Published : Aug 28, 2026, 07:58 AM ISTUpdated : Aug 28, 2026, 10:44 PM IST

India News Live: Samantha Pregnancy - ಗರ್ಭಿಣಿ ಸಮಂತಾ ಖುಷ್ ಖುಷ್ - 11 ಕೆಜಿ ತೂಕ ಹೆಚ್ಚಳದ ಬಗ್ಗೆ ಓಪನ್ ಟಾಕ್

ಸಾರಾಂಶ

ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್‌ ನಡೆಸಿದ ‘ಮೂಡ್‌ ಆಫ್‌ ದಿ ನೇಷನ್‌’ ಸಮೀಕ್ಷೆ ತಿಳಿಸಿದೆ.

ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಇನ್ನೂ ಭದ್ರವಾಗಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆಯಾದರೂ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಸ್ಥಾನಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ಜನವರಿಯಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 352 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇದೀಗ 26 ಸೀಟುಗಳ ಕುಸಿತದೊಂದಿಗೆ 326 ಸ್ಥಾನಗಳನ್ನು ಅಂದಾಜಿಸಲಾಗಿದೆ.

10:44 PM (IST) Aug 28

Samantha Pregnancy - ಗರ್ಭಿಣಿ ಸಮಂತಾ ಖುಷ್ ಖುಷ್ - 11 ಕೆಜಿ ತೂಕ ಹೆಚ್ಚಳದ ಬಗ್ಗೆ ಓಪನ್ ಟಾಕ್

ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಸೆಷನ್ ನಡೆಸಿದರು. ಈ ವೇಳೆ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಮಾತನಾಡಿದ ಅವರು, ತಾಯ್ತನದ ಈ ಹಂತವನ್ನು ಎಂಜಾಯ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

10:04 PM (IST) Aug 28

ಈ ಕೊರಿಯನ್ ಥ್ರಿಲ್ಲರ್ ಸಿನಿಮಾ ನೋಡಿದ್ರೆ ಫೋನ್ ಕಾಲ್‌ಗೂ ಹೆದರ್ತೀರಾ - ಏನಿದು 2 ಕಾಲಘಟ್ಟ?

ಒಂದೇ ಮನೆಯಲ್ಲಿರುವ ಹಳೆಯ ಫೋನ್ ಮೂಲಕ, 20 ವರ್ಷಗಳ ಅಂತರದಲ್ಲಿ ಬದುಕುತ್ತಿರುವ ಇಬ್ಬರು ಮಹಿಳೆಯರು ಮಾತಾಡಲು ಶುರು ಮಾಡ್ತಾರೆ. ಒಂದು ಸಣ್ಣ ಫೋನ್ ಕಾಲ್ ಇಬ್ಬರ ಜೀವನವನ್ನು ಹೇಗೆ ತಲೆಕೆಳಗು ಮಾಡುತ್ತೆ ಅನ್ನೋದೇ ಈ ಕೊರಿಯನ್ ಥ್ರಿಲ್ಲರ್ ಕಥೆ.

Read Full Story

09:47 PM (IST) Aug 28

ನಿವೃತ್ತಿ ಜೀವನಕ್ಕೆ 1 ಅಥವಾ 2 ಕೋಟಿ ರೂಪಾಯಿ ಸಾಕೇ? ನಿಮ್ಮ ನಿವೃತ್ತಿ ಸುಲಭ ಪ್ಲಾನ್‌ ಹೇಗಿರಬೇಕು?

ನಿವೃತ್ತಿ ಯೋಜನೆಯು ಕೇವಲ ಒಂದು ನಿರ್ದಿಷ್ಟ ಹಣದ ಮೊತ್ತವನ್ನು ಗುರಿಯಾಗಿಸುವುದಲ್ಲ, ಬದಲಿಗೆ ಹಣದುಬ್ಬರಕ್ಕೆ ಅನುಗುಣವಾಗಿ ನಿಮ್ಮ ಭವಿಷ್ಯದ ತಿಂಗಳ ಖರ್ಚುಗಳನ್ನು ಅಂದಾಜಿಸುವುದರೊಂದಿಗೆ ಆರಂಭವಾಗಬೇಕು. ಸುಸ್ಥಿರ ಹೂಡಿಕೆ, ನಿಯಮಿತ ಆದಾಯದ ಮೂಲಗಳು ಮತ್ತು ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಸರಿಯಾದ ಯೋಜನೆಯೇ ನೆಮ್ಮದಿಯ ನಿವೃತ್ತಿ ಜೀವನಕ್ಕೆ ದಾರಿಯಾಗಿದೆ.

