ರೈಲು ಹಳಿಗಳು ಕಳ್ಳತನ ಆಗಲ್ಲ ಯಾಕೆ? ಏನಿದರ ರಹಸ್ಯ?
ಭಾರತೀಯ ರೈಲ್ವೆಯ ಹಳಿಗಳನ್ನು ಕಳ್ಳರು ಏಕೆ ಕದಿಯುವುದಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ಆ ಕಾರಣಗಳು ಏನು ಎಂಬುವುದು ಈ ಲೇಖನದಲ್ಲಿದೆ.
ಮನೆ ಹೊರಗಿಟ್ಟ ವಸ್ತು ಒಳಗೆ ಹೋಗಿ ಬರುವಷ್ಟರಲ್ಲಿ ಕಳ್ಳತನ ಆಗಬಹುದು. ಕಳ್ಳರು ಯಾವ ವಸ್ತು ಕದಿಯಲ್ಲ ಎಂದು ಅಂದಾಜು ಮಾಡಲು ಸಹ ಅಸಾಧ್ಯವಾಗುತ್ತದೆ. ಕಳ್ಳರು ದೇವರ ವಿಗ್ರಹಗಳನ್ನು ಸಹ ಬಿಡಲ್ಲ. ಕಳ್ಳತನಕ್ಕೂ ಮುಂದೆ ದೇವರಿಗೊಂದು ನಮಸ್ಕಾರ ಮಾಡಿ ಕದಿಯುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದ್ರೆ ಭಾರತದಲ್ಲಿಯ ಈ ಒಂದು ವಸ್ತುವನ್ನು ಯಾವುದೇ ಕಾರಣಕ್ಕೂ ಕಳ್ಳರು ಮುಟ್ಟಲು ಹೋಗಲ್ಲ. ಯಾವ ಸೆಕ್ಯುರಿಟಿ ಇಲ್ಲದೇ ಇದ್ರೂ ಈ ವಸ್ತುವನ್ನು ಕದಿಯಲು ಪ್ರಯತ್ನಿಸಲ್ಲ. ಅದುವೇ ಭಾರತೀಯ ರೈಲ್ವೆಯ ಹಳಿಗಳು.
ರೈಲುಹಳಿಗಳು ಕಳ್ಳತನ ಆಗದಿರಲು ವಿಶೇಷ ಕಾರಣ ಸಹ ಒಂದಿದೆ. ಭಾರತೀಯ ರೈಲ್ವೆ ವಿಶ್ವದಲ್ಲಿ ಅತಿದೊಡ್ಡ ರೈಲು ಜಾಲ ಹೊಂದಿರುವ ನಾಲ್ಕನೇ ಸಂಸ್ಥೆಯಾಗಿದೆ. ಇ ಜಾಲ ಭಾರತದ ಪ್ರತಿಯೊಂದು ಭಾಗವನ್ನು ತಲುಪಿದ್ದು, ಜನಸ್ನೇಹಿ ಸೇವೆಯಿಂದ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಕಬ್ಬಿಣದ ವಸ್ತುಗಳ ಕಳ್ಳತನದ ಬಗ್ಗೆ ಕೇಳಿರುತ್ತೇವೆ. ಆದ್ರೆ ಭಾರತೀಯ ರೈಲ್ವೆ ಇಲಾಖೆ ರೈಲುಗಳ ಸಂಚಾರಕ್ಕೆ ಬಳಸಿರುವ ಲೋಹವನ್ನು ಯಾವ ಕಳ್ಳನು ಮುಟ್ಟಲಾರ. ಕಾರಣ ಈ ಹಳಿಗಳನ್ನು ಅತ್ಯಂತ ಭದ್ರವಾಗಿ ಕೆಳಭಾಗದ ಸಿಮೆಂಟ್ ಸ್ಲೀಪರ್ಸ್‌ಗಳಿಗೆ ಬಿಗಿಯಾಗಿ ಬಂಧಿಸಲಾಗಿರುತ್ತದೆ. ಸಿಮೆಂಟ್ ಸ್ಲೀಪರ್ಸ್‌ನಿಂದ ಲೋಹವನ್ನು ಬೇರ್ಪಡಿಸೋದು ಅಷ್ಟು ಸುಲಭದ ಮಾತಲ್ಲ.
