ಜನರ ಮನೆ ಮನೆಗೆ ಹೋಗಿ ಲಸಿಕೆ ಹಾಕಿ : ಪಿಎಂ ಮೋದಿ

By Kannadaprabha NewsFirst Published Nov 4, 2021, 6:50 AM IST
Highlights
  • ದೇಶಾದ್ಯಂತ ವಿವಿಧ ರಾಜ್ಯಗಳ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ ವಿತರಣೆ ಪ್ರಮಾಣ ಕಡಿಮೆ
  • ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ (ನ.04): ದೇಶಾದ್ಯಂತ (India) ವಿವಿಧ ರಾಜ್ಯಗಳ 45 ಜಿಲ್ಲೆಗಳಲ್ಲಿ ಕೋವಿಡ್‌ ಲಸಿಕೆ (Covid vaccine) ವಿತರಣೆ ಪ್ರಮಾಣ ಕಡಿಮೆ ಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister narendra modi), ಇಂಥ ಜಿಲ್ಲೆಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ ನೀಡಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ ಕಡ್ಡಾಯವಾಗಿ 2ನೇ ಡೋಸ್‌ ಪಡೆದುಕೊಳ್ಳುವ ಮೂಲಕ ಲಸಿಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜನರಿಗೆ ಸಲಹೆ ನೀಡಿದ್ದಾರೆ.

ಲಸಿಕೆ ವಿತರಣೆ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇರುವ 45 ಜಿಲ್ಲೆಗಳ ಜಿಲ್ಲಾಧಿಕಾರಿಗಳು (DC) ಹಾಗೂ ಸಂಬಂಧಿಸಿದ 12 ರಾಜ್ಯಗಳ ಮುಖ್ಯಮಂತ್ರಿಗಳ (CM) ಜೊತೆ ಬುಧವಾರ ಆನ್‌ಲೈನ್‌ ಸಭೆ ನಡೆಸಿದ ಮೋದಿ,‘ಇದುವರೆಗೂ ನೀವು ಜನರನ್ನು ಕೋವಿಡ್‌ ಲಸಿಕಾ ಕೇಂದ್ರಗಳಿಗೆ ಕರೆತಂದಿದ್ದೀರಿ. ಇನ್ನು ನೀವೇ ಜನರ ಮನೆ ಮನೆಗೆ (Dore step vaccination) ಹೋಗಿ ಲಸಿಕೆ ನೀಡಬೇಕು ಮತ್ತು ‘ಮನೆ ಮನೆಗೂ ಲಸಿಕೆ’ ಆಂದೋಲನದ ಜೊತೆ ಕೈಜೋಡಿಸಬೇಕು’ಎಂದು ಕರೆಕೊಟ್ಟರು.

ಧರ್ಮಗುರುಗಳಿಂದ ಮೂಡಿಸಿ:  ಲಸಿಕೆ ಬಗ್ಗೆ ಜನರಲ್ಲಿ ಇರುವ ಅಪನಂಬಿಕೆ, ಅನುಮಾನಗಳ ಕುರಿತು ಅಧಿಕಾರಿಗಳ ಕಳವಳದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಲಸಿಕೆ ಕುರಿತು ಇರುವ ಅನುಮಾನಗಳನ್ನು ದೂರ ಮಾಡಲು ಸ್ಥಳೀಯ ಧಾರ್ಮಿಕ ನಾಯಕರ ನೆರವನ್ನು ಪಡೆದುಕೊಳ್ಳಬೇಕು. ಧಾರ್ಮಿಕ ನಾಯಕರು (Religious leaders) ಕೂಡಾ ಲಸಿಕಾ ಅಭಿಯಾನದ ಬಗ್ಗೆ ಅತೀವ ಉತ್ಸಾಹ ಹೊಂದಿದ್ದಾರೆ. ಹೀಗಾಗಿ ಅವರ ಮೂಲಕ ಜನರಲ್ಲಿ ಲಸಿಕೆ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಜೊತೆಗೆ ಇತ್ತೀಚೆಗೆ ತಾವು ರೋಮ್‌ನಲ್ಲಿ (Roam) ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಸ್ತಾಪಿಸಿದರು.

