ಅಡಿಕೆ ಮತ್ತು ತೆಂಗಿನ ಮರಗಳಲ್ಲಿ ಕಾಂಡ ಸೋರುವ ರೋಗ ಕೆಲವು ಮರಗಳಲ್ಲಿ ಕಾಣಿಸಿಕೊಂಡಿದ್ದು, ರೈತರು ತೋಟದ ಬೆಳೆಗಳಿಗೆ ಸಂಬಂಧಿಸಿದ ಯಾವುದೇ ರೋಗ ಮತ್ತು ಕೀಟಗಳ ಬಾದೆಯನ್ನು ಹತೋಟಿಗೆ ತರಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಂಪರ್ಕಿಸುವಂತೆ ಹಿರಿಯ ಸಹಾಯ ತೋಟಗಾರಿಕಾ ನಿರ್ದೇಶಕರಾದ ಸುಧಾಕರ್.ಹೆಚ್.ಎ. ತಿಳಿಸಿದರು.
ಶಿರಾ : ಅಡಿಕೆ ಮತ್ತು ತೆಂಗಿನ ಮರಗಳಲ್ಲಿ ಕಾಂಡ ಸೋರುವ ರೋಗ ಕೆಲವು ಮರಗಳಲ್ಲಿ ಕಾಣಿಸಿಕೊಂಡಿದ್ದು, ರೈತರು ತೋಟದ ಬೆಳೆಗಳಿಗೆ ಸಂಬಂಧಿಸಿದ ಯಾವುದೇ ರೋಗ ಮತ್ತು ಕೀಟಗಳ ಬಾದೆಯನ್ನು ಹತೋಟಿಗೆ ತರಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಂಪರ್ಕಿಸುವಂತೆ ಹಿರಿಯ ಸಹಾಯ ತೋಟಗಾರಿಕಾ ನಿರ್ದೇಶಕರಾದ ಸುಧಾಕರ್.ಹೆಚ್.ಎ. ತಿಳಿಸಿದರು.
ಕಳ್ಳಂಬೆಳ್ಳ ಹೋಬಳಿಯ ಭೂಪಸಂದ್ರ ಗ್ರಾಮದ ರೈತರ ತೋಟಗಳಲ್ಲಿ ಅಣಬೆ ರೋಗ, ಕಾಂಡಸೋರುವ ರೋಗಗಳ ಬಾದೆ ಹೆಚ್ಚಿತ್ತಿರುವ ಕಾರಣ ಕಾಸರಗೋಡು ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಜ್ಞಾನಿಗಳ ತಂಡವನ್ನು ಆಹ್ವಾನಿಸಿ ರೈತರ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಭೇಟಿ ನೀಡಿ ರೈತರ ತಾಕುಗಳನ್ನು ವೀಕ್ಷಿಸಿ ರೈತರಿಗೆ ಮಾಹಿತಿ ನೀಡಿ ಮಾತನಾಡಿದರು.
undefined
ಶಿರಾ ತಾಲೂಕಿನಲ್ಲಿ 11000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮತ್ತು 13000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ಅಡಿಕೆ ಮತ್ತು ತೆಂಗಿನ ಮರಗಳಲ್ಲಿ ಕಾಂಡ ಸೋರುವ ರೋಗ ಕೆಲವು ಮರಗಳಲ್ಲಿ ಹೊಸದಾಗಿ ಕಾಣಿಸಿಕೊಂಡಲ್ಲಿ ರೈತರು Hexaconazole ಔಷಧಿ 100 ಮಿ.ಲೀ ನೀರಿಗೆ 3 ಎಂ.ಎಲ್. ಬೆರೆಸಿ ಮರದ ಬೇರಿನ ಮೂಲಕ ಉಪಚರಿಸಬೇಕು.
ಕಾಂಡ ಸೋರುವ ರೋಗವು ತೋಟದ ತುಂಬಾ ಹರಡಿಕೊಂಡಿದ್ದಲ್ಲಿ ಪ್ರತಿ ಲೀಟರ್ ನೀರಿಗೆ 5 ಎಂ.ಎಲ್. drenching ಮಾಡಬೇಕು. ಈ ಔಷಧಿಯ ಜೊತೆಗೆ ಜೈವಿಕ ಔಷಧಿಗಳಾದ ಟ್ರೈಕೊಡರ್ಮಾ ಮತ್ತು ಆರ್ಕ್ ಮೈಕ್ರೋಬಿಯಲ್ ಕನ್ಸಸೋರ್ಪಿಯಮ್ ಇವುಗಳನ್ನು ಬೇವಿನ ಹಿಂಡಿ ಜೊತೆ ಬೆರೆಸಿ ಮರಗಳಿಗೆ ನೀಡುವುದರ ಮೂಲಕ ಈ ರೋಗವನ್ನು ಹತೋಟಿಗೆ ತರಬಹುದು.
