Published : Nov 28, 2025, 07:54 AM ISTUpdated : Nov 28, 2025, 11:41 PM IST

India News Live: ನಾನು SIR ಫಾರ್ಮ್ ಭರ್ತಿ ಮಾಡಲ್ಲ - ಸಿರಾತು ಕಮ್ಯುನಿಸ್ಟ್ ಶಾಸಕಿ ಪಲ್ಲವಿ ಪಟೇಲ್ ಗಂಭೀರ ವಿರೋಧ!

ಸಾರಾಂಶ

ನವದೆಹಲಿ (ನ.28): ಪ್ರಧಾನಿ ಆದ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಕೃಷ್ಣನ ಊರು ಕರ್ನಾಟಕ ಕರಾವಳಿಯ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಇದಕ್ಕೂ ಮುನ್ನ 10 ಕಿಲೋಮೀಟರ್‌ವರೆಗೆ ಅವರು ರೋಡ್‌ ಶೋ ಕೂಡ ಮಾಡಲಿದ್ದಾರೆ. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡು ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:41 PM (IST) Nov 28

ನಾನು SIR ಫಾರ್ಮ್ ಭರ್ತಿ ಮಾಡಲ್ಲ - ಸಿರಾತು ಕಮ್ಯುನಿಸ್ಟ್ ಶಾಸಕಿ ಪಲ್ಲವಿ ಪಟೇಲ್ ಗಂಭೀರ ವಿರೋಧ!

ಅಪ್ನಾ ದಳ (ಕಮ್ಯುನಿಸ್ಟ್) ರಾಷ್ಟ್ರೀಯ ಅಧ್ಯಕ್ಷೆ ಪಲ್ಲವಿ ಪಟೇಲ್, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ತಮ್ಮ ಬಳಿ ಎಲ್ಲಾ ದಾಖಲೆಗಳಿವೆ SIR ಫಾರ್ಮ್ ಅನ್ನು ಏಕೆ ಭರ್ತಿ ಮಾಡಬೇಕು ಎಂದು ಪ್ರಶ್ನಿಸಿದರು.

Read Full Story

11:06 PM (IST) Nov 28

ಜಾಗತಿಕ ಚಿನ್ನದ ಬೆಲೆಗಳ ಮೇಲೆ ಹಿಡಿತ Price Maker ಆಗುವತ್ತ ಭಾರತ, ತಜ್ಞರು ಹೇಳಿದ್ದೇನು?

ಮುಂದಿನ ದಶಕದಲ್ಲಿ, ದೇಶೀಯ ಗಣಿಗಾರಿಕೆ ಮೂಲಕ ಭಾರತವು ತನ್ನ ಚಿನ್ನದ ಬೇಡಿಕೆಯ ಶೇ. 20 ರಷ್ಟನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಈ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು 'ಬೆಲೆ ಸ್ವೀಕರಿಸುವ' ರಾಷ್ಟ್ರದಿಂದ 'ಬೆಲೆ ತಯಾರಕ' ರಾಷ್ಟ್ರವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Read Full Story

09:50 PM (IST) Nov 28

ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ‍್ಯಾಪಿಡೋ ಚಾಲಕನ ₹331 ಕೋಟಿ

ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ‍್ಯಾಪಿಡೋ ಚಾಲಕನ ₹331 ಕೋಟಿ, ರ‍್ಯಾಪಿಡೋ ಚಾಲಕನಾಗಿ ಕೆಲಸ ಬಿಟ್ಟು ಈತನಿಗೆ ಬೇರೇನೂ ಕೆಲಸವಿಲ್ಲ. ಆದರೆ ಕೋಟಿ ಕೋಟಿ ರೂಪಾಯಿ ವಹಿವಾಟು ಮೂಲ ಹಲವು ಅಚ್ಚರಿಗೆ ಕಾರಣವಾಗಿದೆ.

 

Read Full Story

07:04 PM (IST) Nov 28

ಗಂಗಾ ತಟದಲ್ಲಿ ಬೆಚ್ಚಿ ಬೀಳಿಸಿದ ಅಂತ್ಯಸಂಸ್ಕಾರ, ಚಿತೆಯಲ್ಲಿ ಶವ ನಾಪತ್ತೆ, ಪ್ರತ್ಯಕ್ಷಗೊಂಡಿದ್ದು ಯಾರು?

