ಭಾರತದಲ್ಲಿ ಯಾವ ಉದ್ಯೋಗ ಮಾಡಿದರೆ ಒಳ್ಳೆಯದು? ಯಾವ ಉದ್ಯೋಗದಿಂದ ಎಷ್ಟು ಹಣ ಮಾಡಬಹುದು? ಅತಿ ಹೆಚ್ಚು ಸಂಬಳ ಕೊಡುವ ಉದ್ಯೋಗಗಳು ಇವು!
ಭಾರತದಲ್ಲಿ ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಯಾವ ಉದ್ಯೋಗ ಮಾಡಬೇಕು? ಯಾವ ಕೆಲಸ ಮಾಡಿದರೆ ಅಷ್ಟು ಸೇಫ್ ಅಲ್ಲ ಎಂದು ಕೆಲವರು ಅರ್ಥ ಆಗದೆ ಒದ್ದಾಡುತ್ತಿದ್ದಾರೆ. ಇನ್ನೂ ಎಷ್ಟೋ ಕಂಪೆನಿಗಳು ಸಂಬಳ ಜಾಸ್ತಿ ಆಗುತ್ತಿದ್ದಂತೆ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಪಿಯುಸಿ, ಡಿಗ್ರಿ ಓದುವಾಗ ಏನು ಮಾಡಬೇಕು? ಯಾವ ಉದ್ಯೋಗದಿಂದ ಒಳ್ಳೆಯ ಗಳಿಕೆ ಕಾಣಬಹುದು ಎಂದು ಕೆಲವರಿಗೆ ಗೊತ್ತಾಗೋದಿಲ್ಲ. ಇನ್ನೂ ಕೆಲವೊಮ್ಮೆ ಯಾವ ಉದ್ಯೋಗ ಎಷ್ಟು ಹಣ ನೀಡುವುದು ಎಂಬ ಗೊಂದಲ ಇರುತ್ತದೆ. ಹಾಗಾದರೆ ಯಾವ ಉದ್ಯೋಗ ಎಷ್ಟು ಸಂಬಳ ನೀಡುವುದು? ಎಂಬ ಬಗ್ಗೆ ಸಂದೇಹ ಇದ್ರೆ ಈ ಲೇಖನ ಓದಿ.
ಚಾರ್ಟೆಟ್ ಅಕೌಂಟಂಟ್
ಚಾರ್ಟೆಟ್ ಅಕೌಂಟಂಟ್ ಕೆಲಸಕ್ಕೆ ವರ್ಷಕ್ಕೆ ಸಾಮಾನ್ಯವಾಗಿ ಹತ್ತು ಲಕ್ಷ ರೂಪಾಯಿ ಸಂಬಳ, ಅತಿ ಹೆಚ್ಚು ಅಂದರೆ ಮೂವತ್ತು ಲಕ್ಷ ರೂಪಾಯಿ ಸಿಗುವುದು.
ಜಡ್ಜ್
ಜಡ್ಜ್ ಕೆಲಸಕ್ಕೆ ಎವರೇಜ್ ಇಪ್ಪತ್ತೇಳು ಲಕ್ಷ ರೂಪಾಯಿ ಸಂಬಳ ಸಿಗುವುದು, ಅತಿ ಹೆಚ್ಚು ಅಂದರೆ 33 ಲಕ್ಷ ರೂಪಾಯಿ ಸಂಬಳ ಸಿಗುವುದು.
ಮೆಡಿಕಲ್ ಪ್ರೊಫೆಶನಲ್
ಮೆಡಿಕಲ್ ಪ್ರೊಫೆಶನಲ್ ಕೆಲಸಕ್ಕೆ ಎವರೇಜ್ ಹತ್ತು ಲಕ್ಷ ರೂಪಾಯಿ ಸಂಬಳ ಸಿಗುವುದು, ಮೂವತ್ತೈದು ಲಕ್ಷ ರೂಪಾಯಿ ಹೆಚ್ಚು ಸಂಬಳ ಸಿಗುವುದು.
ಪ್ರೊಡಕ್ಟ್ ಮ್ಯಾನೇಜ್‌ಮೆಂಟ್
ಪ್ರೊಡಕ್ಟ್ ಮ್ಯಾನೇಜ್‌ಮೆಂಟ್ ಕೆಲಸಕ್ಕೆ ಎವರೇಜ್ 21 ಲಕ್ಷ ರೂಪಾಯಿ, ಅತಿ ಹೆಚ್ಚು 37 ಲಕ್ಷ ರೂಪಾಯಿ ಸಂಬಳ ಸಿಗುವುದು.