Read Full Story

09:26 PM (IST) Aug 28

'ಟಾಕ್ಸಿಕ್‌'ನಲ್ಲಿ ಮೆಚ್ಚುಗೆ ಗಳಿಸಿದ 'ಟಿಕೆಟ್' ಪುಟ್ಟ ಹುಡುಗ ಯಾರು? ಈತನ ಹಿನ್ನೆಲೆ ತಿಳಿದರೆ ಶಾಕ್ ಆಗ್ತೀರ!

ರಾಕಿ ಭಾಯ್ ಸಿನಿಮಾದಲ್ಲಿ ಅತಿಥಿ ಪಾತ್ರಗಳಿಗಿಂತಲೂ ಹೆಚ್ಚಾಗಿ ಈ 'ಟಿಕೆಟ್' ಎಂಬ ಪುಟಾಣಿ ಪಾತ್ರ ಜನರಿಗೆ ಹತ್ತಿರವಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ 'ಟಾಕ್ಸಿಕ್' ಸಿನಿಮಾಗೆ ಕಬೀರ್ ಪಹ್ವಾ ಅವರ ನಟನೆ ಒಂದು ವಿಶೇಷ ಮೆರುಗು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾರೀತ? ನೋಡಿ..

Read Full Story

07:34 PM (IST) Aug 28

ಟ್ವಿಸ್ಟ್ ಮೇಲೆ ಟ್ವಿಸ್ಟ್ - JioHotstarನಲ್ಲಿ ಸ್ಟ್ರೀಮ್ ಆಗ್ತಿರುವ 5 ಬೆಸ್ಟ್ ಕ್ರೈಂ ಥ್ರಿಲ್ಲರ್‌ ಸಿನಿಮಾಗಳಿವು

ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇಲ್ಲಿವೆ JioHotstarನಲ್ಲಿ ನೋಡಬಹುದಾದ 5 ಬೆಸ್ಟ್ ಸಿನಿಮಾಗಳು. ‘Neru’, ‘Sookshmadarshini’, ‘Abraham Ozler’, ‘21 Hours’ ಮತ್ತು ‘Heaven’ ಸಿನಿಮಾಗಳ ವಿಶೇಷತೆ ಇಲ್ಲಿದೆ.

Read Full Story

07:28 PM (IST) Aug 28

ಟೀಂ ಇಂಡಿಯಾ ಇಷ್ಟೊಂದು ಅಸಹಾಯಕ ಸ್ಥಿತಿಗೆ ತಲುಪಿದ್ದು ನನಗೆ ನೆನಪೇ ಇಲ್ಲ - ಶುಭ್‌ಮನ್ ಗಿಲ್ ನಾಯಕತ್ವಕ್ಕೆ ಮೊಹಮ್ಮದ್ ಕೈಫ್ ಕಿಡಿ

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ನಾಯಕ ಶುಭಮನ್ ಗಿಲ್ ಅವರ ಅನುಭವದ ಕೊರತೆಯಿಂದಾಗಿ ಭಾರತ ಗೆಲ್ಲಬಹುದಾದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಗಿಲ್ ಅವರ ತಂತ್ರಗಳು ಮತ್ತು ನಿರ್ಧಾರಗಳನ್ನು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಟೀಕಿಸಿದ್ದು, ಈ ಡ್ರಾದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ.
Read Full Story

06:42 PM (IST) Aug 28

ಜನಪ್ರಿಯ ಪಬ್‌ಜಿ ಮೊಬೈಲ್ ಗೇಮ್ ಪಾರ್ಟ್ನರ್ ಫಾರೂಖ್ ಸಾವು, 28ನೇ ವಯಸ್ಸಿಗೆ ದುರಂತ ಅಂತ್ಯ

ಎಲ್ಲರೂ ಪಬ್‌ಜಿ ಗೇಮ್ ಆಡದಿದ್ದರೂ ಬಹುತೇಕರು ಕೇಳಿದ್ದಾರೆ. ಮಕ್ಕಳು, ಯುವ ಸಮೂಹ ಸೇರಿದಂತೆ ಬಹುತೇಕರು ಆಡುತ್ತಿದ್ದ ಪಬ್‌ಜಿ ಗೇಮ್ ಕ್ರಿಯೇಟರ್ ಫಾರೂಖ್ ಅಹಮ್ಮದ್ ಸಾವು ಕಂಡಿದ್ದಾರೆ. ಕೇವಲ 28ನೇ ವಯಸ್ಸಿಗೆ ಏನಾಯಿತು?

