
ನಿತ್ಯಶ್ರೀ ಆರ್
ಜೋರಾದ ಶಬ್ದಗಳು ಕಿವಿಗೆ ನೋವುಂಟು
ಮಾಡಿದಾಗ ಮಾತ್ರ ಶ್ರವಣ ದೋಷ ಉಂಟಾಗುತ್ತದೆ ಸಾಮಾನ್ಯವಾಗಿ ಶಬ್ದದ ತೀವ್ರತೆಯು 100-120 ಡೆಸಿಬಲ್ ಮೀರಿದಾಗ ಕಿವಿಯಲ್ಲಿ ನೋವುಂಟು ಮಾಡುತ್ತದೆ. ಆದರೆ, ಕೇವಲ ೮೫ ಡೆಸಿಬಲ್‌ನಷ್ಟು (8 ಗಂಟೆಗಳಿಗೂ ಹೆಚ್ಚು ಕಾಲ) ಶಬ್ದದಿಂದಲೂ ಶ್ರವಣ ದೋಷ ಉಂಟಾಗುತ್ತದೆ. ಹಾಗಾಗಿ 85 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದಗಳು ನೋವುಂಟು ಮಾಡುವ ಮೊದಲೇ ಶ್ರವಣ ದೋಷ ಉಂಟು ಮಾಡುವುದರಿಂದ ಈ ಬಗ್ಗೆ ಹುಷಾರಾಗಿರುವುದು ಒಳಿತು. ಕಿವಿಯ ಬಳಿ ಅನಿರೀಕ್ಷಿತವಾಗಿ ಜೋರಾಗಿ ಕಿರುಚುವುದು ಸಹ ಅಪಾಯಕಾರಿ.
ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ, ಮೈಸೂರು ಅಂದು ಕಿವಿಯಲ್ಲಿ ಗುಂಯ್‌ಗುಟ್ಟುವಿಕೆ ಜಾಸ್ತಿಯಾ ಗಿತ್ತು. ಕಳೆದೆರೆಡು ದಿನಗಳಿಂದ ಕಿವಿಯಲ್ಲಿ ವಿಚಿತ್ರ ಶಬ್ದಗಳು ಶುರುವಾಗಿದ್ದವು.
ಪ್ರಪಂಚದಲ್ಲಿ ಉಂಟಾಗುತ್ತಿರುವ ಶಬ್ದಗಳೆಲ್ಲಾ ನನ್ನ ಕಿವಿಯನ್ನೇ ತಲುಪುತ್ತಿವೆ ಯೇನೋ ಅನ್ನುವ ಭಾವ. ಈ ಶಬ್ದಗಳ ಕಿರಿಕಿರಿಯಿಂದಾಗಿ ತಲೆ ಸುತ್ತಿ ಬಂದ ಅನುಭವವಾಗುತ್ತಿದ್ದರಿಂದ ಕಿವಿ, ಮೂಗು ಹಾಗೂ ಗಂಟಲು ತಜ್ಞರನ್ನೊಮ್ಮೆ ಭೇಟಿ ಮಾಡಿ ಪರೀಕ್ಷೆ ಮಾಡಿಸೋಣವೆಂದು ನನ್ನ ಊರಿನ ಪ್ರಸಿದ್ಧ ವೈದ್ಯರ ಬಳಿ ಹೋದೆ.
ಬಿ ಹ್ಯಾಪಿ, ನಿಯಂತ್ರಣದಲ್ಲಿಡಬಹುದು ಹೈ ಬಿಪಿ!
