ಹಾಲು, ಮೊಸರಲ್ಲ, ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ಹೆಚ್ಚು ಮಾರಾಟವಾಗ್ತಿದೆ ಈ ವಸ್ತು!

By Roopa Hegde  |  First Published Nov 18, 2024, 4:09 PM IST

ಕಿರಾಣಿ ವಿತರಣಾ ಅಪ್ಲಿಕೇಷನ್ ಗಳ ಸಂಖ್ಯೆ ಈಗ ಹೆಚ್ಚಿದೆ. ಕೆಲವೇ ನಿಮಿಷದಲ್ಲಿ ಮನೆಬಾಗಿಲಿಗೆ ವಸ್ತುಗಳು ಬರುತ್ವೆ. ಸ್ವಿಗ್ಗಿ ಇನ್ಸ್ಟಾಮಾರ್ಟ್ ಕೂಡ ಇದರಲ್ಲಿ ಸೇರಿದ್ದು, ಅಲ್ಲಿ ಹೆಚ್ಚು ಸೇಲ್ ಆಗ್ತಿರುವ ವಸ್ತು ಯಾವುದು ಗೊತ್ತಾ? 
 


ಭಾರತದ ಪ್ರಮುಖ ಆಹಾರ ವಿತರಣಾ ವೇದಿಕೆಗಳಲ್ಲಿ ಒಂದಾದ ಸ್ವಿಗ್ಗಿಯ (Swiggy) ಕಿರಾಣಿ ವಿತರಣಾ ಸೇವೆಯನ್ನು ಸ್ವಿಗ್ಗಿ ಇನ್ಸ್ಟಾಮಾರ್ಟ್ (Swiggy Instamart) ಮೂಲಕ ಗ್ರಾಹಕರು ಪಡೆಯುತ್ತಿದ್ದಾರೆ. ಇತ್ತೀಚಿನ  ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮನೆಗೆ ಅಗತ್ಯವಿರುವ ವಸ್ತುಗಳನ್ನು ತರಲು ಜನರಿಗೆ ಮಾರ್ಕೆಟ್ ಗೆ ಹೋಗ್ಬೇಕಾಗಿಲ್ಲ. ಹತ್ತೇ ಹತ್ತು ನಿಮಿಷದಲ್ಲಿ ಮನೆಗೆ ಬಯಸಿದ ವಸ್ತುಗಳು ಬರುವ ಕಾರಣ ಜನರು, ಮೊಬೈಲ್ ಅಪ್ಲಿಕೇಷನ್ ಬಳಕೆಯನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದ್ರಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ ಕೂಡ ಸೇರಿದೆ. ಗ್ರಾಹಕರು ಈ ಅಪ್ಲಿಕೇಷನ್ ಮೂಲಕ, ಹಾಲು, ಮೊಸರು, ತರಕಾರಿ ಸೇರಿದಂತೆ ಎಲ್ಲ ಕಿರಾಣಿ ವಸ್ತುಗಳನ್ನು ಆರ್ಡರ್ ಮಾಡ್ತಾರೆ.

ಇಂಥ ಅಪ್ಲಿಕೇಷನ್ ನಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ವಸ್ತುಗಳು ಅಂದ್ರೆ ನಿತ್ಯ ಬಳಸುವ ಹಾಲು, ಮೊಸರು ಅಂತ ನಾವು ಭಾವಿಸ್ತೇವೆ. ಆದ್ರೆ ನಮ್ಮ ನಂಬಿಕೆ ಸುಳ್ಳು. ಕಾಲಕ್ಕೆ ತಕ್ಕಂತೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ವಸ್ತುಗಳ ಬೇಡಿಕೆ ಬದಲಾದ್ರೂ ಸದ್ಯ ಯಾವ ವಸ್ತುವಿಗೆ ಹೆಚ್ಚು ಡಿಮ್ಯಾಂಡ್ ಇದೆ ಎಂಬುದನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಿಇಒ ಶ್ರೀಹರ್ಷ ಮಾಜೆಟಿ (CEO Sriharsha Majeti) ಹೇಳಿದ್ದಾರೆ. ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ಅವರು, ಸದ್ಯ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ಯಾವ ವಸ್ತು ಹೆಚ್ಚು ಸೇಲ್ ಆಗ್ತಿದೆ ಎಂಬುದನ್ನು ತಿಳಿಸಿದ್ದಾರೆ. 

Tap to resize

Latest Videos

undefined

ನಾರಾಯಣ ಮೂರ್ತಿಗಿಂತ ಶ್ರೀಮಂತ ಈ ಇನ್ಫೋಸಿಸ್ ಸಹ ಸಂಸ್ಥಾಪಕ, ಇಲ್ಲಿದೆ ಧನಿಕರ ಪಟ್ಟಿ!

