ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತನ ಮನೆಯಲ್ಲೂ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಗುರುವಾರ ಬೆಳ್ಳಂಬೆಳಿಗ್ಗೆ ಬಳ್ಳಾರಿಯ ತಾಳೂರು ರಸ್ತೆಯ ರೇವಣಸಿದ್ದೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ನಾಗೇಂದ್ರ ಅವರ ಆಪ್ತ ಕುರುಬ ನಾಗರಾಜ್ ಮನೆಯ ಮೇಲೆ ಇ.ಡಿ. ದಾಳಿ ನಡೆಸಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳು ಸುಮಾರು 3 ಗಂಟೆ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ನಾಗರಾಜ್ ಮನೆಯಲ್ಲಿ ಇರಲಿಲ್ಲ. ಅವರ ಮೈನಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇ.ಡಿ. ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

11:55 PM (IST) Oct 17
Hasanamba temple darshan timings: ಹಾಸನಾಂಬ ದರ್ಶನಕ್ಕೆ ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಒಂದೇ ದಿನ 3.10 ಲಕ್ಷ ಜನರು ದೇವಿಯ ದರ್ಶನ. ಹೆಚ್ಚುತ್ತಿರುವ ಜನಸಂದಣಿ ದರ್ಶನಕ್ಕೆ 7-8 ಗಂಟೆಗಳ ಕಾಲ ಕಾಯಬೇಕಾಗಿದ್ದು, ಸಿದ್ಧರಾಗಿ ಬರುವಂತೆ ಕೃಷ್ಣ ಬೈರೇಗೌಡ ಭಕ್ತರಲ್ಲಿ ಮನವಿ
11:01 PM (IST) Oct 17
Kiwi fruit benefits Natural Remedy ಮಲಬದ್ಧತೆ ಸಮಸ್ಯೆ ಇರೋರು ಈ ಹಣ್ಣನ್ನು ತಿನ್ನಿ!, ಕಿವಿಯಲ್ಲಿರುವ ನಾರು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಆರೋಗ್ಯಕರ ಹಾಗೂ ಹೆಚ್ಚು ಸಮತೋಲಿತ ಕರುಳಿನ ಮೈಕ್ರೋಬಯೋಮ್‌ಗೆ ಕಾರಣವಾಗುತ್ತವೆ.
10:42 PM (IST) Oct 17
ದೀಪಾವಳಿಗೆ ದೂರದ ಊರುಗಳಿಗೆ ಬಿಎಂಟಿಸಿ ಸೇವೆ, ಅ.20ರ ವರೆಗೆ ಕೆಎಸ್‌ಆರ್‌ಟಿಸಿಗೆ ಸಾಥ್, ಧರ್ಮಸ್ಥಳ, ಶಿವಮೊಗ್ಗ, ಮೈಸೂರು, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಊರುಗಳಿಗೆ ಬಿಎಂಟಿಸಿ ಸೇವೆ ನೀಡಲಿದೆ.
10:31 PM (IST) Oct 17
ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಸೇರಿ ರಕ್ಷಿತಾ ಶೆಟ್ಟಿಯನ್ನು ಗೆಜ್ಜೆ ಸದ್ದಿನ ವಿಚಾರವಾಗಿ ಗುರಿಮಾಡಿದ್ದಾರೆ. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ರಕ್ಷಿತಾ, ಇಬ್ಬರನ್ನೂ 'ನಾಗವಲ್ಲಿ' ಎಂದು ಕರೆದು ಅವರ ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ.
09:59 PM (IST) Oct 17
ಅಮಿತಾಬ್ ಬಚ್ಚನ್ ಹಾಗೂ ರೇಖಾ ಪ್ರೇಮ ಕಥೆ ಸದಾ ಚರ್ಚೆಯಾಗೋ ವಿಷ್ಯ. ಸಿಲ್ಸಿಲಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ರೇಖಾ ಹಾಗೂ ಅಮಿತಾಬ್ ಬಚ್ಚನ್ ಎಲ್ಲರ ಕೇಂದ್ರಬಿಂದುವಾಗಿದ್ರು. ಸಿನಿಮಾದಲ್ಲಿ ನಟಿಸಲು ಕೊನೆಗೂ ಒಪ್ಪಿಕೊಂಡಿದ್ದ ಜಯಾ ವಿಧಿಸಿದ್ದ ಷರತ್ತೇನು ಗೊತ್ತಾ?
