ಕೊರೋನಾ ಹೆಚ್ಚುತ್ತಿದ್ದರೂ ರೈತರಿಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೊಟ್ಟ ಸಿಎಂ ಕೇಜ್ರೀವಾಲ್| ಅತಿಥಿಗಳೆಂದು ರೈತರ ಸ್ವಾಗತಿಸಿ, ಎಲ್ಲಾ ವ್ಯವಸ್ಥೆ ಮಾಡಲು ಆದೇಶ| ಕೇಜ್ರೀವಾಲ್ ಈ ನಡೆ ಹಿಂದಿದೆ ರಹಸ್ಯ
ನವದೆಹಲಿ(ನ.28): ಕೊರೋನಾ ಮಹಾಮಾರಿ ಹಾಗೂ ಲಾಕ್‌ಡೌನ್ ನಡುವೆಯೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಯನ್ನು ಪಂಜಾಬ್, ಹರ್ಯಾಣ ಸೇರಿ ಆರು ರಾಜ್ಯದ ರೈತರು ವಿರೋಧಿಸುತ್ತಿದ್ದಾರೆ. ಕೇಂದ್ರದ ಜೊತೆಗಿನ ಎರಡು ಬಾರಿ ನಡೆದ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಐನೂರಕ್ಕೂ ಅಧಿಕ ರೈತ ಸಂಘಟನೆಗಳಡಿ ಸಾವಿರಾರು ಮಂದಿ ರೈತರು ಜೊತೆಗೂಡಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆ. ಈ ಮೂಲಕ ಅಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಈ ಕಾನೂನು ಹಿಂಪಡೆಯಲು ಒತ್ತಡ ಹೇರುವುದಾಗಿ ಹೇಳಿದ್ದಾರೆ.
ಲಾಠಿಚಾರ್ಜ್, ಮುಳ್ಳು ತಂತಿ, ಅಶ್ರುವಾಯು: ರಾಷ್ಟ್ರ ರಾಜಧಾನಿಗೆ ತೆರಳಲು ಮುನ್ನ ರೈತನ ಸಂಘರ್ಷ!
undefined
ಆದರೆ ದಿಲ್ಲಿ ಚಲೋಗೆ ರೈತರು ಕರೆ ನೀಡಿದ್ದರಾದರೂ ದೆಹಲಿ ರೈತರ ತಲುಪುವುದಕ್ಕೂ ಮೊದಲೇ ಅವರನ್ನು ತಡೆಯಲು ಅನೇಕ ರೀತಿಯ ಸಿದ್ಧತೆ ನಡೆಸಲಾಗಿತ್ತು. ಮುಳ್ಳು ತಂತಿ ಸುತ್ತಿದ ಬ್ಯಾರಿಕೇಡ್, ಅಶ್ರುವಾಯು ಪ್ರಯೋಗ, ಮರಳಿನಿಂದ ತುಂಬಿದ ಗಾಡಿಗಳು, ರಸ್ತೆ ನಡುವೆ ಹೊಂಡ ಹೀಗೆ ಅನೇಕ ಸವಾಲುಗಳು ಎದುರಾಗಿದ್ದವು. ಹೀಗಿದ್ದರೂ ಅನ್ನದಾತ ಇದ್ಯಾವುದಕ್ಕೂ ಜಗ್ಗಲಿಲ್ಲ. ಹೀಗಿರುವಾಗ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಹಾಗೂ ಲಾಠಿ ಚಾರ್ಜ್ ಕೂಡಾ ನಡೆದಿತ್ತು. ಆದರೂ ಇವೆಲ್ಲವನ್ನೂ ಎದುರಿಸಿದ ರೈತ ಹರ್ಯಾಣ ದಾಟಿ ದೆಹಲಿ ಗಡಿ ತಲುಪಲು ಯಶಸ್ವಿಯಾಗಿದ್ದರು.
