ಕೈಗೆ ದುಡ್ಡು ಬಂದ್ರೆ ಚಿನ್ನ ಖರೀದಿಸುತ್ತೀನಿ, ಕಷ್ಟ ಬಂದ್ರೆ ಅಡವಿಡುತ್ತೀನಿ: ಸೋನು ಗೌಡ
ಸಂಭಾವನೆಯನ್ನು ಹೇಗೆ ಬಳಸಿಕೊಳ್ಳುತ್ತೀನಿ? ಹಣ ಎಲ್ಲಿ ಹೂಡಿಗೆ ಮಾಡುತ್ತೀನಿ? ಎಲ್ಲಿಂದ ತೆಗೆದುಕೊಳ್ಳಲು ಸುಲಭವೆಂದು ವಿವರಿಸಿದ್ದಾರೆ ಸೋನು.
ಸಂಭಾವನೆಯನ್ನು ಹೇಗೆ ಬಳಸಿಕೊಳ್ಳುತ್ತೀನಿ? ಹಣ ಎಲ್ಲಿ ಹೂಡಿಗೆ ಮಾಡುತ್ತೀನಿ? ಎಲ್ಲಿಂದ ತೆಗೆದುಕೊಳ್ಳಲು ಸುಲಭವೆಂದು ವಿವರಿಸಿದ್ದಾರೆ ಸೋನು.
ಕನ್ನಡ ಕಿರುತೆರೆ ಜನಪ್ರಿಯ ನಟಿ ಸೋನು ಗೌಡ ಈಗಿನ ಜನರೇಷನ್ ಮಕ್ಕಳಿಗೆ ಹಣದ ಪಾಠ ಮಾಡಿದ್ದಾರೆ. ದುಡಿಯುವ ದುಡ್ಡನ್ನು ಎಲ್ಲಿ ಹಾಕಬೇಕು ಎಂದು ಹಂಚಿಕೊಂಡಿದ್ದಾರೆ.
'ನನ್ನ ಮೊದಲ ಸಿನಿಮಾ ಶೂಟಿಂಗ್ ಮಾಡಿದಾಗ ನನಗೆ 17 ವರ್ಷ. ಸಂಭಾವನೆ ಪಡೆಯದೆ ನನ್ನ ಮೊದಲ ಸಿನಿಮಾ 'ಇಂತಿ ನಿನ್ನ ಪ್ರೀತಿಯಾ' ಮಾಡಿದೆ. ನನ್ನ ಎರಡನೇ ಚಿತ್ರಕ್ಕೆ ಸಂಭಾವನೆ ಕೊಡಲು ಶುರು ಮಾಡಿದ್ದರು.
ನಾನು ಕೆಲಸ ಶುರು ಮಾಡುವುದಕ್ಕಿಂತ ಮೊದಲೇ ಬ್ಯಾಂಕ್ ಅಕೌಂಟ್ ಹೊಂದಿದ್ದೆ.ಹಣ ಬರಲು ಶುರು ಮಾಡಿದಾಗ ನಾನು ಮ್ಯೂಚುಯಲ್ ಫಂಡ್ಸ್‌ಗೆ ಹೂಡಿಕೆ ಮಾಡಲು ಶುರು ಮಾಡಿದೆ.
ನನಗೆ ಸುಲಭವಾಗುವ ರೀತಿಯಲ್ಲಿ ಲೆಕ್ಕಚಾರ ಮಾಡಿಕೊಂಡು ಮಾರ್ಕೆಟ್‌ನ ಅರ್ಥ ಮಾಡಿಕೊಳ್ಳಲು ಶುರು ಮಾಡಿದೆ. ಆ ಸಮಯದಲ್ಲಿ ಹೂಡಿಗೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತಿರಲಿಲ್ಲ.
ಆಗ ಬ್ರೋಕರ್ ಅಥವಾ ಬ್ಯಾಂಕ್ ಮ್ಯಾನೇಜರ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದೆ. ನಾನು ದುಡಿಯಲು ಶುರು ಮಾಡಿದಾಗ ಚಿನ್ನದ ಒಂದು ಗ್ರಾಂಗೆ 2 ಸಾವಿರ ಹಣವಿತ್ತು. ನನಗೆ ಸ್ವಲ್ಪ ಹಣ ಬರಲು ಶುರುವಾಗಿದ ತಕ್ಷಣವೇ ಚಿನ್ನ ನಾಣ್ಯವನ್ನು ತೆಗೆದಿಡಲು ಶುರು ಮಾಡಿದೆ.
ನನಗೆ ಹಣ ಬೇಕಿದ್ದ ಸಮಯದಲ್ಲಿ ಚಿನ್ನದ ನಾಣ್ಯಗಳ ಮೇಲೆ ಲೋನ್ ಕೊಡುತ್ತಿರಲಿಲ್ಲ. ಹೀಗೆ ಹಂತ ಹಂತವಾಗಿ ಪಾಠ ಕಲಿಯುವುದಕ್ಕೆ ಶುರು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹೀಗಾಗಿ ಸಿಂಪಲ್ ಆಗಿರುವ ಚಿನ್ನದ ಸರಗಳನ್ನು ಖರೀದಿಸಲು ಶುರು ಮಾಡಿದೆ ಆಗ ಹಣ ಅಗತ್ಯವಿದ್ದಾಗ ಅಡವಿಡುತ್ತಿದ್ದೆ. ಅಗತ್ಯವಿದ್ದಾಗ ಇಟ್ಟು ತೆಗೆದುಕೊಳ್ಳಲು ಸುಲಭವಾಗುವಂತ ಕಡೆ ಇಡಬೇಕು.