Read Full Story

06:33 PM (IST) Aug 28

Chanakya Niti - ಎಷ್ಟೇ ಸಂಪಾದಿಸಿದ್ರೂ ಹಣ ಕೈಯಲ್ಲಿ ನಿಲ್ಲುತ್ತಿಲ್ವಾ? ಈ 4 ಅಭ್ಯಾಸಗಳನ್ನು ಇಂದೇ ಬದಲಿಸಿ!

ಎಷ್ಟೇ ಸಂಪಾದಿಸಿದ್ರೂ ಕೈಯಲ್ಲಿ ಹಣ ನಿಲ್ತಾ ಇಲ್ವಾ? ನಮಗೇ ಗೊತ್ತಿಲ್ಲದೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಚಾಣಕ್ಯನ ಪ್ರಕಾರ, ಕೆಲವು ಅಭ್ಯಾಸಗಳಿರುವವರ ಬಳಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ಅವು ಯಾವುವು ಅಂತ ನೋಡೋಣ.

Read Full Story

06:12 PM (IST) Aug 28

ಕಿಲಾಡಿ ನಟಿ ಆಸ್ಪತ್ರೆ ಪಾಲು.. 'ಅನೆಸ್ತೇಷಿಯಾ ತಗೊಂಡಾಗ ಸಿಗೋ ಮಜವೇ ಬೇರೆ' ಅಂದಿದ್ಯಾಕೆ ಉರ್ಫಿ ಜಾವೇದ್?

2016 ರಲ್ಲಿ 'ಬಡೇ ಭೈಯಾ ಕಿ ದುಲ್ಹನಿಯಾ' ಮೂಲಕ ನಟನೆ ಆರಂಭಿಸಿದ ಉರ್ಫಿ, ನಂತರ ಚಂದ್ರ ನಂದಿನಿ, ಮೇರಿ ದುರ್ಗಾ ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರಿಗೆ ಅಸಲಿ ಬ್ರೇಕ್ ಸಿಕ್ಕಿದ್ದು 'ಬಿಗ್ ಬಾಸ್ OTT' ಸೀಸನ್ 1 ರಿಂದ. ಈ ಕಿಲಾಡಿ ನಟಿ ಈಗ ಆಸ್ಪತ್ರೆ ಪಾಲಾಗಿದ್ದು, ಅಲ್ಲಿಯೂ ತಮ್ಮ ಕಿತಾಪತಿ ಬಿಟ್ಟಿಲ್ಲ!

Read Full Story

06:00 PM (IST) Aug 28

'ಈ ಸಿನಿಮಾ ಇಷ್ಟವಾಗದಿದ್ರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ' - ನಟಿ ಶ್ವೇತಾ ಲಕ್ಷ್ಮಣ್‌ ಚಾಲೆಂಜ್‌

‘ಸಹ: ಲೈಫ್‌ ಆಫ್‌ ಸಂಜು’ ಸಿನಿಮಾ ಬಗ್ಗೆ ಯಂಗ್‌ ಹೀರೋಯಿನ್‌ ಶ್ವೇತಾ ಲಕ್ಷ್ಮಣ್‌ ಸಖತ್‌ ಕಾನ್ಫಿಡೆನ್ಸ್‌ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿ ಪ್ರೇಕ್ಷಕರು ಡಿಸಪ್ಪಾಯಿಂಟ್‌ ಆದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್‌ ಹಾಕಿದ್ದಾರೆ.

Read Full Story

05:56 PM (IST) Aug 28

ನೇಪಾಳ-ಟಿಬೆಟ್‌ ಜಲಪ್ರಳಯ - 30 ವರ್ಷದಲ್ಲಿ ಶೇ.12ರಷ್ಟು ಹಿಮನದಿ ನಾಶ, ಮಾರ್ಚ್‌ನಲ್ಲಿ ನೀಡಿದ್ದ ಎಚ್ಚರಿಕೆ ನಿಜವಾಯ್ತು!