ಗಂಗಾ ತಟದಲ್ಲಿ ಬೆಚ್ಚಿ ಬೀಳಿಸಿದ ಅಂತ್ಯಸಂಸ್ಕಾರ,ಚಿತೆಯಲ್ಲಿ ಶವ ನಾಪತ್ತೆ, ಪ್ರತ್ಯಕ್ಷಗೊಂಡಿದ್ದು ಯಾರು?, ಕಟ್ಟಿಗೆ ಸರಿಸಿದಾಗ ಈ ಅಚ್ಚರಿ ಬೆಳಕಿಗೆ ಬಂದಿದೆ. ಇದೀಗ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಇಬ್ಬರ ಮಾತು ಕೇಳಿ ಸ್ಥಳೀಯರ ಅಚ್ಚರಿಗೊಂಡಿದ್ದಾರೆ.

Read Full Story

06:44 PM (IST) Nov 28

ದೇವ್ರೇ ಅಮ್ಮ ಈ ವಿಡಿಯೋ ನೋಡದಿರಲಪ್ಪ ಎಂದು ಚಪ್ಪಲಿ ತೋರಿಸಿದ ನಮ್ರತಾ ಗೌಡ - ಅಂಥ ಗುಟ್ಟೇನಿದೆ ನೋಡಿ!

'ಕರ್ಣ' ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಅವರು ತಮ್ಮ ಹೊಸ ಚಪ್ಪಲಿಯ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ಫಂಕ್ಷನ್‌ಗಾಗಿ  ದುಬಾರಿ ಚಪ್ಪಲಿ ಖರೀದಿಸಿದ್ದು, ಈ ವಿಷಯ ಅಮ್ಮನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.  ಎಷ್ಟು ಇದರ ಬೆಲೆ ನೋಡಿ! 

Read Full Story

06:37 PM (IST) Nov 28

5 ಕೋಟಿ ಕೊಡಿ ಇಲ್ಲ ಚಿನ್ನ ಹಾಕೋದು ನಿಲ್ಸಿ - ಕೇಜಿಗಟ್ಟಲೇ ಚಿನ್ನ ಹಾಕಿ ಓಡಾಡ್ತಿದ್ದ ಗೋಲ್ಡ್‌ಮ್ಯಾನ್‌ಗೆ ಬೆದರಿಕೆ

ಮೈ ತುಂಬಾ ಕೇಜಿಗಟ್ಟಲೇ ಚಿನ್ನದ ಆಭರಣ ಧರಿಸಿಕೊಂಡು ರಾಜಾರೊಷವಾಗಿ ಸಾರ್ವಜನಿಕವಾಗಿ ಓಡಾಡುತ್ತಾ ಚಿತೋರ್‌ಗಢದ ಚಿನ್ನದ ವ್ಯಕ್ತಿ ಅಥವಾ ಗೋಲ್ಡ್ ಮ್ಯಾನ್ ಎಂದೇ ಫೇಮಸ್ ಆಗಿದ್ದ ಕನ್ಹಯ್ಯಾಲಾಲ್ ಖಾಟಿಕ್ ಅವರಿಗೆ ಚಿನ್ನ ಧರಿಸದಂತೆ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

Read Full Story

06:05 PM (IST) Nov 28

ಹಾಸಿಗೆ ಒಳಹೊಕ್ಕರೆ Bigg Boss ಕ್ಯಾಮೆರಾ ಕಣ್ಣು ಸುಮ್ನೆ ಬಿಡತ್ತಾ? ಸಿಕ್ಕಿಬಿದ್ದ ರಕ್ಷಿತಾ ಶೆಟ್ಟಿ

ಬಿಗ್​ಬಾಸ್​ ಕನ್ನಡ 12ರ ಜನಪ್ರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ಮನೆಯಲ್ಲಿರುವ 75ಕ್ಕೂ ಅಧಿಕ ಕ್ಯಾಮೆರಾಗಳ ಕಣ್ಣು ತಪ್ಪಿಸಲು ಪ್ರಯತ್ನಿಸಿದ್ದಾರೆ. ಮಾಜಿ ಸ್ಪರ್ಧಿ ಮೋಕ್ಷಿತಾ ಪೈ ಜೊತೆ ಸೇರಿ ಹಾಸಿಗೆಯ ಕೆಳಗೆ ಅವಿತುಕೊಳ್ಳುವ ಪ್ಲ್ಯಾನ್ ಮಾಡಿದ್ದು, ಆದರೆ ಅವರ ಈ ಪ್ರಯತ್ನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read Full Story

05:53 PM (IST) Nov 28

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆ ಹೇಳಿಕೆಗೆ ಸಿಟ್ಟಾದ ಬಿಸಿಸಿಐ! ಅಷ್ಟಕ್ಕೂ ಗೌತಿ ಏನಂದ್ರು?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ, ಪಿಚ್ ಕುರಿತು ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆಯಿಂದ ಬಿಸಿಸಿಐ ಅಸಮಾಧಾನಗೊಂಡಿದೆ. ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನ ಮುಂದುವರೆದರೆ ಗಂಭೀರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ.

