ಬೆಂಗಳೂರು: ವೇಲ್‌ನಿಂದ ಕತ್ತು ಬಿಗಿದು ಪತ್ನಿ ಹ*ಗೈದು ಪತಿ ಎಸ್ಕೇಪ್!

By Girish Goudar  |  First Published Nov 24, 2024, 5:24 PM IST

ಪತ್ನಿಯ ಮೇಲೆ ಪತಿ ಇಮ್ರಾನ್ ಸುಖಾ ಸುಮ್ಮನೆ ಶಂಕೆ ವ್ಯಕ್ತಪಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಪತ್ನಿ ಗೌಸಿಯಾ ಜೊತೆ ಹಲವಾರಿ ಬಾರಿ ಗಲಾಟೆ ಮಾಡುತ್ತಿದ್ದನು. ಶುಕ್ರವಾರ ವೇಲ್ ನಿಂದ ಕತ್ತು ಬಿಗಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಾಲ್ಕು ವರ್ಷದ ಮಗು ಜೊತೆ ಆರೋಪಿ ಇಮ್ರಾನ್ ಎಸ್ಕೇಪ್ ಅಗಿದ್ದಾನೆ.
 


ಬೆಂಗಳೂರು(ನ.24): ಪತಿಯೇ ವೇಲ್‌ನಿಂದ ಕತ್ತು ಬಿಗಿದು ಪತ್ನಿಯನ್ನ ಹತ್ಯೆ ಮಾಡಿ ಎಸ್ಕೇಪ್ ಆದ ಘಟನೆ ನಗರದ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಗೌಸಿಯ ಬಿ ಕೊಲೆಯಾದ ಮಹಿಳೆ.  ಇಮ್ರಾನ್ ಎಂಬಾತನೇ ಪತ್ನಿಯನ್ನ ಕೊಲೆಗೈದು ಎಸ್ಕೇಪ್ ಅದ ಆರೋಪಿಯಾಗಿದ್ದಾನೆ. 

ಶುಕ್ರವಾರ ಕೊಲೆ ಮಾಡಿ ಆರೋಪಿ ಎಸ್ಕೇಪ್ ಅಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿಯ ಮೇಲೆ ಪತಿ ಇಮ್ರಾನ್ ಸುಖಾ ಸುಮ್ಮನೆ ಶಂಕೆ ವ್ಯಕ್ತಪಡಿಸುತ್ತಿದ್ದನಂತೆ. ಇದೇ ವಿಚಾರವಾಗಿ ಪತ್ನಿ ಗೌಸಿಯಾ ಜೊತೆ ಹಲವಾರಿ ಬಾರಿ ಗಲಾಟೆ ಮಾಡುತ್ತಿದ್ದನು. ಶುಕ್ರವಾರ ವೇಲ್ ನಿಂದ ಕತ್ತು ಬಿಗಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಾಲ್ಕು ವರ್ಷದ ಮಗು ಜೊತೆ ಆರೋಪಿ ಇಮ್ರಾನ್ ಎಸ್ಕೇಪ್ ಅಗಿದ್ದಾನೆ. 

Tap to resize

Latest Videos

undefined

ಹಾಸನ: ವರದಕ್ಷಿಣೆಗಾಗಿ ಗರ್ಭಿಣಿಯನ್ನೇ ಕೊಂದ ಪಾಪಿ ಪತಿ

ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಆರೋಪಿ ಇಮ್ರಾನ್ ಫ್ಯಾಬರಿಕ್ ಕೆಲಸ ಮಾಡಿಕೊಂಡಿದ್ದನು. ಕೊಲೆ ಮಾಡಿ ಎಸ್ಕೇಪ್ ಆಗುವಾಗ ಸಹೋದ್ಯೋಗಿಗಳ ಜೊತೆ ಹಣ ಕೇಳಿದ್ದ ಆರೋಪಿ ಇಮ್ರಾನ್‌. ಆತನ ಸಹೋದ್ಯೋಗಿಗಳು ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಚಾರವನ್ನು ಕೆಲಸಗಾರರು ಮಾಲೀಕರಿಗೆ ಹೇಳಿದ್ದರು.  ಇಮ್ರಾನ್ ಹಣ ಕೇಳಿಕೊಂಡು ಬಂದಿರುವುದಾಗಿ ಹೇಳಿದ್ರು. ಹಣ ಕೇಳಿಕೊಂಡು ಬಂದಿರುವ ವಿಚಾರವನ್ನು ಮಾಲೀಕ ಕೊಲೆಯಾದ ಗೌಸಿಯಾ ಕುಟುಂಬಸ್ಥರಿಗೆ ಹೇಳಿದ್ದರು.  ಆ ಮಾಹಿತಿ ಮೇರೆಗೆ ಗೌಸಿಯಾ ಸಹೋದರ ಮನೆಯ ಬಳಿ ಹೋಗಿ ನೋಡಿದ್ದರು.  ಆದ್ರೆ ಮನೆಯ ಬಾಗಿಲು, ಚಿಲಕ ಹಾಕಿದ ಕಾರಣ ಹೊರಹೋಗಿರಬಹುದು ಎಂದು ಶಂಕಿಸಿ ಗೌಸಿಯಾ ಸಹೋದರ ವಾಪಸ್ ಬಂದಿದ್ದರಂತೆ. 

