ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ವಿರೋಧ/ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಮುಂದಾಗಿರುವ ಸರಕಾರ/ ಕೂಡಲೇ ಪ್ರಸ್ತಾವನೆ ಕೈಬಿಡಿ
ಬೆಂಗಳೂರು[ಫೆ.24] ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್‌ಪಿ) ಬೆಂಗಳೂರಿಗರ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದು ವನ್ಯಮೃಗಗಳ ಕಾರಿಡಾರ್ ಮಾತ್ರವಲ್ಲ, ಬೆಂಗಳೂರಿನ ಸಮೀಪದಲ್ಲಿರುವ ಹಸಿರು ವಲಯವೂ ಹೌದು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು, ಉಷ್ಣತೆಯನ್ನು ಕಾಪಾಡಿಕೊಳ್ಳಲು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ತನ್ಮೂಲಕ ಬೆಂಗಳೂರು ಪ್ರಜೆಗಳ ಜೀವನಗುಣಮಟ್ಟ ಸುಧಾರಿಸಲು ಬನ್ನೇರುಘಟ್ಟ ರಾಷ್ಟ್ರೀಯಉದ್ಯಾನ ಅಮೂಲ್ಯ ಕೊಡುಗೆ ನೀಡುತ್ತಿದೆ.
ಬನ್ನೇರುಘಟ್ಟರಾಷ್ಟ್ರೀಯಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಸರಕಾರ ಮುಂದಾಗಿರುವುದು ದುರದೃಷ್ಟಕರ. ಸರಕಾರ ಇದಕ್ಕಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದು ಈ ಸಂಬಂಧ ಅಧಿಸೂಚನೆ ಹೊರಡಿಸಲು ಕೋರಿಕೊಂಡಿದೆ. ಪರಿಸರ ಸೂಕ್ಷ್ಮ ವಲಯ ಬನ್ನೇರುಘಟ್ಟರಾಷ್ಟ್ರೀಯ ಸುತ್ತಲೂ ರಕ್ಷಣಾ ಪದರವಾಗಿ ಕೆಲಸ ಮಾಡುತ್ತಿದೆ. ಇದು ಸಮರ್ಪಕವಾಗಿಲ್ಲದಿದ್ದರೆ ರಾಷ್ಟ್ರೀಯ ಉದ್ಯಾನ ಚದುರಿ ಹೋಗುತ್ತದೆ. ಪರಿಸರ ಸೂಕ್ಷ್ಮ ವಲಯವನ್ನುಕುಗ್ಗಿಸುವುದರಿಂದ ಬೆಂಗಳೂರಿಗರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ವನ್ಯಮೃಗಗಳ ಕಾರಿಡಾರ್‌ಗೂ ಇದು ಧಕ್ಕೆತರಲಿದ್ದು, ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷಕ್ಕೂದಾರಿ ಮಾಡಿಕೊಡಲಿದೆ.
undefined
ಕೆರೆ ನುಂಗಣ್ಣರ ಹಾಗೇ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ
ಕಾವೇರಿಯನ್ನು ಸೇರಿಕೊಳ್ಳುವ ನೀರಿನ ತೊರೆಗಳೂ ಇದರಿಂದ ನಾಶವಾಗಲಿದೆ. ಶೀಘ್ರದಲ್ಲೇ ನಮ್ಮ ನೀರಿನ ನಲ್ಲಿಗಳೂ ನೀರಿಲ್ಲದೇ ಒಣಗಲಿವೆ. ಬೆಂಗಳೂರಿನಲ್ಲಿ ಶೇ 25ರಷ್ಟು ಮಕ್ಕಳು ಈಗಾಗಲೇ ಅಸ್ತಮಾದಿಂದ ಬಳಲುತ್ತಿವೆ. ಇನ್ನಷ್ಟು ಮಕ್ಕಳು ಅಸ್ತಮಾಕ್ಕೆಬಲಿಯಾಗಬೇಕು ಎಂದು ಸರಕಾರ ಬಯಸುತ್ತಿದೆಯೇ? ಎಂದು ಫೌಂಡೇಶನ್ ಪ್ರಶ್ನೆ ಮಾಡಿದೆ.
