ನರೇಂದ್ರ ಮೋದಿ ಸರ್ಕಾರದ ಬೆಂಬಲದೊಂದಿಗೆ ಮುಂದಿನ 10 ವರ್ಷಗಳಲ್ಲಿ ಕಂಪನಿಯು ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಮಾಮಾರ್ಥ್ ಸಹ-ಸಂಸ್ಥಾಪಕಿ ಗಜಲ್ ಅಲಾಘ್ ಹೇಳಿದ್ದಾರೆ.
ನವದೆಹಲಿ (ಮೇ.25): ನರೇಂದ್ರ ಮೋದಿಯವರ ಸರ್ಕಾರದ ಬೆಂಬಲದೊಂದಿಗೆ ಮುಂದಿನ 10 ವರ್ಷಗಳಲ್ಲಿ ಕಂಪನಿಯು ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಮಾಮಾರ್ಥ್ ಸಹ-ಸಂಸ್ಥಾಪಕಿ ಗಜಲ್ ಅಲಾಘ್ ಹೇಳಿದ್ದಾರೆ. 'ಥ್ಯಾಂಕ್ ಯು ನರೇಂದ್ರ ಮೋದಿ ಅವರೇ, ನಿಮ್ಮ ಆಶೀರ್ವಾದ ಹಾಗೂ ನಿಮ್ಮ ಸರ್ಕಾರದ ಬೆಂಬಲವಿದ್ದಲ್ಲಿ ಮುಂದಿನ 10 ವರ್ಷಗಳಲ್ಲಿ ನಮ್ಮ ಕಂಪನಿ ಲಕ್ಷಕ್ಕೂ ಅಧಿಕ ಉದ್ಯೋಗವನ್ನು ಸೃಷ್ಟಿ ಮಾಡಲಿದೆ' ಎಂದು ಗಜಲ್ ಅಲಾಘ್ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಗಜಲ್ ಅಲಾಘ್ ಅವರ ಪತಿ ಹಾಗೂ ಮಮಾರ್ಥ್‌ನ ಮತ್ತೊಬ್ಬ ಸಹ ಸಂಸ್ಥಾಪಕರಾದ ವರುಣ್ ಅಲಾಘ್ ಅವರು ವಿಶೇಷ್ ಸಂಪರ್ಕ್ ಅಭಿಯಾನ್ ಕಾರ್ಯಕ್ರಮದಲ್ಲಿ ಮಾಡಿದ ಭಾಷಣವನ್ನು ಮೆಚ್ಚಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಅದರೊಂದಿಗೆ ಕಂಪನಿ ದೊಡ್ಡ ಯಶಸ್ಸು ಕಾಣಲಿ ಎಂದೂ ಹಾರೈಸಿದ್ದರು. ಅದರೊಂದಿಗೆ ನನ್ಮ ಸರ್ಕಾರ ಸ್ಟಾರ್ಟ್‌ಅಪ್‌ಗಳು ಹಾಗೂ ಸಂಪತ್ತು ವೃದ್ಧಿಯಾಗುವ ನಿಟ್ಟಿನಲ್ಲಿ ಎಲ್ಲಾ ಪ್ರೋತ್ಸಾಹವನ್ನೂ ನೀಡುತ್ತದೆ ಎಂದು ಹೇಳಿದ್ದರು.
"ಇದು ನಿಜವಾಗಿಯೂ ನಮ್ಮ ಉತ್ಸಾಹವನ್ನು ಉತ್ತೇಜಿಸುತ್ತದೆ ಮತ್ತು ಯಶಸ್ವಿಯಾಗಲು ನಮ್ಮನ್ನು ಇನ್ನಷ್ಟು ಸಂಕಲ್ಪ ಮಾಡುತ್ತದೆ. ನಾವು ಭಾರತೀಯ ಸೌಂದರ್ಯ ವರ್ಧಕಗಳನ್ನು ಜಗತ್ತಿಗೆ ಕೊಂಡೊಯ್ಯುತ್ತೇವೆ ಮತ್ತು ಭಾರತ ಧ್ವಜವನ್ನು ಎಲ್ಲೆಡೆ ಇಡುವಂತೆ ಮಾಡುತ್ತೇವೆ. ನಮ್ಮಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು" ಎಂದು ಗಜಲ್ ಅಲಾಘ್ ಬರೆದುಕೊಂಡಿದ್ದಾರೆ. ವರುಣ್ ಅಲಘ್ ತಮ್ಮ ಭಾಷಣದಲ್ಲಿ, 2016 ರಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಪ್ರಾರಂಭವಾದಾಗ, ಅವರು ತಮ್ಮ ಕೆಲಸವನ್ನು ತೊರೆದು ಮಾಮಾರ್ತ್ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.
ಮುಟ್ಟಿನ ರಜೆ ಬೇಡ.. ಮತ್ತೇನು ಮಾಡ್ಬೇಕು? ಸಲಹೆ ನೀಡಿದ ಮಾಮ್ ಅರ್ಥ್ ಸಂಸ್ಥಾಪಕಿ
"ಈ 7 ವರ್ಷಗಳಲ್ಲಿ, ನಾವು ಕಂಪನಿಯನ್ನು ಸಾರ್ವಜನಿಕ ವಲಯದ ಕಂಪನಿಯನ್ನಾಗಿ ಮಾಡಿದ್ದೇವೆ ಮತ್ತು ಈಗ 10,000 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ ದೇಶವು ಉದ್ಯೋಗ ಸೃಷ್ಟಿ, ಗುಣಮಟ್ಟ ಮತ್ತು ಸಂಶೋಧನೆಯತ್ತ ಗಮನಹರಿಸಬೇಕಾಗಿದೆ ಎಂದು ವರುಣ್ ಅಲಾಘ್ ತಿಳಿಸಿದ್ದಾರೆ.
ಗರ್ಭಿಣಿಯಾಗಿದ್ದಾಗ ಆನ್‌ಲೈನ್‌ನಲ್ಲಿ ಬಿಸಿನೆಸ್ ಆರಂಭಿಸಿದ್ದ ಮಹಿಳೆ, ಈಗ ಬರೋಬ್ಬರಿ 9,800 ಕೋಟಿ ರೂ. ಉದ್ಯಮದ ಒಡತಿ!