ನನ್ನ ಸರದಿ ಬರುವುದರಲ್ಲಿತ್ತು. ಅಷ್ಟರಲ್ಲಿ ನಾಲ್ಕು ವರ್ಷದ ಮಗುವೊಂದನ್ನು ಎತ್ತಿಕೊಂಡು ಮಹಿಳೆಯೊಬ್ಬರು ಓಡಿ ಬಂದರು. ಮಗು ಕಿರುಚುತ್ತಿತ್ತು. ಪರೀಕ್ಷೆ ಮಾಡಿದಾಗ ಅದರ
ಕಿವಿಯಲ್ಲಿ ರಕ್ತ ಸೋರುತ್ತಿದ್ದದ್ದು ಕಂಡು ಬಂತು. ಡಾಕ್ಟರ್ ಕಾರಣ ಕೇಳಿದಾಗ ಆಕೆ ಮಾತ್ರ, ‘ನನಗೆ ಏನೂ ಗೊತ್ತಿಲ್ಲ, ಮಗು ಬೆಳಿಗ್ಗೆನಿಂದಲೂ ಹೀಗೇ ಅಳುತ್ತಿದೆ. ಹತ್ತಿರ ಹೋಗಿ ನೋಡಿದಾಗ ಕಿವಿಯಲ್ಲಿ ರಕ್ತ ಸೋರುತ್ತಿತ್ತು, ಹಾಗಾಗಿ ಓಡಿ ಬಂದೆ’ ಎನ್ನುತ್ತಿದ್ದಾಳೆ. ಆದರೆ ಡಾಕ್ಟರ್‌ಗೆ ಅನುಮಾನವೆನಿಸಿ ಗದರಿಸಿ ಕೇಳಿದಾಗ ಆ ಮಹಿಳೆ ನಿಜ ಬಾಯಿಬಿಟ್ಟಳು.
ಮಗುವಿನ ಸ್ನಾನದ ನಂತರ, ಅದರ ಕಿವಿಯ ಗುಗ್ಗೆ (ಕಿವಿಮೇಣ) ತೆಗೆಯೋಣವೆಂದು ಪಿನ್ ಹಾಕಿದ್ದಾರೆ. ಪಿನ್ ಕಿವಿಯ ತಮಟೆಗೆ ಗಾಯವಾಗಿಸಿ ಕಿವಿಯಿಂದ ರಕ್ತ ಸೋರಲು ಆರಂಭವಾಗಿದೆ. ಮಗು ಅಳಲು ಆರಂಭಿಸಿದೆ. ಗಾಬರಿಗೊಂಡ ಆಕೆ ಮಗುವನ್ನೆತ್ತಿಕೊಂಡು ಓಡಿ ಬಂದಿದ್ದಾಳೆ. ವಿಷಯ ಕೇಳಿದ ಡಾಕ್ಟರ್ ಆಕೆಗೆ ಬಯ್ದರು. ನಂತರ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಆಕೆಗೂ ಬುದ್ಧಿವಾದ ಹೇಳಿ ಕಳುಹಿಸಿದರು.
ತೂಕ ಇಳಿಸೋಕೆ ಮನಸ್ಸು ಬರ್ತಿಲ್ವಾ? ಇಲ್ನೋಡಿ
ಕೊನೆಗೂ ನನ್ನ ಸರದಿ ಬಂತು. ಚಿಕಿತ್ಸೆಯೂ ಆಯಿತು.. ಆದರೆ, ಆ ಮಹಿಳೆಯ ಅನಾಹುತದ ನೆನಪಾದ್ದರಿಂದ ಅದೇ ನೆಪದಲ್ಲಿ ಕಿವಿ ಕುರಿತು ನಮ್ಮ ಜನರಲ್ಲಿರುವ ತಪ್ಪು ತಿಳುವಳಿಕೆ ಕುರಿತು ನನ್ನ ಗೆಳೆಯನನ್ನೇ ಕೇಳಿದೆ. ಆತ ನೀಡಿದ ಮಾಹಿತಿಯ ಪಟ್ಟಿ ಹೀಗಿದೆ.
ಕಿವುಡುತನ ಹೊಂದಿರೋ ಮಗೂಗೆ ಮಾತು ಬರೋಲ್ಲ!
ವಯೋಸಹಜವಾದ ಪ್ರಕ್ರಿಯೆ, ಇದಕ್ಕೆ ಚಿಕಿತ್ಸೆಯಿಲ್ಲ ಹುಟ್ಟಿನಿಂದ ಕಿವುಡುತನ ಹೊಂದಿರೋ ಮಗು ತನ್ನ ಕಿವುಡಿನಿಂದಾಗಿ ಮಾತನ್ನು ಕೇಳಿಸಿಕೊಳ್ಳಲಾಗದೇ, ಶಬ್ದಗಳ ಅರಿವಾಗದ ಕಾರಣ ಮಾತು ಆಡೋಕೆ ಸಾಧ್ಯವಾಗಲ್ಲ ಹೊರತು, ಕಿವುಡುತನ ಇರುವವರೆಲ್ಲರಿಗೂ ಮಾತು ಬರೋಲ್ಲ ಅನ್ನುವುದು ತಪ್ಪು. ಹುಟ್ಟಿನಿಂದ ಕಿವುಡುತನ ಹೊಂದಿರುವ ಮಗುವಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಿ, ಶ್ರವಣ ಸಾಧನ ತೊಡಿಸಬೇಕಾಗುತ್ತದೆ. ನಂತರ, ಮಾತಿನ ತರಬೇತಿ, ಅಗತ್ಯ ಚಟುವಟಿಕೆಗಳ ಮೂಲಕ ಮಗುವಿಗೆ ಮಾತು ಕಲಿಸಬೇಕಾಗುತ್ತದೆ. ಇದಕ್ಕೆ ತುರ್ತು ಚಿಕಿತ್ಸೆ ಅತ್ಯವಶ್ಯಕ.