ನೇಪಾಳ-ಟಿಬೆಟ್ ಗಡಿಯಲ್ಲಿನ ವಿನಾಶಕಾರಿ ಪ್ರವಾಹವು ಹಿಮಾಲಯದ ಹಿಮಮಂಡಲದ ಬಿಕ್ಕಟ್ಟನ್ನು ಜಗತ್ತಿಗೆ ಅನಾವರಣಗೊಳಿಸಿದೆ. ICIMOD ವರದಿಯು ಹಿಮನದಿಗಳು ವೇಗವಾಗಿ ಕರಗುತ್ತಿವೆ ಎಂದು ಮೊದಲೇ ಎಚ್ಚರಿಸಿತ್ತು. 'ಮಂಜುಗಡ್ಡೆ ಮತ್ತು ಬಂಡೆಗಳ ಹಿಮಪಾತ' ಈ ದುರಂತಕ್ಕೆ ಮುಖ್ಯ ಕಾರಣವಾಗಿದ್ದು, ಇಂತಹ ಗಡಿಯಾಚೆಗಿನ ವಿಪತ್ತುಗಳನ್ನು ಎದುರಿಸಲು ಪ್ರಾದೇಶಿಕ ಸಹಕಾರದ ಅಗತ್ಯವನ್ನು ಇದು ಒತ್ತಿಹೇಳುತ್ತದೆ.
Read Full Story

05:32 PM (IST) Aug 28

ಸತತ ಏರಿಕೆ ಬಳಿಕ ದಿಢೀರ್ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಇವತ್ತು ಒಂದೇ ದಿನ 3,160 ರುಪಾಯಿ ಕುಸಿತ!

ಬೆಂಗಳೂರು: ಕಳೆದ 10 ದಿನಗಳ ಹಿಂದೆ ಗಗನ ಮುಖಿಯಾಗಿದ್ದ ಚಿನ್ನದ ಬೆಲೆ ಇದೀಗ ಇಳಿಮುಖ ಕಾಣುವತ್ತ ಸಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಹಾಗಿದ್ದರೇ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

05:30 PM (IST) Aug 28

'ಟಾಕ್ಸಿಕ್' ಸಿನಿಮಾ ವಿರುದ್ಧ ಆಕ್ರೋಶ, ಸೆನ್ಸಾರ್ ಮಂಡಳಿ ವಿರುದ್ಧ ಸಿಡಿದೆದ್ದ ಅಣ್ಣಾಮಲೈ

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಕ್ಕೆ ಅನುಮತಿ ನೀಡಿದ ಸೆನ್ಸಾರ್ ಬೋರ್ಡ್ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

Read Full Story

05:25 PM (IST) Aug 28

ಭೂಕಂಪದಿಂದ ಬಚಾವಾಗಿ ಹೊರಬಂದ ಉದ್ಯೋಗಿ, ಮನುಷ್ಯತ್ವ ಮರೆತ ಕಂಪನಿ ಸೂಚನೆಯಂತೆ ಅಂಗಡಿಯೊಳಗೆ ಹಣ ತರಲು ಹೋಗಿ ಯುವತಿ ಸಾವು!

ಜಪಾನ್‌ನ ಪ್ರಬಲ ಭೂಕಂಪದಿಂದ ಸುರಕ್ಷಿತವಾಗಿ ಪಾರಾಗಿದ್ದ 22 ವರ್ಷದ ಯುವತಿಯೊಬ್ಬಳು, ಕಂಪನಿಯ ಒತ್ತಾಯದ ಮೇರೆಗೆ ನಗದು ತರಲು ಮತ್ತೆ ಮಾಲ್‌ಗೆ ಹಿಂತಿರುಗಿದಳು. ನಂತರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಆಕೆ ತನ್ನ ಸಹೋದ್ಯೋಗಿಯೊಂದಿಗೆ ಪ್ರಾಣ ಕಳೆದುಕೊಂಡಳು. ಈ ದುರಂತಕ್ಕೆ ಕಾರಣವಾದ ತಮ್ಮ ತಪ್ಪನ್ನು ಕಂಪನಿ ಒಪ್ಪಿಕೊಂಡು ಕ್ಷಮೆಯಾಚಿಸಿದೆ.
Read Full Story

04:42 PM (IST) Aug 28

Layoffs ಬಳಿಕ ಸಿಗದ ಜಾಬ್, ನೆಮ್ಮದಿಗಾಗಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿದ ಯುವಕ, ವೇತನ ಗಂಟೆಗೆ 1000 ರೂ!

ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ 29 ವರ್ಷದ ಯುವಕ, ನಿರುದ್ಯೋಗದಿಂದ ಉಂಟಾದ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಅಚ್ಚರಿಯ ಹಾದಿ ಹಿಡಿದಿದ್ದಾನೆ. ಆರ್ಥಿಕವಾಗಿ ಸದೃಢನಾಗಿದ್ದರೂ, ಕಳೆದುಹೋದ ದಿನಚರಿ ಮತ್ತು ಮಾನಸಿಕ ನೆಮ್ಮದಿಗಾಗಿ ಆತ ಗಂಟೆಗೆ ಸುಮಾರು 1,000 ರೂಪಾಯಿ ಸಂಬಳದ ಪಾತ್ರೆ ತೊಳೆಯುವ ಕೆಲಸವನ್ನು ಆರಿಸಿಕೊಂಡನು.
Read Full Story

03:41 PM (IST) Aug 28

ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!

ಆಧಾರ್ ಯೋಜನೆಯ ಪ್ರಮುಖ ರೂವಾರಿ ವಿವೇಕ್ ರಾಘವನ್, ಇದೀಗ 'ಸರ್ವಂ AI' ಮೂಲಕ ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಭಾಷಾ ವೈವಿಧ್ಯತೆಗೆ ತಕ್ಕಂತೆ AI ಮಾದರಿಗಳನ್ನು ನಿರ್ಮಿಸುತ್ತಿರುವ ಅವರ ಸಾಧನೆಯನ್ನು 'ಟೈಮ್' ಪತ್ರಿಕೆಯು ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಸೇರಿಸಿ ಗೌರವಿಸಿದೆ.
Read Full Story

03:16 PM (IST) Aug 28

ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ ಮಾಡಿದ್ರೆ ಲಾರ್ಡ್ಸ್‌ ಟೆಸ್ಟ್ ಬಾಯ್ಕಾಟ್ ಮಾಡ್ತೇವೆ; ಇಂಗ್ಲೆಂಡ್‌ಗೆ ಬೆದರಿಕೆ ಹಾಕಿ ಕೆಲವೇ ಹೊತ್ತಿನಲ್ಲೇ ತೆಪ್ಪಗಾದ ಪಾಕಿಸ್ತಾನ

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ವೇಳೆ, ಇಮ್ರಾನ್ ಖಾನ್ ಮಕ್ಕಳ ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪಂದ್ಯ ಬಹಿಷ್ಕಾರದ ಬೆದರಿಕೆ ಹಾಕಿತ್ತು. ಆದರೆ, ಸ್ಕೈ ಸ್ಪೋರ್ಟ್ಸ್ ಸಂದರ್ಶನವನ್ನು ಪ್ರಸಾರ ಮಾಡಿಯೇ ಬಿಟ್ಟಿತು, ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ಮಧ್ಯಪ್ರವೇಶದ ನಂತರ ಪಂದ್ಯ ಮುಂದುವರೆಯಿತು.
Read Full Story

01:53 PM (IST) Aug 28

ಟಾಟಾ ಕಾರುಗಳ ಹೊಸ ಅಧ್ಯಾಯ - ಗ್ರಾಹಕರು ನೀಡಿದ ನೇಮ್ ಈಗ ಬ್ರ್ಯಾಂಡ್, ರಿಬ್ರ್ಯಾಂಡಿಂಗ್ ನೇಮ್ ಘೋಷಿಸಿದ ಟಾಟಾ ಮೋಟಾರ್ಸ್‌

ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನ ವಿಭಾಗಕ್ಕೆ 'Tata.cars' ಎಂಬ ಹೊಸ ಬ್ರ್ಯಾಂಡ್ ಗುರುತನ್ನು ಘೋಷಿಸಿದೆ. ಈ ನೂತನ ಬ್ರ್ಯಾಂಡ್ ಅಡಿಯಲ್ಲಿ ಸಾಂಪ್ರದಾಯಿಕ (ICE) ಮತ್ತು ಎಲೆಕ್ಟ್ರಿಕ್ (EV) ವಾಹನಗಳೆರಡೂ ಬರಲಿದ್ದು, ಗ್ರಾಹಕರ ಗೊಂದಲ ನಿವಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕಂಪನಿಯು ತನ್ನ ಶೋ ರೂಂಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಿದೆ.
Read Full Story

01:35 PM (IST) Aug 28

ಮೋದಿ, ರಾಹುಲ್ ಬಿಟ್ರೆ ಮುಂದಿನ ಪ್ರಧಾನಿ ಯಾರು? ಸಮೀಕ್ಷೆಯಲ್ಲಿ ದಳಪತಿ ವಿಜಯ್‌ಗೆ 3ನೇ ಸ್ಥಾನ! ಮಮತಾ, ದೀಪ್ಕೆಗೆ ಎಷ್ಟನೇ ಸ್ಥಾನ??

