ಸಾಂಪ್ರದಾಯಿಕ ಉಡುಗೆಯಲ್ಲಿ ಕಾಂತಾರ ಚೆಲುವೆ... ಆಬ್ಸ್ ನೋಡಿ ವಾರೆ ವಾವ್ ಎಂದ ಫ್ಯಾನ್ಸ್
ಕಾಂತಾರ ಸಿನಿಮಾ ಚೆಲುವೆ ಸಪ್ತಮಿ ಗೌಡ ಲಂಗ ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದು, ಫ್ಯಾನ್ಸ್ ನಟಿಯ ಆಬ್ಸ್ ನೋಡಿ ವಾರೆ ವಾವ್ ಎನ್ನುತ್ತಿದ್ದಾರೆ.
ಕಾಂತಾರ ಸಿನಿಮಾ ಚೆಲುವೆ ಸಪ್ತಮಿ ಗೌಡ ಲಂಗ ಬ್ಲೌಸ್ ಧರಿಸಿ ಪೋಸ್ ಕೊಟ್ಟಿದ್ದು, ಫ್ಯಾನ್ಸ್ ನಟಿಯ ಆಬ್ಸ್ ನೋಡಿ ವಾರೆ ವಾವ್ ಎನ್ನುತ್ತಿದ್ದಾರೆ.
ಕಾಂತಾರಾ ಸಿನಿಮಾದಲ್ಲಿ (Kantara Cinema) ತಮ್ಮ ಅಭಿನಯದ ಮೂಲಕ ಮೋಡಿ ಮಾಡಿದ ಚೆಲುವೆ ಸಪ್ತಮಿ ಗೌಡ ನಟನೆಯ ಜೊತೆಗೆ ಅಂದಕ್ಕೂ ಸಾವಿರಾರು ಜನರು ಅಭಿಮಾನಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಸಪ್ತಮಿ, ಹೆಚ್ಚಾಗಿ ತಮ್ಮ ಫೋಟೊ ಶೂಟ್ (photoshoot) ಮೂಲಕ ಸದ್ದು ಮಾಡುತ್ತಿರುತ್ತಾರೆ.
ಮಾಡರ್ನ್ ಡ್ರೆಸ್ ಧರಿಸಿರಲಿ ಅಥವಾ ಸಾಂಪ್ರಾದಾಯಿಕ ಉಡುಗೆಯೇ ಧರಿಸಿರಲಿ ಯಾವುದೇ ಉಡುಗೆಯಲ್ಲೂ ಈ ನೀಳ ಸುಂದರಿ ಸಖತ್ ಬ್ಯೂಟಿ.
ಇದೀಗ ಯುಗಾದಿ ಹಬ್ಬದ ಸಂಭ್ರಮದಂದು ಸಪ್ತಮಿ ಗೌಡ (Sapthami Gowda) ಫೋಟೊ ಶೂಟ್ ಮಾಡಿಸಿದ್ದು,ಲಂಗ ಬ್ಲೌಸ್ ಧರಿಸಿ, ಸಪ್ತಮಿ ಮುದ್ದಾಗಿ ಕಾಣಿಸುತ್ತಿದ್ದಾರೆ.
ಹಸಿರು ಬಾರ್ಡರ್ ಇರುವಂತಹ ತಿಳಿ ಗುಲಾಬಿ ಬಣ್ಣದ ಲಂಗ ಹಾಗೂ ಹಸಿರು ಬಣ್ಣದ ಬ್ಲೌಸ್ ಧರಿಸಿ, ವಿವಿಧ ಪೋಸ್ ಕೊಟ್ಟಿದ್ದಾರೆ ಬ್ಯೂಟಿ.
ಮೂಗುತಿ ಸುಂದರಿ ಸಪ್ತಮಿ ಗೌಡ, ವಿವಿಧ ಪೋಸ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ದಂತದ ಗೊಂಬೆ ಎಂದು ಹೊಗಳುತ್ತಿದ್ದಾರೆ.
ಅಷ್ಟೇ ಅಲ್ಲಾ ಎಲ್ಲಾ ಫೋಟೊಗಳಲ್ಲೂ ನಟಿಯ ಆಬ್ಸ್ ನೋಡಿ ಜನರು ವಾರೇ ವಾಹ್ ಎನ್ನುತ್ತಿದ್ದಾರೆ. ನಟಿಯ ಫಿಟ್ನೆಸ್ ಗೆ (fitness) ಫಿದಾ ಆಗಿದ್ದಾರೆ.
ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ಸಪ್ತಮಿ ಗೌಡ ನೀನಾಸಂ ಸತೀಶ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೆ ನಟಿಯ ಪಾತ್ರದ ಕುರಿತ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಹೌದು, ದ ರೈಸ್ ಆಫ್ ಅಶೋಕ (The Rise of the Ashoka) ಸಿನಿಮಾ ನಾಲ್ಕು ಭಾಷೆಯಲ್ಲಿ ರಿಲೀಸ್ ಆಗಲಿದ್ದು, ಸಿನಿಮಾದಲ್ಲಿ ಸಪ್ತಮಿ ಗೌಡ ಗ್ರಾಮೀಣಿ ಹುಡುಗಿ ಅಂಬಿಕಾ ಪಾತ್ರದಲ್ಲಿ ನಟಿಸಲಿದ್ದಾರೆ.
ಅಂತಾರಾಷ್ಟ್ರೀಯ ಈಜುಪಟುವಾಗಿರುವ (swimmer) ಸಪ್ತಮಿ ಗೌಡ, ನಟಿಸಿದ್ದು, ಕೇವಲ 4 ಸಿನಿಮಾಗಳಲ್ಲಿ, ಕಾಂತಾರಾ ಸಿನಿಮಾ ಸಪ್ತಮಿಗೆ ಜನಪ್ರಿಯತೆ ತಂದು ಕೊಟ್ಟಿತು.
ಯುವ ಸಿನಿಮಾ ಮೂಲಕ ಯುವಕರ ಹೃದಯ ಗೆದ್ದ ಬೆಡಗಿ, ಯುವ ರಾಜ್ ಕುಮಾರ್ (Yuvarajkumar) ಜೊತೆಗೆ ಕಾಂಟ್ರಾವರ್ಸಿಗೂ ಒಳಗಾಗಿದ್ದರು. ಸದ್ಯ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ನಟಿ.