Read Full Story

05:48 PM (IST) Nov 28

Video ಉದಯನಿಧಿ ಸ್ಟಾಲಿನ್ ಬರ್ತ್‌ಡೆ ಪಾರ್ಟಿಯಲ್ಲಿ ಅಶ್ಲೀಲ ನೃತ್ಯಕ್ಕೆ ಸಚಿವರ ಚಪ್ಪಾಳೆ, ಭಾರಿ ವಿವಾದ

Video ಉದಯನಿಧಿ ಸ್ಟಾಲಿನ್ ಬರ್ತ್‌ಡೆ ಪಾರ್ಟಿಯಲ್ಲಿ ಅಶ್ಲೀಲ ನೃತ್ಯಕ್ಕೆ ಸಚಿವರ ಚಪ್ಪಾಳೆ, ಭಾರಿ ವಿವಾದ, ಜನಪ್ರತಿನಿಧಿನಿ ಈ ರೀತಿಯ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಡ್ಯಾನ್ಸ್ ಹಾಗೂ ಸಚಿವರು ಆಸ್ವಾದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Read Full Story

05:21 PM (IST) Nov 28

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ ನೋಡಿ!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

Read Full Story

04:45 PM (IST) Nov 28

ಯುವತಿ ಗರ್ಭಿಣಿ ಮಾಡಿ ಗರ್ಭಪಾತಕ್ಕೆ ಮಾತ್ರೆ ಕೊಟ್ಟ ಕಾಂಗ್ರೆಸ್ ಶಾಸಕ, ಕೇಸ್ ಬೆನ್ನಲ್ಲೇ ನಾಪತ್ತೆ

ಯುವತಿ ಗರ್ಭಿಣಿ ಮಾಡಿ ಗರ್ಭಪಾತಕ್ಕೆ ಮಾತ್ರೆ ಕೊಟ್ಟ ಕಾಂಗ್ರೆಸ್ ಶಾಸಕ, ಕೇಸ್ ಬೆನ್ನಲ್ಲೇ ನಾಪತ್ತೆ, ಯುವತಿ ಮುಖ್ಯಮಂತ್ರಿಗೂ ದೂರು ನೀಡಿದ್ದಾರೆ. ಇತ್ತ ಆಡಿಯೋ ಕೂಡ ಬಹಿರಂಗಪಡಿಸಿದ್ದಾರೆ. ತೀವ್ರ ಕೋಲಾಹಲ ಸೃಷ್ಟಿಸಿರುವ ಈ ಪ್ರಕರಣ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ನೀಡಿದೆ.

Read Full Story

04:31 PM (IST) Nov 28

ಚೇರ್ ಮುರಿದು ಹಾಕಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು - ಕೋಪದಿಂದ ಹೊರಟು ಹೋದ ಬಿಗ್ಬಾಸ್ ಸ್ಪರ್ಧಿ

ಬಿಗ್‌ಬಾಸ್ ಸ್ಪರ್ಧಿ ಹಾಗೂ ಯೂಟ್ಯೂಬರ್ ಮೃದುಲ್ ತಿವಾರಿ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಕುರ್ಚಿಗಳನ್ನು ಮುರಿದಿದ್ದರಿಂದ ಮೃದುಲ್ ಕೇವಲ 12 ನಿಮಿಷಗಳಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

Read Full Story

04:04 PM (IST) Nov 28

ನಾಯಿ ಸಾಲ ತೀರಿಸಬೇಕಿದೆ, Bigg Boss ನೋಡ್ತಿಲ್ಲ ಎಂದ ​ಮಾಜಿ ಸ್ಪರ್ಧಿ ವಿನಯ್ ಗೌಡ! ನೆಟ್ಟಿಗರು ಏನಂದ್ರು ನೋಡಿ

ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೀಕ್ಷಣೆ ಕುರಿತ ಪ್ರಶ್ನೆಗೆ, '200 ಕೋಟಿ ನಾಯಿ ಸಾಲ ತೀರಿಸಬೇಕು' ಎಂದು ವ್ಯಂಗ್ಯವಾಗಿ ಉತ್ತರಿಸಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  

Read Full Story

03:55 PM (IST) Nov 28

ನವ ಜೋಡಿಗೆ ಶುಭ ಹಾರೈಸುತ್ತಿದ್ದಂತೆ ಕುಸಿದ ವೇದಿಕೆ, ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ

ನವ ಜೋಡಿಗೆ ಶುಭ ಹಾರೈಸುತ್ತಿದ್ದಂತೆ ಕುಸಿದ ವೇದಿಕೆ, ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ, ಘಟನೆಯಲ್ಲಿ ಹಲವು ಬಿಜೆಪಿಯ ನಾಯಕರು ಮಾತ್ರವಲ್ಲ, ವಧು ವರರು ಗಾಯಗೊಂಡ ಘಟನೆ ನಡೆದಿದೆ. ಈ ವಿಡಿಯೋ ಹರಿದಾಡುತ್ತಿದೆ.