09:56 PM (IST) Oct 17
Basavaraj Bommai on RSS ban: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಮೇಲಿನ ನಿರ್ಬಂಧದ ವಿರುದ್ಧ ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೊಂದು ರಾಷ್ಟ್ರ ವಿರೋಧಿ ಕೃತ್ಯ ಎಂದು ಆರೋಪಿಸಿದ ಅವರು, ಸರ್ಕಾರಿ ನೌಕರನ ಅಮಾನತನ್ನು ಪ್ರಶ್ನಿಸಿದ್ದಾರೆ. ಹಾವೇರಿ ಇಸ್ಪಿಟ್ ದಂಧೆ.
09:47 PM (IST) Oct 17
ಹಾಸನಾಂಬೆ ದರ್ಶನಕ್ಕೆ ಜನಸಾಗರ, ಬೆಂಗಳೂರು-ಹಾಸನ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ವಾರಾಂತ್ಯ ರಜೆ ಹಾಗೂ ದೀಪಾವಳಿ ರಜೆ ಕಾರಣ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬ ದರ್ಸನಕ್ಕೆ ತೆರಳಿದ್ದಾರೆ.
09:22 PM (IST) Oct 17
ಬಾಗಲಕೋಟೆಗೆ ಕಾಡಸಿದ್ದೇಶ್ವರ ಶ್ರೀಗಳಿಗೆ ಪ್ರವೇಶ ನಿರ್ಬಂಧ, ಮಠ ತೆರವಿಗೆ ನೋಟಿಸ್ ನೀಡಿದ ಡಿಸಿ, ಅವಹೇಳನಕಾರಿ ಭಾಷಣ ಆರೋಪದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದ್ದು, ಸರ್ಕಾರದ ವಿರುದ್ದ ಭಾರಿ ಆಕ್ರೋಶ, ವಿರೋಧಗಳು ವ್ಯಕ್ತವಾಗುತ್ತಿದೆ.
08:48 PM (IST) Oct 17
ಕಾಂತಾರ ಚಾಪ್ಟರ್ 1ರ ಯಶಸ್ಸಿನ ನಂತರ, ನಟ ರಿಷಬ್ ಶೆಟ್ಟಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಗಾಯತ್ರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ, ಚಿತ್ರದ ಯಶಸ್ಸಿಗೆ ಕನ್ನಡಿಗರನ್ನು ಶ್ಲಾಘಿಸಿದರು. ದೈವಾರಾಧನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
08:28 PM (IST) Oct 17
Narayana Hospital Ramanagara inciden: ರಾಮನಗರದ ಖಾಸಗಿ ಆಸ್ಪತ್ರೆಗೆ ಕೈ ಮೂಳೆ ಮುರಿತದ ಆಪರೇಷನ್‌ಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇದು ಹೃದಯಾಘಾತದಿಂದಾದ ಸಾವು ಎಂದು ವೈದ್ಯರು ಹೇಳಿದರೆ, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ.
08:07 PM (IST) Oct 17
ರಾಮನಗರ ಜಿಲ್ಲೆಯಲ್ಲಿ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವ ಕುಟುಂಬಗಳಿಗೆ ಸೇರಿದ 4,756 ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡಲಾಗಿದೆ. ಸರ್ಕಾರದ ಮಾನದಂಡಗಳ ಪ್ರಕಾರ, ಕುಟುಂಬದ ಯಜಮಾನಿ ಅಥವಾ ಪತಿ ತೆರಿಗೆ ಪಾವತಿದಾರರಾಗಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ.
