- Home
- Entertainment
- TV Talk
- ತಮಿಳಿನಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡ Amruthadhaare ಭೂಮಿಕಾ: ಪತಿಯ ನೋಡಿ ಕಣ್ಣೀರ ಕೋಡಿ
ತಮಿಳಿನಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡ Amruthadhaare ಭೂಮಿಕಾ: ಪತಿಯ ನೋಡಿ ಕಣ್ಣೀರ ಕೋಡಿ
ಅಮೃತಧಾರೆ ಖ್ಯಾತಿಯ ನಟಿ ಛಾಯಾ ಸಿಂಗ್ ಅವರು ಕನ್ನಡ ಮತ್ತು ತಮಿಳು ಎರಡೂ ಕಡೆ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ತಮಿಳು ಪ್ರಶಸ್ತಿ ಸಮಾರಂಭದಲ್ಲಿ ಅವರ ಪತಿ ಕೃಷ್ಣ ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿ ಮೂಡಿಸಿದ್ದು, ಈ ವೇಳೆ ಛಾಯಾ ಸಿಂಗ್ ಭಾವುಕರಾದರು.

ಅಮೃತಧಾರೆ ಭೂಮಿಕಾ
ನಟಿ ಛಾಯಾ ಸಿಂಗ್ ಎಂದರೆ ಬಹುಶಃ ಹಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಅಮೃತಧಾರೆ (Amruthadhaare) ಭೂಮಿಕಾ ಎಂದರೆ ಸೀರಿಯಲ್ ಪ್ರಿಯರಿಗೆ ಅಚ್ಚುಮೆಚ್ಚಿನ ಪಾತ್ರವದು. ಸದ್ಯ ಗೌತಮ್ ಮೇಲೆ ವಿನಾಕಾರಣ ಭೂಮಿಕಾ ಮುನಿಸು ಮಾಡಿಕೊಂಡಿದ್ದಾಳೆ ಎನ್ನುವ ಕಾರಣಕ್ಕೆ ಅಮೃತಧಾರೆ ವೀಕ್ಷಕರು ಆಕೆಯ ಮೇಲೆ ತುಸು ಕೋಪ ತೋರುತ್ತಿದ್ದರೂ, ನಟನೆಯ ವಿಷ್ಯಕ್ಕೆ ಬಂದರೆ ನಾಯಕ ಗೌತಮ್ ಅರ್ಥಾತ್ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರ ನಟನೆಗೆ ವೀಕ್ಷಕರು ಫಿದಾ ಆಗಿರೋದಂತೂ ಸುಳ್ಳಲ್ಲ.
ಎಲ್ಲ ಭಾಷೆಗಳ ಜೀ ಅವಾರ್ಡ್
ಇದೀಗ ಜೀ ಟಿವಿಯ ಎಲ್ಲಾ ಭಾಷೆಗಳಲ್ಲಿಯೂ ಕುಟುಂಬ ಅವಾರ್ಡ್ ಶುರುವಾಗಿದೆ. ಇತ್ತ ಭೂಮಿಕಾ ಅರ್ಥಾತ್ ಛಾಯಾ ಸಿಂಗ್ ಅವರು ಕನ್ನಡದ ಜೀ ಕುಟುಂಬ ಆವಾರ್ಡ್ಸ್ನಲ್ಲಿ ಅತ್ಯುತ್ತಮ ಜೋಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗೌತಮ್ ಮತ್ತು ಭೂಮಿಕಾ ಜೋಡಿಗೆ ಈ ಪ್ರಶಸ್ತಿ ಸಿಕ್ಕಿದೆ. ಇದರ ಪ್ರಸಾರ ಇಂದಿನಿಂದ ಮೂರು ದಿನಗಳವರೆಗೆ ಜೀ ಟಿವಿಯಲ್ಲಿ ನೋಡಬಹುದು.