ಮುಖ್ಯ ವಿಜ್ಞಾನಿಗಳು ಡಾ.ವಿನಾಯಕ ಹೆಗ್ಡೆ, ಗ್ರಾಮದ ರೈತರಾದ ಬಿ.ಹೆಚ್. ಚಿಕ್ಕಪಯ್ಯ, ಪರ್ವತಪ್ಪ, ರಂಗೇಗೌಡ, ಜವರೇಗೌಡ, ಕರೇಗೌಡ, ದೇವರಾಜು ಸೇರಿದಂತೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಎಲೆ ಚುಕ್ಕಿ ರೋಗ ಬೆಳೆಗಾರರು ಕಂಗಾಲು
ಚಿಕ್ಕಮಗಳೂರು(ಅ.03): ಅಡಿಕೆ. ಮಲೆನಾಡಿಗರ ಬದುಕೇ ಸರಿ. ಅಡಿಕೆಯನ್ನ ನಂಬಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ, ಅಡಿಕೆಗೆ ಬಾಧಿಸುತ್ತಿರೋ ಹಳದಿ ಎಲೆ ರೋಗದಿಂದ ಬೆಳೆಗಾರರು 4-5 ದಶಕಗಳಿಂದ ಕಂಗಾಲಾಗಿದ್ರು. ಆದ್ರೀಗ, ಆ ಹಳದಿ ರೋಗದ ಜೊತೆ ಎಲೆ ಚುಕ್ಕಿ ರೋಗ ಬೆಳೆಗಾರರನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಹಳದಿ ಎಲೆ ರೋಗ ಮರಗಳನ್ನ ಎಂಟತ್ತು ವರ್ಷಗಳ ಉಳಿಸುತ್ತಿತ್ತು. ಆದರೆ, ಎಲೆ ಚುಕ್ಕಿ ರೋಗ ಬಂದ್ರೆ ಮುಗೀತು ಕಥೆ. ಮುಗಿಲೆತ್ತರದ ಮರಗಳು ನೋಡನೋಡ್ತಿದ್ದಂತೆ ಉದ್ದುದ್ದ ಮಲಗಿರುತ್ವೆ. ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ್ದ ಮರಗಳು ಕಣ್ಣೆದುರೇ ಸುಟ್ಟಿ ಹೋಗ್ತಿದ್ದು ಬೆಳೆಗಾರರು ಅಕ್ಷರಶಃ ಕಣ್ಣೀರಿಡ್ತಿದ್ದಾರೆ.
ಮುಗಿಲೆತ್ತರದ ಮರಗಳು ನೆಲ ಸಮ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಅಡಿಕೆ ಬೆಳೆದ ಬೆಳೆಗಾರರು ಕಂಗಾಲಾಗಿದ್ದಾರೆ. ಪ್ರತಿ ತೋಟದಲ್ಲೂ ಚುಕ್ಕಿ ಬಿದ್ದು ಬಾಗಿರೋ ಗರಿಗಳು. ಮರದಿಂದ ಬಿದ್ದು ಒಡೆದು ಹೋಗಿರೋ ಅಡಿಕೆ ಕಾಯಿಯ ದ್ರಶ್ಯ ಸರ್ವೇ ಸಾಮಾನ್ಯವಾಗಿದೆ. ಶೃಂಗೇರಿ ತಾಲೂಕಿನ ಮಾತೋಳ್ಳಿ, ಕೆರೆಕಟ್ಟೆ, ಶಿರ್ಲು, ಮುಡಬ, ಗುಲಗುಂಜಿಮನೆ, ಕಾರ್ಕಿ, ಹೆಮ್ಮಿಗೆ, ಹಾದಿ ಸೇರಿದಂತೆ ತಾಲೂಕಿನ ಶೇ. 80ರಷ್ಟು ಅಡಿಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿವೆ. ಐದು ತರಹದ ಹುಳಗಳು ಅಡಿಕೆಯ ಹಸಿ ಸೋಗೆಯನ್ನ ತಿನ್ನುತ್ತಿವೆ. ಹುಳಗಳು ಸುಳಿಯನ್ನ ತಿಂದ ಮೇಲೆ ಗಿಡಗಳೇ ಸತ್ತು ಹೋಗುತ್ತಿವೆ. ಗರಿಗಳ ಮೂಲಕ ಹರಡುತ್ತಿರೋ ಈ ರೋಗ ಗರಿಗಳಲ್ಲಿ ತೆಳು ಕಂದು ಬಣ್ಣದಿಂದ ದಟ್ಟ ಕಂದು ಬಣ್ಣ ಅಥವಾ ಕಪ್ಪುಬಣ್ಣದ ಚುಕ್ಕಿಗಳು ಕಾಣಿಸುತ್ತಿವೆ. ಹಾಗಾಗಿ ಗರಿಗಳು ಕೆಂಪಾಗಿ, ಮರದ ಗಾತ್ರವೇ ಸಣ್ಣದಾಗಿ ಅಡಿಕೆ ಮರಗಳು ನಿಲ್ಲುವ ಸಾಮಥ್ರ್ಯವನ್ನೇ ಕಳೆದುಕೊಳ್ತಿವೆ. 