ಖಾಸಗಿ ಕಂಪನಿಯೊಂದು ತನ್ನ ನೌಕರನಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ. ನೌಕರನು ಸತ್ತರೆ, ಆತನ ಹೆಂಡತಿಗೆ 11 ವರ್ಷಗಳ ಕಾಲ ಸಂಬಳ ಮತ್ತು ಮಕ್ಕಳಿಗೆ 19 ವರ್ಷದವರೆಗೆ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡುತ್ತದೆ.
ಸರ್ಕಾರಿ ನೌಕರಿಯಲ್ಲಿ ಸಿಗುವ ಸವಲತ್ತುಗಳಿಂದಾಗಿ ಎಲ್ಲರೂ ಈ ಕೆಲಸ ಬಯಸುತ್ತಾರೆ. ಇನ್ನು ಖಾಸಗಿ ಕಂಪನಿಗಳೆಂದರೆ ಅಲ್ಲಿ ಉದ್ಯೋಗಿಗಳಿಗೆ ಸಂಬಳ ಕಡಿತ, ವೇತನ ಸರಿಯಾಗಿ ಕೊಡದಿರುವುದು, ರಜೆ ನೀಡದಿರುವ ಕಿರುಕುಳವೇ ಹೆಚ್ಚಾಗಿರುತ್ತವೆ. ಆದರೆ, ಇಲ್ಲೊಂದು ಖಾಸಗಿ ಕಂಪನಿಯಲ್ಲಿ ನೌಕರ ಸತ್ತರೆ ಅವರ ಹೆಂಡತಿಗೆ 10 ವರ್ಷ ಉಚಿತ ಸಂಬಳ ಹಾಗೂ ಮಕ್ಕಳಿಗೆ 19 ವರ್ಷದವರಗೆ ಶಿಕ್ಷಣಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ.
ಜಾಗತಿಕ ಮಟ್ಟದಲ್ಲಿ ನೌಕರ ಸ್ನೇಹಿ ವಾತಾವರಣ ಇರುವ ಖಾಸಗಿ ಕಂಪನಿಗಳು ತುಂಬಾ ಕಡಿಮೆ. ಆದರೆ, ಜಗತ್ತಿನಲ್ಲಿ ಸ್ಮಾರ್ಟ್ ಮೊಬೈಲ್ ಇರುವ ಪ್ರತಿಯೊಬ್ಬರೂ ಉಪಯೋಗ ಮಾಡುವ 'ಗೂಗಲ್' ಕಂಪನಿ ತನ್ನ ಉದ್ಯೋಗಿಗಳಿಗೆ ಭಾರೀ ಸವಲತ್ತುಗಳನ್ನು ಕೊಡುತ್ತಿದೆ.
ಹೆಂಡತಿಗೆ 10 ವರ್ಷಗಳ ಕಾಲ ಸಂಬಳ: ಬಹುತೇಕ ಖಾಸಗಿ ಕಂಪನಿಗಳಲ್ಲಿ ನೌಕರ ವಿರೋಧಿ ವಾತಾವರಣ ಇರುವ ನಡುವೆಯೇ ಗೂಗಲ್ ಕಂಪೆನಿ ಮಾತ್ರ ತಮ್ಮ ಉದ್ಯೋಗಿಗಳ ಕುಟುಂಬಕ್ಕೆ ಕೂಡ ಸಹಾಯ ಮಾಡುತ್ತಿದೆಯಂತೆ. ಉದ್ಯೋಗಿ ಸತ್ತ ನಂತರವೂ ಅವರ ಕುಟುಂಬಕ್ಕೆ ಆರ್ಥಿಕ ಭರವಸೆ ನೀಡುತ್ತಿದೆ. ಗೂಗಲ್ ಉದ್ಯೋಗಿ ಸತ್ತರೆ ಬಹಳ ವರ್ಷಗಳ ಕಾಲ ಕುಟುಂಬಕ್ಕೆ ಆರ್ಥಿಕವಾಗಿ ಭದ್ರತೆ ಇರುತ್ತದೆ. ಜೀವನ ಭಾಗ್ಯಸ್ಥರಿಗೆ (ಹೆಂಡತಿ, ತಂದೆ ಅಥವಾ ತಾಯಿಗೆ) ಉದ್ಯೋಗಿಯ ಸಂಬಳದಲ್ಲಿ 50 ಪರ್ಸೆಂಟ್ ಹಣವನ್ನು 10 ವರ್ಷಗಳವರೆಗೆ ಪ್ರತಿ ತಿಂಗಳು ನೀಡುತ್ತಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಅವಕಾಶ ಇರುತ್ತದೆ. ಅಷ್ಟೇ ಅಲ್ಲ ಸತ್ತ ಉದ್ಯೋಗಿಯ ಮಕ್ಕಳಿಗೆ 19 ವರ್ಷ ಬರುವವರೆಗೂ ಅಥವಾ ಓದು ಮುಗಿಯುವವರೆಗೂ ತಿಂಗಳಿಗೆ ಸ್ವಲ್ಪ ಮೊತ್ತದಲ್ಲಿ ದುಡ್ಡು ನೀಡುತ್ತಾರಂತೆ. ಇದು ಅವರ ಕುಟುಂಬಕ್ಕೆ ಎಷ್ಟೋ ಉಪಯೋಗವಾಗುತ್ತದೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ.