'ಇಂಡಿಯಾ ಟುಡೇ-ಸಿವೋಟರ್' ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ, 2029ರ ಪ್ರಧಾನಿ ಹುದ್ದೆಗೆ ನಟ ಸಿ.ಜೋಸೆಫ್ ವಿಜಯ್ ಮೂರನೇ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಂತರದ ಸ್ಥಾನದಲ್ಲಿರುವ ವಿಜಯ್, ಶೇ. 9.2ರಷ್ಟು ಜನರ ಬೆಂಬಲ ಗಳಿಸಿದ್ದಾರೆ.

Read Full Story

01:25 PM (IST) Aug 28

ಅಂಡರ್-19 ತಂಡದಲ್ಲಿ ದ್ರಾವಿಡ್, ಸೆಹ್ವಾಗ್ ಮಕ್ಕಳಿಗೆ ಚಾನ್ಸ್, ಆದ್ರೆ 15 ವರ್ಷದ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಯಾಕಿಲ್ಲ ಜಾಗ?

ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್-19 ತಂಡದಿಂದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಕೈಬಿಡಲಾಗಿದ್ದು, ಸೆಹ್ವಾಗ್ ಮತ್ತು ದ್ರಾವಿಡ್ ಪುತ್ರರು ಸ್ಥಾನ ಪಡೆದಿದ್ದಾರೆ. ಒಬ್ಬ ಆಟಗಾರ ಒಂದಕ್ಕಿಂತ ಹೆಚ್ಚು ಅಂಡರ್-19 ವಿಶ್ವಕಪ್ ಆಡಬಾರದು ಎಂಬ ಬಿಸಿಸಿಐನ ವಿಶೇಷ ನಿಯಮವೇ ವೈಭವ್ ಅವರ ಅನುಪಸ್ಥಿತಿಗೆ ಪ್ರಮುಖ ಕಾರಣವಾಗಿದೆ.
Read Full Story

01:04 PM (IST) Aug 28

ನಿಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಬಹುದೇ? ಅದಕ್ಕೆ ಇರುವ ತೆರಿಗೆ ನಿಯಮಗಳು ಏನೇನು..?

ಅನುವಂಶಿಕವಾಗಿ ಬಂದ ಆಸ್ತಿ ಅಥವಾ ಚಿನ್ನವನ್ನು ಪಡೆದಾಗ ಯಾವುದೇ ತೆರಿಗೆ ಇರುವುದಿಲ್ಲ, ಆದರೆ ಅದನ್ನು ಲಾಭಕ್ಕೆ ಮಾರಾಟ ಮಾಡಿದಾಗ ಬಂಡವಾಳ ಗಳಿಕೆ ತೆರಿಗೆ (Capital Gains Tax) ಅನ್ವಯಿಸುತ್ತದೆ. ಈ ತೆರಿಗೆಯಿಂದ ವಿನಾಯಿತಿ ಪಡೆಯಲು, ಗಳಿಸಿದ ಲಾಭವನ್ನು ಹೊಸ ವಸತಿ ಆಸ್ತಿಯಲ್ಲಿ ಮರುಹೂಡಿಕೆ ಮಾಡಬಹುದು ಅಥವಾ 'ಕ್ಯಾಪಿಟಲ್ ಗೇನ್ಸ್ ಅಕೌಂಟ್'ನಲ್ಲಿ ತಾತ್ಕಾಲಿಕವಾಗಿ ಜಮೆ ಮಾಡಬಹುದು.

Read Full Story

12:43 PM (IST) Aug 28

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 FE ಬಿಡುಗಡೆ - ಒನ್ UI 9 ಮತ್ತು ಬಲಿಷ್ಠ AI ವೈಶಿಷ್ಟ್ಯಗಳೊಂದಿಗೆ ಮಾರ್ಕೆಟ್‌ಗೆ ಲಗ್ಗೆ

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S26 FE ಸ್ಮಾರ್ಟ್‌ಫೋನ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಇದು One UI 9 ಕಾರ್ಯಾಚರಣಾ ವ್ಯವಸ್ಥೆ ಹೊಂದಿರುವ ಮೊದಲ ಫೋನ್ ಆಗಿದ್ದು, ಸುಧಾರಿತ ಗ್ಯಾಲಕ್ಸಿ AI ಸಾಮರ್ಥ್ಯಗಳು ಮತ್ತು ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಫೋನ್ 7 ವರ್ಷಗಳ OS ಅಪ್‌ಡೇಟ್‌ಗಳ ಭರವಸೆಯೊಂದಿಗೆ ಬರುತ್ತದೆ.
Read Full Story