ಆದ್ರೆ ರಾತ್ರಿ ಬಂದು ನೋಡಿದಾಗಲು ಕೂಡ ಹಾಕಿದ ಬಾಗಿಲು ಹಾಗೆ ಇದ್ದ ಕಾರಣ ಅನುಮಾನದಿಂದ ಮಾಲೀಕರ ಜೊತೆ ಕೀ ಕೇಳಿ ಬಾಗಿಲು ತೆರೆಯಲು ಯತ್ನಿಸಿದ್ದರು. ಬಾಗಿಲು ಓಪನ್ ಆದಾಗ ಪ್ರಕರಣ ಬೆಳಕಿಗೆ ಬಂದಿದೆ.  ಹಾಸಿಗೆ ಮೇಲೆ ಗೌಸಿಯಾ ಅಂಗಾತ ಬಿದ್ದಿದ್ದರು. ಬಳಿಕ ಕುಟುಂಬಸ್ಥರು ಚಂದ್ರಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. 

ಚಂದ್ರಲೇಔಟ್ ಪೊಲೀಸರಿಂದ ಆರೋಪಿ ಇಮ್ರಾನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಇಮ್ರಾನ್ ನಾಲ್ಕು ವರ್ಷದ ಮಗು ಜೊತೆ ಎಸ್ಕೇಪ್ ಅಗಿದ್ದಾನೆ. ಕೊಲೆ ಮಾಡಿದ ಬಳಿಕ ಮಗುವನ್ನು ಬಿಟ್ಟುಹೋದರೆ ಪ್ರಕರಣ ಶೀಘ್ರವೇ ಬೆಳಕಿಗೆ ಬರುವ ಹಿನ್ನೆಲೆಯಲ್ಲಿ ಹಂತಕ ಇಮ್ರಾನ್ ಮಗುವನ್ನು ಕೂಡ ತನ್ನ ಜತೆ ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. 

ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದೇ ತಪ್ಪಾಯ್ತಾ? ಅತ್ತಿಗೆಯ ಕತ್ತು ಸೀ ಳಿದ ಮೈದುನ!

ತುಮಕೂರು: ದಲಿತ ಮಹಿಳೆ ಡಾಬಾ ಹೊನ್ನಮ್ಮ ಮರ್ಡರ್ ಕೇಸ್, 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ತುಮಕೂರು:  ಅದು ಬರೊಬ್ಬರಿ 14 ವರ್ಷಗಳ ಹಿಂದೆ ನಡೆದಿದ್ದ ದಲಿತ ಮಹಿಳೆಯ ಭರ್ಬರ ಕೊಲೆ ಪ್ರಕರಣ. ರಕ್ತದ ಮಡುವಿನಲ್ಲಿ ನರಳಾಡಿ ಪ್ರಾಣಬಿಟ್ಟಿದ್ದ ಆಕೆಗೆ ಇಂದು ನ್ಯಾಯಾಲಯ ನೀಡಿದ ತೀರ್ಪಿನಿಂದ ಶಾಂತಿ ಸಿಕ್ಕಂತಾಗಿದೆ. 

ಯಸ್.. ಅದು 2010 ರ ಜೂನ್ 28 ರಂದು ಸಂಜೆ 7.30 ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಬಳಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದ್ದ ಡಾಬಾ ಹೊನ್ನಮ್ಮ ಕೊಲೆ. ಆ ಭೀಕರ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಕೊಲೆ ಪ್ರಕರಣವನ್ನ ಖಂಡಿಸಿ ಇಡೀ ರಾಜ್ಯಾದ್ಯಂತ ದಲಿತ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ, ಹೋರಾಟಗಳನ್ನ ಮಾಡಿದ್ರು. ಸತತ 14 ವರ್ಷಗಳಿಂದ ಪ್ರಕರಣವನ್ನ ವಿಚಾರಣೆ ನಡೆಸಿದ ತುಮಕೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ನೀಡಿ ಕೊಲೆಗೈದಿದ್ದ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

click me!