ಖ್ಯಾತ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಕೋವಿಡ್‌ಗೆ ಬಲಿ: ಮೋದಿ ಸೇರಿ ಗಣ್ಯರ ಸಂತಾಪ!

Published : Apr 30, 2021, 06:03 PM IST
ಖ್ಯಾತ ಟಿವಿ ಪತ್ರಕರ್ತ ರೋಹಿತ್ ಸರ್ದಾನ ಕೋವಿಡ್‌ಗೆ ಬಲಿ: ಮೋದಿ ಸೇರಿ ಗಣ್ಯರ ಸಂತಾಪ!

ಸಾರಾಂಶ

ನಟ-ನಿರ್ಮಾಪಕರು, ಪತ್ರಕರ್ತರು, ರಾಜಕಾರಣಿಗಳು, ಜನಸಾಮಾನ್ಯರು ಸೇರಿದಂತೆ ದೇಶದ ಪ್ರತಿಯೊಬ್ಬರನ್ನು ಕೊರೋನಾ ಹಿಂಬಾಲಿಸುತ್ತಿದೆ. ಭಾರತದಲ್ಲಿ ಎದ್ದಿರುವ 2ನೇ ಕೊರೋನಾ ಅಲೆಗೆ ಹಲವು ಪತ್ರಕರ್ತರು ಬಲಿಯಾಗಿದ್ದಾರೆ. ಇದೀಗ ಖ್ಯಾತ ಪತ್ರಕರ್ತ, ನಿರೂಪಕ ರೋಹಿತ್ ಸರ್ದಾನ ನಿಧನ ವಾರ್ತಗೆ ಭಾರತವೇ ಕಂಬನಿ ಮಿಡಿದಿದೆ.  

ನವದೆಹಲಿ(ಏ.30)  ಖ್ಯಾತ ಪತ್ರಕರ್ತ, ನಿರೂಪಕ ರೋಹಿತ್ ಸರ್ದಾನ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಆಜ್‌ತಕ್ ವಾಹಿನಿಯ ನಿರೂಪಕರಾಗಿದ್ದ ರೋಹಿತ್‌ಗೆ ಕೊರೋನಾ ಕಾಣಿಸಿಕೊಂಡಿತ್ತು. ಕೊರೋನಾ ಸೋಂಕು ತಗುಲಿದ ರೋಹಿತ್ ಇಂದು(ಏ.30)  ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಪತ್ರಕರ್ತ, ಕಲಾವಿದನ ಬಲಿಪಡೆದ ಕರಾಳ ಕೊರೋನಾ.. ಗುಂಪು ಸೇರಿದರೆ!..

41 ವರ್ಷದ ರೋಹಿತ್ ನೇರ, ನಿಷ್ಠುರ ಹಾಗೂ ಅತ್ಯುತ್ತಮ ಪತ್ರಕರ್ತ ಎಂದು ಗುರುತಿಸಿಕೊಂಡಿದ್ದರು. ರೋಹಿತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.  

ರೋಹಿತ್ ಸರ್ದಾನಾ ನಮ್ಮನ್ನು ಬೇಗನೆ ಅಗಲಿದ್ದಾರೆ. ಭಾರತದ ಪ್ರಗತಿಯ ಬಗ್ಗೆ ಉತ್ಸಾಹ  ಹೊಂದಿದ್ದ ಸ್ನೇಹಮಯಿ  ರೋಹಿತ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ರೋಹಿತ್ ಅಕಾಲಿಕ ನಿಧನವು ಮಾಧ್ಯಮ ಜಗತ್ತಿನಲ್ಲಿ ಭಾ ನಷ್ಟವನ್ನುಂಟುಮಾಡಿದೆ.  ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

 

ರೋಹಿತ್ ನಿಧನ ವಾರ್ತೆ ತೀವ್ರ ನೋವುಂಟು ಮಾಡಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಹಲವು ಗಣ್ಯರು, ರಾಜಕಾರಣಿಗಳು ರೋಹಿತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