ಬರೀ 10 ಲಕ್ಷದಲ್ಲಿ ಸನ್ನಿ ಲಿಯೋನ್‌ ಸ್ಟಾರ್ಟ್‌ ಮಾಡಿದ್ದ ಕಂಪನಿಯಿಂದ 10 ಕೋಟಿ ವಹಿವಾಟು!

By Santosh NaikFirst Published Apr 23, 2024, 6:54 PM IST
Highlights

ಕಂಪನಿಯನ್ನು ಕಟ್ಟಿದ ತನ್ನ ಜರ್ನಿ ನಿಧಾನ ಹಾಗೂ ಸ್ಥಿರವಾಗಿತ್ತು ಎಂದಿರುವ ಸನ್ನಿ ಲಿಯೋನ್‌, ಸಾಕಷ್ಟು ಏರಿಳಿತಗಳಿಂದ ಬಹಳ ಅನುಭವವಾಯಿತು ಎಂದಿದ್ದಾರೆ. ಯಾವುದೇ ಶಾರ್ಟ್‌ಕಟ್‌ ಇಲ್ಲದೆ, ಸ್ವಂತದ್ದೇ ಆದ ಕಂಪನಿಯನ್ನು ಕಟ್ಟಿ ನಡೆಸುವುದು ಸುಲಭವಾಗಿರಲಿಲ್ಲ ಎಂದು 42 ವರ್ಷದ ಮಾಜಿ ನೀಲಿಚಿತ್ರ ತಾರೆ ಹೇಳಿದ್ದಾರೆ.
 

ಮುಂಬೈ (ಏ.23): ಸನ್ನಿ ಲಿಯೋನ್ ಅವರ ಸೌಂದರ್ಯವರ್ಧಕ ಬ್ರ್ಯಾಂಡ್ ಸ್ಟಾರ್‌ಸ್ಟ್ರಕ್ ವಾರ್ಷಿಕ ಆದಾಯ 10 ಕೋಟಿ ರೂಪಾಯಿಗಳ ವಹಿವಾಟನ್ನು ದಾಟಿದೆ ಎಂದು ಮಾಜಿ ನೀಲಿಚಿತ್ರ ನಟಿ ಹಾಗೂ ಮಾಡೆಲ್‌ ಹೇಳಿದ್ದಾರೆ. ಸನ್ನಿ ಲಿಯೋನ್‌ ಎನ್ನುವ ಹೆಸರಿನಿಂದಲೇ ಜನಪ್ರಿಯವಾಗಿರುವ ಕರಣ್‌ಜೀತ್‌ ಕೌರ್‌ ವೊಹ್ರಾ ಅವರ ಮೂಲ ಕೆನಡಾ. 2018ರಲ್ಲಿ ಸ್ಟಾರ್‌ಸ್ಟ್ರಕ್  ಹೆಸರಿನಲ್ಲಿ ತಮ್ಮ ಕಾಸ್ಮೆಟಿಕ್‌ ಬ್ರ್ಯಾಂಡ್‌ ಅನ್ನು ಆರಂಭ ಮಾಡಿದ್ದರು. ಇದಕ್ಕಾಗಿ ಅವರು 10 ಲಕ್ಷ ಹಣ ಹೂಡಿಕೆ ಮಾಡಿದ್ದರು. 2019ರಲ್ಲಿ ತಮ್ಮ ಉದ್ಯಮವನ್ನು ಒಳಉಡುಪು ಕ್ಷೇತ್ರಕ್ಕೂ ವಿಸ್ತರಣೆ ಮಾಡಿದ್ದರು. ಇದಕ್ಕಾಗಿ ಪತಿ ಡೇನಿಯಲ್‌ ವೆಬರ್‌ ಅವರ ಸಹಾಯವನ್ನೂ ಪಡೆದುಕೊಂಡಿದ್ದ ಸನ್ನಿ ಲಿಯೋನ್‌, ಇನ್‌ಫೇಮಸ್‌ ಬೈ ಸ್ಟಾರ್‌ಸ್ಟ್ರಕ್  ಎನ್ನುವ ಹೆಸರಿನಲ್ಲಿ ಇನ್ನರ್‌ವಿಯರ್‌ಗೂ ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿದ್ದರು. 'ಯಾವುದಾದರೂ ಕಂಪನಿಯ ಬ್ರ್ಯಾಂಡ್‌ ಫೇಸ್‌ ಆಗಲು ನಾನು ಬಯಿಸಿದ್ದೆ. ಆದರೆ, ನನ್ನ ರೀಚ್‌ ಹಾಗೀ ಫಾಲೋವರ್‌ಗಳಿ ಹೆಚ್ಚಿನದ್ದರೂ, ಬಹುತೇಕ ಕಂಪನಿಗಳು ನನ್ನನ್ನು ಬ್ರ್ಯಾಂಡ್‌ ಫೇಸ್‌ ಆಗಿ ಮಾಡಿದ್ರೆ ಅಪಾಯ ಎಂದೇ ಭಾವಿಸಿದ್ದರು. ಅಂತಿಮವಾಗಿ ಬ್ರ್ಯಾಂಡ್‌ ಅನಾಲಿಟಿಕ್ಸ್‌ ಮುಖ್ಯವಾಗುತ್ತದೆ. ಆ ಬಳಿಕ ನನ್ನದೇ ಆದ ಕಂಪನಿಯನ್ನು ಆರಂಭಿಸಿದೆ' ಎಂದು ಸನ್ನಿ ಲಿಯೋನ್‌ ಹೇಳಿದ್ದರು.

