ಇದೀಗ ಎಲ್ಲೆಡೆ ಮೆಘಾಕ್ವೇಕ್ ಆತಂಕ ಹೆಚ್ಚಾಗುತ್ತಿದೆ. ಜಪಾನ್ ಸರ್ಕಾರ ಮುಂದಿಟ್ಟ ಅಧಿಕೃತ ವರದಿ ಪ್ರಕಾರ ಈ ಮೆಘಾಕ್ವೇಕ್ ಬರೋಬ್ಬರಿ 3 ಲಕ್ಷ ಮಂದಿಯನ್ನು ಬಲಿಪಡೆಯಲಿದೆ ಎಂದಿದೆ. ಏನಿದು ಮೆಘಾಕ್ವೇಕ್?
ಜಪಾನ್(ಏ.01) ಕಾಡ್ಗಿಚ್ಚು, ಭೂಕುಸಿತ, ಪ್ರವಾಹ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಇದರ ಬೆನ್ನಲ್ಲೇ ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಅದರ ದೃಶ್ಯಗಳು ಜನರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದೆ. ಈ ಭೂಕಂಪ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಚೇತರಿಸಿಕೊಳ್ಳುವ ಮೊದಲೇ ಇದೀಗ ಮೆಘಾಕ್ವೇಕ್ ಭೀತಿ ಎದುರಾಗಿದೆ. ಜಪಾನ್ ಸರ್ಕಾರ ಹೊರತಂದ ಅಧಿಕೃತ ವರದಿಯಲ್ಲಿ ಮೆಗಾಕ್ವೇಕ್ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇಷ್ಟೇ ಅಲ್ಲ ಈ ಮೆಘಾಕ್ವೇಕ್ ಬರೋಬ್ಬರಿ 3 ಲಕ್ಷ ಮಂದಿಯನ್ನು ಬಲಿಪಡೆಯಲಿದೆ ಎಂದಿದೆ. ಇಷ್ಟೇ ಅಲ್ಲ ಆರ್ಥಿಕತೆಯಲ್ಲಿ ಬರೋಬ್ಬರಿ 1.81 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟವನ್ನುಂಟು ಮಾಡಲಿದೆ ಎಂದಿದೆ.
ಏನಿದು ಮೆಘಾಕ್ವೇಕ್?
ಭೂಕಂಪನಕ್ಕೂ ಮಿಗಲಾದ ಭೀಕರ ಸುನಾಮಿ. ರಕ್ಕಸ ಸಮುದ್ರ ಅಲೆ ಮಾತ್ರವಲ್ಲ, ಸಮುದ್ರದ ನೀರು ಅತೀ ವೇಗವಾಗಿ ತೀರ ಪ್ರದೇಶದಿಂದ ದಾಟಿ ಬರಲಿದೆ.ಇದರ ಜೊತೆಗೆ ಕೆಲ ಪ್ರದೇಶಗಳಲ್ಲಿ ಭೂಮಿ ಕೂಡ ಕಂಪಿಸಲಿದೆ. ಹೀಗಾಗಿ ಈ ಮೆಘಾಕ್ವೇಕ್ ಅಪ್ಪಳಿಸಿದರೆ, ಕಟ್ಟಡದಿಂದ ಹೊರಗೋಡಿ ಬಂದು ಬಯಲು ಪ್ರದೇಶದಲ್ಲಿ ನಿಂತರೂ ಅಪಾಯ ಹೆಚ್ಚು. ಕಾರಣ ಸಮುದ್ರ ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದೆ.
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪದ ನಂತರ ವಿಜ್ಞಾನಿಗಳ ಎಚ್ಚರಿಕೆ ಇದು!
ಎಲ್ಲಿ ಸಂಭವಿಸಲಿದೆ ಮೆಘಾಕ್ವೇಕ್?
ಮೆಘಾಕ್ವೇಕ್ ಕುರಿತು ಜಪಾನ್ ಸರ್ಕಾರ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ. ಈ ಮೆಘಾಕ್ವೇಕ್ ಜಪಾನ್ ಪೆಸಿಫಿಕ್ ತೀರ ಪ್ರದೇಶಗಳಲ್ಲಿ ಸಂಭವಿಸಲಿದೆ. ಇದರ ತೀವ್ರತೆ ಹತ್ತಿರದ ದೇಶಗಳಿಗೂ ತಟ್ಟಲಿದೆ. ಹೀಗಾಗಿ ಜಪಾನ್ ಈಗಾಗಲೇ ತೀರ ಪ್ರದೇಶದ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭಿಸಿದೆ. ಈ ಬಾರಿಯ ತೀವ್ರತೆ ಹೆಚ್ಚಿರುವ ಕಾರಣ ಅಪಾರ ನಷ್ಟ ಸಂಭವಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೆಘಾಕ್ವೇಕ್ ತೀವ್ರತೆ ರಿಕ್ಟರ್ ಮಾಪಕದ ಪ್ರಕಾರ 8 ರಿಂದ 9ರಷ್ಟಿರಲಿದೆ ಎಂದಿದೆ. ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದ್ಲಿ 7.1ರಷ್ಟು ದಾಖಲಾಗಿತ್ತು.