ರೈಲು ಹಳಿಯ ಲೋಹವು ಮಿಶ್ರ ಧಾತುವಿನಿಂದ ಮಾಡಲಾಗಿರುತ್ತದೆ. ಹಾಗಾಗಿ ಈ ಧಾತು ಕತ್ತರಿಸೋದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಕದ್ದರೂ ಯಾವ ವ್ಯಾಪಾರಿಯೂ ಈ ಲೋಹವನ್ನು ಖರೀದಿಸುವುದಿಲ್ಲ. ಖರೀದಿ ಮಾಡಿದ ವ್ಯಾಪಾರಿಯೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ವ್ಯಾಪಾರಿಗಳು ಸುಲಭವಾಗಿ ರೈಲು ಹಳಿಯ ಲೋಹವನ್ನು ಸುಲಭವಾಗಿ ಗುರುತಿಸುತ್ತಾರೆ.
"ಸ್ವಲ್ಪ ನೋಡ್ಕೊಂಡು ಕೊಡಿ ಅಣ್ಣಾ" ರೈಲು ಮಾರಾಟಕ್ಕೆ ಮುಂದಾದ ವ್ಯಕ್ತಿ; ವಿಡಿಯೋ ವೈರಲ್
ರೈಲು ಹಳಿಯನ್ನು ಸಂಪೂರ್ಣವಾಗಿ ಕಬ್ಬಿಣದಿಂದ ಮಾಡಿರಲ್ಲ. ರೈಲು ಹಳಿಯನ್ನು ಮಿಶ್ರಲೋಹ ಉಕ್ಕಿನಿಂದ ಮಾಡಲಾಗಿದ್ದು, ಕಬ್ಬಿಣ ಮತ್ತು ಇಂಗಾಲದ ಸಂಯೋಜನೆಯಾಗಿದೆ. ಇವುಗಳ ತೂಕ ಅತ್ಯಧಿಕವಾಗಿರುತ್ತದೆ. ಉಕ್ಕಿನ ತೂಕ ಹೆಚ್ಚಾಗಿರುವ ಕಾರಣ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟಕರವಾಗಿದೆ. ಸಾಮಾನ್ಯ ರೈಲು ಹಳಿಯ ತೂಕ ಪ್ರತಿ ಮೀಟರ್‌ಗೆ ಸುಮಾರು 50 ರಿಂದ 60 ಕೆಜಿ ಹೊಂದಿರುತ್ತವೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ನಿಯಮಿತವಾಗಿ ರೈಲು ಹಳಿಗಳ ಸುತ್ತಲೂ ಗಸ್ತು ತಿರುಗುತ್ತಾರೆ.
ಅಳವಡಿಕೆ ಮಾಡಿರುವ ಹಳಿಯನ್ನು ಹೇಗೋ ಮಾಡಿ ಕದ್ದರೆ ಅದರ ಅಪಾಯ ತುಂಬಾ ಗಂಭೀರ ಸ್ವರೂಪದಾಗಿರುತ್ತದೆ. ವೇಗವಾಗಿ ಚಲಿಸುತ್ತಿರುವ ರೈಲು ಅಪಘಾತಕ್ಕೊಳಗಾಗಿ ನೂರಾರು ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಷ್ಟು ದೊಡ್ಡಪ್ರಮಾಣದ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಯಾವ ಕಳ್ಳನೂ ಮುಂದಾಗಲ್ಲ. ರೈಲ್ವೆ ಹಳಿಗಳನ್ನು ಗುರುತಿಸಲು ವಿಶೇಷ ಗುರುತುಗಳನ್ನು ಮಾಡಲಾಗಿರುತ್ತದೆ. ಇದರಿಂದ ಕಳ್ಳರು ಸುಲಭವಾಗಿ ಸಿಕ್ಕಿ ಬೀಳುತ್ತಾರೆ.
ರೈಲು ಹೊರಡೋಕೆ 10 ನಿಮಿಷ ಮುಂಚೆ ಕನ್ಫರ್ಮ್ ಟಿಕೆಟ್ ಪಡೆಯೋದು ಹೇಗೆ?