ಏಪ್ರಿಲ್ 5 ರಿಂದ ಮಂಗಳ ಶನಿಯಿಂದ ದೊಡ್ಡ ಯೋಗ, 5 ರಾಶಿಗೆ ಶ್ರೀಮಂತಕೆ, ಹೊಸ ಉದ್ಯೋಗ
ಬ್ಲ್ಯಾಕ್‌ಚೇನ್ ಡೆವಲಪರ್
ಬ್ಲ್ಯಾಕ್‌ಚೇನ್ ಡೆವಲಪರ್ ಉದ್ಯೋಗಕ್ಕೆ ಹತ್ತು ಲಕ್ಷ ರೂಪಾಯಿ ಸಂಬಳವಿದ್ದು, ಅತಿ ಹೆಚ್ಚು ಅಂದರೆ ನಲವತ್ತೈದು ಲಕ್ಷ ರೂಪಾಯಿ ಸಂಬಳ ಸಿಗುವುದು.
ಪೈಲಟ್
ಪೈಲಟ್ ಕೆಲಸಕ್ಕೆ ಎವರೇಜ್ 37 ಲಕ್ಷ ರೂಪಾಯಿ, ಅತಿ ಹೆಚ್ಚು ಅಂದರೆ 85 ಲಕ್ಷ ರೂಪಾಯಿ ಸಂಬಳ ಸಿಗುವುದು.
ಡಾಟಾ ಸೈಂಟಿಸ್ಟ್
ಡಾಟಾ ಸೈಂಟಿಸ್ಟ್ ಕೆಲಸಕ್ಕೆ ಎವರೇಜ್ 15 ಲಕ್ಷ ರೂಪಾಯಿ, ಅತಿ ಹೆಚ್ಚು ಅಂದರೆ 70 ಲಕ್ಷ ರೂಪಾಯಿ ಸಂಬಳ ಸಿಗುವುದು.
ಬ್ಯಾಂಕ್ ಉದ್ಯೋಗ ಬಿಟ್ಟು, ಸ್ವಂತ ಬ್ಯುಸಿನೆಸ್‌ನಿಂದ ತಿಂಗಳಿಗೆ 5 ಲಕ್ಷ ಸಂಪಾದಿಸುತ್ತಿರೋ ಮಹಿಳೆ
ಮಾರ್ಕೇಟಿಂಗ್ ಡೈರೆಕ್ಟರ್
ಮಾರ್ಕೇಟಿಂಗ್ ಡೈರೆಕ್ಟರ್ ಕೆಲಸಕ್ಕೆ ಎವರೇಜ್ 48 ಲಕ್ಷ ರೂಪಾಯಿ, ಅತಿ ಹೆಚ್ಚು ಅಂದರೆ 1 ಕೋಟಿ ರೂಪಾಯಿ ಸಂಬಳ ಸಿಗುವುದು.
ಒಟ್ಟಿನಲ್ಲಿ ಇಂದು ಉದ್ಯೋಗ ವಿಚಾರದಲ್ಲಿ ಸಿಕ್ಕಾಪಟ್ಟೆ ಸಮಸ್ಯೆಗಳು ಆಗುತ್ತಿವೆ. ಎಷ್ಟೋ ಕಂಪೆನಿಗಳು ಮನಸ್ಸಿಗೆ ಬಂದಂತೆ ಲೇಆಫ್ ಮಾಡುತ್ತಿವೆ. ಇನ್ನೂ ಎಷ್ಟೋ ಕಂಪೆನಿಗಳು ಒಳ್ಳೆಯ ಕೆಲಸ ಮಾಡಿದರೂ ಕೂಡ, ಮನಸ್ಸಿಗೆ ಬಂದಂತೆ ಲೇಆಫ್ ಮಾಡುತ್ತಿವೆ. ಕಾಸ್ಟ್ ಕಟಿಂಗ್ ಕೂಡ ಹೆಚ್ಚುತ್ತಿದೆ. ಎಐ ತಂತ್ರಜ್ಞಾನದಿಂದ ಉದ್ಯೋಗ ನಷ್ಟ ಆಗ್ತಿದೆ. ಕೃಷಿಯನ್ನು ಬಿಟ್ಟು ಅನೇಕರು ನಗರದತ್ತ ಮುಖ ಮಾಡುತ್ತಿದ್ದು, ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ. ಹೀಗಾಗಿ ಕೃಷಿ ಮಾಡಲು ಜನರಿಲ್ಲದೆ, ಕೂಲಿ ಆಳುಗಳ ಸಂಬಳ ಹೆಚ್ಚಾಗುತ್ತಿದೆ. ಮಳೆ-ಬೆಳೆ ಸಮಸ್ಯೆಯಿಂದ ಜಮೀನು ಇದ್ದವರು ಕೂಡ ಕೃಷಿ ಮಾಡುವ ಮನಸ್ಸು ಮಾಡುತ್ತಿಲ್ಲ.