ನವದೆಹಲಿ (ಅ.10): ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಟೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:13 PM (IST) Oct 10
ಬದ್ರಿನಾಥ್ -ಕೇದಾರನಾಥಕ್ಕೆ ಮುಕೇಶ್ ಅಂಬಾನಿ ಭೇಟಿ, 10 ಕೋಟಿ ರೂ ದೇಣಿಗೆ ನೀಡಿದ್ದಾರೆ. ಪ್ರತಿ ವರ್ಷ ಎರಡೂ ದೇವಸ್ಥಾನಗಳಿಗೆ ಬೇಟಿ ನೀಡುವ ಮುಕೇಶ್ ಅಂಬಾನಿ ಈ ಬಾರಿಯೂ ಭೇಟಿ ನೀಡಿ ದೇಣಿಗೆ ನೀಡಿದ್ದಾರೆ.
09:10 PM (IST) Oct 10
ಅಮಿರ್ ಮುಟ್ಟಾಖಿ ಭಾರತ ಭೇಟಿ ಬೆನ್ನಲ್ಲೇ ಆಫ್ಘಾನಿಸ್ತಾನ ನಂ.1 ಶತ್ರು ಎಂದು ಘೋಷಿಸಿದ ಪಾಕಿಸ್ತಾನ, ಭಾರತದ ನಡೆ ವಿರುದ್ಧ ಆತಂಗೊಂಡಿರುವ ಪಾಕಿಸ್ತಾನಕ್ಕೆ ಇತ್ತ ಆಫ್ಘಾನಿಸ್ತಾನವೂ ಗುನ್ನ ಇಟ್ಟಿದೆ. ತಾಲಿಬಾನ್ ಸಚಿವ ಭಾರತ ಭೇಟಿ ಬೆನ್ನಲ್ಲೇ ಆಫ್ಘಾನ್ ನಂ.1 ಶತ್ರು ರಾಷ್ಟ್ರ ಎಂದು ಘೋಷಿಸಿದೆ.
07:24 PM (IST) Oct 10
ಝೋಹೋ to ಝಿರೋಧ, ಭಾರತದ ಯಶಸ್ವಿ ಉದ್ಯಮಿಗಳ ಹಿಂದಿದೆ Z ಸೀಕ್ರೆಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಭಾರತದ ಹಲವು ಸ್ಟಾರ್ಟ್‌ಅಪ್, ಉದ್ಯಮಗಳು ಹೆಸರು ಝೆಡ್‌ನಿಂದ ಆರಂಭಗೊಳ್ಳುತ್ತಿದೆ. ಹಾಗಾದರೆ ಭಾರತದಲ್ಲಿ ಯಶಸ್ಸು A ನಿಂದ ಆರಂಭಗೊಳ್ಳುತ್ತಿಲ್ಲವೇ?
06:18 PM (IST) Oct 10
ಗೂಗಲ್ ಎಲ್ಲಿಂದ ಬೇಕಾದರೂ ಕೆಲಸ ನೀತಿಯಲ್ಲಿ ಮಹತ್ವದ ಬದಲಾವಣೆ, ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಜಾರಿಗೆ ಬಂದಿದ್ದ ವರ್ಕ್ ಫ್ರಮ್ ಎನಿವೇರ್ ನೀತಿಯಲ್ಲಿ ಆಗಿರುವ ಬದಲಾವಣೆ ಏನು?
06:09 PM (IST) Oct 10
ನವದೆಹಲಿ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ರೋಹಿತ್ ಶರ್ಮಾ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದರ ಬೆನ್ನಲ್ಲೇ ರೋಹಿತ್-ಕೊಹ್ಲಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಬಗ್ಗೆ ಗಿಲ್ ಖಡಕ್ ಉತ್ತರ ನೀಡಿದ್ದಾರೆ.
05:09 PM (IST) Oct 10
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ, ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ (173*) ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ (87) ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ.
04:58 PM (IST) Oct 10
ದೀಪಾವಳಿಗೆ ಮಕ್ಕಳಿಗಾದರೂ ಪಟಾಕಿಗೆ ಅವಕಾಶ ನೀಡಿ, ಸುಪ್ರೀಂಗೆ ಎನ್‌ಸಿಆರ್ ರಾಜ್ಯಗಳ ಮನವಿ ಮಾಡಲಾಗಿದೆ. ಪಟಾಕಿ ನಿಷೇಧ ಕೇವಲ 2 ದಿನಕ್ಕಾದರೂ ತೆರವುಗೊಳಿಸುವಂತೆ ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಜೊತೆ ಮನವಿ ಮಾಡಿದ್ದಾರೆ.
04:33 PM (IST) Oct 10
Iಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ನಾಗಾರ್ಜುನ್ ಗೌಡ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಖಂಡ್ವಾ ಜಿಲ್ಲೆ ಪಂಚಾಯತ್ ಸಿಇಒ ಆಗಿರುವ ನಾಗಾರ್ಜುನ್ ಗೌಡ ಅವರ ವಿರುದ್ಧ ಲಂಚ ಪಡೆದು ಸಂಸ್ಥೆಯೊಂದರ ಪರ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ.