Read Full Story

03:34 PM (IST) Nov 28

ರಾತ್ರೋರಾತ್ರಿ ಮದರ್​ ಮೇರಿಯಾದ ಕಾಳಿ ಮಾತೆ! ಮಧ್ಯರಾತ್ರಿ ಅರ್ಚಕನಿಗೆ ಆಗಿದ್ದೇನು, ಅಲ್ಲಿ ನಡೆದಿದ್ದೇನು?

ಮುಂಬೈನ ಚೆಂಬೂರ್ ದೇವಾಲಯದಲ್ಲಿ ಕಾಳಿ ಮಾತೆಯ ವಿಗ್ರಹವನ್ನು ಕ್ರಿಶ್ಚಿಯನ್ ಮಾತೆ ಮೇರಿಯಂತೆ ಅಲಂಕರಿಸಿದ ಘಟನೆ ನಡೆದಿದೆ. ಕನಸಿನಲ್ಲಿ ದೇವಿಯೇ ಹೀಗೆ ಮಾಡಲು ಹೇಳಿದ್ದಾಳೆಂದು ಅರ್ಚಕ ಹೇಳಿಕೊಂಡಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Read Full Story

03:27 PM (IST) Nov 28

ಸೆಲೆಬ್ರೇಷನ್ ನೆಪದಲ್ಲಿ ಬರ್ತ್‌ಡೇ ದಿನವೇ ಬೆಂಕಿ ಹಚ್ಚಿದ ಸ್ನೇಹಿತರು - 21ರ ಯುವಕನ ಸ್ಥಿತಿ ಗಂಭೀರ

21 ವರ್ಷದ ಯುವಕನ ಹುಟ್ಟುಹಬ್ಬದ ಆಚರಣೆಯು ದುರಂತದಲ್ಲಿ ಅಂತ್ಯಗೊಂಡಿದೆ. ತಮಾಷೆಯ ನೆಪದಲ್ಲಿ ಸ್ನೇಹಿತರೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

02:42 PM (IST) Nov 28

ಸ್ಮೃತಿ ಮಂಧನಾ-ಪಲಾಶ್‌ ಮದುವೆ ಯಾವಾಗ? ಹುಡುಗನ ತಾಯಿ ನೀಡಿದ್ರು ಬಿಗ್‌ ಅಪ್‌ಡೇಟ್‌

ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಾಲ್‌ ಅವರ ವಿವಾಹವು ಸ್ಮೃತಿ ತಂದೆಯ ಅನಾರೋಗ್ಯದಿಂದಾಗಿ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ಈ ಕುರಿತು ಹಬ್ಬಿದ ವದಂತಿಗಳಿಗೆ ಪಲಾಶ್ ಅವರ ತಾಯಿ ಸ್ಪಷ್ಟನೆ ನೀಡಿದ್ದು, ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ದೃಢಪಡಿಸಿದ್ದಾರೆ.
Read Full Story

02:35 PM (IST) Nov 28

ಮದುವೆ ಹಿಂದಿನ ರೆಡ್‌ ಹ್ಯಾಂಡ್ ಆಗಿ ಸೀಝ್ ಆದ್ರಾ ಪಲಾಶ್ ಮುಚ್ಚಲ್! ಮದುವೆ ಸ್ಥಗಿತಗೊಳಿಸಲು ಇದೇ ನಿಜವಾದ ಕಾರಣ?

