ಹುಲಿ ಬಳಿಕ ಮಾರುಕಟ್ಟೆಗೆ ಬಂದ 'ಬೆಲ್ಲ' ರಮ್‌, ಭಾರತ-ಅಮೆರಿಕದಲ್ಲಿ ಬಿಡುಗಡೆ ಮಾಡಿದ ಅಮೃತ್‌ ಡಿಸ್ಟಲರಿ!

By Santosh Naik  |  First Published Sep 28, 2024, 5:11 PM IST

Amrut Distilleries 100 pc jaggery distilled rum Bella ಪ್ರತಿಷ್ಠಿತ ಅಮೃತ್‌ ಡಿಸ್ಟಲ್ಲರಿ ಕಂಪನಿಯು ಶೇ. 100ರಷ್ಟು ಬೆಲ್ಲದ ಮೂಲದ ಮೆಚ್ಯೂರ್ಡ್‌ ಸಿಂಗಲ್‌ ರಮ್‌ 'ಬೆಲ್ಲ'ವನ್ನು ಬಿಡುಗಡೆ ಮಾಡಿದೆ. ಈ ಹೊಸ ರಮ್‌ ಈಗ ಭಾರತ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಲಭ್ಯವಿದೆ.


ಬೆಂಗಳೂರು (ಸೆ.28): ಇಲ್ಲಿಯವರೆಗೂ ಬೆಲ್ಲ ಎಂದಾಗ ಜನರಿಗೆ ನೆನಪಾಗೋದು ಸಿಹಿ ಮಾತ್ರ. ಕಬ್ಬಿನಿಂದ ಬರುವ ಉತ್ಪನ್ನ ಬೆಲ್ಲವನ್ನು ಮೆಚ್ಚದರವರೇ ಇಲ್ಲ. ಇನ್ನು ಮುಂದೆ ಬೆಲ್ಲ ಬರೀ ಸಿಹಿ ಮಾತ್ರವೇ ಅಲ್ಲ. ಅದೀಗ ಪ್ರಖ್ಯಾತ ಎಣ್ಣೆ ಬ್ರ್ಯಾಂಡ್‌. ಹೌದು, ಬೆಂಗಳೂರಿನ ಪ್ರತಿಷ್ಠಿತ ಡಿಸ್ಟಲ್ಲರಿ ಕಂಪನಿ ಅಮೃತ್‌ ಡಿಸ್ಟಲ್ಲರಿ ದೇಶದ ಮೊಟ್ಟಮೊದಲ ಶೇ. 100ರಷ್ಟು ಬೆಲ್ಲದ ಮೂಲದ ಮೆಚ್ಯೂರ್ಡ್‌ ಸಿಂಗಲ್‌ ರಮ್‌ ತಯಾರಿಸಿದೆ. ಇನ್ನೂ ವಿಶೇಷವೇನೆಂದರೆ, ತನ್ನ ಹೊಸ ರಮ್‌ಗೆ ಅದು ಕನ್ನಡದ 'ಬೆಲ್ಲ' ಎನ್ನುವ ಹೆಸರನ್ನೇ ಇಟ್ಟಿದೆ. ಇಂಗ್ಲೀಷ್‌ನಲ್ಲಿ ಇದಕ್ಕೆ ಜಾಗರಿ ಎನ್ನಲಾಗುತ್ತದೆಯಾದರೂ, ಅಪ್ಪಟ ಕರ್ನಾಟಕದ ಬ್ರ್ಯಾಂಡ್‌ ಆಗಿರುವ ಕಾರಣಕ್ಕೆ ಅಮೃತ್‌ ಡಿಸ್ಟಲ್ಲರಿಸ್‌ ತನ್ನ ಹೊಸ ರಮ್‌ಗೆ ಕನ್ನಡದ 'ಬೆಲ್ಲ' ಎನ್ನುವ ಹೆಸರನ್ನಿಟ್ಟಿದೆ. ಕಂಪನಿ ತನ್ನ 75ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ಇದನ್ನು ಅನಾವರಣ ಮಾಡಿದೆ. ಭಾರತ ಹಾಗೂ ಅಮೆರಿಕದಲ್ಲಿ ಈ ಬೆಲ್ಲ ರಮ್‌ ಬಿಡುಗಡೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಮೊದಲಿಗೆ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆಯಾಗಿದೆ. ದಸರಾ ವೇಳೆಗೆ ಸಂಪೂರ್ಣ ಭಾರತದಲ್ಲಿ ಮಾರಾಟ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಕೆಲ ತಿಂಗಳ ಹಿಂದೆ ನಂಜನಗೂಡಿನ ಮೈಕ್ರೋ ಡಿಸ್ಟಲ್ಲರಿ ಕೂಡ ಇದೇ ಮಾದರಿಯ ರಮ್‌ ಅನ್ನು ಅನಾವರಣ ಮಾಡಿತ್ತು. ದೇಶದ ಮೊದಲ ಬೆಲ್ಲದ ರಮ್‌ ಎನಿಸಿಕೊಂಡಿದ್ದ ಇದಕ್ಕೆ ಹುಲಿ ಎನ್ನುವ ಹೆಸರು ಇಟ್ಟಿತ್ತು. ಭಾರತದಲ್ಲಿನ ಹೆಚ್ಚಿನ ರಮ್‌ಗಳನ್ನು ಸಾಮಾನ್ಯವಾಗಿ ಮೊಲಾಸಸ್‌ (ಕಬ್ಬಿನ ಕಾಕಂಬಿ) ಅಥವಾ ಸಾಂದರ್ಭಿಕವಾಗಿ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಅಮೃತ್ ತನ್ನ ಟು ಇಂಡೀಸ್ ರಮ್ ಅನ್ನು ಬಿಡುಗಡೆ ಮಾಡಿತ್ತು, ಇದು ಭಾರತೀಯ ಬೆಲ್ಲ ಮತ್ತು ಕೆರಿಬಿಯನ್ ಮೊಲಾಸಸ್ನ ಮಿಶ್ರಣವಾಗಿದೆ. ಇದೀಗ ₹3,500 ಬೆಲೆಯ 'ಬೆಲ್ಲ'ದೊಂದಿಗೆ ಅಮೃತ್ ನೈಸರ್ಗಿಕ ಸಿಹಿಕಾರಕವಾದ ಬೆಲ್ಲದ ಬಳಕೆಗೆ ಮುಂದಾಗಿದೆ.

