ಅಮೆರಿಕದಲ್ಲಿ ಉದ್ಯೋಗ ಸಿಗದೆ ಸಾಲದ ಸುಳಿಯಲ್ಲಿ ಸಿಲುಕಿದ ಯುವಕನ ಕಥೆ ಇದು. 40 ಲಕ್ಷ ಸಾಲ ಮಾಡಿ ಅಮೆರಿಕದಲ್ಲಿ ಮಾಸ್ಟರ್ಸ್ ಮಾಡಿದರೂ, ಉದ್ಯೋಗವಿಲ್ಲದೆ ಊರಿಗೆ ಮರಳುವಂತಾಗಿದೆ.
ವಿದ್ಯಾರ್ಥಿಗಳಿಗೆ ಯುರೋಪ್, ಯುಎಸ್ ಮತ್ತು ಕೆನಡಾ ಸ್ವರ್ಗದಂತೆ ಎನ್ನುವ ಕಾಲ ಹೋಯ್ತು. ರೆಡ್ಡಿಟ್‌ನಲ್ಲಿ ಯುವಕನೊಬ್ಬ ತನ್ನ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಅದು ತಕ್ಷಣವೇ ವೈರಲ್ ಆಗಿದೆ. ಆತ 40 ಲಕ್ಷ ರೂಪಾಯಿ ಸಾಲ ಮಾಡಿ ಅಮೆರಿಕದಲ್ಲಿ ಮಾಸ್ಟರ್ಸ್ ಮಾಡಲು ಹೋಗಿದ್ದನು. ಆದರೆ, ಎಲ್ಲವೂ ತಲೆಕೆಳಗಾಯಿತು. ಓದಿನ ನಂತರ ಯಾವುದೇ ಉದ್ಯೋಗ ಸಿಗಲಿಲ್ಲ. ಊರಿನಲ್ಲಿ ಸಾಲ ಹೆಚ್ಚಾಯಿತು. ಕೊನೆಗೆ ಬೇಸತ್ತು ಊರಿಗೆ ಮರಳಬೇಕಾಯಿತು ಎಂದು ಯುವಕ ಬರೆದಿದ್ದಾನೆ.
ವಿದೇಶದಲ್ಲಿ ಕೆಲಸದ ಕೊಡಿಸುವ ಆಮಿಷವೊಡ್ಡಿ ಬಲತ್ಕಾರ: ಪಾದ್ರಿಗೆ ಜೀವಾವಧಿ ಶಿಕ್ಷೆ
ಇಂಡಿಯಾ ಎಂಬ ಹೆಸರಿನಲ್ಲಿ ಅನಾಮಧೇಯನಾಗಿ ಯುವಕನೊಬ್ಬ ತನ್ನ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ಈ ಸ್ಥಿತಿಯಲ್ಲಿ ನಾನೇ ಬರೆಯುತ್ತೇನೆಂದು ಎಂದಿಗೂ ಅಂದುಕೊಂಡಿರಲಿಲ್ಲ, ಆದರೆ ಇಂದು ಯಾರಾದರೂ ನನಗೆ ಪರಿಹಾರ ಸೂಚಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಯುವಕ ಪೋಸ್ಟ್ ಪ್ರಾರಂಭಿಸುತ್ತಾನೆ. ಯುಎಸ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆಯಲು ಎಚ್‌ಡಿಎಫ್‌ಸಿಯಿಂದ 40 ಲಕ್ಷ ರೂಪಾಯಿ ಸಾಲ ತೆಗೆದುಕೊಂಡೆ. ನನ್ನ ತಂದೆಗೆ ಒಂದು ಸಣ್ಣ ವ್ಯಾಪಾರವಿತ್ತು. ಆದರೂ ನನ್ನ ಕುಟುಂಬ ನನ್ನ ಕನಸುಗಳನ್ನು ಬೆಂಬಲಿಸಲು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡಿತು.
I took an education loan of ₹40L to study in the US — now I’m back in India, drowning in debt, and don’t know what to do
byu/theTechPhilosopher inindia
ಯುಎಸ್‌ನಿಂದ ಪದವಿ ಮುಗಿಸಿದೆ. ಆದರೆ, ಆರ್ಥಿಕ ಸಮಸ್ಯೆಗಳು ಮತ್ತು ವೀಸಾ ಸಮಸ್ಯೆಗಳು ಹೆಚ್ಚಾದವು. ಇದರಿಂದಾಗಿ ಇಂಟರ್ನ್‌ಶಿಪ್‌ಗೆ ಸೇರುವ ಆಸೆಯನ್ನು ಕೈ ಬಿಡಬೇಕಾಯಿತು. ಅದರಲ್ಲೂ ಭಾರತೀಯರಿಗೆ ಕಷ್ಟವಾಗಿತ್ತು. ಒಂದು ವರ್ಷ ನಿರಂತರವಾಗಿ ವಿವಿಧ ಕಂಪನಿಗಳಿಗೆ ಅರ್ಜಿ ಸಲ್ಲಿಸುತ್ತಲೇ ಇದ್ದೆ. ಆದರೆ, ಕೆಲಸ ಮಾತ್ರ ಸಿಗಲಿಲ್ಲ. ಈ ಸಮಯದಲ್ಲಿ ನನ್ನ ಕುಟುಂಬದವರು ಅವರ ಕೊನೆಯ ಉಳಿತಾಯದಿಂದ ನನಗೆ ಯುಎಸ್‌ನಲ್ಲಿ ಬದುಕಲು ಹಣ ಕಳುಹಿಸಿದರು ಎಂದು ಯುವಕ ಬರೆದಿದ್ದಾನೆ.