ತಮಿಳಿನಲ್ಲಿಯೂ ಛಾಯಾ ಸಿಂಗ್
ಇದೀಗ ಅತ್ತ ತಮಿಳಿನಲ್ಲಿಯೂ ನಟಿ ಛಾಯಾ ಸಿಂಗ್ ಸಕ್ರಿಯರಾಗಿದ್ದಾರೆ. ಅಲ್ಲಿ ಅವರು ಗಟ್ಟಿಮೇಳಂ ಸೀರಿಯಲ್ನಲ್ಲಿ ತುಳಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ, ಕನ್ನಡದಲ್ಲಿಯೂ ಗಟ್ಟಿಮೇಳ ಸೀರಿಯಲ್ ಬಂದಿದೆ. ಆದರೆ ಈ ಗಟ್ಟಿಮೇಳಕ್ಕೂ, ಆ ಗಟ್ಟಿಮೇಳಕ್ಕೂ ಸಂಬಂಧವಿಲ್ಲ. ಬದಲಿಗೆ ತಮಿಳಿನ ಗಟ್ಟಿಮೇಳಂ ಸೀರಿಯಲ್ ಕನ್ನಡದಲ್ಲಿ ಈಗ ಬರ್ತಿರೋ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯನ್ನ ರೀಮೇಕ್ ಆಗಿದೆ.
ಬೆಸ್ಟ್ ನಟಿ ಪ್ರಶಸ್ತಿ
ಈ ಸೀರಿಯಲ್ನಲ್ಲಿನ ನಟನೆಗೆ ಅವರಿಗೆ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯ ಸಮಾರಂಭದ ವೇಳೆ ಭಾರಿ ಟ್ವಿಸ್ಟ್ ಕೂಡ ನಡೆಯಿತು. ಅದೇನೆಂದರೆ, ಈ ಪ್ರಶಸ್ತಿ ಛಾಯಾ ಸಿಂಗ್ ಅವರಿಗೆ ಸಿಗಲಿದೆ ಎನ್ನುವುದನ್ನು ವಾಹಿನಿಯ ಕಡೆಯಿಂದ ಮೊದಲೇ ಅವರ ರಿಯಲ್ ಪತಿ ಕೃಷ್ಣ ಅವರಿಗೆ ತಿಳಿಸಲಾಗಿತ್ತು. ಬೆಸ್ಟ್ ನಟಿ ಪ್ರಶಸ್ತಿ ಘೋಷಿಸಿದಾಗ, ನಟಿ ಎದ್ದು ನಿಂತಾಗ ಹಿಂದಿನಿಂದ ಬಂದ ಕೃಷ್ಣಾ ಅವರು ಪತ್ನಿಯನ್ನು ತಬ್ಬಿಕೊಂಡರು.
ಪತಿ ನೋಡಿ ಕಂಬನಿ
ಅರೆ ಕ್ಷಣ ವಿಚಲಿತರಾದ ನಟಿ ಛಾಯಾ ಸಿಂಗ್ ತಿರುಗಿ ನೋಡಿದಾಗ ಗಂಡನನ್ನು ನೋಡಿ ಅಲ್ಲಿಯೇ ಕಳೆದುಹೋದರು. ಪತಿ ಅವರನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದರು. ಕೊನೆಗೆ ನಟಿ ಛಾಯಾ ಸಿಂಗ್, ಇಂಥದ್ದೊಂದು ಅದ್ಭುತ ಕ್ಷಣಕ್ಕೆ ಸಾಕ್ಷಿ ಮಾಡಿದ್ದಕ್ಕೆ ವಾಹಿನಿಗೆ ಧನ್ಯವಾದ ಸಲ್ಲಿಸುತ್ತಲೇ ಕಣ್ಣೀರಾದರು.
ರಿಯಲ್ ಪತಿಯ ಕುರಿತು...