ಸರಕಾರ ಜನರ ದೃಷ್ಟಿಯಿಂದ ವಾಸ್ತವತೆಯನ್ನು ತಿಳಿಯಬೇಕು. ಬದಲಾಗಿ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣುಗಳಿಂದಲ್ಲ. ಆದರೆ ಸಮಾಜಘಾತುಕ ಶಕ್ತಿಗಳು ಸರಕಾರಕ್ಕೆಇಂಥ ಮೂರ್ಖ ಸಲಹೆಯನ್ನು ನೀಡಿರಬೇಕು. ಬನ್ನೇರುಘಟ್ಟಉದ್ಯಾನದ ಸೂಕ್ಷ್ಮ ಪರಿಸರ ವಲಯವನ್ನು ಕುಗ್ಗಿಸುವ ಮೂಲಕ ಈ ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮ ಸಕ್ರಮಯೋಜನೆ ಜಾರಿಗೊಳಿಸಲು ಬಯಸುತ್ತಿರಬೇಕು. ಇಂಥ ಜನ ವಿರೋಧಿಕ್ರಮವನ್ನು ಸರಕಾರ ಎಂದಿಗೂ ಕೈಗೊಳ್ಳಬಾರದು. ಸರಕಾರ ಹೈಕೋರ್ಟ್‌ಮತ್ತು ಸುಪ್ರೀಂಕೋರ್ಟ್‌ನಸಲಹೆಗಳಿಗೆ ಮನ್ನಣೆ ನೀಡಬೇಕು. ಜನರ ಆಕಾಂಕ್ಷೆಗಳನ್ನು ಗೌರವಿಸಬೇಕು. ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸುವ ಪ್ರಸ್ತಾವನೆಯನ್ನುತಕ್ಷಣಕೈಬಿಡಬೇಕು.
ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸಲು ಅಧಿಸೂಚನೆ ಹೊರಡಿಸುವಂತೆ ಸರಕಾರ ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ ಕೋರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಮತ್ತು ಬೆಂಗಳೂರಿನ ಮತ್ತು ಅದರ ಮಕ್ಕಳ ಒಳಿತಿಗಾಗಿ ಬನ್ನೇರುಘಟ್ಟರಾಷ್ಟ್ರೀಯಉದ್ಯಾನದ 268.96 ಚದರ ಕಿ.ಮೀ. ಸೂಕ್ಷ್ಮ ವಲಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಬೆಂಗಳೂರಿನ ಪ್ರಜೆಗಳು ಸರಕಾರವನ್ನುಕೋರುತ್ತಿದ್ದೇವೆ.
ಗಣಿಗಾರಿಕೆ ಮತ್ತು ರಿಯಲ್‌ಎಸ್ಟೇಟ್ ಉದ್ಯಮಿಗಳ ದುರಾಸೆಯ ಲಾಬಿಗೆ ಕೊನೆಯೇಇಲ್ಲ. ತಮ್ಮದೇ ಮಕ್ಕಳ ಆರೋಗ್ಯ ಅಪಾಯದಲ್ಲಿದೆ ಎಂಬ ವಾಸ್ತವತೆಯನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರ ದುರಾಸೆಗಾಗಿ ಬೆಂಗಳೂರನ್ನು ಅನಂತವಾಗಿ ವಿಸ್ತರಿಸುವುದು ಸಾಧುವಲ್ಲ. ಬನ್ನೇರುಘಟ್ಟ ಉಳಿಸಿ ಎಂಬ ಬೆಂಗಳೂರಿಗರ ಹೋರಾಟಕ್ಕೆ ನಾವು ಸದಾಜೊತೆಯಲ್ಲಿರುತ್ತೇವೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಹರೀಶ್‌ಕುಮಾರ್ ಹೇಳಿದರು.
ನಮ್ಮ ಬೆಂಗಳೂರು ಪ್ರತಿಷ್ಠಾನ: ನಮ್ಮ ಬೆಂಗಳೂರು ಪ್ರತಿಷ್ಠಾನ ಒಂದು ಸರಕಾರೇತರ ಸೇವಾ ಸಂಸ್ಥೆಯಾಗಿದ್ದು ಬೆಂಗಳೂರು ಮತ್ತು ಅದರ ನಿವಾಸಿಗಳು ಹಾಗೂ ನೆರೆಹೊರೆಯವರ ಹಕ್ಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಉತ್ತಮ ಬೆಂಗಳೂರಿಗಾಗಿ ಇದು ಸಮಾನ ಮನಸ್ಕರೊಂದಿಗೆ ಪಾಲುದಾರಿಕೆ ಮತ್ತು ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ನಗರ ಯೋಜನೆ ಮತ್ತು ಆಡಳಿತದಲ್ಲಿ ಜನರು ಪಾಲ್ಗೊಳ್ಳಲು, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಸಾರ್ವಜನಿಕ ಆಸ್ತಿಗೆ ಬದ್ಧತೆ ವ್ಯಕ್ತಪಡಿಸಲುಇದು ವೇದಿಕೆ ಕಲ್ಪಿಸುತ್ತದೆ.