ಅಮಿತ್ ಶಾಗೆ ಶಾಕ್ ಚುನಾವಣಾ ಆಯೋಗ ಶಾಕ್, ಗೃಹ ಸಚಿವರ ಹೆಲಿಕಾಪ್ಟರ್ ಪರಿಶೋಧನೆ!

Published : Nov 15, 2024, 06:59 PM IST
ಅಮಿತ್ ಶಾಗೆ ಶಾಕ್ ಚುನಾವಣಾ ಆಯೋಗ ಶಾಕ್, ಗೃಹ ಸಚಿವರ ಹೆಲಿಕಾಪ್ಟರ್ ಪರಿಶೋಧನೆ!

ಸಾರಾಂಶ

ಚುನಾವಣಾ ಅಧಿಕಾರಿಗಳ ಪರಿಶೋಧನೆ ಹಲವು ವಿಪಕ್ಷ ನಾಯಕರ ಕಣ್ಣು ಕೆಂಪಾಗಿಸಿದೆ. ವಾಗ್ದಾಳಿಯನ್ನೂ ನಡೆಸಿದ್ದಾರೆ. ಇದರ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟಪ್ ಪರಿಶೋಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡದಿದೆ.

ಮುಂಬೈ(ನ.15) ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಾವೇರಿದೆ. ಈಗಾಲೇ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮಹಾ ವಿಕಾಸ್ ಅಘಾಡಿ ಕೇಂದ್ರ ನಾಯಕರು, ಮಾಜಿ ಸಿಎಂ ಉದ್ಧವಾ ಠಾಕ್ರೆ ಸೇರಿದಂತೆ ಹಲವರ ವಾಹನವನ್ನು ಚುನಾವಣಾ ಅಧಿಕಾರಿಗಳು ನಡೆಸಿದ ಪರಿಶೋಧನೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರನ್ನು ಚುನಾವಣಾ ಆಯೋಗ ಪರಿಶೋಧಿಸಿದೆ. ಬಿಜೆಪಿ ನ್ಯಾಯಸಮ್ಮತ ಚುನಾವಣೆಯಲ್ಲಿ ನಂಬಿಕೆ ಇಟ್ಟಿದೆ. ನಿಮಯ ಎಲ್ಲರಿಗೂ ಒಂದೇ ಎಂದು ಅಮಿತ್ ಶಾ ಹೇಳಿದ್ದಾರೆ.

ಪ್ರಚಾರಕ್ಕಾಗಿ ಅಮಿತ್ ಶಾ ಹಿಂಗೂಲಿ ಜಿಲ್ಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ಪರಿಶೋಧಿಸಿದ್ದಾರೆ. ಅಮಿತ್ ಶಾ ಹೆಲಿಕಾಪ್ಟರ್ ಒಳಗೆ ತಡಕಾಡಿ ಎಲ್ಲವನ್ನೂ ಪರಿಶೋಧಿಸಿದ್ದಾರೆ. ಅಮಿತ್ ಶಾ ಹೆಲಿಕಾಪ್ಟರ್ ಪರಿಶೋಧನೆಯನ್ನು ಚುನಾವಣಾ ಅಧಿಕಾರಿಗಳು ವಿಡಿಯೋ ಮಾಡಿಕೊಂಡಿದ್ದಾರೆ.  ಚುನಾವಣಾ ಅಧಿಕಾರಿಗಳು ನಿಯಮದಂತೆ ಪರಿಶೀಲನೆ ನಡೆಸಿದ ಘಟನೆಯ ವಿಡಿಯೋವನ್ನು ಅಮಿತ್ ಶಾ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡದ್ದಾರೆ. ಇಷ್ಟೇ ಅಲ್ಲ ಈ ಮೂಲಕ ವಿಪಕ್ಷಗಳ ನಾಯಕರಿಕೆ ತಿರುಗೇಟು ನೀಡಿದ್ದಾರೆ.

News Hour: ಯೋಗೇಶ್ವರ್‌ಗೆ ಸೋಲಿನ ಭೀತಿ ತಂದ 'ಕರಿಯ..', ಜಮೀರ್‌ರನ್ನ ಸುಮ್ನೆ ಬಿಡ್ತಾರಾ?