12:33 PM (IST) Aug 28

Gandak River - ನೇಪಾಳದಲ್ಲಿ ಭೀಕರ ಪ್ರವಾಹ, ಅಲ್ಲಿಂದಲೇ ಹರಿದು ಬರುವ ಬಿಹಾರದ ಈ ನದಿ ಮಾತ್ರ ಸೈಲೆಂಟ್! ಆದ್ರೂ ಸರ್ಕಾರ ಅಲರ್ಟ್

ನೇಪಾಳದಲ್ಲಿ ಭೀಕರ ಪ್ರವಾಹ ಉಂಟಾಗಿದ್ರೂ, ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಹರಿಯುವ ಗಂಡಕ್ ನದಿಯ ನೀರಿನ ಮಟ್ಟ ಸದ್ಯಕ್ಕೆ ಸಾಮಾನ್ಯವಾಗಿ ಇದೆ. ಯಾವುದೇ ತಕ್ಷಣದ ಪರಿಣಾಮ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೂ, ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಅಲರ್ಟ್ ಘೋಷಿಸಿದೆ.

Read Full Story

12:09 PM (IST) Aug 28

ಜೀ ಗ್ರೂಪ್ ಸುಭಾಷ್ ಚಂದ್ರ ಶೇ.99.97 ಸಾಲ ಮನ್ನಾ ವಿವಾದ 'ಭಾರತೀಯ ಕೋರ್ಟ್‌ ವಿಚಿತ್ರ ನ್ಯಾಯ' - ವಿಜಯ್ ಮಲ್ಯ ಲೇವಡಿ!

ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರಿಗೆ NCLT ನೀಡಿದ ಬೃಹತ್ ಸಾಲ ವಿನಾಯಿತಿಗೆ, ಉದ್ಯಮಿ ವಿಜಯ್ ಮಲ್ಯ ವ್ಯಂಗ್ಯವಾಡಿದ್ದಾರೆ. ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಮಲ್ಯ, ₹22,006 ಕೋಟಿ ಸಾಲದಲ್ಲಿ ಕೇವಲ ₹6.5 ಕೋಟಿ ಪಾವತಿಸಲು ಚಂದ್ರ ಅವರಿಗೆ ಅನುಮತಿ ನೀಡಿರುವುದನ್ನು 'ಭಾರತೀಯ ಸಾಲ ಪರಿಹಾರ ನ್ಯಾಯ' ಎಂದು ಲೇವಡಿ ಮಾಡಿದ್ದಾರೆ.
Read Full Story

11:57 AM (IST) Aug 28

Jan Dhan Yojana - ಜನ್ ಧನ್ ಖಾತೆಗಳಲ್ಲಿ ಜಬರ್ದಸ್ತ್ ಏರಿಕೆ! ₹3 ಲಕ್ಷ ಕೋಟಿ ದಾಟಿದೆ ಠೇವಣಿ!

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಖಾತೆಗಳಲ್ಲಿನ ಠೇವಣಿ ಕಳೆದ 12 ವರ್ಷಗಳಲ್ಲಿ 12.8 ಪಟ್ಟು ಹೆಚ್ಚಾಗಿ 3.17 ಲಕ್ಷ ಕೋಟಿ ರೂಪಾಯಿ ತಲುಪಿದೆ. ಆಗಸ್ಟ್ 2026ರ ವೇಳೆಗೆ ಒಟ್ಟು 59.09 ಕೋಟಿ ಖಾತೆಗಳಿದ್ದು, ಈ ಯೋಜನೆಯು ಡಿಜಿಟಲ್ ಬ್ಯಾಂಕಿಂಗ್‌ಗೆ ದೊಡ್ಡ ಉತ್ತೇಜನ ನೀಡಿದೆ.

Read Full Story

11:15 AM (IST) Aug 28

ದೇಶದ ಅಪಘಾತ ಪರಿಹಾರ ಇತಿಹಾಸದಲ್ಲೇ ದಾಖಲೆ - 32 ವರ್ಷಗಳ ಬಳಿಕ ಮೃತರ ಕುಟುಂಬಕ್ಕೆ ₹33.6 ಕೋಟಿ ಪರಿಹಾರ!

