ಲಿ ಜೇನು ತುಪ್ಪವನ್ನು ಸೇವನೆ ಮಾಡ್ತಾರೆ. ಸಾಕಷ್ಟು ಔಷಧಿ ಗುಣವನ್ನು ಹೊಂದಿರುವ ಜೇನು ತುಪ್ಪ ತಿನ್ನೋಕೆ ಎಷ್ಟು ರುಚಿಯೋ ಅದನ್ನು ತಯಾರಿಸುವ ಜೇನಿನಿಂದ ಕಚ್ಚಿಕೊಂಡ್ರೆ ಆಗುವ ನೋವು ಅಷ್ಟೇ ಅಪಾಯಕಾರಿ. ಜೇನು ಗೂಡು ಕಟ್ಟಿದೆ ಎಂದಾಗ ಜನರಲ್ಲೊಂದು ಭಯವಿರುತ್ತದೆ. ಯಾಕೆಂದ್ರೆ ಜೇನು ನೊಣಗಳು ಅವುಗಳಿಗೆ ಅಥವಾ ಅವುಗಳ ಗೂಡಿಗೆ ಸ್ವಲ್ಪ ಸಮಸ್ಯೆಯಾದ್ರೂ ಸಿಟ್ಟಿಗೇಳುತ್ತವೆ. ಜೇನುಗೂಡಿಗೆ ಯಾರಾದ್ರೂ ಕಲ್ಲೆಸೆದ್ರೆ ಕಥೆ ಮುಗಿತು. ಬೆನ್ನು ಹತ್ತಿ ಬರುವ ಜೇನುನೊಣಗಳು ಕಚ್ಚಿ ಕಚ್ಚಿ ಮನುಷ್ಯನನ್ನು ಸಾಯಿಸುತ್ತವೆ.

ಮನೆ (House) ಯಲ್ಲಿ ಎಲ್ಲಾದ್ರೂ ಜೇನುಗೂಡು (Beehive) ಕಟ್ಟಿದ್ರೆ ಮೊದಲು ಅದನ್ನು ಒಡೆಯುತ್ತಾರೆ. ಹಿಂಡಿನಲ್ಲಿ ಜೇನುನೊಣ ದಾಳಿ ಮಾಡಿದ್ರೆ ಹೆಚ್ಚು ಅಪಾಯಕಾರಿ. ಈಗ  ಮನೆಯಲ್ಲಿಯೇ ಅನೇಕರು ಜೇನು ಸಾಕುತ್ತಾರೆ. ಅದಕ್ಕೊಂದು ಗೂಡು ಮಾಡಿ, ಅದ್ರಲ್ಲಿ ಜೇನು ಕೃಷಿ (Agriculture) ಮಾಡುವವರಿದ್ದಾರೆ. ಹಾಗೆಯೇ ನಾವು ಕಾಡಿನಲ್ಲಿ ಮರಗಳ ಮೇಲೆ ಜೇನು ಗೂಡನ್ನು ನೋಡಬಹುದು. ಅಪರೂಪಕ್ಕೆ ಎನ್ನುವಂತೆ ಕೆಲ ದೇವಸ್ಥಾನಗಳ ಗೋಪುರದ ಮೇಲೆ ನೀವು ಜೇನುಗೂಡನ್ನು ನೋಡ್ಬಹುದು. ಜೇನುಗೂಡು ನೋಡಿದ ತಕ್ಷಣ ನಮಗೆ ಅರಿವಿಲ್ಲದೆ ನಮ್ಮ ಮೆದುಳು ಸಕ್ರಿಯವಾಗುತ್ತದೆ. ಅಪಾಯ ಸಂಭವಿಸಬಹುದು ಎಂದು ನಾವು ಜಾಗೃತರಾಗ್ತೇವೆ. ಆದ್ರೆ ಈ ವ್ಯಕ್ತಿ ಪ್ರತಿ ದಿನ ಜೇನುನೊಣಗಳ ಜೊತೆಗೆ ಸಂಚಾರ ನಡೆಸ್ತಾನೆ. ಸಾಮಾಜಿಕ ಜಾಲತಾಣದಲ್ಲಿ ಆತನ ವಿಡಿಯೋ ವೈರಲ್ ಆಗಿದೆ.

Latest Videos

Viral Video: 500ರ ನೋಟು ಸ್ಠಫ್‌ ಮಾಡಿ ಪರಾಠ ತಯಾರಿಸಿದ ಮಹಿಳೆ, ಮುಂದೇನಾಯ್ತು ಗೊತ್ತಾ?

