ಬಹುಮಹಡಿ ಕಟ್ಟಡ ಮತ್ತು ಮಾಲ್‌ಗಳಲ್ಲಿರುವ ಲಿಫ್ಟ್‌ಗಳಲ್ಲಿ ಕನ್ನಡಿ ಇರುವುದನ್ನು ನೀವು ಗಮನಿಸಿರಬಹುದು. ಈ ಕನ್ನಡಿ ಕೇವಲ ಅಲಂಕಾರಕ್ಕಾಗಿ ಅಳವಡಿಸಿರುವುದಲ್ಲ.
ಯಾವುದೇ ಬಹುಮಹಡಿ ಕಟ್ಟಡ, ಮಾಲ್ ಗಳಲ್ಲಿ ಲಿಫ್ಟ್ ವ್ಯವಸ್ಯೆ ಇದ್ದೇ ಇರುತ್ತದೆ. ಲಿಫ್ಟ್/ಎಲಿವೇಟರ್‌ಗಳು ನಿಮ್ಮನ್ನು ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತದೆ. ಈ ಲಿಫ್ಟ್ ಗಳಲ್ಲಿ ಕನ್ನಡಿ ಇರೋದು ಎಲ್ಲರ ಗಮನಕ್ಕೆ ಬಂದಿರಬಹುದು. ಇಂದು ಬಹುತೇಕ ಲಿಫ್ಟ್ ಗಳಲ್ಲಿ ಕನ್ನಡಿಯನ್ನು ಅಳವಡಿಸಿರುತ್ತಾರೆ. ಜಪಾನ್ ನಲ್ಲಿ ಕನ್ನಡಿ ಅಳವಡಿಕೆಯನ್ನು ಕಡ್ಡಾಯಗಳಿಸಲಾಗಿದೆ. ಲಿಫ್ಟ್ ಅಥವಾ ಎಲಿವೇಟರ್‌ಗಗಳಲ್ಲಿ ಕನ್ನಡಿ ಯಾಕೆ ಅಳವಡಿಸಲಾಗಿರುತ್ತೆ ಎಂಬುದನ್ನು ಈ ಆರ್ಟಿಕಲ್‌ನಲ್ಲಿ ನೋಡೋಣ ಬನ್ನಿ.
ಲಿಫ್ಟ್ ಎಂಟ್ರಿ ಆಗುತ್ತಿದ್ದಂತೆ ಜನರು ಕನ್ನಡಿ ನೋಡಿಕೊಳ್ಳಲು ಮುಂದಾಗುತ್ತಾರೆ. ಮಹಿಳೆಯರು ತಮ್ಮ ಕೂದಲು, ಪುರುಷರು ಶರ್ಟ್ ಸರಿ ಮಾಡಿಕೊಳ್ಳುವಷ್ಟರಲ್ಲಿ ನಿಮ್ಮ ಫ್ಲೋರ್ ಬಂದಿರುತ್ತದೆ. ಜಪಾನ್‌ನ ಎಲಿವೇಟರ್ ಅಸೋಸಿಯೇಷನ್ ಕನ್ನಡಿಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಕನ್ನಡಿ ಕೇವಲ ಅಲಂಕಾರಕ್ಕಾಗಿ ಅಳವಡಿಕೆ ಮಾಡಿರುವುದಿಲ್ಲ. ಲಿಫ್ಟ್ ಗಳಲ್ಲಿ ಕನ್ನಡಿ ಅಳವಡಿಸೋದರಿಂದ ಅದರೊಳಗೆ ಪ್ರಯಾಣಿಸುವ ಜನರ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಅಂದ್ರೆ ನೀವು ನಂಬಲೇಬೇಕು.
undefined
ಮೊದಲು ಲಿಫ್ಟ್‌ನಲ್ಲಿ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಕಾರಣ ಲಿಫ್ಟ್ ಸ್ಥಳ ತುಂಬಾನೇ ಚಿಕ್ಕದಾಗಿರುತ್ತದೆ. ಇಂತಹ ಚಿಕ್ಕ ಸ್ಥಳದಲ್ಲಿ ಹೋಗಲು ಜನರು ಭಯಪಡುತ್ತಿದ್ದರು. ಈ ಭಯವನ್ನು ಕ್ಲಾಸ್ಟ್ರೋಫೋಬಿಯಾ ಎಂದು ಸಹ ಕರೆಯಲಾಗುತ್ತದೆ. ಈ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಲಿಫ್ಟ್ ನಲ್ಲಿ ಕನ್ನಡಿ ಅಳವಡಿಸುವ ಐಡಿಯಾ ಮಾಡಲಾಯ್ತು.
ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು
ಕನ್ನಡಿ ಅಳವಡಿಕೆ ಮಾಡಿರುವ ಕಾರಣ ಚಿಕ್ಕ ಜಾಗವೂ ದೊಡ್ಡದಾಗಿ ಕಾಣುತ್ತದೆ. ಗಾಜಿನ ಪ್ರತಿಬಿಂಬ ಸ್ಥಳ ದೊಡ್ಡದಾಗಿರುವಂತೆ ಕಾಣಿಸುತ್ತದೆ. ಇದರಿಂದ ಲಿಫ್ಟ್‌ನಲ್ಲಿ ಹೋಗುವಾಗ ಯಾವುದೇ ರೀತಿಯ ಭಯ ಉಂಟಾಗುವುದಿಲ್ಲ. ಕೆಲವು ಕಟ್ಟಡಗಳಲ್ಲಿ ಕನಿಷ್ಠ ಒಂದರಿಂದ ಎರಡು ನಿಮಿಷದಷ್ಟು ಸಮಯವನ್ನು ಲಿಫ್ಟ್‌ನಲ್ಲಿ ಕಳೆಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡಿ ಅಳವಡಿಕೆ ಕಡ್ಡಾಯವಾಗಿದೆ. ಕನ್ನಡಿ ಇದ್ರೆ ಜನರು ತಮ್ಮ ಪ್ರತಿಬಿಂಬ ನೋಡುತ್ತಾ ಕಾಲ ಕಳೆಯುತ್ತಾರೆ. ಹೀಗೆ ಸಮಯ ಕಳೆಯೋದರಿಂದ ಉಸಿರುಗಟ್ಟವ ವಾತಾವರಣ, ಭಯ ಉಂಟಾಗುವುದಿಲ್ಲ.
ಲಿಫ್ಟ್ ಒಳಗೆ ಬರುತ್ತಿದ್ದಂತೆ ಕನ್ನಡಿಯತ್ತ ಮುಖ ಮಾಡಿಕೊಂಡು ನಿಂತರೆ ನಿಮ್ಮ ಹಿಂದೆ ಯಾರೆಲ್ಲಾ ನಿಂತಿದ್ದಾರೆ ಎಂಬುದನ್ನು ಗಮನಿಸಬಹುದು. ತಮ್ಮ ಮುಂದೆ ಮತ್ತು ಹಿಂದೆ ಇರುವವರ ಮೇಲೆ ಕಣ್ಣಿಡಬಹುದು. ಈ ಎಲ್ಲಾ ಕಾರಣಗಳಿಂದ ಲಿಫ್ಟ್ ಗಳಲ್ಲಿ ಕನ್ನಡಿ ಅಳವಡಿಸಲಾಗುತ್ತದೆ.
ರೈಲು ಹಳಿಗಳು ಕಳ್ಳತನ ಆಗಲ್ಲ ಯಾಕೆ? ಏನಿದರ ರಹಸ್ಯ?