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ಇದಕ್ಕೆ ಹೆಚ್ಚು ಡಿಮ್ಯಾಂಡ್ : ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಸಿಇಒ ಶ್ರೀಹರ್ಷ ಮಾಜೆಟಿ ಪ್ರಕಾರ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ನಲ್ಲಿ ಸದ್ಯ ಬೆಡ್ ಶೀಟ್ ಗೆ ಬೇಡಿಕೆ ಇದೆ. ನಿಮಗೆ ಅಚ್ಚರಿ ಆಗ್ಬಹುದು. ಹತ್ತು ನಿಮಿಷಕ್ಕೆ ಡೆಲಿವರಿಯಾಗುವ ವಸ್ತುಗಳಲ್ಲಿ ಜನರು ಬೆಡ್ ಶೀಟ್ (Bed Sheet) ಕೂಡ ಸೇರಿಸಿದ್ದಾರೆ. ಹಿಂದೆ ಜನರು ಬ್ಯಾಟರಿಯನ್ನು ಹೆಚ್ಚು ಖರೀದಿ ಮಾಡಿದ್ರು. ಈಗ  ಬೆಡ್‌ಶೀಟ್‌ ಸರ್ಚ್ ಮಾಡ್ತಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಹೋಗುತ್ತೇವೆ ಎಂದು ಶ್ರೀಹರ್ಷ ಹೇಳಿದ್ದಾರೆ. 

ಜನರಿಗೆ 10 ನಿಮಿಷದಲ್ಲಿ ಬೆಡ್‌ಶೀಟ್ ಬೇಕು. ಆದರೆ ಅವರಿಗೆ ಏಕೆ ಬೇಕು ಎಂದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಗ್ರಾಹಕರಿಗೆ  ಬೆಡ್‌ಶೀಟ್ ಅಗತ್ಯವಿರುತ್ತದೆ. ಅದು ಹತ್ತು ನಿಮಿಷಗಳಲ್ಲಿ ಸಿಗುತ್ತೆ ಎಂದಾದ್ರೆ ಮಾತ್ರ ಅವರು ಆರ್ಡರ್ ಮಾಡ್ತಾರೆ ಎಂದು ಶ್ರೀಹರ್ಷ ತಿಳಿಸಿದ್ದಾರೆ. ಫ್ಲಾಟ್ಫಾರ್ಮ್ ಗೆ ಬರ್ತಿದ್ದಂತೆ ಅವರು ಬೆಡ್ ಶೀಟ್ ಜೊತೆ ಇನ್ನೊಂದಿಷ್ಟು ವಸ್ತುಗಳನ್ನು ಆರ್ಡರ್ ಮಾಡ್ತಾರೆ ಎಂದು ಶ್ರೀಹರ್ಷ ಹೇಳಿದ್ದಾರೆ. 

ಹತ್ತು ನಿಮಿಷದಲ್ಲಿ ಇಡೀ ವಿಶ್ವವನ್ನು ತಲುಪಲು ಸಾಧ್ಯವಿಲ್ಲ. ಭಾರತದಲ್ಲಿ ಇನ್ಸ್ಟಂಟ್ ಕಾಮರ್ಸ್ ಮಾರ್ಕೆಟ್ ಮೌಲ್ಯ 5.5 ಬಿಲಿಯನ್ ಡಾಲರ್ ಗಿಂತ ಹೆಚ್ಚಿದೆ. ಯುದ್ಧದ ಸಮಯದಲ್ಲಿ ಸ್ವಿಗ್ಗಿ ಜನ್ಮವಾಗಿದೆ ಎಂದು ಶ್ರೀಹರ್ಷ ಹೇಳಿದ್ದಾರೆ. ಎರಡು ವರ್ಷಗಳಿಂದ ನಾವು ಶಾಂತವಾದ ಕ್ಷಣ ನೆನಪಿಲ್ಲ. ನಮಗೆ ಬೇರೆ ಪ್ರಪಂಚ ಗೊತ್ತಿಲ್ಲ ಎಂದು ಶ್ರೀಹರ್ಷ ಹೇಳಿದ್ದಾರೆ. 

ಪರೀಕ್ಷೆ ಬರೆಯದೆಯೂ ನೀವು ಈ ಬ್ಯಾಂಕ್ ಜಾಬ್ ಗಿಟ್ಟಿಸಿಕೊಳ್ಳಬಹುದು, ಅರ್ಹತೆ ಏನು?

ಸ್ವಿಗ್ಗಿ ಭಾರತೀಯ ಆನ್‌ಲೈನ್ ಆಹಾರ ಆರ್ಡರ್ ಮತ್ತು ವಿತರಣಾ ವೇದಿಕೆಯಾಗಿದೆ. ಇದನ್ನು ಜುಲೈ 2014 ರಲ್ಲಿ ಸ್ಥಾಪಿಸಲಾಯಿತು ( ಇದರ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ. ಇದ್ರಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್, ಆನ್ ಡಿಮಾಂಡ್ ಕಿರಾಣಿ ವಿತರಣಾ ಸೇವೆಯಾಗಿದೆ. ಇದು 15 ರಿಂದ 30 ನಿಮಿಷಗಳ ಒಳಗೆ ದೈನಂದಿನ ಅಗತ್ಯ ವಸ್ತುಗಳ ತ್ವರಿತ ವಿತರಣೆಯನ್ನು ನೀಡುತ್ತದೆ.  ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ಸ್, ಸ್ಪೋರ್ಟ್ಸ್ ಗೇರ್, ಬೆಡ್‌ಶೀಟ್‌ಗಳಂತಹ ಅನೇಕ ವಸ್ತುಗಳು ಅಪ್ಲಿಕೇಷನ್ನಲ್ಲಿ ಲಭ್ಯವಿದೆ. 

click me!