ನವದೆಹಲಿ: ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಅವರ ಮದುವೆ ದಿಢೀರ್ ಸ್ಥಗಿತವಾಗಿಲೂ, ಪಲಾಶ್ ಮುಚ್ಚಲ್ ಮಾಡಿದ ಮೋಸವೇ ಕಾರಣ ಎನ್ನಲಾಗುತ್ತಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ

 

Read Full Story

02:22 PM (IST) Nov 28

ಐಶ್ವರ್ಯ ರೈ ಇನ್ನು ಆಯೇಷಾ! ಮತಾಂತರಕ್ಕೆ ಸಿದ್ಧನಾಗಿ ಮದ್ವೆಗೆ ರೆಡಿಯಾದ ಈ ಮಫ್ತಿ - ಏನ್​ ಹೇಳ್ದ ಕೇಳಿ

ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳ ನಡುವೆ, ಪಾಕಿಸ್ತಾನಿ ಮಫ್ತಿಯೊಬ್ಬರು ಒಂದು ವೇಳೆ ಡಿವೋರ್ಸ್ ಆದರೆ, ಐಶ್ವರ್ಯಾ ಅವರನ್ನು ಮತಾಂತರಿಸಿ ಮದುವೆಯಾಗುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

Read Full Story

01:26 PM (IST) Nov 28

ಟೀಂ ಇಂಡಿಯಾ ಅಭಿಮಾನಿಗಳ ಬಳಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ ರಿಷಭ್ ಪಂತ್!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿದೆ. ಹಂಗಾಮಿ ನಾಯಕ ರಿಷಭ್ ಪಂತ್, ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತು ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
Read Full Story

01:15 PM (IST) Nov 28

ಪ್ರಧಾನಿ ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಂಡು ಕೃಷ್ಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಮೋದಿಯವರಿಗೆ 'ಭಾರತ ಭಾಗ್ಯವಿದಾತ' ಎಂಬ ಬಿರುದು ನೀಡಿ ಸನ್ಮಾನಿಸಿದರು.

Read Full Story

01:09 PM (IST) Nov 28

ಬ್ರಹ್ಮೋಸ್‌ ವಿಜ್ಞಾನಿ ಸೇರಿ ಒಂದೇ ತಿಂಗಳ ಅಂತರದಲ್ಲಿಒಂದೇ ರೀತಿ 2 ವಿಜ್ಞಾನಿಗಳ ಹಠಾತ್ ಸಾವು - ವೈದ್ಯರ ಅನುಮಾನ

DRDO scientists mysterious death: ಒಂದು ವಾರದ ಅಂತರದಲ್ಲಿ ಇಬ್ಬರು ಡಿಆರ್‌ಡಿಒ ವಿಜ್ಞಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಬ್ಬರೂ ಮದುವೆಯಾದ ಕೆಲವೇ ದಿನಗಳಲ್ಲಿ ಹಠಾತ್ತನೆ ಅಸ್ವಸ್ಥರಾಗಿ ನಿಧನರಾಗಿದ್ದು, ವೈದ್ಯರು ಹೃದಯಾಘಾತದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 

Read Full Story

01:05 PM (IST) Nov 28

ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ

ಒಂದು ಕಾಲದಲ್ಲಿ ವಿಧವೆಯರ ಆಹಾರವಾಗಿದ್ದ ಉಪ್ಪಿಟ್ಟು, ಇಂದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದೆ. ಉಪ್ಪು ಮತ್ತು ರವೆಯಿಂದ ತಯಾರಾಗುತ್ತಿದ್ದ ಈ ಸರಳ ಆಹಾರ, ಲಕ್ಷಮ್ಮ ಪಾಟಿ ಎಂಬ ಮಹಿಳೆಯಿಂದಾಗಿ ರುಚಿಕರ ತಿಂಡಿಯಾಗಿ ಬದಲಾಗಿ, ಉಪ್ಮಾ, ಖಾರಾ ಭಾತ್ ಎಂದು ಪ್ರಸಿದ್ಧಿಯಾಯಿತು.
Read Full Story

12:51 PM (IST) Nov 28

Bigg Boss ಅಶ್ವಿನಿ ಗೌಡ ಕೈಯಲ್ಲಿ ಕಾಲು ಒತ್ತಿಸಿಕೊಂಡ ಮೋಕ್ಷಿತಾ ಪೈ - ಜಾಲತಾಣದಲ್ಲಿ ಭಾರಿ ಆಕ್ರೋಶ

ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದು, ಈ ವೇಳೆ ಅಶ್ವಿನಿ ಗೌಡ ಅವರು ಮೋಕ್ಷಿತಾ ಪೈ ಅವರ ಕಾಲನ್ನು ಒತ್ತುತ್ತಿರುವ ವಿಡಿಯೋ ವೈರಲ್ ಆಗಿದೆ. ಹಿರಿಯರಾದ ಅಶ್ವಿನಿ ಬಳಿ ಈ ರೀತಿ ಕಾಲು ಒತ್ತಿಸಿಕೊಂಡಿದ್ದಕ್ಕೆ ಮೋಕ್ಷಿತಾ ವಿರುದ್ಧ ವೀಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Read Full Story

12:46 PM (IST) Nov 28

ಕನಕನ ಕಿಂಡಿಯಲ್ಲಿ ಕೃಷ್ಣನ ಕಂಡು ಧನ್ಯರಾದ ಪ್ರಧಾನಿ ಮೋದಿ - ಕೃಷ್ಣ ದರ್ಶನದ ಅಪರೂಪದ ಕ್ಷಣಗಳು

ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಸ್ವರ್ಣ ಲೇಪಿತ ತೀರ್ಥ ಮಂಟಪವನ್ನು ಉದ್ಘಾಟಿಸಿ, ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಭಾಗವಹಿಸಿದರು. 

Read Full Story

12:21 PM (IST) Nov 28

KSCA ಚುನಾವಣೆ ಗೊಂದಲ - ಶೀಘ್ರದಲ್ಲೇ ಹೈಕೋರ್ಟ್ ತೀರ್ಪು?

₹200 ಹಿಂಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಕೆಎಸ್‌ಸಿಎ ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ್ದ ಕೆ.ಎನ್.ಶಾಂತಕುಮಾರ್ ಅವರ ನಾಮಪತ್ರವನ್ನು ತಿರಸ್ಕರಿಸಿದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ನ್ಯಾಯಾಲಯವು ಎಲ್ಲಾ ಪಕ್ಷಗಳ ವಾದ-ವಿವಾದಗಳನ್ನು ಆಲಿಸಿ, ತನ್ನ ತೀರ್ಪನ್ನು ಕಾಯ್ದಿರಿಸಿದೆ.

Read Full Story

12:16 PM (IST) Nov 28

ಆರ್‌ಸಿಬಿ ಬೆನ್ನಲ್ಲಿಯೇ 'ಮಾರಾಟಕ್ಕಿದೆ' ಐಪಿಎಲ್‌ನ ಮತ್ತೊಂದು ಚಾಂಪಿಯನ್‌ ಫ್ರಾಂಚೈಸಿ!

ಉದ್ಯಮಿ ಹರ್ಷ್ ಗೋಯೆಂಕಾ ಅವರ ಟ್ವೀಟ್ ಪ್ರಕಾರ, ಆರ್‌ಸಿಬಿ ನಂತರ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವೂ ಮಾರಾಟಕ್ಕಿದೆ. ಈ ಎರಡೂ ತಂಡಗಳನ್ನು ಖರೀದಿಸಲು ಅಮೆರಿಕ ಸೇರಿದಂತೆ ಹಲವು ಸಂಭಾವ್ಯ ಖರೀದಿದಾರರು ರೇಸ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ಆರ್‌ಸಿಬಿ ತನ್ನ ಮೌಲ್ಯವನ್ನು $2 ಬಿಲಿಯನ್ ಎಂದು ಅಂದಾಜಿಸಿದೆ.
Read Full Story

11:51 AM (IST) Nov 28

ತನ್ನ 1 ಸಾವಿರ ಉದ್ಯೋಗಿಗಳನ್ನು ಒಂದು ವಾರ ಲಂಡನ್‌ ಟ್ರಿಪ್‌ಗೆ ಕರೆದೊಯ್ಯಲಿರುವ ಭಾರತದ ಕಂಪನಿ!

ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕ್ಯಾಸಾಗ್ರಾಂಡ್, ತನ್ನ 'ಪ್ರಾಫಿಟ್‌ ಶೇರ್‌ ಬೋನಾಂಜಾ' ಕಾರ್ಯಕ್ರಮದ ಭಾಗವಾಗಿ 1,000 ಉದ್ಯೋಗಿಗಳನ್ನು ಲಂಡನ್‌ಗೆ ಒಂದು ವಾರದ, ಸಂಪೂರ್ಣ ಅನುದಾನಿತ ಪ್ರವಾಸಕ್ಕೆ ಕಳುಹಿಸುತ್ತಿದೆ. 

Read Full Story

11:26 AM (IST) Nov 28

Bigg Boss ಒನ್​ ಮ್ಯಾನ್​ ಷೋ ಆಗಿಬಿಟ್ಟಿದೆ ಎಂದ ಮಾಜಿ ಸ್ಪರ್ಧಿ ಗೌತಮಿ ಜಾಧವ್​ ದೊಡ್ಮನೆಗೆ ಈಗ ಹೋಗಿಲ್ಲವೇಕೆ?

