ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ಸ್ವರ್ಣ ಕೃತಿ ಬಿಡುಗಡೆ, ಸುಂದರ ಕರಕುಶಲ ಚಿನ್ನದ ಆಭರಣಗಳ ಸಂಗ್ರಹ!

By Chethan Kumar  |  First Published Nov 15, 2024, 7:39 PM IST

ಮೈಗೊಪ್ಪುವ ಸೊಬಗು, ಅನುರಣಿಸುವ ಸೌಂದರ್ಯ , ನುರಿತ ಕರಕುಶಲಗಳ ಕ್ಲಾಸಿಕ್ ಕ್ಯುರೇಶನ್, ಕಣ್ಣು ಕುಕ್ಕುವ ಅತ್ಯಾಕರ್ಷಕ ಚಿನ್ನದ ಆಭರಣದ ಸಂಗ್ರಹ ಸ್ವರ್ಣ ಕೃತಿ ಅನಾವರಣಗೊಂಡಿದೆ. ಇದು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುತ್ತಿದೆ.  
 


ಬೆಂಗಳೂರು(ನ.15) ವಿಶ್ವದ ಅತಿ ದೊಡ್ಡ ಮತ್ತು ವಿಶ್ವಾಸಾರ್ಹವಾದ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್‌ಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಆಕರ್ಷಕ ಹೊಸ ಸಂಗ್ರಹವಾದ `ಸ್ವರ್ಣಕೃತಿ’ ಹೆಸರಿನ ಆಭರಣವನ್ನು ಅನಾವರಣ ಮಾಡಿದೆ. ಈ ಕ್ಲಾಸಿಕ್ ಕ್ಯುರೇಶನ್ ಸೊಗಸಾದ ಚಿನ್ನದ ಆಭರಣಗಳನ್ನು ಪ್ರದರ್ಶಿಸುತ್ತದೆ ಮತ್ತು ತನ್ನ ಸಮಕಾಲೀನ ವಿನ್ಯಾಸದೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಸುಂದರವಾಗಿ ಸಂಯೋಜನೆ ಮಾಡುತ್ತದೆ. ನುರಿತ ಕರಕುಶಲಕರ್ಮಿಗಳಿಂದ ಸಿದ್ಧಪಡಿಸಲಾಗಿರುವ ಈ ಸಂಗ್ರಹದ ಬಗ್ಗೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಮಲ್ಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಾಕಷ್ಟು ಪ್ರಚಾರವನ್ನು ಪಡೆದುಕೊಳ್ಳುತ್ತಿದೆ. ಈ ಮೂಲಕ ಕಲಾತ್ಮಕತೆ ಮತ್ತು ಕರಕುಶಲತೆಯ ಅದ್ಭುತವಾದ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ.

ಆಧುನಿಕತೆಯೊಂದಿಗೆ ಸಂಪ್ರದಾಯವನ್ನು ಮುನ್ನೆಡೆಸಿಕೊಂಡು ಹೋಗುವ ಮೂಲಕ ತಲೆತಲಾಂತರದ ಸೊಬಗು ಮತ್ತು ಶಕ್ತಿಯನ್ನು ಸಾಕಾರಗೊಳಿಸುತ್ತಿರುವ ಮಹಿಳೆಯರ ಗೌರವಾರ್ಥವಾಗಿ ಈ ಸ್ವರ್ಣಕೃತಿಯನ್ನು ಅರ್ಪಿಸಲಾಗುತ್ತಿದೆ. ಈ ಸಂಗ್ರಹದಲ್ಲಿರುವ ಪ್ರತಿಯೊಂದು ಆಭರಣವನ್ನು ನಿಖರವಾಗಿ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲತೆಯ ಕರಕುಶಲತೆಯಿಂದ ರಚಿಸಲಾಗಿದೆ. ಇದರಲ್ಲಿನ ಸಂಕೀರ್ಣವಾದ ಮಾದರಿಗಳು, ಸೂಕ್ಷ್ಮವಾದ ಫಿಲಿಗ್ರಿ ಮತ್ತು ಭಾರತದ ಭವ್ಯ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಈ ಆಭರಣಗಳು ಮೇಳೈಸುತ್ತಿವೆ. ಇವುಗಳ ಸೊಬಗು ಮತ್ತು ಸೌಂದರ್ಯದ ಮಿಶ್ರಣವು ಮಹಿಳೆಯರನ್ನು ಸಮ್ಮೋಹನಗೊಳಿಸುತ್ತವೆ. ಈ ಸ್ವರ್ಣಕೃತಿಯ ಆಭರಣಗಳು ತಮ್ಮ ವೈಯಕ್ತಿಕ ಜೀವನದ ಭಾಗವಾಗಿಸಲು ಮತ್ತು ಅವುಗಳ ಸೊಬಗನ್ನು ಹೊಂದುವAತೆ ಮಾಡುವ ನಿಟ್ಟಿನಲ್ಲಿ ಗ್ರಾಹಕರನ್ನು ಆಹ್ವಾನಿಸುವಂತಿವೆ.