ಹಿಂಗೋಲಿ ವಿಧಾನಸಭಾ ಕ್ಷೇತ್ರದ ಪ್ರಚಾರಕ್ಕೆ ತೆರಳಿದಾಗ ಚುನಾವಣಾ ಅಧಿಕಾರಿಗಳು ನಾನು ಪ್ರಯಾಣಿಸಿದ ಹೆಲಿಕಾಪ್ಟರ್‌ನ್ನು ಪರಿಶೋಧಿಸಿದ್ದಾರೆ. ಬಿಜೆಪಿ ನ್ಯಾಯಸಮ್ಮತ ಹಾಗೂ ಆರೋಗ್ಯಕರ ಚುನಾವಣೆ ಮೇಲೆ ನಂಬಿಕೆ ಇಟ್ಟಿದೆ. ಹೀಗಾಗಿ ಚನಾವಣಾ ಆಯೋಗ ರೂಪಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ. ನಾವು ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಈ ಮೂಲಕ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳ ವಾಹನ, ಬ್ಯಾಗ್ ಪರಿಶೋಧನೆ ಭಾರಿ ಕೋಲಾಹಲ ಸೃಷ್ಟಿಸಿದೆ. ಇತ್ತೀಚೆಗೆ ಉದ್ದವ್ ಠಾಕ್ರೆ ಗರಂ ಆಗಿದ್ದರು. ಇಷ್ಟೇ ಅಲ್ಲ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಚುನಾವಣಾ ಆಯೋಗ ಅಧಿಕಾರಿಗಳು ಕೇಂದ್ರ ಬಿಜೆಪಿ ಸರ್ಕಾರದ ಸೂಚನೆಯಂತೆ ನಮ್ಮ ವಾಹನ ಪರಿಶೋಧನೆ ಮಾಡುತ್ತಿದೆ. ಒಂದೇ ದಿನ ಮೂರು ಬಾರಿ ವಾಹನ, ಬ್ಯಾಗ್ ಪರಿಶೀಲಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ಧವ್ ಠಾಕ್ರೆ ಹಾಗೂ ಬಣ ಬಿಜೆಪಿ ವಿರುದ್ಧ ಆರೋಪ ಮಾಡಿತ್ತು. ಬಾತ್ ರೂಂಗೆ ಹೋದರೂ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಇಷ್ಟೇ ಅಲ್ಲ ಬಿಜೆಪಿ ನಾಯಕರ ಯಾವುದೇ ವಾಹನ, ಬ್ಯಾಗ್ ಪರಿಶೀಲಿಸುವುದಿಲ್ಲ. ಕೇವಲ ವಿಪಕ್ಷ ನಾಯಕರ ವಾಹನ, ಬ್ಯಾಗ್ ಮಾತ್ರ ಪರಿಶೀಲನೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲೂ ನ್ಯಾಯ ಸಮ್ಮತ ಚುನಾವಣೆ ನೆಡಯವುದು ಅನುಮಾನ ಎಂದು ಆರೋಪಿಸಿದ್ದರು.

 

 

ಈ ಆರೋಪದ ಬಳಿಕ ಮಹಾರಾಷ್ಟ್ರ ಬಿಜೆಪಿ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೆಲಿಕಾಪ್ಟರ್ ಪರಿಶೋಧಿಸು ವಿಡಿಯೋ ಪೋಸ್ಟ್ ಮಾಡಿ ತಿರೇಗುಟು ನೀಡಿದ್ದರು. ಇದೀಗ ಖುದ್ದು ಅಮಿತ್ ಶಾ ವಿಡಿಯೋ ಪೋಸ್ಟ್ ಮಾಡಿ ತಿರುಗೇಟು ನೀಡಿದ್ದರು. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಪ್ರಚಾರದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನ ಪಟೋಲೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವು ನಾಯಕರ ವಾಹನ ಪರಿಶೀಲನೆ ನಡೆಸಲಾಗಿದೆ. ಸಂಜಯ್ ರಾವತ್ ಸೇರಿದಂತೆ ಮಹಾ ವಿಕಾಸ್ ಅಘಾಡಿಯ ಹಲವು ನಾಯಕರು ಬಿಜೆಪಿ ವಿರುದ್ದ ಆರೋಪ ಮಾಡಿದ್ದಾರೆ. ಚುನಾವಣೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

'ಸಚಿವ ಜಮೀರ್ ಹೇಳಿಕೆಯಿಂದ ಪಕ್ಷಕ್ಕೆ ಒಂದಷ್ಟು ನಷ್ಟ ಆಗಿದೆ' ಎಂದ ಸಿಪಿವೈ; ಫಲಿತಾಂಶಕ್ಕೂ ಮೊದಲೇ ಸೋಲೊಪ್ಪಿಕೊಂಡ್ರಾ ಸೈನಿಕ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!