ಇದರ ಆರಂಭಿಕ ಹಂತದಲ್ಲಿ ಜನರು ತಮ್ಮ ಭಾವನೆಗಳನ್ನು ನಿರ್ವಹಿಸಲು ಕಲಿಯುವ ಮೂಲಕ ತಾವಾಗಿಯೇ ಚೇತರಿಸಿಕೊಳ್ಳಬಹುದು, ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ನವದೆಹಲಿ (ಏ.23): ಹೆಚ್ಚಿನ ಜನರಿಗೆ ಪ್ರೀತಿ ಅನ್ನೋದು ಜೀವನದಲ್ಲಿ ಬರುತ್ತದೆ ಹೋಗುತ್ತದೆ. ಇನ್ನೂ ಕೆಲವರಿಗೆ ಜೀವನದಲ್ಲಿ ಎಷ್ಟು ಸಾರಿ ಪ್ರೀತಿ ಆಗುತ್ತೆ ಅಂತಾ ಅವರಿಗೇ ಗೊತ್ತಿರೋದಿಲ್ಲ. ಆದರೆ ಯಾರಿಗೆ ಪ್ರೀತಿ ವ್ಯಸನಕಾರಿಯಾಗುತ್ತದೆಯೋ ಅಂತಹ ಜನರು ಕೆಟ್ಟ ಆರೋಗ್ಯ ಸ್ಥಿತಿಗೆ ಹೋಗುತ್ತಾರೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಚೀನಾದಲ್ಲಿ ಘಟನೆಯಾಗಿದೆ. ಇತ್ತೀಚೆಗೆ, ಚೀನಾದಲ್ಲಿ 18 ವರ್ಷದ ಹುಡುಗಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಪ್ರತಿ ದಿನ 100ಕ್ಕೂ ಹೆಚ್ಚು ಬಾರಿ ಕರೆ ಮಾಡುತ್ತಿದ್ದಳಂತೆ, ಇದನ್ನು ಅಲ್ಲಿನ ವೈದ್ಯರು ಲವ್ ಬ್ರೇನ್ ಕಾಯಿಲೆ ಎಂದು ವರ್ಗೀಕರಣ ಮಾಡಿದ್ದು, ಆಕೆಗೆ ಚಿಕಿತ್ಸೆಯ ಅಗತ್ಯವಿದೆ ಎಂದೂ ತಿಳಿಸಿದ್ದಾರೆ. ಕ್ಸಿಯಾಯು ಎಂದು ಗುರುತಿಸಲಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದು ಆಕೆಯ ಬಾಯ್‌ಫ್ರೆಂಡ್‌ನ ಸಂಕಷ್ಟಕ್ಕೂ ಕಾರಣವಾಗಿದೆ. ಕ್ಸಿಯಾಯು ಅವರ ಆತಂಕಕಾರಿ ನಡವಳಿಕೆಯು ವಿಶ್ವವಿದ್ಯಾನಿಲಯದ ಮೊದಲ ವರ್ಷದಲ್ಲಿ ಪ್ರಾರಂಭವಾಯಿತು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಚೆಂಗ್ಡುವಿನ ಫೋರ್ತ್ ಪೀಪಲ್ಸ್ ಆಸ್ಪತ್ರೆಯ ವೈದ್ಯ ಡು ನಾ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.
ವರದಿಯ ಪ್ರಕಾರ, ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿಯಾದ ಕ್ಸಿಯಾಯು ತನ್ನ ಗೆಳೆಯನ ಜೊತೆ ನಿಕಟ ಸಂಬಂಧ ಬೆಳೆಸಿಕೊಂಡ ಬಳಿಕ ಆತನ ಮೇಲೆ ಹೆಚ್ಚು ಅವಲಂಬಿತಳಾಗಿದ್ದಳು. ಆಕೆಗೆ ಪ್ರತಿ ಹಂತದಲ್ಲೂ ಬಾಯ್‌ಫ್ರೆಂಡ್ ತನ್ನ ಬಳಿಯೇ ಇರಬೇಕಿತ್ತು ಅಂತಾ ಅನಿಸುತ್ತಿತ್ತು. ಪ್ರತಿ ನಿಮಿಷ ಕೂಡ ಆತ ಎಲ್ಲಿ ಹೋಗುತ್ತಾನೆ, ಏನು ಮಾಡುತ್ತಾನೆ ಅನ್ನೋದನ್ನು ತನಗೆ ತಿಳಿಸಬೇಕು ಎಂದು ಮನವಿ ಮಾಡಲು ಆರಂಭಿಸಿದ್ದಳು. ರಾತ್ರಿ ಹಗಲು ಎನ್ನದೇ, ಯಾವುದೇ ಕ್ಷಣದಲ್ಲಿ ಆಕೆ ಮೆಸೇಜ್ ಕಳಿಸದರೆ ಬಾಯ್‌ಫ್ರೆಂಡ್ ಅದಕ್ಕೆ ರಿಪ್ಲೈ ನೀಡಲೇಬೇಕಿತ್ತು. ಇದರಿಂದಾಗಿ ಬಾಯ್‌ಫ್ರೆಂಡ್‌ಗೆ ನೆಮ್ಮದಿಯೇ ಇದ್ದಿರಲಿಲ್ಲ. ಉಸಿರುಗಟ್ಟಿಸುವಂಥ ಸಂಬಂಧದಲ್ಲಿ ಇದ್ದೇನೆ ಎಂದು ಆತನಿಗೆ ಅನಿಸಲು ಪ್ರಾರಂಭವಾಗಿತ್ತು.