32 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಂಟೀರಿಯರ್ ಡಿಸೈನರ್ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವು ಬಡ್ಡಿ ಸಹಿತ ₹33.6 ಕೋಟಿ ಪರಿಹಾರ ನೀಡಲು ಆದೇಶಿಸಿದೆ. ಸುದೀರ್ಘ ಕಾನೂನು ಹೋರಾಟದ ನಂತರ, ಮೃತರ ಪತಿ ಮತ್ತು ಇಬ್ಬರು ಮಕ್ಕಳಿಗೆ ಈ ಐತಿಹಾಸಿಕ ಪರಿಹಾರ ಮೊತ್ತ ದೊರೆಯಲಿದೆ.
Read Full Story

10:44 AM (IST) Aug 28

ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲಲು ಭಾರತ ಮಾಡಬೇಕಾದ್ದೇನು? ಪ್ರಧಾನಿ ಮೋದಿ ಮಹತ್ವದ ಸೂತ್ರ

ಖೇಲೋ ಇಂಡಿಯಾ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಭಾರತವು ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಒತ್ತಿ ಹೇಳಿದರು. ಸರ್ಫಿಂಗ್ ಮತ್ತು ಸ್ಪೋರ್ಟ್ಸ್ ಕ್ಲೈಂಬಿಂಗ್‌ನಂತಹ ಹೊಸ ಕ್ರೀಡೆಗಳಲ್ಲಿ ಪ್ರಾವೀಣ್ಯತೆ ಸಾಧಿಸುವ ಮೂಲಕ ಪದಕಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
Read Full Story

10:36 AM (IST) Aug 28

ನಿಮ್ಮ ಕೃಷಿ ಭೂಮಿ, ತೋಟದ ರಕ್ಷಣೆಗೆ ಯಾವ ಸಿಸಿಟಿವಿ ಉತ್ತಮ? ಇಲ್ಲಿದೆ ನೋಡಿ ಬೆಸ್ಟ್ ಲಿಸ್ಟ್!

ವಿದ್ಯುತ್ ಅಥವಾ ವೈಫೈ ಸಂಪರ್ಕವಿಲ್ಲದ ಕೃಷಿ ಜಮೀನುಗಳಿಗೆ 4ಜಿ ಸಿಮ್ ಮತ್ತು ಸೌರಶಕ್ತಿಯ ಕ್ಯಾಮೆರಾಗಳು ಉತ್ತಮ ಪರಿಹಾರವಾಗಿದೆ. ಇವು ರೈತರಿಗೆ ತಮ್ಮ ಮೊಬೈಲ್ ಮೂಲಕವೇ ಜಮೀನಿನ ಮೇಲೆ ಕಣ್ಣಿಡಲು, ಪ್ರಾಣಿ ಅಥವಾ ವ್ಯಕ್ತಿಗಳ ಚಲನವಲನ ಪತ್ತೆಹಚ್ಚಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
Read Full Story

07:59 AM (IST) Aug 28

Flood: ಮೋದಿ ಜೀ ನಮ್ಮನ್ನು ಕಾಪಾಡಿ; ಟಿಬೆಟ್ ದುರಂತದ ನಡುವೆ ಕಣ್ಣೀರಿಡುತ್ತಾ ಭಾರತಕ್ಕೆ ವಿಡಿಯೋ ಸಂದೇಶ ಕಳುಹಿಸಿದ ಸುನೀತಾ!

ಚೀನಾ-ನೇಪಾಳ ಗಡಿಯ ಸಮೀಪ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಉಸಿರಾಟದ ತೊಂದರೆ, ಆಹಾರ-ನೀರಿನ ಕೊರತೆಯಿಂದ ಬಳಲುತ್ತಿರುವ ಯಾತ್ರಿಕರು, ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಬೆಜಿಂಗ್; ಚೀನಾ-ನೇಪಾಳ ಗಡಿಯ ಸಮೀಪವಿರುವ ಟಿಬೆಟ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪ ಹಾಗೂ ಹಿಮಪಾತದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸದ್ಯ ಭಾರತೀಯ ಯಾತ್ರಿಕರು ಸಾವು-ಬದುಕಿನ ನಡುವೆ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅನೇಕ ಭಾರತೀಯ ಪ್ರವಾಸಿಗರು ಈ ವಿನಾಶಕಾರಿ ದುರಂತದಲ್ಲಿ ಸಿಲುಕಿಕೊಂಡಿದ್ದು, ಅವರ ಸುರಕ್ಷತೆ ಕುರಿತು ತೀವ್ರ ಆತಂಕ ಎದುರಾಗಿದೆ.

Read Full Story

More Trending News