ಇನ್ನು ನಟಿಯ ರಿಯಲ್ ಮದ್ವೆ ಕುರಿತು ಹೇಳುವುದಾದರೆ, ನಟಿಗೆ ಈಗ 43 ವರ್ಷ ವಯಸ್ಸು. 2012ರಲ್ಲಿ ಇವರ ಮದುವೆಯಾಗಿದ್ದು, 12 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಇವರ ಮದುವೆಯ ಸ್ಟೋರಿಯೂ ಚೆನ್ನಾಗಿದೆ. ಕೃಷ್ಣ ಮತ್ತು ನಮ್ಮಮ್ಮ ಮಾತನಾಡಿಕೊಳ್ತಿದ್ರು. ನನಗೆ ಗೊತ್ತೇ ಇರಲಿಲ್ಲ. ಅದೊಂದು ದಿನ ಕೃಷ್ಣ ಅವರೇ ನನ್ನ ಅಮ್ಮನ ಬಳಿ ಬಂದು ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ, ಮದ್ವೆಯಾಗ್ತೇನೆ ಎಂದ್ರು. ಅಮ್ಮ ಓಕೆ ಅಂದುಬಿಟ್ರು. ನನಗೆ ಏನು ಆಗ್ತಿದೆ ಎಂದೇ ನಿಜಕ್ಕೂ ಗೊತ್ತಿರಲಿಲ್ಲ. ಹೀಗೆ ನಮಗೆ ಮದ್ವೆಯಾಯ್ತು. ಆದರೆ ಕೃಷ್ಣ ಇರುವುದು ಚೆನ್ನೈನಲ್ಲಿ, ಛಾಯಾ ಇರುವುದು ಬೆಂಗಳೂರಿನಲ್ಲಿ. ಇಬ್ಬರೂ ಶೂಟಿಂಗ್ನಲ್ಲಿ ಬಿಜಿ. ಇದೇ ಕಾರಣಕ್ಕೆ ವರ್ಷದಲ್ಲಿ 10 ದಿನ ಕೂಡ ಒಟ್ಟಿಗೇ ಇರುವುದು ಕಷ್ಟವಾಗುತ್ತಿದೆ ಎಂದು ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ ಛಾಯಾ.
ಪತಿ ತುಂಬಾ ಸಪೋರ್ಟಿವ್
ಕೃಷ್ಣ ಮತ್ತು ಅವರ ಅಪ್ಪ-ಅಮ್ಮ ತುಂಬಾ ಒಳ್ಳೆಯವರು. ಅಂಥವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಈಗ ಒಂದೂವರೆ ವರ್ಷ ಆಗೋಯ್ತು. ನಾವಿಬ್ಬರೂ ಮೀಟ್ ಆಗದೆ. ಅವ್ರು ಬಿಡುವಾದಾಗ ಅವ್ರು ಬರ್ತಾರೆ, ನಾನು ಬಿಡುವಾದಾಗ ನಾನು ಹೋಗ್ತೀನಿ, ಇಡೀ ವರ್ಷದಲ್ಲಿ ಜೊತೆಯಲ್ಲಿ ಕಡೆಯುವ ಕ್ಷಣಗಳು 10 ದಿನ ಆದ್ರೆ ಹೆಚ್ಚು ಎಂದಿದ್ದಾರೆ. ಉಳಿದ ದಿನಗಳಲ್ಲಿ ವಿಡಿಯೋ ಕಾಲ್, ಫೋನ್ನಲ್ಲಿಯೇ ಆಗುತ್ತದೆ. ಆದರೆ ಇದುವರೆಗೂ ಅವರು ಇದರ ಬಗ್ಗೆ ಯಾವುದೇ ಕಂಪ್ಲೇಂಟ್ ಮಾಡಲಿಲ್ಲ ಎಂದಿದ್ದರು.
ಪತಿ ತುಂಬಾ ಸಪೋರ್ಟಿವ್
ಪತಿ ತುಂಬಾ ಸಪೋರ್ಟಿವ್. ಈಗ ತಮಿಳಿನ ಸೀರಿಯಲ್ ಸಿಕ್ಕಿದೆ. ಅದಕ್ಕೂ ಅವರು ಪರವಾಗಿಲ್ಲ ಮಾಡು, ಅವಕಾಶ ಸಿಕ್ಕಾಗ ಬಿಡಬಾರದು ಎನ್ನುತ್ತಾರೆ. ವರ್ಲ್ಡ್ ಟೂರ್ಗೆ ಹೋಗುವ ಪ್ಲ್ಯಾನ್ ಇದೆ. ಅದನ್ನು ಇಬ್ಬರಿಗೂ ಬಿಡುವಾದಾಗ ಮಾಡೋಣ ಎಂದಿದ್ದಾರೆ. ಹೀಗೆ ನನಗೆ ತುಂಬಾ ಸಪೋರ್ಟ್ ಮಾಡುತ್ತಾರೆ ಎಂದು ನಟಿ ಹೇಳಿದ್ದರು.