ವಯೋಸಹಜವಾದ ಪ್ರಕ್ರಿಯೆ, ಇದಕ್ಕೆ ಚಿಕಿತ್ಸೆಯಿಲ್ಲ
ಶ್ರವಣದೋಷ ವಯೋಸಹಜವಾದ ಪ್ರಕ್ರಿಯೆ, ನಿಜ. ಕೆಲವೊಮ್ಮೆ ಅನಿವಾರ್ಯವಾಗಿಯಾದರೂ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಲ್ಲದೆ, ವಯೋಸಹಜವಾಗಿ ಶ್ರವಣ ಶಕ್ತಿ ಕುಂದಿದರೂ ಸಹ ಶ್ರವಣ ಸಾಧನವನ್ನು ಧರಿಸುವ ಮೂಲಕ ಶ್ರವಣ ಶಕ್ತಿಯು ಪುನಃ ಬಳಕೆಯಾಗಬಹುದು. ಆಶ್ಚರ್ಯಕರ ವಿಷಯವೇನೆಂದರೆ, ಶ್ರವಣ ದೋಷವುಳ್ಳ ಜನರಲ್ಲಿ ೬೪ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಪ್ರಮಾಣ ಶೇ 35ರಷ್ಟು ಮಾತ್ರ. ಹಾಗಾಗಿ ಶ್ರವಣ ದೋಷಕ್ಕೆ ವಯಸ್ಸೊಂದೇ ಕಾರಣವಲ್ಲ.
ಪೀರಿಯಡ್ಸ್ ನೋವಿದ್ಯಾ? ಡಯಟ್ ಹೀಗಿರಲಿ...
ನನಗೆಶ್ರವಣ ದೋಷ ಇದ್ದಿದ್ದರೆ ಯಾರಾದರೂ ಗುರುತ್ತಿದ್ದರು!
ಈ ರೀತಿ ನಿರ್ಧಾರ ಬೇಡ. ಏಕೆಂದರೆ, ಕೆಲವರು ನಿಮ್ಮಲ್ಲಿನ ಶ್ರವಣ ದೋಷವನ್ನು ಗುರುತಿಸಿಯೂ ಕೂಡ ಅದನ್ನು\ ತಿಳಿಸಲು ಹಿಂದೇಟು ಹಾಕಿರಬಹುದು.ಉದಾಹರಣೆಗೆ, ನಿಮ್ಮ ಪತ್ನಿಯ/ಆಫೀಸಿನ ಬಾಸ್‌ನ ಮಾತು ಸರಿಯಾಗಿ ಕೇಳದೇ ನೀವು ಪ್ರತಿಕ್ರಿಯಿಸದಿದ್ದಾಗ, ನೀವು ಅವರೆಡೆಗೆ ಗಮನ ಹರಿಸುತ್ತಿಲ್ಲ ಎಂದು ಅವರು ಭಾವಿಸಿರಬಹುದು. ಸ್ನೇಹಿತರೊಡಗೂಡಿದಾಗ ಚರ್ಚೆಯಲ್ಲಿ ಪಾಲ್ಗೊಳ್ಳಲು ಆಗದಿದ್ದಲ್ಲಿ, ಆಸಕ್ತಿಯಿಲ್ಲ ಎಂದು ತಿಳಿದಿರಬಹುದು. ಹಾಗಾಗಿ, ಕಿವಿಯನ್ನು ಆಪರೀಕ್ಷಿಸಿಕೊಳ್ಳುವುದು ಒಳಿತು.