ಸೌತ್ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ ವಾಸಿಸುವ ವ್ಯಕ್ತಿ  ಕಾರಿನಲ್ಲಿ ಜೇನುನೊಣಗಳು ಗೂಡ ಕಟ್ಟಿವೆ. ಕಾರಿನ ಮಾಲಿಕನೇ ಈ ಬಗ್ಗೆ  ವಿಡಿಯೋ ಮಾಡಿ ಜನರಿಗೆ ಮಾಹಿತಿ ನೀಡಿದ್ದಾನೆ. ಜೇನು ಗೂಡಿನ ಈ ವೀಡಿಯೋ ಅಂತರ್ಜಾಲದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ.  

ವೀಡಿಯೋದಲ್ಲಿರುವ ವ್ಯಕ್ತಿ ಕಾರು ಚಾಲನೆ ಮಾಡ್ತಿದ್ದಾನೆ. ಆತನ ತಲೆ ಬದಿಯಲ್ಲೇ ಜೇನು ಗೂಡು ಕಟ್ಟಿದೆ. ಜೇನು ನೊಣಗಳ ಜೊತೆ ನಾನು ಸಂಚಾರ ಮಾಡ್ತಿದ್ದೇನೆ ಎನ್ನುವ ವ್ಯಕ್ತಿ ತಾನು ಶೀಘ್ರದಲ್ಲೇ ಶ್ರೀಮಂತನಾಗಲಿದ್ದೇನೆ ಎಂದೂ ಹೇಳುತ್ತಿದ್ದಾನೆ.  ಚೀನೀ ಸಂಸ್ಕೃತಿಯ ಪ್ರಕಾರ, ಮನೆಯೊಳಗೆ ಜೇನುಗೂಡು ಇರುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ವೀಡಿಯೊವನ್ನು ಸೌತ್ ಚೀನಾ ಮಾರ್ನಿಂಗ್ ತನ್ನ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 

Viral News : 24 ಗಂಟೆ 130 ಕಿ.ಮೀ ಸೈಕಲ್ ಓಡಿಸಿದ ಬಾಲಕ, ಕಾರಣ ಕೇಳಿದ್ರೆ ದಂಗಾಗ್ತೀರಿ!

ಒಂದು ನಿಮಿಷ 35 ಸೆಕೆಂಡುಗಳ ಈ ವೀಡಿಯೊವನ್ನು  12.1 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ದಂಗಾಗಿದ್ದಾರೆ. ನೀವು ಜೇನುನೊಣಗಳನ್ನು ಅವರಪಾಡಿಗೆ ಬಿಟ್ರೆ ಅವು ನಿಮಗೆ ಏನೂ ಮಾಡೋದಿಲ್ಲ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಕಾರಿನ ಚಾಲಕ ಹಾಗೂ ಕಾರು ಎರಡೂ ಅದೃಷ್ಟ ಮಾಡಿದ್ದವು. ಅದಕ್ಕೆ ಜೇನು ಇಲ್ಲಿ ಗೂಡು ಕಟ್ಟಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 
ಜೇನುನೊಣವು ನಿಮ್ಮ ಮನೆಯಲ್ಲಿ ಅಥವಾ ಕಾರಿನಲ್ಲಿ ಗೂಡು ಕಟ್ಟುವುದು ಶುಭ ಸಂಕೇತವಾಗಿದ್ದು, ಈ ವ್ಯಕ್ತಿ ಜೀವನದುದ್ದಕ್ಕೂ ಖುಷಿಯಾಗಿರ್ತಾನೆಂದು  ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ಜೇನುನೊಣ ಕಾರಿಗೆ ಬಂದಿದ್ದು ಕೂಡ ವಿಶೇಷವೆ. ಯಾಕೆಂದ್ರೆ ಕಾರು ಚಾಲಕ ಕಾಡಿನ ಮೂಲಕ ಹಾದು ಹೋಗುತ್ತಿದ್ದಾಗ ಕಾರನ್ನು ಎಲ್ಲೋ ನಿಲ್ಲಿಸಿದ್ದಾನೆ. ಬಾಗಿಲು ತೆರೆದಿದ್ದ ಕಾರಣ ನೊಣಗಳು ಕಾರಿನೊಳಗೆ ಪ್ರವೇಶ ಮಾಡಿವೆ.  ಕಾರು ಹತ್ತಿದಾಗ ಆತನಿಗೆ ಈ ವಿಷ್ಯ ತಿಳಿದಿದೆ. 
 

This man drove on calmly while hundreds of bees swarmed above his head. pic.twitter.com/PToh2zBfBa

— South China Morning Post (@SCMPNews)
click me!