ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಲಾರ(ನ.24): ಅಕ್ರಮ ಮಣ್ಣು ಗಣಿಗಾರಿಕೆ ವೇಳೆ ತಲೆ ಮೇಲೆ ದೊಡ್ಡ ಬಂಡೆ ಬಿದ್ದು ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದ ಬಳಿ ಇಂದು(ಭಾನುವಾರ) ನಡೆದಿದೆ.ನಾಗರಾಜ್ (35) ಮೃತ ವ್ಯಕ್ತಿ, ಅರಾಬಿಕೊತ್ತನೂರು ಗ್ರಾಮದ ನಿವಾಸಿಯಾಗಿದ್ದಾರೆ.
ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಮೃತ ನಾಗರಾಜ್ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣ ಮುಚ್ಚಿ ಹಾಕಲು ಜೇನು, ಕೀಳಲು ಹೋದಾಗ ದುರ್ಘಟನೆ ನಡೆದಿದೆ ಎಂದು ಬಿಂಬಿಸಲು ಹೋಗಲಾಗಿದೆ ಎಂದು ಆರೋಪಿಸಲಾಗಿದೆ.
ಬಳ್ಳಾರಿ: ಎಗ್ಗಿಲ್ಲದೇ ಸಾಗಿದೆ ಅಕ್ರಮ ಮರಳು ಸಾಗಾಟ, ಕಣ್ಮುಚ್ಚಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ!
ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಮರಾಜನಗರ: ಗುಮ್ಮಕ್ಕಲ್ಲು ಗುಡ್ಡದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ..!
ಗುಂಡ್ಲುಪೇಟೆ: ಮಡಹಳ್ಳಿ ಗುಮ್ಮಕ್ಕಲ್ಲು ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವನ್ನಪ್ಪಿದ ಘಟನೆ ಮಾಸುವ ಮುನ್ನ ಅನುಮತಿ ಇಲ್ಲದೆ ಮತ್ತೆ ಅಕ್ರಮ ಗಣಿಗಾರಿಕೆ ಸದ್ದು ಮಾಡುತ್ತಿದೆ. ಮಡಹಳ್ಳಿ ಸ.ನಂ.೧೯೨ ರಲ್ಲಿ ಗುಡ್ಡ ಕುಸಿತಕ್ಕೂ ಮುನ್ನ ಲೀಸ್ ಪಡೆದಿದ್ದ ಸುರೇಶ್ ಹಾಗೂ ಮಾದೇಶ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಸಿಕ್ಕಿಲ್ಲ.
ಸ್ಫೋಟಕ ಬಳಕೆಗೂ ಅನುಮತಿ ಪಡೆದಿಲ್ಲ. ಆದರೂ, ಲೀಸ್ ರದ್ದಾಗಿದ್ದ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರಿಸಲು ಅನುಮತಿಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಲೀಸ್‌ದಾರರಾದ ಸುರೇಶ್ ಹಾಗೂ ಮಾದೇಶ (ಹಳೇಯ ಲೀಸ್‌ದಾರರು) ಮಾತ್ರ ವಾರದಿಂದೀಚೆಗೆ ಗುಡ್ಡ ಕುಸಿತ ಪ್ರದೇಶದಲ್ಲಿ ಗುಡ್ಡ ಕುಸಿದಾಗ ಬಿದ್ದ ಕಲ್ಲು ಸಾಗಿಸಿದ್ದಾರೆ. ನೂರಾರು ಅಡಿ ಕ್ವಾರಿಯಲ್ಲಿ ನಿಂತ ಮಳೆಯ ನೀರನ್ನು ಡಿಸೇಲ್ ಯಂತ್ರದ ಮೂಲಕ ಮೇಲೆ ತೆಗೆದಿದ್ದಾರೆ. ಅಲ್ಲದೆ ಸ್ಫೋಟಕವನ್ನು ಅಕ್ರಮವಾಗಿ ಬಳಸಿ ಕಲ್ಲನ್ನು ಸ್ಫೋಟಿಸಿದ್ದಾರೆ ಎನ್ನಲಾಗಿದೆ. ಯಾವುದೇ ಅನುಮತಿ ಇಲ್ಲದೆ ಯಾರ ಕೃಪಾ ಕಟಾಕ್ಷದಲ್ಲಿ ನಿಷೇಧಗೊಂಡಿದ್ದ ಕ್ವಾರಿಯಲ್ಲಿ ಬೆಂಚ್ ಮಾರ್ಕ್ ಹೆಸರಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಳ್ಳಾರಿ ಗಣಿಯಲ್ಲಿ ಅವೈಜ್ಞಾನಿಕ ಸ್ಫೋಟ; ಹಳೆಕೋಟೆ ಗ್ರಾಮದ ಮನೆಗಳು ಬಿರುಕು!
ಡಿಜಿಎಂಎಸ್ ಅನುಮತಿ ಕೊಟ್ಟಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ದಾರರಿಗೆ ಬೆಂಚ್ ಮಾರ್ಕ್ ಮಾಡುವುದಕ್ಕೂ ಹೇಳಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಸ್ಪಷ್ಟಪಡಿಸಿದ್ದಾರೆ.
ಸ್ಥಗಿತಗೊಂಡಿದ್ದ ಕ್ವಾರಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಲೀಸ್‌ದಾರರಿಗೆ ಹೇಳುವಂತೆ ಭೂ ವಿಜ್ಞಾನಿ ಯಶಸ್ವಿನಿಗೆ ಸೂಚನೆ ನೀಡಿದ್ದೇನೆ. ಗಣಿಗಾರಿಕೆ ನಡೆಸದಂತೆ ಹೇಳುವೆ ಎಂದರು.
ಉತ್ತರ ಸಿಗುತ್ತಿಲ್ಲ
ಆದರೆ ಈ ಭಾಗದ ಭೂ ವಿಜ್ಞಾನಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗೊತ್ತಿಲ್ಲವೇ? ಬೆಂಚ್ ಮಾರ್ಕ್ ಮಾಡಲು ಸ್ಫೋಟಕ ಕೊಟ್ಟಿದ್ದು ಯಾರು? ನಿಷೇಧಿತ ಪ್ರದೇಶದಲ್ಲಿದ್ದ ಕಲ್ಲು ಸಾಗಿಸಿದ್ದು ಯಾರು? ನಿಷೇಧಿತ ಕ್ವಾರಿಯಲ್ಲಿ ಮಳೆಯ ನೀರು ಹೊರ ಹಾಕಿದ್ದು ಯಾರು?ನಿಷೇಧಿತ ಕ್ವಾರಿಯ ಕಲ್ಲು ರಾಯಲ್ಟಿ ಇಲ್ಲದೆ ಮಾರಾಟ ಮಾಡಿದ್ದು ಯಾರು? ಎಂಬ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉತ್ತರ ನೀಡಬೇಕಿದೆ.