ಕಿವಿಗೆ ಕಡ್ಡಿಯನ್ನು ಹಾಕುವ ಚಟ
ಕೆಲವರಿಗೆ ಇಂಥದ್ದೊಂದು ಅಭ್ಯಾಸವಿರುತ್ತದೆ. ಆಗಾಗ್ಗೆ ಸುಮ್ಮನೆ ಕಡ್ಡಿಯನ್ನು ಕಿವಿಗೆ ಹಾಕುವ ಚಟವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ, ಕಡ್ಡಿಯನ್ನು ಕಿವಿಯೊಳಗೆ ಹಾಕಿಕೊಳ್ಳುವುದು ತುಂಬಾನೇ ಅಪಾಯಕಾರಿ. ಸ್ವಲ್ಪ ಎಡವಟ್ಟಾದ್ರೂ ಕಿವಿಯ ತಮಟೆ ತೂತಾಗಬಹುದು, ಹರಿಯಬಹುದು.
ಅತಿ ಬಿಸಿಯಾದ ಎಣ್ಣೆ ನೀರು ಹಾಕುವುದು
ಈ ಸಂಗತಿ ಸಾಮಾನ್ಯ ಎಲ್ಲಾ ಮನೆಗಳಲ್ಲೂ ನಡೆಯುವಂತಹುದು. ಕಿವಿಯಲ್ಲಿ ಇರುವೆ ಅಥವಾ ಯಾವುದಾದ್ರೂ ಕೀಟ ಹೊಕ್ಕಿದ್ದರೆ, ಅತಿ ಬಿಸಿಯಾದ ನೀರು ಅಥವಾ ಎಣ್ಣೆಯನ್ನು ಕಿವಿಯ ನಾಳದಲ್ಲಿ ಹಾಕುತ್ತಾರೆ. ಇದರಿಂದ ಕಿವಿನೋವು ಉಂಟಾಗುವುದಲ್ಲದೆ, ತಮಟೆಯಲ್ಲಿ ಗೀರುಗಳುಂಟಾಗುತ್ತದೆ.
ಗುಗ್ಗೆ ತೆಗೆಯಲು ಪಿನ್ ಅಥವಾ ಚೂಪಾದ ವಸ್ತುಗಳನ್ನು ಹಾಕುವುದು
ಇನ್ನು ಕಿವಿಯಲ್ಲಿನ ಗುಗ್ಗೆ ತೆಗೆಯೋಕೆ ಪಿನ್ ಅಥವಾ ಚೂಪಾದ ವಸ್ತುಗಳನ್ನು ಹಾಕೋದು ಸರ್ವೇ ಸಾಮಾನ್ಯ ಸಂಗತಿ. ಅಷ್ಟು ಚೂಪಾದ ಪಿನ್ ಕಿವಿಗೆ ನೋವುಂಟು ಮಾಡಬಹುದು ಎಂಬ ಅರಿವಿದ್ದರೂ, ಈ ಕೆಟ್ಟ ಅಭ್ಯಾಸ ಮಾತ್ರ ತಪ್ಪಲ್ಲ. ಮನೆಯಲ್ಲಿನ ಹಿರಿಯರಲ್ಲಿ ಈ ರೀತಿ ಅಭ್ಯಾಸ ಇದ್ದರೆ, ಬಿಟ್ಟು ಬಿಡುವುದು ಒಳಿತು. ಯಾಕೆಂದರೆ, ಇದನ್ನು ನಿಮ್ಮ ಮಕ್ಕಳು ಅನುಸರಿಸೋ ಸಾಧ್ಯತೆ ಇರತ್ತೆ. ಇದು ಅಪಾಯಕ್ಕೆ ಆಹ್ವಾನ. ಇತ್ತೀಚೆಗೆ ಶಾಲೆಯಲ್ಲಿ ಹುಡುಗನೊಬ್ಬ ಕಿವಿ ಬಳಿ ಪೆನ್ಸಿಲ್ ಹಿಡಿದುಕೊಂಡಿದ್ದಾಗ, ಆತನ ಸ್ನೇಹಿತ ತಳ್ಳಿ ಪೆನ್ಸಿಲ್ ಕಿವಿಯ ಒಳಹೊಕ್ಕು ರಕ್ತ ಸೋರಿದ ಸಂಗತಿ ವರದಿಯಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.