ಬಿಗ್​ಬಾಸ್​ 12ರ ಮಾಜಿ ಸ್ಪರ್ಧಿಗಳ ಸಮಾಗಮಕ್ಕೆ ಗೈರಾಗಿದ್ದಕ್ಕೆ ಕಾರಣ ತಿಳಿಸಿದ ನಟಿ ಗೌತಮಿ ಜಾಧವ್, ಈ ಬಾರಿಯ ಸೀಸನ್ 'ಒನ್ ಮ್ಯಾನ್ ಶೋ' ಆಗಿದೆ ಎಂದಿದ್ದಾರೆ. ಅಲ್ಲದೆ, 'ಗಿಲ್ಲಿ ನಟ' ಎಂದೇ ಖ್ಯಾತರಾದ ಸ್ಪರ್ಧಿಯೇ ಈ ಬಾರಿ ಗೆಲ್ಲುವುದು ಖಚಿತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Read Full Story

11:04 AM (IST) Nov 28

'ಮೂರನೇ ಜಗತ್ತಿನ' ದೇಶಗಳಿಂದ ಅಮೆರಿಕಕ್ಕೆ ವಲಸೆ ಶಾಶ್ವತವಾಗಿ ಸ್ಥಗಿತ - ಡೊನಾಲ್ಟ್‌ ಟ್ರಂಪ್‌

ಶ್ವೇತಭವನದ ಗುಂಡಿನ ದಾಳಿ ನಂತರ, ಡೊನಾಲ್ಡ್ ಟ್ರಂಪ್ ಅವರು "ತೃತೀಯ ಜಗತ್ತಿನ ದೇಶಗಳಿಂದ" ವಲಸೆಯನ್ನು ಶಾಶ್ವತವಾಗಿ ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಹಿಂದಿನ ಬಿಡೆನ್ ಆಡಳಿತವನ್ನು ಟೀಕಿಸಿದ ಅವರು, ಅಕ್ರಮ ಪ್ರವೇಶವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ.

Read Full Story

10:25 AM (IST) Nov 28

WPL ಮೆಗಾ ಹರಾಜು - 12 ಆಟಗಾರ್ತಿಯರನ್ನು ಖರೀದಿಸಿದ ಆರ್‌ಸಿಬಿ! ಹರಾಜಿನ ಬಳಿಕ ಇಲ್ಲಿದೆ ನೋಡಿ 5 ತಂಡಗಳ ಸಂಪೂರ್ಣ ಡೀಟೈಲ್ಸ್

ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್ 3.2 ಕೋಟಿ ರೂ. ನೀಡಿ ಖರೀದಿಸಿದೆ. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್, ಮತ್ತು ಆರ್‌ಸಿಬಿ ಸೇರಿದಂತೆ ಒಟ್ಟು ಐದು ತಂಡಗಳು ತಮ್ಮ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಂಡವು.

Read Full Story

07:58 AM (IST) Nov 28

ಇಂದು ‘ಕೃಷ್ಣ’ನೂರಿಗೆ ‘ನಮೋ’ ಭೇಟಿ : ಗೀತ ಶ್ಲೋಕ ಪಠಣ

ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪ್ರಥಮ ಬಾರಿಗೆ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದು, ಭವ್ಯ ಸ್ವಾಗತಕ್ಕೆ ಕೃಷ್ಣನಗರಿ ಸಜ್ಜಾಗಿದೆ. 1 ಕಿ.ಮೀ. ರೋಡ್ ಶೋ ಮೂಲಕ ರಥಬೀದಿಗೆ ಆಗಮಿಸಲಿರುವ ಮೋದಿ, ಬಳಿಕ, ಕೃಷ್ಣಮಠದಲ್ಲಿ ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಕೃಷ್ಣನ ದರ್ಶನ ಪಡೆಯಲಿದ್ದಾರೆ.

 

Read Full Story

07:57 AM (IST) Nov 28

ಇಂದು ಉಡುಪಿಗೆ ಪ್ರಧಾನಿ ಮೋದಿ ಭೇಟಿ: ಕೃಷ್ಣಮಠದಲ್ಲಿ ಸುವರ್ಣ ಕನಕನ ಕಿಂಡಿ ಉದ್ಘಾಟನೆ

ಬೆಳಗ್ಗೆ 11ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿಯುವ ಮೋದಿ, ಅಲ್ಲಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಲಿದ್ದಾರೆ. ಬಳಿಕ, ನಾರಾಯಣಗುರು ವೃತ್ತದಿಂದ ಕಲ್ಸಂಕ ವೃತ್ತದವರೆಗೆ 1 ಕಿ.ಮೀ. ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

 

Read Full Story

07:57 AM (IST) Nov 28

ಭಾರತದಲ್ಲಿ ಅರಾಜಕತೆ ಸೃಷ್ಟಿಗೆ ಕೈ ಯತ್ನ : ಬಿಜೆಪಿ

ವಿದೇಶಗಳಿಂದ ನಿರ್ವಹಿಸಲ್ಪಡುತ್ತಿರುವ ಜಾಲತಾಣ ಖಾತೆ ಬಳಸಿಕೊಂಡು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ ನಾಯಕರು ಯತ್ನಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಹಾಗೂ ಎಡಪಂಥೀಯರ ನಿರ್ದೇಶನದಂತೆ ಈ ಕೆಲಸ ಮಾಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.

