ರಾಜ್ಯಶಾಸ್ತ್ರ ಓದಿ, ಸ್ಟೆಥೋಸ್ಕೋಪ್ ಹಿಡಿದು ಡಾಕ್ಟರ್ ಆದ ವ್ಯಕ್ತಿ! ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿ!

ಸಾಮಾನ್ಯವಾಗಿ ಎಂಬಿಬಿಎಸ್, ಎಂಡಿ ಮಾಡಿದವರು ಮಾತ್ರ ವೈದ್ಯರಾಗಲು ಅರ್ಹರು. ಆದರೆ ಇಲ್ಲೊಬ್ಬರು ಪೊಲಿಟಿಕಲ್ ಸೈನ್ಸ್ ಪದವೀಧರ ಡಾಕ್ಟರ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ವೈದ್ಯಕೀಯ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

political-science-degree-viral-doctor-prescription-india sat

ಸಾಮಾನ್ಯವಾಗಿ ಎಂಬಿಬಿಎಸ್, ಎಂಡಿ ಮಾಡಿದವರು ಮಾತ್ರ ರೋಗಿಗಳಿಗೆ ಚಿಕಿತ್ಸೆ ಕೊಡಲು ಅರ್ಹರಾಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾನು ಆರ್ಟ್ ವಿಭಾಗದಲ್ಲಿ ಪೊಲಿಟಿಕಲ್ ಸೈನ್ಸ್ ಡಿಗ್ರಿ ಓದುಕೊಂಡು ಸ್ಟೆಥೋಸ್ಕೋಪ್ ಹಿಡಿದು ಡಾಕ್ಟರ್ ಆಗಿದ್ದಾನೆ. ವೈದ್ಯಕೀಯ ಚೀಟಿಯಲ್ಲಿ ಆತನ ಪದವಿ ನೋಡಿ ಜನರು ಶಾಕ್ ಆಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಭಾರತದಲ್ಲಿ ಅನಾದಿ ಕಾಲದಲ್ಲಿ ಯಾವುದೇ ಅನಾರೋಗ್ಯ ಕಾಣಿಸಿಕೊಂಡರೂ ರೋಗಿಗಳು ಚಿಕಿತ್ಸೆಗಾಗಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಮೇಲೆ ಅವಲಂಬನೆ ಆಗಿದ್ದರು. ಆದರೆ, ಸಂಸ್ಕೃತಿಯ ಹರಡುವಿಕೆಯೊಂದಿಗೆ, ಆಧುನಿಕ ವೈದ್ಯಕೀಯ ವ್ಯವಸ್ಥೆ, ಅಲೋಪತಿ ಔಷಧವು ಪ್ರಪಂಚದಾದ್ಯಂತ ಹರಡಿತು. ಆ ಹೊತ್ತಿಗೆ, ಪ್ರತಿಯೊಂದು ದೇಶದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಳೀಯ ವೈದ್ಯಕೀಯ ವ್ಯವಸ್ಥೆಗಳು ಕಣ್ಮರೆಯಾಗಿದ್ದವು ಅಥವಾ ಜನರಿಂದ ಕೈಬಿಡಲ್ಪಟ್ಟಿದ್ದವು. ಇದರೊಂದಿಗೆ, ಪ್ರಪಂಚದಾದ್ಯಂತ ಅಲೋಪತಿ ಚಿಕಿತ್ಸೆಗಾಗಿ ವಿಶೇಷ ಕೋರ್ಸ್‌ಗಳನ್ನು ಸಹ ಪ್ರಾರಂಭಿಸಲಾಯಿತು. ಇದಕ್ಕಾಗಿ ವಿಶೇಷ ಕೋರ್ಸ್‌ಗಳನ್ನು ಸಹ ಪರಿಚಯಿಸಲಾಯಿತು. ನಿಗದಿತ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರವೇ ಒಬ್ಬ ವ್ಯಕ್ತಿಗೆ ರೋಗಿಗೆ ಚಿಕಿತ್ಸೆ ನೀಡುವ ಹಕ್ಕು ಇರುತ್ತದೆ. ಆದರೆ @medicinefile ಎಂಬ ಖಾತೆಯಿಂದ Instagram ಥ್ರೆಡ್‌ಗಳಲ್ಲಿ ಹಂಚಿಕೊಂಡಿರುವ ಇತ್ತೀಚಿನ ಫೋಟೋ ಜನರನ್ನು ಅಚ್ಚರಿಗೊಳಿಸಿದೆ. ಡಾಕ್ಟರ್ ಪದವಿ ಎಂಬಿಬಿಎಸ್ ಬದಲಿಗೆ 'ರಾಜಕೀಯ ವಿಜ್ಞಾನ'ದಲ್ಲಿ ಎಂಎ ಎಂದು ಬರೆಯಲಾಗಿದೆ.