15-20 ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ಮರಗಳು ಈಗೀಗ ಫಸಲು ನೀಡಲು ಶುರುವಿಟ್ಟಿದ್ವು. ಆದ್ರೀಗ, ಕಳೆದೊಂದು ವರ್ಷದಿಂದ ಕ್ರಮೇಣ ತೋಟವೇ ನಾಶವಾಗ್ತಿದೆ. ಹೀಗಾದ್ರೆ ನಾವು ಹೇಗೆ ಬದುಕೋದೇಗೆ, ಸಾವಿರಾರು ರೂಪಾಯಿಯ ಔಷಧಿ ಸಿಂಪಡಿಸಿ ಸಾಕಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.
ಒಬ್ಬ ಪ್ರಧಾನಿ ಎಷ್ಟು ಸರಳವಾಗಿ ಬದುಕಬಹುದೆಂದು ತೋರಿಸಿಕೊಟ್ಟವರು ಲಾಲ್ ಬಹದ್ದೂರ್: ಶೋಭಾ ಕರಂದ್ಲಾಜೆ
ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ
ಈ ಹಿಂದೆ ಗುಡ್ಡಕ್ಕೆ ಬೆಂಕಿ ಬೀಳುವುದು ಮತ್ತು ಕಾಡ್ಗಿಚ್ಚು ಬೀಳುವುದರಿಂದ ಹುಳಗಳು ಬೆಂಕಿಗೆ ಬಿದ್ದು ಸಾಯುತ್ತಿದ್ದವಂತೆ. ಆದರೆ ಒಂದು ವರ್ಷ ಮಳೆ ಜಾಸ್ತಿ ಯಾದ್ರೆ ಮತ್ತೊಂದು ವರ್ಷ ಮಳೆ ಕಡಿಮೆ , ಈ ಹಿನ್ನಲೆಯಲ್ಲಿ ಹುಳಗಳ ಸಂತತಿ ಜಾಸ್ತಿಯಾಗಿದೆ ಅಂತಾರೆ ಸ್ಥಳಿಯರು. ಆದ್ದರಿಂದ ತೋಟಗಳ ಮೇಲೆ ಈ ರೋಗ ಪರಿಣಾಮ ಬೀರಿದ್ದು ದಶಕಗಳ ಅಡಿಕೆ ಮರಗಳು ನಾಲ್ಕೈದು ತಿಂಗಳಲ್ಲೇ ಸಾಯುತ್ತಿವೆ ಎಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ. ಎಷ್ಟೆ ಔಷಧಿ ಕಂಡುಹಿಡಿದು ಕೀಟನಾಶಕವನ್ನ ಸಿಂಪಡಿಸಿದರು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬೇರು ಹುಳ ಬಾಧೆ, ಹಳದಿಎಲೆ ರೋಗ ಸೇರಿದಂತೆ ಇತರೆ ರೋಗಗಳು ಕಾಡಿದಾಗ ರೈತರು ಸವಾಲಾಗಿ ಸ್ವೀಕರಿಸಿ ತೋಟವನ್ನ ಉಳಿಸಿಕೊಂಡಿದ್ದರು. ಆದರೆ, ಎಲೆ ಚುಕ್ಕಿ ರೋಗ ತೋಟವನ್ನ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಬೆಳೆಗಾರರು ಕೈಚೆಲ್ಲಿ ಕೂತಿದ್ದು, ಕಣ್ಣೆದುರೇ ತೋಟ ನಾಶವಾಗ್ತಿರೋದ ಕಂಡು ಮಮ್ಮುಲು ಮರುಗಿದ್ದಾರೆ