04:15 PM (IST) Oct 10
ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾಗೆ ಸಿಗುವ ಮೊತ್ತವೆಷ್ಟು? ಜೀವನ ಬದಲಿಸಲಿದೆ ಪ್ರೈಝ್ ಮೊತ್ತ. 338 ನಾಮಿನೇಶನ್ ಪೈಕಿ ಮರಿಯಾ ಕೊರಿನಾ ಮಚಾಡೋ ನೊಬೆಲ್ ಪ್ರಶಸ್ತಿ ಜೊತೆ ದುಬಾರಿ ಮೊತ್ತ ಪಡೆಯಲಿದ್ದಾರೆ.
04:10 PM (IST) Oct 10
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ತಯಾರಿಗಳು ಆರಂಭವಾಗಿದ್ದು, ಮುಂಬರುವ ಐಪಿಎಲ್ ಹರಾಜಿನ ಕುರಿತಂತೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದ್ದು, ಆಟಗಾರರ ರೀಟೈನ್‌ಗೂ ಡೆಡ್ ಲೈನ್ ಫಿಕ್ಸ್ ಅಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
02:52 PM (IST) Oct 10
7 ಯುದ್ದ ನಿಲ್ಲಿಸಿದ ಟ್ರಂಪ್‌ಗೆ ಶಾಕ್, ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದೆ, ಶಾಂತಿ ಪ್ರಶಸ್ತಿಗಾಗಿ ಭಾರಿ ಪ್ರಯತ್ನಿಸಿದ ಟ್ರಂಪ್‌ಗೆ ತೀವ್ರ ಮುಖಭಂಗವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಯಾರು?
02:52 PM (IST) Oct 10
Pakistan Airstrikes Kabul Targeting TTP ಪಾಕಿಸ್ತಾನವು ಕಾಬೂಲ್‌ನಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ ಟಿಟಿಪಿ ಮುಖ್ಯಸ್ಥ ಮುಫ್ತಿ ನೂರ್ ವಾಲಿ ಮೆಹ್ಸೂದ್ ಹತ್ಯೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
02:08 PM (IST) Oct 10
01:13 PM (IST) Oct 10
ಮರ್ಲಿನ್ ಮನ್ರೋ ಐಕಾನಿಕ್ ಪೋಸ್ ಆಗಿರುವ ಒಳಗಿರುವ ಒಳಉಡುಪು ಕಾಣುವಂತೆ ಗಾಳಿಗೆ ಹಾರುವ ಮಿನಿಸ್ಕರ್ಟ್ ಪೋಸ್ ಸರ್ವಕಾಲಕ್ಕೂ ಫೇಮಸ್. ಇದೇ ಪೋಸ್‌ನಲ್ಲಿ ಇರುವ ಅವರ ದೊಡ್ಡ ಪ್ರತಿಮೆಯೊಂದು ಈಗ ದಾರಿಹೋಕರನ್ನು ಮಳೆಯಿಂದ ರಕ್ಷಿಸಿದ್ದು, ಈ ಫೋಟೋ ಭಾರಿ ವೈರಲ್ ಆಗ್ತಿದೆ.
12:37 PM (IST) Oct 10
ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಆಟಗಾರ್ತಿಯರ ರೀಟೈನ್ ಮಾಡಿಕೊಳ್ಳಲು ಡೆಡ್‌ಲೈನ್ ನೀಡಲಾಗಿದೆ. ಆರ್‌ಸಿಬಿ ಯಾರನ್ನು ಯಾರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
11:58 AM (IST) Oct 10
ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯ ಬಂಧನವಾಗಿದೆ.
11:12 AM (IST) Oct 10
ಭಾರತದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಟೆಸ್ಲಾ ಕಾರು ಖರೀದಿಸಿದ್ದಾರೆ. ಹಿಟ್‌ಮ್ಯಾನ್ ಖರೀದಿಸಿದ ಟೆಸ್ಲಾ ಮಾಡೆಲ್ Y ಕಾರು ಮತ್ತು ಅದರ ನಂಬರ್ ಪ್ಲೇಟ್ ಬಹಳ ವಿಶೇಷವಾಗಿದೆ.
11:05 AM (IST) Oct 10
Boulders Roll Down on Car:ಹಿಮಾಚಲ ಪ್ರದೇಶದ ರಸ್ತೆಯೊಂದರಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಬಂಡೆಯೊಂದು ವಾಹನದ ಮುಂದೆಯೇ ಉರುಳಿ ಹೋದಂತಹ ಘಟನೆ ನಡೆದಿದ್ದು, ಈ ದೃಶ್ಯ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
10:50 AM (IST) Oct 10
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಸ್ಪೋಟಕ 94 ರನ್ ಚಚ್ಚಿದ ರಿಚಾ ಘೋಷ್ ಯಾರು? ಆಕೆಯ ಹಿನ್ನೆಲೆ ಏನು ಎನ್ನುವುದನ್ನು ನೋಡೋಣ ಬನ್ನಿ.
07:52 AM (IST) Oct 10
ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಠೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ.
