ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳ ಕೆಲಸದ ಬಗ್ಗೆ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಚೀನಾಕ್ಕೆ ಪೈಪೋಟಿ ನೀಡಲು ಮತ್ತು ಭಾರತದ ಅಭಿವೃದ್ಧಿಗೆ ಕಠಿಣ ಪರಿಶ್ರಮ ಅಗತ್ಯ ಎಂದು ಅವರು ಪುನರುಚ್ಚರಿಸಿದ್ದಾರೆ. ಕಠಿಣ ಪರಿಶ್ರಮ ಭಾರತೀಯ ಸಂಸ್ಕೃತಿಯ ಭಾಗ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರು (ನ.15): ವಾರಕ್ಕೆ 70 ಗಂಟೆಗಳ ಕೆಲಸದ ಬಗ್ಗೆ ಕಳೆದ ವರ್ಷ ತಾವು ಹೇಳಿದ್ದ ಹೇಳಿಕೆ ವಿವಾದವಾಗಿದ್ದರೂ, ಇಂದಿಗೂ ಆ ಮಾತನ್ನು ನಾನು ಒಪ್ಪುತ್ತೇನೆ. ನಾನು ಸತ್ತರೂ ಈ ವಿಚಾರದಲ್ಲಿ ನನ್ನ ದೃಷ್ಟಿಕೋನ ಬದಲಾಗೋದಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ವಾರಕ್ಕೆ ಯುವಕರು 70 ಗಂಟೆಗಳ ಕೆಲಸ ಮಾಡಿದರೆ, ಮಾತ್ರವೇ ನಾವು ಚೀನಾ ದೇಶಕ್ಕೆ ಪೈಪೋಟಿ ನೀಡಲು ಸಾಧ್ಯ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ವರ್ಕ್‌ಲೈಫ್ ಬ್ಯಾಲೆನ್ಸ ಮಾಡೋಕೆ ಕಷ್ಟವಾಗುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಈಗ ನಾರಾಯಣ ಮೂರ್ತಿ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶೀಪ್ ಸಮ್ಮಿಟ್‌ನಲ್ಲಿ ಮಾತನಾಡಿದ ಅವರು, 1986ರಲ್ಲಿ ಆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದು ತಮಗೆ ಅಚ್ಚರಿ ತಂದಿತ್ತು ಎಂದೂ ಹೇಳಿದ್ದಾರೆ. ಆಗ ಭಾರತದಲ್ಲಿ ಐಟಿ ಹಾಗೂ ಇತರ ಕೆಲ ವಲಯಗಳಲ್ಲಿ ವಾರದ ಆರು ದಿನ ಬದಲು 5 ದಿನ ಕೆಲಸ ಮಾಡುವ ನೀತಿ ತರಲಾಯಿತು. ಇದರಿಂದ ನಾನು ತುಂಬಾ ವಿಚಲಿತನಾಗಿದ್ದೆ' ಎಂದು ಹೇಳಿದ್ದಾರೆ.
'ದಯವಿಟ್ಟು ಕ್ಷಮಿಸಿ. ಕೆಲಸದ ಅವಧಿ ಬಗ್ಗೆ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ' ಎಂದು ಹೇಳಿದ್ದಾರೆ. ಮೂರ್ತಿ ಅವರು ಹೇಳುವ ಪ್ರಕಾರ ದೇಶದ ಪ್ರಗತಿಗೆ ಕಠಿಣ ಶ್ರಮವೇ ಮೂಲ ಆಧಾರ. ಪ್ರಧಾನಿ ನರೇಂದ್ರ ಮೋದಿ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುವ ಪ್ರವೃತ್ತಿಯನ್ನೂ ಅವರು ಉದಾಹರಣೆಯಾಗಿ ತೋರಿಸಿದರು. 'ಪ್ರಧಾನಿ ಮೋದಿಯವರು ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮ್ಮ ಮೆಚ್ಚುಗೆಯನ್ನು ತೋರಿಸುವ ಏಕೈಕ ಮಾರ್ಗವೆಂದರೆ ಅದೇ ರೀತಿಯಲ್ಲಿ ನಾವು ಕೆಲಸ ಮಾಡುವುದು ಎಂದು ಹೇಳಿದ್ದಾರೆ. ಭಾರತದ ಅಭಿವೃದ್ಧಿ ವಿಶ್ರಾಂತಿಯ ಬದಲಾಗಿ ತ್ಯಾಗವನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಕೆಲಸದ ಬಗ್ಗೆ ತಮಗೆ ಇದ್ದ ಶ್ರದ್ಧೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಮ್ಮ ಉದ್ಯಮಿ ಜೀವನದ ಹೆಚ್ಚಿನ ಕಾಲ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿತ್ತು. ವಾರಕ್ಕೆ ಆರೂವರೆ ದಿನಗಳ ಕಾಲ ಕೆಲಸ ಮಾಡುತ್ತಿದ್ದೆ. ಬೆಳಗ್ಗೆ 6.30ಕ್ಕೆ ನಾನು ಕಚೇರಿಗೆ ಬಂದರೆ, ರಾತ್ರಿ 8.40ಕ್ಕೆ ಮನೆಗೆ ಹೊರಡುತ್ತಿದ್ದೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಕಠಿಣ ಪರಿಶ್ರಮವು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದೆ ಎಂದಿದ್ದಾರೆ.
"ಈ ದೇಶದಲ್ಲಿ ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ, ನೀವು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದರೂ ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ' ಎಂದಿದ್ದಾರೆ. ಮೂರ್ತಿಯವರು ಭಾರತದ ಕಾರ್ಯನೀತಿಯನ್ನು WWII ನಂತರದ ಜರ್ಮನಿ ಮತ್ತು ಜಪಾನ್‌ಗೆ ಹೋಲಿಸಿದ್ದರು. "ತಮ್ಮ ದೇಶಗಳನ್ನು ಪುನರ್ನಿರ್ಮಿಸಲು ಅವರು ಮಾಡಿದ್ದು ಇದನ್ನೇ" ಎಂದು ಅವರು ಈ ಹಿಂದೆಯೇ ಹೇಳಿದ್ದರು, ಯುವ ಭಾರತೀಯರು ಇದನ್ನು ಮಾಡಲು ತಮ್ಮ ಮತ್ತು ದೇಶಕ್ಕೆ ಋಣಿಯಾಗಿರುತ್ತಾರೆ ಎಂದು ವಾದಿಸಿದರು.
ನಂದ ಲವ್ಸ್ ನಂದಿತಾ ಅಲ್ಲ.. ಇದು ನಿತ್ಯಾನಂದ ಕ್ರಿಯೇಟ್ಸ್ ನಿತ್ಯಾನಂದಿತಾ!
ಜರ್ಮನಿ, ಜಪಾನ್ ದೇಶದವರು ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟಿದರು. ಅದಕ್ಕೆ ಪರ್ಯಾಯ ಯಾವುದೂ ಇಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ತಾಸು ಕೆಲಸ ಮಾಡಬೇಕು. ಅಂದಾಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ ಎಂದಿದ್ದಾರೆ.
ಬೆಂಗಳೂರು ಯುವತಿ ಗುಟ್ಟಾಗಿ ಮದುವೆಯಾದ 54 ವರ್ಷದ ಸ್ವಾಮೀಜಿ, ತಮಿಳುನಾಡು ಮಠದಿಂದ ಕಿಕ್‌ಔಟ್