ಹೀಗಿರುವಾಗ ಇತ್ತ ದೆಹಲಿ ಪೊಲೀಸರು ಅವರನ್ನು ತಡೆಯಯಲು ಯತ್ನಿಸಿದ್ದರು. ಅಲ್ಲದೇ ರೈತರನ್ನು ಬಂಧಿಸಿಡಲು ಒಂಭತ್ತು ಸ್ಟೇಡಿಯಂಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲು ಸಿಎಂ ಕೇಜ್ರೀವಾಲ್ ಬಳಿ ಅನುಮತಿ ಕೇಳಿದ್ದರು. ಆದರೆ ಪೊಲೀಸರ ಈ ಮನವಿಯನ್ನು ಕೇಜ್ರೀವಾಲ್ ತಳ್ಳಿ ಹಾಕಿದ್ದರು, ಅಲ್ಲದೇ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಅಲ್ಲದೇ ಪ್ರತಿಭಟಿಸಲು ಬಂದ ರೈತರನ್ನು 'ಅತಿಥಿ'ಗಳರೆಂದು ಸ್ವಾಗತಿಸಿ, ಅವರಿಗೆ ತಿನ್ನಲು, ಕುಡಿಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಆದೇಶಿಸಿದರು. ಸಚಿವ ಕೈಲಾಶ್ ಗೆಹ್ಲೋಟ್ ರೈತರಿಗೆ ಆಶ್ರಯ, ಸಂಚಾರಿ ಟಾಯ್ಲೆಟ್ ಹಾಗೂ ಚಳಿಗಾಲದಲ್ಲಿ ಬೇಕಾಗುವ ವಸ್ತುಗಳನ್ನೂ ರೆಡಿಯಾಗಿಟ್ಟುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಹೀಗಿರುವಾಗ ಅರವಿಂದ ಕೇಜ್ರೀವಾಲ್ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಸ್ವಾಗತಿಸಿದ್ದೇಕೆ? ಎಂಬ ಪ್ರಶ್ನೆ ಹಲವರನ್ನು ಕಾಡಿದೆ. ವಾಸ್ತವವಾಗಿ ದೆಹಲಿ ಸಿಎಂ ಕೇಜ್ರೀವಾಲ್ ತಾನು ಹಾಗೂ AAP ರೈತರ ಕೋಪಕ್ಕೆ ಗುರಿಯಾಗಲು ಇಚ್ಚಿಸುವುದಿಲ್ಲ. ಇದಕ್ಕೂ ಕಾರಣವಿದೆ,, ಯಾಕೆಂದರೆ ಆಮ್ ಆದ್ಮಿ ಪಕ್ಷ ಪಂಜಾಬ್‌ನ ಎರಡನೇ ದೊಡ್ಡ ಪಕ್ಷ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 23.7ರಷ್ಟು ಮತ ಆಪ್‌ಗೆ ಲಭಿಸಿತ್ತು.
ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!
ಇನ್ನು ಪಂಜಾಬಿಗಳ ಬಗ್ಗೆ ಮಾತನಾಡುವ ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿ ಘಟ್‌ಬಂಧನ್ ಸೋಲನುಭವಿಸಿತ್ತು. ಈ ಮೂಲಕ ಎನ್‌ಡಿಎ ಐವತ್ತು ಕ್ಷೇತಯ್ರಗಳನ್ನು ಕಳೆದುಕೊಂಡಿತ್ತು. ಅತ್ತ ಕಾಂಗ್ರೆಸ್ 31 ಸ್ಥಾನಗಳ ಲಾಭ ಪಡೆದು 77 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಗೆಲುವಿನಲ್ಲಿ ರೈತರ ಪಾತ್ರ ಬಹಳವಿತ್ತು.
2014 ರ ಲೋಕಸಭಾ ಚುನಾವಣೆಯನ್ನು ಗಮನಿಸುವುದಾದರೆ ಪಂಜಾಬ್‌ನ 13 ಕ್ಷೇತ್ರಗಳಲ್ಲಿ ಆಪ್ 4 ಕ್ಷೇತ್ರಗಳಲ್ಲಿ ಗೆದ್ದಿತ್ತಾದರೂ 2019ರ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವಷ್ಟೇ ಪಡೆದುಕೊಂಡಿತ್ತು. ಅತ್ತ ಖುದ್ದು ಪ್ರಧಾನಿ ನರೇಂದ್ರರ ಮೋದಿ ಪಗಡಿ ಧರಿಸಿ ಪಂಜಾಬಿ ಭಾಷೆಯಲ್ಲಿ ಭಾಷಣ ಮಾಡಿದ್ದರೂ ಬಿಜೆಪಿ ಸೋಲನುಭವಿಸಿತ್ತು. ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇನ್ನು ಅಂಕಿ ಅಂಶಗ್ಳನ್ನು ಗಮನಿಸಿದರೆ ಪಂಜಾಬ್‌ನ ಶೇ. 65 ರಷ್ಟು ಜನಸಂಖ್ಯೆ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ಒಟ್ಟು 1.90 ಕೋಟಿ ಮತದಾರರಲ್ಲಿ 1.15ಮಂದಿ ಕೃಷಿಕರು. ಇದನ್ನು ಹೊರತುಪಡಿಸಿ 117 ವಿಧಾನಸಭಾ ಕ್ಷೇತ್ರಗಳಲ್ಲಿ 66 ಕ್ಷೇತ್ರಗಳು ಸಂಪೂರ್ಣ ಗ್ರಾಮೀಣ ಪ್ರದೇಶವಾಗಿದ್ದು, ರೈತಪ ಪ್ರಾಬಲ್ಯವಿದೆ. ರಾಜ್ಯದಲ್ಲಿ ಒಟ್ಟು 30 ಲಕ್ಷದಷ್ಟು ಮಂದಿ ಹೊಗಳಲ್ಲಿ ದುಡಿಯುತ್ತಾರೆ.