ಸಹ್ಯಾದ್ರಿ ಶ್ರೇಣಿ ಮತ್ತು ಮಂಡ್ಯದ ಬೆಲ್ಲದಿಂದ ತಯಾರಿಸಲಾದ ಬೆಲ್ಲ ರಮ್ ಅನ್ನು ಉಷ್ಣವಲಯದ ಹವಾಮಾನ ಪರಿಸ್ಥಿತಿಗಳಲ್ಲಿ ಎಕ್ಸ್-ಬೋರ್ಬನ್ ಬ್ಯಾರೆಲ್‌ಗಳಲ್ಲಿ ಆರು ವರ್ಷಗಳ ಕಾಲ ಪಕ್ವಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಮೃತ್ ಡಿಸ್ಟಿಲರೀಸ್‌ನ ಎಂಡಿ ರಕ್ಷಿತ್ ಎನ್ ಜಗದಾಳೆ ಈ ಬಗ್ಗೆ ಮಾತನಾಡಿದ್ದು, 'ಕಂಪನಿ ಸಂಸ್ಥಾಪನಾ ದಿನದಂದು, 'ಬೆಲ್ಲ' ರಮ್‌ಅನ್ನು ನಮ್ಮ ತಂದೆಗೆ ಅರ್ಪಿಸುತ್ತಿದ್ದೇವೆ. ಅವರ ಪ್ರಗತಿಪರ ಚಿಂತನೆಯಿಂದ ಇಂಥ ಮಾದರಿಯ ರಮ್‌ಅನ್ನು ಕರ್ನಾಟಕ ಅಬಕಾರಿ ಇಲಾಖೆಗೆ ಪ್ರಸ್ತುತಪಡಿಸುವ ಮೂಲಕ ಭಾರತದಲ್ಲಿ ಮೊಟ್ಟಮೊದಲ ಪರವಾನಗಿ ಪಡೆಯಲು ಕಾರಣರಾಗಿದ್ದರು. 2012 ರಲ್ಲಿ ಬೆಲ್ಲದ ಸಿಂಗಲ್ ರಮ್ ಪರವಾನಿಗಿಯನ್ನು ನಾವು ಪಡೆದುಕೊಂಡಿದ್ದೆವು. ನಾವು ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಬೆಲ್ಲವನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಸೆಪ್ಟೆಂಬರ್ 20ರಂದು ಬೆಲ್ಲ ಜಾಗತಿಕವಾಗಿ ಅನಾವರಣವಾಗಿದೆ' ಎಂದು ತಿಳಿಸಿದ್ದಾರೆ.

ಸಂಚಲನ ಸೃಷ್ಟಿಸಿದ ನಂಜನಗೂಡಿನ ಹುಲಿ, ಇದು ಭಾರತದ ಮೊದಲ ಬೆಲ್ಲದಿಂದ ತಯಾರಿಸಿದ ರಮ್!

ಐತಿಹಾಸಿಕವಾಗಿ, ಭಾರತವು ಮೊದಲ ಬೆಲ್ಲವನ್ನು ಉತ್ಪಾದಿಸುವ ದೇಶಗಳಲ್ಲಿ ಒಂದಾಗಿದೆ, ಅದರ ಮೂಲವು ಸಿಂಧೂ ಕಣಿವೆಯ ನಾಗರೀಕತೆಗೆ ಮರಳಿದೆ. ವಸಾಹತುಶಾಹಿಯ ಸಮಯದಲ್ಲಿ, ಸಕ್ಕರೆ ಕಾರ್ಖಾನೆಗಳ ಏರಿಕೆಯು ಸಂಸ್ಕರಿಸಿದ ಸಕ್ಕರೆಯ ಬೃಹತ್ ಉತ್ಪಾದನೆಗೆ ಕಾರಣವಾಯಿತು, ಇದು ಕ್ರಮೇಣ ಬೆಲ್ಲವನ್ನು ಆವರಿಸಿತು. ಭಾರತೀಯ ಮನೆಗಳಲ್ಲಿ ಇಂದಿಗೂ ಬೆಲ್ಲ ಪ್ರಮುಖ ಅಂಶ. ಇದನ್ನು ಸಾಮಾನ್ಯವಾಗಿ ಮಂಗಳಕರ ಸಂದರ್ಭಗಳಲ್ಲಿ ಸಿಹಿ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.

Tap to resize

Latest Videos

undefined

ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಭಾರತದ ಯಾವ ರಾಜ್ಯದಲ್ಲಿ ಮಹಿಳಾ ಕುಡುಕರ ಸಂಖ್ಯೆ ಹೆಚ್ಚು? NFHS ಸಮೀಕ್ಷೆ ಬಹಿರಂಗ!

 

click me!