ಕ್ಸಿಯಾಯು ಅವರ ವೀಡಿಯೋ ಕ್ಲಿಪ್ ಕೂಡ ವೈರಲ್ ಆಗಿದ್ದು, ಅಲ್ಲಿ ಆಕೆ ತನ್ನ ಗೆಳೆಯನಿಗೆ ಅವನ ವಿಚಾಟ್ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಲು ಪದೇ ಪದೇ ಸಂದೇಶ ಕಳುಹಿಸುತ್ತಿದ್ದಳು. ಬಾಯ್‌ಫ್ರೆಂಡ್ ಆಕೆಯ ಮೆಸೇಜ್‌ಅನ್ನು ನಿರ್ಲಕ್ಷಿಸಿದರೂ, ಕ್ಸಿಯಾಯು ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿರುವುದು ದಾಖಲಾಗಿದೆ. ವರದಿಯ ಪ್ರಕಾರ, ಕ್ಸಿಯಾಯು ಒಂದೇ ದಿನ 100 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ ನಂತರ ಪರಿಸ್ಥಿತಿ ನಿಯಂತ್ರಣ ಮೀರಿತ್ತು. ಆಕೆಯ 100 ಕರೆಗಳಿಗೂ ಬಾಯ್‌ಫ್ರೆಂಡ್ ಉತ್ತರ ನೀಡಿರಲಿಲ್ಲ. ಇದರಿಂದ ಮನನೊಂದ ಆಕೆ ಮನೆಯ ವಸ್ತುಗಳನ್ನು ಒಡೆದು ಹಾಕಲು ಆರಂಭಿಸಿದ್ದು, ಆಕೆಯನ್ನು ತಡೆಯಲು ಬಾಯ್‌ಫ್ರೆಂಡ್ ಪೊಲೀಸರಿಗೆ ಕರೆ ಮಾಡಿದ್ದ.
'ಹೀರೋ ಜೊತೆ ನನ್ನ ಕೆಮಿಸ್ಟ್ರಿ ನೋಡೋ ಸಲುವಾಗಿ, ಒಂದೇ ದಿನ 10 ಹುಡುಗರಿಗೆ ಕಿಸ್ ಮಾಡಿಸಿದ್ದರು..' ನಟಿಯ ಶಾಕಿಂಗ್ ಹೇಳಿಕೆ
ಇನ್ನೇನು ಕ್ಸಿಯಾಯು ಮನೆಯ ಬಾಲ್ಕನಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಹಂತದಲ್ಲಿ ಪೊಲೀಸರು ಮನೆಗೆ ಆಗಮಿಸಿದ್ದರು. ಈ ವೇಳ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಈಕೆ ಲವ್ ಬ್ರೇನ್ ಕಾಯಿಲೆಗೆ ಒಳಗಾಗಿದ್ದಾಳೆ ಎಂದು ವೈದ್ಯರಿ ತಿಳಿಸಿದ್ದಾರೆ. ಡಾ ಡು ಅವರನ್ನು ಉಲ್ಲೇಖಿಸಿ, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದ್ದು, ಲವ್ ಬ್ರೇನ್ ಇತರ ಮಾನಸಿಕ ಕಾಯಿಲೆಗಳಾದ ಆತಂಕ, ಖಿನ್ನತೆ ಮತ್ತು ಬೈಪೋಲಾರ್ ಡಿಸಾರ್ಡರ್‌ಗಳೊಂದಿಗೆ ಬೆರೆತಿರುತ್ತದೆ ಎಂದು ಹೇಳಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ವಿಚ್ಛೇದನ, ಜ್ಯೋತಿಷಿಯ ಶಾಕಿಂಗ್ ಹೇಳಿಕೆ!