 

Read Full Story

07:57 AM (IST) Nov 28

ದೇಶದ ಮೊದಲ ಖಾಸಗಿ ವಾಣಿಜ್ಯ ರಾಕೆಟ್‌ ಅನಾವರಣ

ಹೈದರಾಬಾದ್‌ನ ಸ್ಟಾರ್ಟ್‌ಅಪ್‌ ‘ಸ್ಕೈರೂಟ್‌’ ಏರೋಸ್ಪೇಸ್‌ನ ಬೃಹತ್‌ ಕ್ಯಾಂಪಸ್‌ ಹಾಗೂ ಅದು ಸಿದ್ಧಪಡಿಸಿರುವ ಮೊದಲ ಖಾಸಗಿ ಕಂಪನಿಯ ವಾಣಿಜ್ಯ ರಾಕೆಟ್‌ ವಿಕ್ರಂ-1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್‌ ಆಗಿ ಅನಾವರಣಗೊಳಿಸಿದರು.

 

Read Full Story

07:56 AM (IST) Nov 28

ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಸುರಕ್ಷಿತ : ಪಾಕ್ ಸರ್ಕಾರ ಸ್ಪಷ್ಟನೆ

ವಿವಿಧ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (73) ಅವರನ್ನು ಜೈಲಿನೊಳಗೆ ಹತ್ಯೆ ಮಾಡಲಾಗಿದೆ/ ಅವರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ.

 

 

Read Full Story

07:56 AM (IST) Nov 28

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ದಂಡ, ಜೈಲು, ಸರ್ಕಾರಿ ಸವಲತ್ತು ಕಟ್‌!

ಕಾನೂನು ಬಾಹಿರ ಮದುವೆಗೆ ದಂಡ, ಜೈಲು ಶಿಕ್ಷೆ, ಸರ್ಕಾರಿ ಸೌಲಭ್ಯ ನಿರಾಕರಿಸುವ ಮಹತ್ವದ ಬಹುಪತ್ನಿತ್ವ ನಿಷೇಧ ಕಾಯ್ದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಎರಡನೇ ಮದುವೆ ಆದ ವ್ಯಕ್ತಿಗೆ ಎರಡನೇ ಮದುವೆ ಮಾಡಿಸುವ ಪೋಷಕರು, ಧಾರ್ಮಿಕ ಮುಖಂಡರೂ ಶಿಕ್ಷೆ ಮತ್ತು ದಂಡಕ್ಕೆ ತುತ್ತಾಗಲಿದ್ದಾರೆ

 

Read Full Story

07:55 AM (IST) Nov 28

ಬಂಗಾಳ ಕೊಲ್ಲೀಲಿ ದಿತ್ವಾ ಚಂಡಮಾರುತ ಸೃಷ್ಟಿ : ಮಳೆ

ಬಂಗಾಳಕೊಲ್ಲಿ ಹಾಗೂ ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಾಮಾನಾ ಇಲಾಖೆ ಹೇಳಿದೆ. ಈ ಚಂಡಮಾರುತಕ್ಕೆ ದಿತ್ವಾ ಎಂದು ಹೆಸರಿಡಲಾಗಿದ್ದು, ನ.29ರ ಸಂಜೆ ಅಥವಾ ನ.30ರ ಬೆಳಗ್ಗೆ ತಮಿಳುನಾಡಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

 

Read Full Story

07:55 AM (IST) Nov 28

ನ್ಯಾಯಾಂಗದ ಮೇಲೆ ಸರ್ಕಾರದ ಒತ್ತಡವಿಲ್ಲ : ನಿವೃತ್ತ ಸಿಜೆಐ ಗವಾಯಿ

‘ನ್ಯಾಯಾಂಗದ ಕಾರ್ಯನಿರ್ವಹಣೆ ಅಥವಾ ತೀರ್ಪುಗಳಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಅದು ಕೊಲೀಜಿಯಂ ಮೇಲೆ ಒತ್ತಡವನ್ನೂ ಹೇರುತ್ತಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನ್ಯಾ। ಬಿ.ಆರ್‌. ಗವಾಯಿ ಹೇಳಿದ್ದಾರೆ.

 

Read Full Story

More Trending News