ವಿಶೇಷ ಯೋಜನೆ:  ‘ನಾವು ಪ್ರತಿಯೊಂದು ಹಳ್ಳಿಗೂ ವಿಶೇಷ ಗಮನ ನೀಡಬೇಕು. ಪ್ರತಿ ಹಳ್ಳಿಗೂ ನೀವು ಪ್ರತ್ಯೇಕ ನೀತಿ ರೂಪಿಸಬೇಕಾದಲ್ಲಿ ಹಾಗೆಯೇ ಮಾಡಿ. ನೀವು ತಲಾ 25 ಜನರ ಒಂದು ತಂಡ ಮಾಡಬಹುದು. ಜೊತೆಗೆ ಎನ್‌ಸಿಸಿ (NCC), ಎನ್‌ಎಸ್‌ಎಸ್‌ನಂಥ (NSS) ಸಂಘಟನೆಗಳ ನೆರವು ಪಡೆಯಬಹುದು. ಆರೋಗ್ಯ ಕಾರ್ಯಕರ್ತರು ‘ಪ್ರತಿ ಮನೆಗೂ ಲಸಿಕೆ, ಮನೆ ಮನೆಗೂ ಲಸಿಕೆ’ ಎಂಬ ಆಶಯದೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ಲಸಿಕೆ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಮೋದಿ ಕರೆ ಕೊಟ್ಟರು.

2ನೇ ಡೋಸ್‌ ಪಡೆಯಿರಿ:  ಮೊದಲ ಡೋಸ್‌ ಪಡೆದ 12 ಕೋಟಿ ಜನರು ಅವಧಿ ಮುಗಿದರೂ ಇನ್ನೂ 2ನೇ ಪಡೆಯದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, ‘ಮೊದಲ ಡೋಸ್‌ನಷ್ಟೇ ಎರಡನೇ ಡೋಸ್‌ಗೂ ಗಮನ ನೀಡಬೇಕು. ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಜನರಲ್ಲೂ ಲಸಿಕೆ ಪಡೆಯುವ ಆತುರ ಕಡಿಮೆಯಾಗುತ್ತದೆ. ಹೀಗಾಗಿ ಆರೋಗ್ಯ (Health) ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದ ವೇಳೆ, 2ನೇ ಡೋಸ್‌ ಪಡೆಯವರಿಗೆ ಆದ್ಯತೆ ಮೇರೆಗೆ ಲಸಿಕೆ ಕೊಡಬೇಕು. ಹೀಗೆ 2ನೇ ಡೋಸ್‌ ಪಡೆಯಲು ನಿರ್ಲಕ್ಷ್ಯ ಮಾಡಿದ್ದರಿಂದಲೇ ಹಲವು ದೇಶಗಳು ಸಮಸ್ಯೆ ಎದುರಿಸಿದ್ದನ್ನು ನಾವು ನೋಡಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ನಿರ್ಲಕ್ಷ್ಯ ಬೇಡ:  ‘ನಾವು ಈಗಾಗಲೇ 100 ಕೋಟಿ ಡೋಸ್‌ ಲಸಿಕೆ ವಿತರಣೆ ಮೈಲುಗಲ್ಲು ದಾಟಿದ್ದೇವೆ ಎಂಬ ಸಂಭ್ರಮದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಹೊಸ ವಿಪತ್ತು ಯಾವಾಗ ಬೇಕಾದರೂ ಬರಬಹುದು. ರೋಗ ಮತ್ತು ಶತ್ರುವಿನ ವಿರುದ್ಧ ಕೊನೆಯ ಹಂತದವರೆಗೂ ಹೋರಾಡಬೇಕು’ ಎಂಬ ನಾಣ್ಣುಡಿಯನ್ನು ನೆನಪಿಸಿದರು.

click me!