Latest Videos

ಇದನ್ನೂ ಓದಿ: ಬಾವಿಗೆ ಬಿದ್ದಒಬ್ಬನ ರಕ್ಷಣೆಗೆ ಒಬ್ಬರ ಹಿಂದೊಬ್ಬರು ಹೋಗಿ 8 ಜನ ಸಾವು

ಇದೀಗ ಆಸ್ಪತ್ರೆಯ ಪ್ರಿಸ್ಕ್ರಿಪ್ಷನ್ ಲೆಟರ್ (Doctor Prescription letter) ಭಾರೀ ವೈರಲ್ ಆಗಿದೆ. ಇದು ಉತ್ತರ ಪ್ರದೇಶದ ಹರ್ದೋಯ್ ಸಿಟಿಯ ಶಾಹಿದ್‌ಪುರದಲ್ಲಿರುವ ಶ್ರೀವಾಸ್ತವ್ ಕ್ಲಿನಿಕ್‌ ಒಂದು ಮೆಡಿಸಿನ್ ಚೀಟಿ ಆಗಿತ್ತು. ಚೀಟಿಯಲ್ಲಿ ಇಬ್ಬರು ವೈದ್ಯರುಗಳ ಹೆಸರು ಇತ್ತು. ಡಾ. ದಿನೇಶ್ ಶ್ರೀವಾಸ್ತವ್ ಮತ್ತು ಡಾ. ವರುಣ್ ಶ್ರೀವಾಸ್ತವ್ ಎಂದು. ಆದರೆ, ಡಾ. ದಿನೇಶ್ ಶ್ರೀವಾಸ್ತವ್ ಅವರ ಡಿಗ್ರಿ ಜಾಗದಲ್ಲಿ ಬಿಎಎಂಎಸ್, ಫಿಸಿಷಿಯನ್, ಸರ್ಜನ್ ಅಂತ ಬರೆದಿದೆ. ಆದರೆ, ಡಾ. ವರುಣ್ ಶ್ರೀವಾಸ್ತವ್ ಅವರ ಡಿಗ್ರಿ ಜಾಗದಲ್ಲಿ ಎಂ.ಎ ಪೊಲಿಟಿಕಲ್ ಸೈನ್ಸ್ ಅಂತ ಬರೆದಿತ್ತು. ಕೆಲ ವೀಕ್ಷಕರು ಅವರಿಗೆ ರಿಸರ್ಚ್ ಡಿಗ್ರಿ ಇದೆಯಾ ಅಂತ ಡೌಟ್ ಪಟ್ಟಿದ್ದಾರೆ.

ಇಲ್ಲಿ ಡಾ. ದಿನೇಶ್ ಶ್ರೀವಾಸ್ತವ್ ಅವರಿಗೆ ಇರೋ ಕ್ವಾಲಿಫಿಕೇಶನ್‌ನಿಂದ ಅವರು ರೋಗಿಗಳನ್ನ ಚೆಕ್ ಮಾಡೋಕೆ ಎಲಿಜಿಬಲ್ ಆಗಿದ್ದಾರೆ. ಆದರೆ, ಡಾ. ವರುಣ್ ಶ್ರೀವಾಸ್ತವ್ ಅದಕ್ಕೆ ಎಲಿಜಿಬಲ್ ಅಲ್ಲ ಅನ್ನೋದು ಕ್ಲಿಯರ್ ಆಗಿದೆ. ಈಗ ಮೆಡಿಸಿನ್ ಚೀಟಿಯಲ್ಲಿ ಪ್ಯಾರಸಿಟಮಾಲ್ ಮತ್ತೆ ಬೆಕೋಸೂಲ್ ಹೆಸರುಗಳನ್ನ ಹಿಂದಿಯಲ್ಲಿ ಬರೆದಿದ್ದಾರೆ. ಹಾಗೇ, ಈ ಮೆಡಿಸಿನ್ ಚೀಟಿ ನಿಜಾನಾ ಇಲ್ವಾ ಅನ್ನೋದು ಕೂಡ ಕ್ಲಿಯರ್ ಆಗಿಲ್ಲ. ಆದರೂ, ಇದನ್ನ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮೀಮ್ಸ್ ಹರಿದಾಡುತ್ತಿವೆ.  ಕೆಲವರು ತಮಾಷೆಗೆ ಅವರು 'ಪೊಲಿಟಿಕಲ್ ಡಾಕ್ಟರ್' ಆಗಿರಬಹುದು ಅಂತ ಬರೆದಿದ್ದಾರೆ. ಇದೀಗ ಅಮೀರ್ ಖಾನ್ ಅವರು ಇರುವ ಫೋಟೋ ಅಂಟಿಸಿ ಮೀಮ್ ಮಾಡಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿ ವಿವರ ಸಾರ್ವಜನಿಕರಿಗೆ ಲಭ್ಯ!

vuukle one pixel image
click me!