ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ 99 ಉದ್ಯೋಗಿಗಳು ವಜಾ, ಕಂಪನಿಯಲ್ಲೀಗ 11 ಮಂದಿ ಮಾತ್ರ!

By Chethan Kumar  |  First Published Nov 18, 2024, 1:59 PM IST

ಕಚೇರಿಗಳಲ್ಲಿ ಮೀಟಿಂಗ್ ಸಾಮಾನ್ಯ. ಆದರೆ ಮೀಟಿಂಗ್‌ನಲ್ಲಿ ಕೇವಲ 11 ಮಂದಿ ಪಾಲ್ಗೊಂಡಿದ್ದಾರೆ. ಇನ್ನುಳಿದ 99 ಉದ್ಯೋಗಿಗಳು ಚಕ್ಕರ್. ಇದು ಬಾಸ್ ಪಿತ್ತ ನೆತ್ತಿಗೇರಿಸಿದೆ. ಮೀಟಿಂಗ್ ಮುಗಿದ ಬೆನ್ನಲ್ಲೇ 99 ಉದ್ಯೋಗಿಗಳನ್ನು ವಜಾ ಮಾಡಿದ ಘಟನೆ ನಡೆದಿದೆ.
 


ನ್ಯೂಯಾರ್ಕ್(ನ.18) ಪ್ರತಿ ಕಚೇರಿಯಲ್ಲಿ ಮೀಟಿಂಗ್ ಹೊಸ ವಿಚಾರವಲ್ಲ. ಕೆಲವು ಕಂಪನಿಗಳಲ್ಲಿ ಕೆಲಸಕ್ಕಿಂತ ಮೀಟಿಂಗ್ ಹೆಚ್ಚು ಅನ್ನೋ ಮಾತುಗಳನ್ನು ಕೇಳಿರುತ್ತೀರಿ. ವರ್ಚುವಲ್ ಮೀಟಿಂಗ್ ಅಥವಾ ಕಚೇರಿಯಲ್ಲಿ ಮುಖತಹ ಮೀಟಿಂಗ್ ಸೇರಿದಂತೆ ಹಲವು ವಿಧದಲ್ಲಿ ಮೀಟಿಂಗ್ ನಡೆಯುತ್ತದೆ. ಹೀಗೆ ಇಲ್ಲೊಂದು ಕಂಪನಿ ಪ್ರತಿ ದಿನ ಉದ್ಯೋಗಿಗಳ ಮೀಟಿಂಗ್ ನಡೆಸುತ್ತದೆ. ಬೆಳಗ್ಗೆ ಮೀಟಿಂಗ್ ಶುರುವಾಗಿದೆ. ಆದರೆ 110 ಮಂದಿ ಉದ್ಯೋಗಗಳಿರುವ ಕಂಪನಿಯಲ್ಲಿ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದು ಕೇವಲ 11 ಮಂದಿ ಮಾತ್ರ. ಇದು ಸಿಇಒ ಕೆರಳಿಸಿದೆ. ಮೀಟಿಂಗ್ ಮುಗಿದ ಬೆನ್ನಲ್ಲೇ ಬಾಸ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ 99 ಉದ್ಯೋಗಿಗಳನ್ನು ವಜಾ ಮಾಡಿದ ಘಟನೆ ನಡೆದಿದೆ.

ಅಮೆರಿಕ ಮೂಲದ ಕಂಪನಿಯಲ್ಲಿ ಈ ಮಾಸ್ ಅಮಾನತು ಪ್ರಕ್ರಿಯೆ ನಡೆದಿದೆ. ಕಂಪನಿ ಸಿಒ ಬಾಲ್‌ಡ್ವಿನ್ ಈ ನಿರ್ಧಾರ ಘೋಷಿಸಿ ಇದೀಗ ಹಲವರಿಗೆ ಶಾಕ್ ನೀಡಿದ್ದಾರೆ. ಈ ಘಟನೆ ಕುರಿತು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾರೆ. ಕಂಪನಿಗೆ ಇಂಟರ್ನ್ ಆಗಿ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ ಅಮಾನತುಗೊಂಡಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.

Latest Videos

undefined

15,000 ಉದ್ಯೋಗ ಕಡಿತದ ಬಳಿಕ ಉಳಿದ ನೌಕರರಿಗೆ ಉಚಿತ ಟಿ, ಕಾಫಿ ಘೋಷಿಸಿದ ಇಂಟೆಲ್!

ಕಂಪನಿ ಮೀಟಿಂಗ್‌ನ್ನು ಹೆಚ್ಚಿನವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಉದ್ಯೋಗಿಗಳ ನಿರ್ಲಕ್ಷ್ಯವನ್ನು ಸಿಇಒ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮೀಟಿಂಗ್ ಮುಗಿಸಿ ಬಂದು ಪಾಲ್ಗೊಳ್ಳದ 99 ಮಂದಿಗೆ ಖಡಕ್ ಸಂದೇಶವನ್ನು ಕಳುಹಿಸಿ ಎಲ್ಲರನ್ನು ಕಿತ್ತು ಹಾಕಿದ್ದಾರೆ. ಪ್ರೀತಿಯ ತಂಡದ ಸದಸ್ಯರೇ, ಇದು ಕಂಪನಿ ಸಿಇಒ ಬಾಲ್‌ಡ್ವಿನ್, ಬೆಳಗಿನ ಮೀಟಿಂಗ್‌ನಲ್ಲಿ ಯಾರೆಲ್ಲಾ ಪಾಲ್ಗೊಂಡಿಲ್ಲವೋ ಅವರಿಗೆ ಇದು ಅಧಿಕೃತ ನೋಟಿಸ್. ಮೀಟಿಂಗ್‌ನಲ್ಲಿ ಭಾಗಿಯಾದ ನೀವೆಲ್ಲರನ್ನು ವಜಾ ಮಾಡಲಾಗಿದೆ. ನೀವು ಕಂಪನಿ ಸೇರಿಕೊಳ್ಳುವಾಗ ಮಾಡಿದ ಒಪ್ಪಂದ ಮರೆತಿದ್ದೀರಿ. ಮೀಟಿಂಗ್ ಪಾಲ್ಗೊಳ್ಳದೆ ಕಂಪನಿಯ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂದು ದೊಡ್ಡ ಸಂದೇಶವನ್ನು 99 ಉದ್ಯೋಗಿಗಳಿಗೆ ಬಾಸ್ ಕಳುಹಿಸಿದ್ದಾರೆ.