07:52 AM (IST) Oct 10
ಲಿಂಕ್ಡ್‌ಇನ್ ಇದೀಗ ಹೊಸ ಫೀಚರ್ ಪರಿಚಯಿಸಿದ್ದು, ಓಪನ್ ಟು ವರ್ಕ್ ಫೀಚರ್ ಬಳಸುವವರು ಇದೀಗ ತಮ್ಮ ನೋಟಿಸ್ ಪೀರಿಯಡ್ ಅವಧಿ ಮತ್ತು ತಾವು ನಿರೀಕ್ಷಿಸುತ್ತಿರುವ ವೇತನವನ್ನು ನಮೂದಿಸಬಹುದು. ಈ ಕುರಿತ ವಿವರ ಇಲ್ಲಿದೆ.
07:51 AM (IST) Oct 10
ಹಬ್ಬದ ಸೀಸನ್‌ನಲ್ಲಿ ಭಾರತೀಯ ಆಟೋ ಮಾರುಕಟ್ಟೆಯು ಕೂಡ ಹುಮ್ಮಸ್ಸಿನ ಬೆಳವಣಿಗೆಗೆ ಸಾಕ್ಷಿಯಾಗಿದೆ. ಏಕೆಂದರೆ ಈ ವರ್ಷ ದ್ವಿಚಕ್ರ ವಾಹನಗಳ ಮೇಲಿನ ಜಿ ಎಸ್ ಟಿ ಇಳಿಕೆ ಆಗಿರುವುದರಿಂದ ವಿಶೇಷವಾಗಿ 100 ಸಿಸಿ ಮತ್ತು 125 ಸಿಸಿ ವಿಭಾಗಗಳಲ್ಲಿ ವೆಚ್ಚದ ಭಾರ ಕಡಿಮೆ ಆಗಿದೆ.
07:51 AM (IST) Oct 10
ರಾಜ್ಯದ ಸ್ಥಳೀಯ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಶೇ.42ರಷ್ಟು ಮೀಸಲಾತಿ ನೀಡುವ ತೆಲಂಗಾಣ ಸರ್ಕಾರದ ಆದೇಶಕ್ಕೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಮುಂದಿನ ಆದೇಶದ ವರೆಗೆ ಅದರ ಜಾರಿಯನ್ನು ವಜಾಗೊಳಿಸಿದೆ.
07:51 AM (IST) Oct 10
ಅ.3ರಂದು ಇಹಲೋಕ ತ್ಯಜಿಸಿದ ಹಿರಿಯ ಪತ್ರಕರ್ತ, ಭಾರತೀಯ ಪತ್ರಿಕೋದ್ಯಮದ ಭೀಷ್ಮ, ಟಿಜೆಎಸ್ (ತಾಯಿಲ್ ಜಾಕೋಬ್ ಸೋನಿ) ಜಾರ್ಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಜ್ ಅವರ ಪುತ್ರ ಜೀತ್ ತಾಯಿಲ್ ಅವರಿಗೆ ಪತ್ರ ಬರೆದಿದ್ದಾರೆ.
07:50 AM (IST) Oct 10
160ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ 2008ರ ಮುಂಬೈ ಉಗ್ರ ದಾಳಿಗೆ ಸೇಡು ತೀರಿಸಿಕೊಳ್ಳಲು ಭಾರತೀಯ ವಾಯುಪಡೆ ಸಿದ್ಧವಿತ್ತು. ಆದರೆ ಅಂದಿನ (ಯುಪಿಎ) ಸರ್ಕಾರದಿಂದ ಅನುಮತಿ ದೊರೆತಿರಲಿಲ್ಲ ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಮೇ। ಫಾಲಿ ಹೋಮಿ ಹೇಳಿದ್ದಾರೆ.
07:50 AM (IST) Oct 10
ವಾಯುಗುಣಮಟ್ಟದಲ್ಲಿ ಭಾರೀ ಸುಧಾರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಹಿಮಶಿಖರವಾದ ಮೌಂಟ್ ಎವರೆಸ್ಟ್ ಇದೀಗ ಬಿಹಾರದಿಂದಲೇ ಬರಿಗಣ್ಣಿಗೆ ಗೋಚರವಾಗುತ್ತಿದೆ. ನೇಪಾಳಕ್ಕೆ ಗಡಿಗೆ ಹೊಂದಿರುವ ಮಧುಬನಿ ಜಿಲ್ಲೆಯ ಜಯನಗರವೆಂಬ ಸಣ್ಣ ಪಟ್ಟಣದಲ್ಲಿ ಬರಿಗಣ್ಣಿನಿಂದ ಎವರೆಸ್ಟ್ ನೋಡಬಹುದಾಗಿದೆ.
07:49 AM (IST) Oct 10
ಬಿಹಾರ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿರುವ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ 51 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವೈದ್ಯರು, ವಕೀಲರು, ಮಾಜಿ ಸರ್ಕಾರಿ ಅಧಿಕಾರಿಗಳು, ನಿವೃತ್ತ ಪೊಲೀಸರಿಗೂ ಟಿಕೆಟ್ ನೀಡಲಾಗಿದೆ.