Tap to resize

Latest Videos

undefined

ಈ ಸ್ವರ್ಣಕೃತಿ ಅನಾವರಣದ ಬಗ್ಗೆ ಮಾತನಾಡಿರುವ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, ``ಸ್ವರ್ಣಕೃತಿಯೊಂದಿಗೆ ನಾವು ಕೇವಲ ಕರಕುಶಲ ಚಿನ್ನದ ಆಭರಣಗಳ ಸೌಂದರ್ಯವನ್ನು ಆಚರಣೆ ಮಾಡುತ್ತಿಲ್ಲ. ಇದರ ಜೊತೆಗೆ ಪ್ರತಿಯೊಂದು ಆಭರಣದ ತುಣುಕು ಪ್ರತಿನಿಧಿಸುವ ಭವ್ಯ ಪರಂಪರೆ ಮತ್ತು ಸೊಬಗನ್ನು ಆಚರಿಸುತ್ತಿದ್ದೇವೆ. ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವ ಮಹಿಳೆಯರಿಗೆ ಈ ಆಕರ್ಷಕವಾದ ಸಂಗ್ರಹವು ಒಂದು ಗೌರವವಾಗಿದೆ. ಇದು ಗುಣಮಟ್ಟ, ಪಾರದರ್ಶಕತೆ ಮತ್ತು ಮೌಲ್ಯದ ನಮ್ಮ ಭರವಸೆಯನ್ನು ಸಾಕಾರಗೊಳಿಸುತ್ತದೆ. ಈ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್ನಲ್ಲಿ ಗ್ರಾಹಕರು ಹೊಂದಿರುವ ನಂಬಿಕೆಯನ್ನು ಎತ್ತಿಹಿಡಿಯುತ್ತದೆ’’ ಎಂದು ಹೇಳಿದರು.

ಮಲಬಾರ್ ಗೋಲ್ಡ್ನ ಭರವಸೆಯ ಭಾಗವಾಗಿ ಸ್ವರ್ಣಕೃತಿ ಸಂಗ್ರಹವು ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಿಗ್ನೇಚರ್ ಆಗಿರುವ ಗ್ರಾಹಕ-ಮೊದಲ ನೀತಿಗಳನ್ನು ಬೆಂಬಲಿಸುತ್ತದೆ. ಇದು ಪ್ರತಿ ಖರೀದಿಗೆ ಗುಣಮಟ್ಟ, ಪಾರದರ್ಶಕತೆ ಮತ್ತು ಮೌಲ್ಯವನ್ನು ಖಚಿತಪಡಿಸುತ್ತದೆ. ಸಂಪೂರ್ಣವಾದ ಪಾರದರ್ಶಕತೆಯ ಉಪಕ್ರಮವು ಪ್ರತಿ ಆಭರಣದ ನಿಖರವಾದ ದರಪಟ್ಟಿ ಮತ್ತು ಇನ್‌ವಾಯ್ಸ್ ಅನ್ನು ಒದಗಿಸುತ್ತದೆ. ಇದರಲ್ಲಿ ಒಟ್ಟು ತೂಕ, ಕಲ್ಲಿನ ತೂಕ, ನಿವ್ವಳ ತೂಕ, ಕಲ್ಲಿನ ಶುಲ್ಕಗಳು ಮತ್ತು ಮೇಕಿಂಗ್ ಚಾರ್ಜನ್ನು ನಿರ್ದಿಷ್ಟವಾಗಿ ತಿಳಿಸುತ್ತದೆ. ಈ ಸ್ಪಷ್ಟತೆಯು ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಆತ್ಮವಿಶ್ವಾಸದ ಆಯ್ಕೆಗಳನ್ನು ಮಾಡಿಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತದೆ.