07:59 PM (IST) Oct 17
CT Ravi on Karnataka government: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಲು 'ಲಂಡನ್ ಬುಕ್ ಆಫ್ ರೆಕಾರ್ಡ್' ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ಬಳಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ. ಗ್ಯಾರೆಂಟಿಗೆ ನಕಲಿ ಸರ್ಟಿಫಿಕೇಟ್ ಸೃಷ್ಟಿಸಲಾಗಿದೆ ಎಂದು ವ್ಯಂಗ್ಯವಾಡಿದರು.
07:35 PM (IST) Oct 17
ಗದಗ ತಾಲೂಕಿನಲ್ಲಿ ಉತ್ತಮ ಫಸಲು ಬಂದರೂ ಗೋವಿನಜೋಳದ ಬೆಲೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಫಸಲು ಆವಕವಾಗುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ದೀಪಾವಳಿ ಹಬ್ಬದ ನಿರೀಕ್ಷೆಯಲ್ಲಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
07:28 PM (IST) Oct 17
15-Year-Old Girl Raped Gives Birth to Dead Child ಬೆಂಗಳೂರಿನಲ್ಲಿ, ಐಸ್‌ಕ್ರೀಮ್ ಕೊಡಿಸುವ ನೆಪದಲ್ಲಿ 15 ವರ್ಷದ ಬಾಲಕಿಯ ಮೇಲೆ ಅರ್ಜುನ್ ಎಂಬಾತ ನಿರಂತರ ಅತ್ಯಾಚಾರ ಎಸಗಿದ್ದಾನೆ. ಗರ್ಭಿಣಿಯಾಗಿದ್ದ ಬಾಲಕಿ ಮನೆಯಲ್ಲಿ ಸತ್ತ ಮಗುವಿಗೆ ಜನ್ಮ ನೀಡಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
07:18 PM (IST) Oct 17
07:15 PM (IST) Oct 17
ಬೆಂಗಳೂರಿನ ಶ್ರೀರಾಂಪುರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ 20 ವರ್ಷದ ಬಿ.ಫಾರ್ಮ್ ವಿದ್ಯಾರ್ಥಿನಿ ಯಾಮಿನಿ ಪ್ರಿಯಾಳನ್ನು ಆಕೆಯ ಪರಿಚಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಮುಖ್ಯ ಆರೋಪಿ ವಿಘ್ನೇಶ್ ಮತ್ತು ಆತನ ಸ್ನೇಹಿತ ಹರೀಶ್‌ನನ್ನು ಬಂಧಿಸಿದ್ದಾರೆ.
07:00 PM (IST) Oct 17
Karnataka Relaunches Mobile Planetarium Project with 11 Units ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿಯು (KSTePS) 'ತಾರೇ ಜಮೀನ್ ಪರ್' ಎಂಬ ಸಂಚಾರಿ ಡಿಜಿಟಲ್ ಪ್ಲಾನೆಟೇರಿಯಮ್ ಉಪಕ್ರಮವನ್ನು ಪುನರಾರಂಭಿಸುತ್ತಿದೆ.
06:52 PM (IST) Oct 17
06:43 PM (IST) Oct 17
Subhash Guttedar SIT raid: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ತಮ್ಮ ಮೇಲಿನ ಎಸ್‌ಐಟಿ ದಾಳಿಯ ಹಿಂದೆ ಶಾಸಕ ಬಿಆರ್ ಪಾಟೀಲ್ ಮತ್ತು ರಾಹುಲ್ ಗಾಂಧಿಯವರ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
06:37 PM (IST) Oct 17
ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವು ಸಮೀಪಿಸುತ್ತಿದ್ದರೂ, ಕಾಮಗಾರಿಯಲ್ಲಿ ನಿಧಾನಗತಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಗತಿ ವರದಿ ಕೇಳಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
06:09 PM (IST) Oct 17
Basanagouda Patil Yatnal letter to CM :ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
05:52 PM (IST) Oct 17
ಬೆಂಗಳೂರಿನ ಓಕಳಿಪುರಂ ಅಂಡರ್‌ಪಾಸ್ ಬಳಿಯ ಪುಟ್ಪಾತ್, ಪೌರಕಾರ್ಮಿಕರು, ಎನ್‌ಜಿಓ ಮತ್ತು ನಾಗರಿಕರ ಸಹಯೋಗದಿಂದ ಸಂಪೂರ್ಣ ಸ್ವಚ್ಛಗೊಂಡಿದೆ. ಹಿಂದೆ ಕಸದ ರಾಶಿಯಿಂದ ತುಂಬಿದ್ದ ಈ ಮಾರ್ಗವು ಇದೀಗ ಸುರಕ್ಷಿತ ಮತ್ತು ಸುಂದರ ಪಾದಚಾರಿ ದಾರಿಯಾಗಿ ಬದಲಾಗಿದೆ.