ಈ ಸಂದೇಶ ಇಷ್ಟಕ್ಕೆ ಮುಗಿದಿಲ್ಲ. ಈ ಕ್ಷಣದಿಂದಲೇ ನಿಮ್ಮ ಜೊತ ಕಂಪನಿ ಮಾಡಿಕೊಂಡಿರುವ ಎಲ್ಲಾ ಒಪ್ಪಂದ ರದ್ದುಗೊಳಿಸುತ್ತಿದ್ದೇವೆ. ನಿಮ್ಮಲ್ಲಿರುವ ಕಂಪನಿಯ ವಸ್ತುಗಳನ್ನು ವಾಪಸ್ ನೀಡಿ, ಎಲ್ಲಾ ಖಾತೆಗಳಿಂದ ಸೈನ್ ಔಟ್ ಆಗಬೇಕು. ಕಂಪನಿ ಪ್ಲಾಟ್‌‌ಫಾರ್ಮ್‌ನಿಂದ ನೀವೇ ಖುುದ್ದಾಗಿ ಹೊರಬನ್ನಿ. ನಿಮ್ಮ ಭವಿಷ್ಯ, ಕರಿಯರ್ ಉತ್ತಮಗೊಡಿಸಲು  ಅವಕಾಶ ನೀಡಿದ್ದೆ. ಆದರೆ ನೀವು ಗಂಭೀರವಾಗಿ ಪರಿಗಣಿಸಿಲ್ಲ. 110 ಮಂದಿಯ ಇರುವ ಕಂಪನಿಯಲ್ಲಿ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಕೇವಲ 11 ಮಂದಿ ಮಾತ್ರ. ಈ 11 ಮಂದಿ ಕಂಪನಿ ಜೊತೆ ಮುಂದುವರಿಯಲಿದ್ದಾರೆ. ಇನ್ನುಳಿದ ಮಂದಿ ಈ ಕೂಡಲೆ ಕಂಪನಿ ತೊರೆಯಲಿದ್ದಾರೆ ಎಂದು ಇಮೇಲ್ ಕಳುಹಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಭಾರಿ ಸದ್ದು ಮಾಡುತ್ತಿದೆ. ಹಲವರು ಕಮೆಂಟ್ ಮಾಡಿದ್ದಾರೆ. 99 ಮಂದಿ ಮೀಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದರೆ ಮೀಟಿಂಗ್ ಇದೆ ಅನ್ನೋ ಸಂದೇಶ ಸರಿಯಾಗಿ ಮುಟ್ಟಿಲ್ಲ. ಅಥವಾ ಮೀಟಿಂಗ್‌ನಲ್ಲಿ ಪ್ರಮುಖ ವಿಷಯಗಳ ಚರ್ಚೆ ಇರುವುದಿಲ್ಲ ಎಂದರ್ಥ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪ್ರತಿ ದಿನ ಮೀಟಿಂಗ್ ಮಾಡುತ್ತಿದ್ದಾರೆ. ಅಚಾನಕ್ಕಾಗಿ ಬಾಸ್ ಎಂಟ್ರಿಕೊಟ್ಟರೆ ಹೀಗೆ ಆಗುತ್ತೆ ಎಂದು ಹಲವರು ತಮ್ಮ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಮೀಟಿಂಗ್‌ನಲ್ಲಿ ಭಾಗಿಯಾದ ಕಾರಣಕ್ಕೆ ಬಾಸ್ ಕ್ಲಾಸ್ ತೆಗೆದುಕೊಂಡ ಘಟನೆಗಳನ್ನು ಹಲವು ನೌಕರರು ನೆನಪಿಸಿಕೊಂಡಿದ್ದಾರೆ. ಮೀಟಿಂಗ್‌ನಲ್ಲಿ ಗಂಭೀರವಾಗಿ ಪಾಲ್ಗೊಳ್ಳಬೇಕಾಗಿತ್ತು. ಇದು ಉದ್ಯೋಗಿಗಳ ತಪ್ಪು, ಮೀಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಅನ್ನೋ ಕಾರಣಕ್ಕೆ ವಜಾ ಮಾಡಿದ್ದು ಬಾಸ್ ತಪ್ಪು ಎಂದು ಹಲವರು ಘಟನೆಯನ್ನು ವಿಶ್ಲೇಷಣೆ ಮಾಡಿದ್ದಾರೆ.

ನಾ ಆಫೀಸ್ ಬರೋದಿಲ್ಲ, ಉದ್ಯೋಗಿಯ 1 ವಾರದ ದಿಢೀರ್ ರಜೆ ಕಾರಣ ಕೇಳಿ ಬಾಸ್ ಕಂಗಾಲು!
 

click me!