ಇನ್ನಿತರ ಗ್ರಾಹಕ-ಕೇಂದ್ರಿತ ನೀತಿಗಳಲ್ಲಿ ಪ್ರಮುಖವಾಗಿ ವಿಶ್ವದಾದ್ಯಂತ ಇರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಶೋರೂಂಗಳಲ್ಲಿ ಖಚಿತ ಜೀವನಪರ್ಯಂತ ನಿರ್ವಹಣೆ, ಚಿನ್ನ ಮತ್ತು ವಜ್ರದ ವಿನಿಮಯಕ್ಕೆ ಶೇ.100 ರಷ್ಟು ಮೌಲ್ಯ ಮತ್ತು ಎಲ್ಲಾ ಚಿನ್ನ ಮತ್ತು ವಜ್ರಾಭರಣಗಳಿಗೆ ಗ್ಯಾರಂಟೀಡ್ ಬೈಬ್ಯಾಕ್ ಸೌಲಭ್ಯ ಇರುತ್ತದೆ. 24 ಹಂತಗಳ ಕಠಿಣ ಆಂತರಿಕ ಗುಣಮಟ್ಟ ಪರೀಕ್ಷೆಗಳ ಮೂಲಕ ವಜ್ರಗಳನ್ನು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ ಮತ್ತು ಪ್ರಮಾಣೀಕರಿಸಲಾಗುತ್ತದೆ. ಇದಲ್ಲದೇ, ಕೆಜಿ-ಜಿಐಎ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಈ ಮೂಲಕ ಗ್ರಾಹಕರಿಗೆ ನೆಮ್ಮದಿಯ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇದರೊಂದಿಗೆ ಮಲಬಾರ್ ಗ್ರಾಹಕರು ಖರೀದಿಸುವ ಚಿನ್ನಾಭರಣಗಳು ಕಳೆದುಹೋದರೆ, ಅಗ್ನಿ ಅನಾಹುತದಿಂದ ನಷ್ಟ ಹೊಂದಿದರೆ ಅಥವಾ ಕಳ್ಳತನವಾದರೆ ಒಂದು ವರ್ಷದವರೆಗೆ ಪುರಕ ವಿಮೆ ಅನ್ನೂ ನೀಡುತ್ತದೆ. 

ಇವುಗಳಲ್ಲದೇ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗೆ ಖಾತರಿ ಶುದ್ಧತೆಯ ಹಾಲ್‌ಮಾರ್ಕ್ ಪ್ರಮಾಣೀಕರಣದೊಂದಿಗೆ ಶೇ.100 ರಷ್ಟು HUID – ಅನುಸರಣೆಯ ಚಿನ್ನವನ್ನು ನೀಡುತ್ತದೆ. ಚಿನ್ನವನ್ನು ಜವಾಬ್ದಾರಿಯುತ ಮೂಲದಿಂದ ಸಂಗ್ರಹ ಮಾಡುತ್ತದೆ ಮತ್ತು ತನ್ನ ನ್ಯಾಯಯುತ ದರ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಈ ಮೂಲಕ ನ್ಯಾಯಯುತ ಮೇಕಿಂಗ್ ಚಾರ್ಜ್ ಅನ್ನು ಪ್ರತಿಯೊಂದು ಆಭರಣಕ್ಕೆ ಅನ್ವಯ ಮಾಡುತ್ತದೆ ಹಾಗೂ ಗುಣಮಟ್ಟ ಮತ್ತು ಕರಕುಶಲಶೀಲತೆಯನ್ನು ಕಾಪಾಡುತ್ತದೆ.

ಈ ಸ್ವರ್ಣಕೃತಿ ಸಂಗ್ರಹವು ವಿಶ್ವದಾದ್ಯಂತ ಇರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಎಲ್ಲಾ ಶೋರೂಂಗಳಲ್ಲಿ ಲಭ್ಯವಿದೆ. ಈ ಭವ್ಯವಾದ ಆಭರಣವನ್ನು ಖರೀದಿಸಲು ಗ್ರಾಹಕರು ನಿಮ್ಮ ಹತ್ತಿರದ ಮಲಬಾರ್ ಶೋರೂಂಗೆ ಭೇಟಿ ನೀಡಬಹುದು ಅಥವಾ ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ. 

ಹೆಚ್ಚಿನ ಮಾಹಿತಿಗಾಗಿ  www.malabargoldanddiamonds.com.ಗೆ ಭೇಟಿ ನೀಡಿ.
 

click me!