05:25 PM (IST) Oct 17
Chiranjeevi Sarja Birthday raayan Raj Sarjas Emotional Words at Dads Tomb ನಟ ಚಿರಂಜೀವಿ ಸರ್ಜಾ ಅವರ 40ನೇ ಹುಟ್ಟುಹಬ್ಬದಂದು, ಪತ್ನಿ ಮೇಘನಾ ರಾಜ್ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
05:22 PM (IST) Oct 17
PDO suspended for RSS event: ಲಿಂಗಸೂಗೂರು ಆರ್‌ಎಸ್‌ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಅಮಾನತು. ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
05:11 PM (IST) Oct 17
ಅಮೃತಧಾರೆ ಖ್ಯಾತಿಯ ನಟಿ ಛಾಯಾ ಸಿಂಗ್ ಅವರು ಕನ್ನಡ ಮತ್ತು ತಮಿಳು ಎರಡೂ ಕಡೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತಮಿಳು ಪ್ರಶಸ್ತಿ ಸಮಾರಂಭದಲ್ಲಿ ಅವರ ಪತಿ ಕೃಷ್ಣ ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿ ಮೂಡಿಸಿದ್ದು, ಈ ವೇಳೆ ಛಾಯಾ ಸಿಂಗ್ ಭಾವುಕರಾದರು.
05:02 PM (IST) Oct 17
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ರಸ್ತೆಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಇದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ ಮತ್ತು ಕಾನೂನಿನ ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದಾರೆ.
04:57 PM (IST) Oct 17
ಉತ್ತರ ಕನ್ನಡ ಜಿಲ್ಲೆಯ ಕೈಗಾ ಕಾಡಿನ ಬಳಿ ಮತ್ತೊಮ್ಮೆ ಹುಲಿ ಕಾಣಿಸಿಕೊಂಡಿದ್ದು, ಯಲ್ಲಾಪುರಕ್ಕೆ ತೆರಳುತ್ತಿದ್ದ ದಂಪತಿಯ ಕಾರನ್ನು ಅಡ್ಡಗಟ್ಟಿ ಸುಮಾರು ಒಂದೂವರೆ ಕಿಲೋಮೀಟರ್‌ವರೆಗೆ ದಾರಿ ಬಿಡದೆ ಕಾಡಿದೆ. ಈ ಪ್ರದೇಶದಲ್ಲಿ ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
04:30 PM (IST) Oct 17
New Cricket Format Launched First Season with 6 Teams in January 2026 ಕ್ರಿಕೆಟ್‌ಗೆ 'ಟೆಸ್ಟ್20' ಎಂಬ ಹೊಸ ಮಾದರಿಯನ್ನು ಅಧಿಕೃತವಾಗಿ ಪರಿಚಯಿಸಲಾಗಿದೆ. ಈ ಮಾದರಿಯಲ್ಲಿ, ಪ್ರತಿ ತಂಡವು ತಲಾ 20 ಓವರ್‌ಗಳ ಎರಡು ಇನ್ನಿಂಗ್ಸ್‌ಗಳನ್ನು ಆಡಲಿದೆ.