ಜಪಾನ್ ಆರ್ಥಿಕ ನಷ್ಟ
ಮೆಘಾಕ್ವೇಕ್ ಸಂಭವಿಸುವ ದಿನ ದೂರವಿಲ್ಲ ಎಂದು ವರದಿಯಲ್ಲಿ ಹೇಳಿದೆ. ಇದೇ ವರದಿ ಈ ಮೆಘಾಕ್ವೇಕ್‌ನಿಂದ ಜಪಾನ್ ಎದುರಿಸುವ ಆರ್ಥಿಕ ನಷ್ಟವನ್ನೂ ಅಂದಾಜು ಮಾಡಿದೆ. ಕೆಲವು ಗಂಟೆಗಳಲ್ಲಿ ಜಪಾನ್ ಬರೋಬ್ಬರಿ 1.81 ಟ್ರಿಲಿಯನ್ ಅಮೆರಿಕನ್ ಡಾಲರ್‍ನಷ್ಟು ನಷ್ಟ ಅನುಭವಿಸಲಿದೆ ಎಂದಿದೆ. ಇದು ಜಪಾನ್ ವಾರ್ಷಿಕ ಜಿಡಿಪಿಯ ಅರ್ಧದಷ್ಟು. ಜಪಾನ್ ಜನಸಂಖ್ಯೆ ಶೇಕಡಾ 10 ರಷ್ಟು ಮಂದಿಯನ್ನು ಸ್ಥಳಾಂತರ ಮಾಡಲು ಜಪಾನ್ ಮುಂದಾಗಿದೆ. ಈ ಮೂಲಕ ಸಾವು ನೋವಿನ ಪ್ರಮಾಣ ತಗ್ಗಿಸಲು ಜಪಾನ್ ಸರ್ಕಾರ ಮುಂದಾಗಿದೆ.
ಥಾಯ್ಲೆಂಡ್ ಮ್ಯಾನ್ಮಾರ್ ಭೂಕಂಪ ಹಲವು ಎಚ್ಚರಿಕೆ ನೀಡಿದೆ. ಇದರ ಪರಿಣಾಮ ನೆರೆಹೊರೆಯ ದೇಶಗಳಲ್ಲೂ ಆಗಿದೆ. ಆದರೆ ತೀವ್ರತೆ ಕಡಿಮೆಯಾದ ಕಾರಣ ಸಾವು ನೋವು ಸಂಭವಿಸಿಲ್ಲ. ಆದರೆ ಮೆಘಾಕ್ವೇಕ್ ಇಂಪಾಕ್ಟ್ ಪ್ರಬಲವಾಗಿರುತ್ತೆ ಎಂದು ಜಪಾನ್ ಹೇಳಿದೆ. ಜಪಾನ್ ಅತೀ ಹೆಚ್ಚು ಭೂಕಂಪಕ್ಕೆ ತುತ್ತಾಗುವ ದೇಶವಾಗಿದೆ. ಅದರಲ್ಲೂ ಪ್ರಮುಖವಾಗಿ ಸುನಾಮಿ. ಈಗಾಗಲೇ ಜಪಾನ್ ಕಂಡು ಕೇಳರಿಯದ ಸುನಾಮಿಗೆ ತುತ್ತಾಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಮೆಘಾಕ್ವೇಕ್ ಆತಂಕ ಎದುರಾಗಿದೆ.
ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಟ್ಟಡ ಅವಶಷೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣಗೆಳು ಸಾಗಿದೆ. ಈ ಭೂಕಂಪದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಆತಂಕ ಹೆಚ್ಚಾಗುತ್ತಿರು ಬೆನ್ನಲ್ಲೇ ಇದೀಗ ಮೆಘಾಕ್ವೇಕ್ ಆತಂಕ ಶುರುವಾಗಿದೆ.
ಭೂಕಂಪ ಪೀಡಿತ ಬ್ಯಾಂಕಾಕ್‌ನಲ್ಲಿ ಬೀದಿಗಳೇ ಆಸ್ಪತ್ರೆ ರಸ್ತೆಯಲ್ಲೇ ಹೆರಿಗೆ, ಮನಕಲುಕುವ ವಿಡಿಯೋ