ಪ್ರಸ್ತುತ, ಸ್ಟಾರ್‌ಸ್ಟ್ರಕ್ ಚಿಲ್ಲರೆ ವ್ಯಾಪಾರದಲ್ಲಿ ಸ್ಟಾಕ್ ಕೀಪಿಂಗ್ ಘಟಕಗಳು (SKUs) ಎಂದು ಕರೆಯಲ್ಪಡುವ 260 ಕ್ಕೂ ಹೆಚ್ಚು ವಿಭಿನ್ನ ಉತ್ಪನ್ನಗಳ ಶ್ರೇಣಿಯನ್ನು ನೀಡುತ್ತದೆ. ಈ ಕಾಸ್ಮೆಟಿಕ್ಸ್‌ಗಳ ನಿರ್ಮಾಣಕ್ಕೆ ಯಾವುದೇ ಹಿಂಸೆ ಅಂದರೆ ಪ್ರಾಣಿ ವಧೆಯನ್ನು ಮಾಡಿಲ್ಲ ಎಂದು ಕಂಪನಿ ಹೇಳಿದೆ.

ಸ್ಟಾರ್‌ಸ್ಟ್ರಕ್  ಕಂಪನಿಯನ್ನು ಕಟ್ಟಿದ ಪ್ರಯಾಣ ನಿಧಾನ ಹಾಗೂ ಸ್ಥಿರವಾಗಿತ್ತು ಎಂದಿರುವ ಸನ್ನಿ ಲಿಯೋನ್‌, ಸಾಕಷ್ಟು ಏರಿಳಿತಗಳಿಂದ ಬಹಳ ಅನುಭವಗಳಾದವು ಎಂದಿದ್ದಾರೆ. ಯಾವುದೇ ಶಾರ್ಟ್‌ಕಟ್‌ ಇಲ್ಲದೆ, ಸ್ವಂತದ್ದೇ ಆದ ಕಂಪನಿಯನ್ನು ಕಟ್ಟಿ ನಡೆಸುವುದು ಸುಲಭವಾಗಿರಲಿಲ್ಲ ಎಂದು 42 ವರ್ಷದ ಮಾಜಿ ನೀಲಿಚಿತ್ರ ತಾರೆ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸನ್ನಿ ಲಿಯೋನ್‌ ಹಲವಾರು ಯಶಸ್ವಿ ಉದ್ಯಮಗಳಲ್ಲಿ ತನ್ನ ಹೂಡಿಕೆಗಳನ್ನು ಮಾಡಿದ್ದು, ಸನ್ನಿ ಲಿಯೋನ್‌ ಅವರ ಇಂದಿನ ನಿವ್ವಳ ಮೌಲ್ಯ 100 ಕೋಟಿಗೂ ಅಧಿಕವಾಗಿದೆ.

ಉತ್ತರ ಪ್ರದೇಶದ ಕಾನ್ಸ್​ಟೆಬಲ್​ ಹುದ್ದೆಗೆ ಹಾಟ್​ ಬ್ಯೂಟಿ ಸನ್ನಿ ಲಿಯೋನ್​ ಅರ್ಜಿ! ನಟಿಗೆ ಆಗಿದ್ದಾದ್ರೂ ಏನು?

ನಮ್ಮ ಕಂಪನಿಯ ಫರ್ಪ್ಯೂಮ್‌ ಲೈನ್‌ ಆಗಿರುವ  ಅಫೆಟ್ಟೊ ಫ್ರಾಗ್ರೆನ್ಸಸ್, ಭಾರತದಾದ್ಯಂತ 500 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಲಭ್ಯವಿದೆ. "ಸರಳವಾಗಿ ಹೇಳೋದಾದರೆ, ನಾನು ಬಣ್ಣ ಸೌಂದರ್ಯವರ್ಧಕಗಳನ್ನು ಪ್ರೀತಿಸುತ್ತೇನೆ. ಮತ್ತು ಮಾರುಕಟ್ಟೆಯ ದೊಡ್ಡ ವರ್ಗ ಇದಾಗಿದೆ' ಎಂದು ಅವರು ಹೇಳಿದ್ದಾರೆ.

ವ್ಯಾಲೆಂಟೈನ್ಸ್ ಡೇಗೆ ಸನ್ನಿ ಲಿಯೋನ್‌‌ಗೆ ಸರ್ಪ್ರೈಸ್; ಪತಿಗಾಗಿ ಮಂಚದ ಕೆಳಗೆ ಹುಡುಕಾಡಿದ ನಟಿ!

2021 ರಲ್ಲಿ, ಲಿಯೋನ್ ಪೀಟಾ-ಅನುಮೋದಿತ ಅಥ್ಲೀಶರ್ ಬ್ರ್ಯಾಂಡ್, I Am Animal ನಲ್ಲಿ ಹೂಡಿಕೆ ಮಾಡಿದ್ದಲ್ಲದೆ, ರೈಜ್‌ ಬಾರ್ಸ್‌ ಹೆಸರಿನ ವೆಲ್‌ನೆಸ್‌ ಬ್ರ್ಯಾಂಡ್‌ ಮೇಲೂ ಸನ್ನಿ ಲಿಯೋನ್‌ ಹಣ ಹಾಕಿದ್ದಾರೆ. ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ನೋಯ್ಡಾದಲ್ಲಿ ಚಿಕಾ ಲೊಕಾ ಎಂಬ ರೆಸ್ಟೋರೆಂಟ್ ಅನ್ನು ಸನ್ನಿ ಆರಂಭಿಸಿದ್ದಾರೆ.

click me!