04:18 PM (IST) Oct 17
Mysuru tiger attack on farme:ಮೈಸೂರಿನ ಸರಗೂರು ಬಳಿ ಅರಣ್ಯ ಇಲಾಖೆಯ ಹುಲಿ ಸೆರೆ ಕಾರ್ಯಾಚರಣೆ ವೇಳೆ ರೈತನ ಮೇಲೆ ಹುಲಿ ದಾಳಿ ಮಾಡಿದೆ. ಈ ಘಟನೆಯಲ್ಲಿ ರೈತ ಮಹದೇವೇಗೌಡ ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದು, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
03:32 PM (IST) Oct 17
ರಾಜ್ಯ ಸರ್ಕಾರವು ರಾಜಕೀಯ ನಾಯಕರ ಭದ್ರತೆಯನ್ನು ಪರಿಷ್ಕರಿಸಿದ್ದು, ಬಿಜೆಪಿ ನಾಯಕರಾದ ಚಲವಾದಿ ನಾರಾಯಣ ಸ್ವಾಮಿ ಮತ್ತು ಕೆ.ಎಸ್. ಈಶ್ವರಪ್ಪ ಅವರ ಭದ್ರತೆಯನ್ನು ಕಡಿತಗೊಳಿಸಿದೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ.
03:24 PM (IST) Oct 17
ಬಿಗ್ ಬಾಸ್ ಸೀಸನ್ 12ರ ಮೊದಲ ಫಿನಾಲೆ ವಾರದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದೆ. ಈ ಪ್ರೆಸ್‌ಮೀಟ್ ಟಾಸ್ಕ್ ವೇಳೆ ಸ್ಪರ್ಧಿಗಳು ರಕ್ಷಿತಾ ಶೆಟ್ಟಿಯನ್ನು ಗುರಿಯಾಗಿಸಿಕೊಂಡು, ಆಕೆಯನ್ನು ಮನೆಯಿಂದ ಹೊರಹಾಕಲು ಪ್ರಶ್ನೆಗಳ ಸುರಿಮಳೆಗೈದರು.
03:14 PM (IST) Oct 17
ಸಂಸದನಿಗೆ ಹೈಕೋರ್ಟ್ ಶಾಕ್, 4ನೇ ಪತ್ನಿಗೆ ತಿಂಗಳಿಗೆ 30,000 ರೂ ಜೀವನಾಂಶ ಪಾವತಿಗೆ ಸೂಚನೆ ನೀಡಿದೆ. ಸೀರಿಸ್ ಪ್ರಕಾರ 1,2,3,4 ಎಂದು ಮದುವೆ ಮಕ್ಕಳು ಮಾಡಕೊಂಡಿರುವ ಸಂಸದ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
02:44 PM (IST) Oct 17
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿಯೊಬ್ಬ ತನ್ನದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿನಿಯನ್ನು ವಾಶ್ ರೂಮಿಗೆ ಎಳೆದೊಯ್ದು ಅತ್ಯಾ*ಚಾರ ಎಸಗಿದ್ದಾನೆ. ಈ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ರಾಜಾರೋಷವಾಗಿ ಒಡಾಡ್ತಿದ್ದವನನ್ನು ಬಂಧಿಸಿದ್ದಾರೆ.
02:38 PM (IST) Oct 17
ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಸರ್ರೆಯಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೆಂದು ಹೇಳಲಾದ ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲನ್ ಹೊತ್ತುಕೊಂಡಿದೆ.