ಈ ಗ್ರಾಮದಲ್ಲಿ ಕೆಲಸ ಮಾಡುವ ಡಾಕ್ಟರಿಗೆ ಸಿಗುತ್ತೆ 3 ಕೋಟಿ ಸಂಬಳ !
ಈ ಮಧ್ಯೆ ತಂದೆಯ ವ್ಯಾಪಾರ ಕುಸಿಯಿತು. ಅವರು ಅನಾರೋಗ್ಯಕ್ಕೆ ಒಳಗಾದರು. ಅವರು ನನಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಕೆಲಸವಿಲ್ಲದೆ, ಕನಸು ಮುರಿದು ಹೋಗಿ ನಾನು ಭಾರತಕ್ಕೆ ಹಿಂತಿರುಗಬೇಕಾಯಿತು. ಜೊತೆಗೆ ದೊಡ್ಡ ಸಾಲ ನನ್ನ ತಲೆಯ ಮೇಲಿತ್ತು. ತಿಂಗಳುಗಟ್ಟಲೆ ಅಲೆದಾಡಿ ಕೊನೆಗೆ 75,000 ರೂಪಾಯಿ ಸಂಬಳದ ಕೆಲಸ ಸಿಕ್ಕಿತು. ಆದರೆ, ಇಎಂಐ ಮಾತ್ರ 66,000 ರೂಪಾಯಿ ಕಟ್ಟಬೇಕು. ಉಳಿದ 9,000 ರೂಪಾಯಿಗಳಲ್ಲಿ ನನ್ನ ಮತ್ತು ಕುಟುಂಬದ ಖರ್ಚು ನೋಡಿಕೊಳ್ಳಬೇಕು ಎಂದು ಸೇರಿಸಿಕೊಂಡರು. ಜತೆಗೆ ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ನಾನು ಕೆಲವು ಫ್ರೀಲಾನ್ಸ್ ಮತ್ತು ಪಾರ್ಟ್ ಟೈಮ್ ಕೆಲಸಗಳನ್ನು ಹುಡುಕುತ್ತಿದ್ದೇನೆ. ನಾವು ಮಧ್ಯಮ ವರ್ಗದ ಕುಟುಂಬ. ಈ ಸಾಲ ತೀರಿಸಲು ಇಡೀ ಜೀವನ ಕಷ್ಟಪಡಬೇಕಾಗುತ್ತದೆ ಎಂದು ಯುವಕ ಬೇಸರದಿಂದ ಹೇಳಿಕೊಂಡಿದ್ದಾನೆ.
ನಾನು ಐಟಿಯಲ್ಲಿ ಎಂಎಸ್ಸಿ ಮುಗಿಸಿದ್ದೇನೆ, ಯಾರಾದರೂ ಸಂದರ್ಶನಕ್ಕೆ ಕರೆಯಿರಿ, ಇಲ್ಲದಿದ್ದರೆ ನಾನು ಮುಂದೆ ಏನು ಮಾಡಬೇಕು ಎಂದು ಕೇಳಿದ್ದಾನೆ. ಯುವಕನ ಪೋಸ್ಟ್ ವೈರಲ್ ಆದ ನಂತರ ಅನೇಕ ಜನರು ಸಮಾಧಾನ ಹೇಳಲು ಬಂದರು. ಕೆಲವರು ಫ್ರೀಲಾನ್ಸ್ ಮತ್ತು ಪಾರ್ಟ್ ಟೈಮ್ ಕೆಲಸಗಳನ್ನು ಮುಂದುವರಿಸಲು ಸಲಹೆ ನೀಡಿದರು. ಇನ್ನೂ ಕೆಲವರು ಪ್ರತಿ ಆರು ಅಥವಾ ಎಂಟು ತಿಂಗಳಿಗೊಮ್ಮೆ ಇತರ ಕಂಪನಿಗಳಿಗೆ ಅರ್ಜಿ ಸಲ್ಲಿಸಲು ಮತ್ತು ನಿರಾಶೆಗೊಳ್ಳಬೇಡಿ ಎಂದು ಸಲಹೆ ನೀಡಿದರು.