ಇದನ್ನೂ ಓದಿ: AI ಈ 3 ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ಬಿಲ್ ಗೇಟ್ಸ್! ಯಾವುವು ಈ ಕೆಲಸಗಳು?
ಇಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೆ ಫ್ರೀ ಹೇರ್ ಕಟ್, ಫುಡ್, ಆನ್‌ಲೈನ್ ಡಾಕ್ಟರ್, ಕ್ಯಾಬ್, ಜಿಮ್, ಇಂಟರ್ನೆಟ್ ಸೌಲಭ್ಯ, ವರ್ಕ್ ಫ್ರಂ ಹೋಮ್ (ಕೆಲವರಿಗೆ ಮಾತ್ರ) ರೀತಿಯ ಸೌಲಭ್ಯಗಳು ಇವೆ. ಇನ್ನು ಆಫೀಸಿನಲ್ಲಿ ಕೆಲಸ ಮಾಡುವವರಿಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅಂತ ಟೈಮಿಗೆ ತಕ್ಕ ಹಾಗೆ ಟಿಫಿನ್, ಊಟ, ಟೀ, ಕಾಫಿ, ಜ್ಯೂಸುಗಳನ್ನು ಕೊಡ್ತಾರಂತೆ. ಉದ್ಯೋಗಿ ಸತ್ತ ನಂತರವೂ ಅವರ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವುದು ದೊಡ್ಡ ವಿಷಯ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಗಮನಿಸಿ: ಈ ವಿಷಯದ ಬಗ್ಗೆ ಗೂಗಲ್ ಸಿಇಓ ಮಾತಾಡಿಲ್ಲ. ಫೋರ್ಬ್ಸ್ ಮ್ಯಾಗಜೀನ್ ಈ ವಿಷಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದು ವೈರಲ್ ಆಗುತ್ತಿದೆ.
ಕೆಲವು ಕಂಪೆನಿಗಳಲ್ಲಿ ಅಧಿಕಾರಿಗಳು ತಮ್ಮ ಉದ್ಯೋಗಿಗಳನ್ನು ಬಹಳ ಹೀನವಾಗಿ ನೋಡುತ್ತಾರೆ. ಈ ಮಧ್ಯೆ ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್ (ಪಿಐಪಿ) ಹೆಸರಿನಲ್ಲಿ ತಮಗೆ ಇಷ್ಟವಿಲ್ಲದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದ್ದಾರೆ. ಚೆನ್ನಾಗಿ ಕೆಲಸ ಮಾಡುವ ಉದ್ಯೋಗಿಯ ಬಿಹೇವಿಯರ್ ಬಗ್ಗೆ ಕಂಪೆನಿ ಅಧಿಕಾರಿ ಏನೇನೋ ನಿಂದನೆಗಳನ್ನು ಹಾಕಿ, ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ. ಆ ಉದ್ಯೋಗಿ ಕೋರ್ಟಿಗೆ ಹೋಗಬಹುದು ಎಂಬ ಭಯ ಅಧಿಕಾರಿಗಳಿಗೆ ಇರುತ್ತದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 35-40 ಉದ್ಯೋಗಿಗಳನ್ನು ತೆಗೆದು ಹಾಕಿದ ಇನ್ಫೋಸಿಸ್! ಇನ್ನೊಂದು ಚಾನ್ಸ್ ಸಿಕ್ಕಿದ್ದು ಯಾರಿಗೆ?
ಆದ್ದರಿಂದ ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್ ಕೆಳಗೆ ಉದ್ಯೋಗಿ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ, ಒಂದು ತಿಂಗಳು ಟೈಮ್ ಕೊಡುತ್ತಾರೆ. ಇಂಪ್ರೂವ್ ಮಾಡ್ಕೋ ಅಂತ ಹೇಳಿ ಸಾಧಿಸಲಾಗದ ಟಾರ್ಗೆಟ್ ಕಡುತ್ತಾರೆ. ಆ ಉದ್ಯೋಗಿ ಟಾರ್ಗೆಟ್ ಸಾಧಿಸಲು ಸಾಧ್ಯವಿಲ್ಲ. ಆವಾಗ ಅವರನ್ನು ಕೆಲಸದಿಂದ ಹೊರಗೆ ಕಳುಹಿಸುತ್ತಾರೆ. ಇಂತಹ ಮನಸ್ಥಿತಿಗಳಿಂದ ಬಹಳ ಟ್ಯಾಲೆಂಟ್ ಇರುವವರು ಕೂಡ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.