01:59 PM (IST) Oct 17
ಜಾತಿ ಗಣತಿ ಸಮೀಕ್ಷೆಗೆ ಒಪ್ಪದ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ್ ಮೂರ್ತಿ ವಿಚಾರವಾಗಿ, ಇನ್ಫೋಸಿಸ್‌ನವರು ಏನು ಬಹಳ ಬೃಹಸ್ಪತಿಗಳಾ? ಇದು ಹಿಂದುಳಿದ ವರ್ಗದ ಜಾತಿ ಸಮೀಕ್ಷೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
01:47 PM (IST) Oct 17
ಅಮೃತಧಾರೆ ಧಾರಾವಾಹಿಯಲ್ಲಿ, ಜೈಲಿನಿಂದ ಬಿಡುಗಡೆಯಾಗಿ ಬಂದ ತನ್ನ ಸಹೋದರ ಶಕುನಿ ಮಾಮನನ್ನು ಆಸ್ತಿಯ ಮದದಲ್ಲಿರುವ ಶಕುಂತಲಾ ಮತ್ತು ಜೈದೇವ್ ಅವಮಾನಿಸುತ್ತಾರೆ. ಮಾಡಿದ ಪಾಪಕ್ಕೆ ಪ್ರತಿಫಲ ಎಂಬಂತೆ ಕಾಣುತ್ತಿರುವ ಈ ಘಟನೆಯು, ಮುಂದಿನ ದಿನಗಳಲ್ಲಿ ಗೌತಮ್ ಮತ್ತು ಭೂಮಿಕಾಗೆ ಸಹಾಯವಾಗಬಹುದೇ ಎಂಬ ಕುತೂಹಲವಿದೆ.
01:30 PM (IST) Oct 17
ಜಾತಿ ಜನಗಣತಿಯಲ್ಲಿ ಭಾಗವಹಿಸಲು ನಿರಾಕರಿಸಿದ ನಾರಾಯಣ ಮೂರ್ತಿ ದಂಪತಿಯನ್ನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ 'ಸಂವಿಧಾನ ವಿರೋಧಿಗಳು' ಮತ್ತು 'ದೇಶದ್ರೋಹಿಗಳು' ಎಂದು ಕರೆದಿದ್ದಾರೆ. ತೆರಿಗೆ ತಪ್ಪಿಸಿಕೊಳ್ಳಲು ಅವರು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
01:28 PM (IST) Oct 17
ನಿರ್ಬಂಧ ವಿಧಿಸಲು ಆರ್‌ಎಸ್‌ಎಸ್ ನಿಂದ ರಾಜ್ಯದಲ್ಲಿ ಯಾವ ಅನಾಹುತವಾಗಿದೆ. ಹಾಗಾದರೆ ಯೂತ್ ಕಾಂಗ್ರೆಸ್ ಏನು? ಅಲ್ಲಿ ಏನೇನು ನಡೆಯುತ್ತಿದೆ? ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು.
01:15 PM (IST) Oct 17
Honoring the Farmer ಜಪಾನ್‌ನಲ್ಲಿ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಅವರ ಫೋಟೋ ಮತ್ತು ಹೆಸರಿನೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ವಿಶಿಷ್ಟ ಪದ್ಧತಿಯು ಗ್ರಾಹಕರಲ್ಲಿ ನಂಬಿಕೆ, ಪಾರದರ್ಶಕತೆ ಮತ್ತು ರೈತರಿಗೆ ಗೌರವವನ್ನು ಮೂಡಿಸುತ್ತದೆ, ಇದು ಭಾರತದಲ್ಲಿನ ರೈತರ ಸ್ಥಿತಿಗೆ ವ್ಯತಿರಿಕ್ತವಾಗಿದೆ.
01:08 PM (IST) Oct 17
ಜೀ ಕನ್ನಡ ಕುಟುಂಬ ಅವಾರ್ಡ್ಸ್ 2025 ಕಾರ್ಯಕ್ರಮದಲ್ಲಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. 'ಅಮೃತಧಾರೆ' ಗೌತಮ್ ಮತ್ತು 'ಅಣ್ಣಯ್ಯ' ಶಿವು ನೆಚ್ಚಿನ ನಾಯಕ ಪ್ರಶಸ್ತಿ ಪಡೆದರೆ, 'ಕರ್ಣ' ಸೀರಿಯಲ್ ಖ್ಯಾತಿಯ ನಮ್ರತಾ ಗೌಡ ನೆಚ್ಚಿನ ನಾಯಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.