ವಾಯುಗುಣಮಟ್ಟದಲ್ಲಿ ಭಾರೀ ಸುಧಾರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಹಿಮಶಿಖರವಾದ ಮೌಂಟ್ ಎವರೆಸ್ಟ್ ಇದೀಗ ಬಿಹಾರದಿಂದಲೇ ಬರಿಗಣ್ಣಿಗೆ ಗೋಚರವಾಗುತ್ತಿದೆ. ನೇಪಾಳಕ್ಕೆ ಗಡಿಗೆ ಹೊಂದಿರುವ ಮಧುಬನಿ ಜಿಲ್ಲೆಯ ಜಯನಗರವೆಂಬ ಸಣ್ಣ ಪಟ್ಟಣದಲ್ಲಿ ಬರಿಗಣ್ಣಿನಿಂದ ಎವರೆಸ್ಟ್ ನೋಡಬಹುದಾಗಿದೆ.
ಪಟನಾ: ವಾಯುಗುಣಮಟ್ಟದಲ್ಲಿ ಭಾರೀ ಸುಧಾರಣೆ ಹಿನ್ನೆಲೆಯಲ್ಲಿ ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಹಿಮಶಿಖರವಾದ ಮೌಂಟ್ ಎವರೆಸ್ಟ್ ಇದೀಗ ಬಿಹಾರದಿಂದಲೇ ಬರಿಗಣ್ಣಿಗೆ ಗೋಚರವಾಗುತ್ತಿದೆ.
ನೇಪಾಳಕ್ಕೆ ಗಡಿಗೆ ಹೊಂದಿರುವ ಮಧುಬನಿ ಜಿಲ್ಲೆಯ ಜಯನಗರವೆಂಬ ಸಣ್ಣ ಪಟ್ಟಣದಲ್ಲಿ ಬರಿಗಣ್ಣಿನಿಂದ ಎವರೆಸ್ಟ್ ನೋಡಬಹುದಾಗಿದೆ. ಜಯನಗರಕ್ಕೆ ಎವರೆಸ್ಟ್ ಶಿಖರದ ಬೇಸ್ ಕ್ಯಾಂಪ್ 200 ಕಿ.ಮೀ.ಗಿಂತ ಕಡಿಮೆ ದೂರವಿದೆ.
ಎವರೆಸ್ಟ್ ಜೊತೆಗೆ ತಮ್ಶೆರ್ಕು, ಲೋಟ್ಸೆ, ಶರ್ಟ್ಸೆ, ಮೆರಾ ಪೀಕ್, ಚಮ್ಲಾಂಗ್ ಮತ್ತು ಮಕಾಲು ಶಿಖರಗಳನ್ನು ನೋಡಬಹುದಾಗಿದೆ. ಈ ಹಿಂದೆ 2020ರ ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ಮಾಲಿನ್ಯ ತಗ್ಗಿ ವಾಯುಗುಣಮಟ್ಟ ವೃದ್ಧಿಯಾದಾಗ ಸಹ ಈ ಪರ್ವತಶಿಖರ ಗೋಚರವಾಗಿತ್ತು. ಪಂಜಾಬ್‌ನ ಜಲಂಧರ್‌ನಿಂದಲೂ ಅದು ಕಂಡಿತ್ತು.
ಮೌಂಟ್ ಎವರೆಸ್ಟ್ ಮೇಲೆ ಲ್ಯಾಂಡ್ ಆದ ವಿಶ್ವದ ಏಕೈಕ ಹೆಲಿಕಾಪ್ಟರ್ ಈಗ ಕೋಲಾರದಲ್ಲೇ ನಿರ್ಮಾಣ, ಟಾಟಾ ಘೋಷಣೆ
ನವದೆಹಲಿ : ಮೌಂಟ್ ಎವರೆಸ್ಟ್‌ನಲ್ಲಿ ಲ್ಯಾಂಡ್ ಆದ ವಿಶ್ವದ ಮೊದಲ ಹೆಲಿಕಾಪ್ಟರ್ H125 ಅನ್ನು ಇನ್ನು ಮುಂದೆ ಭಾರತದಲ್ಲೇ ಅದರಲ್ಲೂ ಕರ್ನಾಟಕದ ಕೋಲಾರದಲ್ಲಿಯೇ ತಯಾರಿಸಲಾಗುತ್ತದೆ. ಈ ಹೆಲಿಕಾಪ್ಟರ್ ಜಾಗತಿಕ ಏರೋಸ್ಪೇಸ್ ಕಂಪನಿ ಏರ್‌ಬಸ್ ಒಡೆತನದಲ್ಲಿದ್ದು, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಈಗ ಕರ್ನಾಟಕದ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ತನ್ನ ಅಂತಿಮ ಅಸೆಂಬ್ಲಿ ಲೈನ್ ಅನ್ನು ನಿರ್ಮಿಸಲಿದೆ. ಮೊದಲ ಮೇಡ್ ಇನ್ ಇಂಡಿಯಾ H125 ಅನ್ನು 2027 ರ ವೇಳೆಗೆ ತಯಾರಿಸುವ ನಿರೀಕ್ಷೆಯಿದೆ. ಭಾರತದಲ್ಲಿ ಉತ್ಪಾದನೆ ಪ್ರಾರಂಭವಾದ ನಂತರ, ದಕ್ಷಿಣ ಏಷ್ಯಾದಾದ್ಯಂತ ರಕ್ಷಣಾ ಮತ್ತು ನಾಗರಿಕ ಅಗತ್ಯಗಳಿಗೆ ಪ್ರಮುಖ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.
ಮಿಲಿಟರಿ ವೇರಿಯಂಟ್‌ನಲ್ಲಿ ದೇಶೀಯ ಶಸ್ತ್ರಾಸ್ತ್ರಗಳು
H125 ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ತಯಾರಿಸಿದ ನಂತರ, ಅವುಗಳನ್ನು ದೇಶೀಯವಾಗಿ ಬಳಕೆ ಮಾಡುವುದಲ್ಲದೆ, ರಫ್ತು ಕೂಡ ಮಾಡಲಾಗುತ್ತದೆ. ಯೋಜನೆಯ ಪ್ರಕಾರ, ಅದರ ಮಿಲಿಟರಿ ರೂಪಾಂತರವಾದ H125M ಅನ್ನು ಸಹ ತಯಾರಿಸಲಾಗುತ್ತದೆ. ಇದು ಅನೇಕ ಸ್ಥಳೀಯ ಉಪಕರಣಗಳನ್ನು ಹೊಂದಿರುತ್ತದೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ತಂತ್ರಜ್ಞಾನವನ್ನು ಸಹ ಬಳಸಿಕೊಳ್ಳುತ್ತದೆ.
ಈ ಹೆಲಿಕಾಪ್ಟರ್ ಅನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಎತ್ತರದ ಮತ್ತು ದುರ್ಗಮ ಪ್ರದೇಶಗಳಲ್ಲಿ, ವಿಶೇಷವಾಗಿ ಹಿಮಾಲಯ ಪ್ರದೇಶಗಳಲ್ಲಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗುತ್ತದೆ. H125M ನಂತಹ ರೂಪಾಂತರಗಳ ಪರಿಚಯವು ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತದ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.
