Published : Apr 18, 2026, 07:31 AM ISTUpdated : Apr 18, 2026, 08:45 PM IST

India News Live: ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ಸಾರಾಂಶ

ನವದೆಹಲಿ (ಏ.18): ಲೋಕಸಭೆ, ವಿಧಾನಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡಲು ಉದ್ದೇಶಿಸಿದ್ದ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ -2026' ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ. ಈ ಮೂಲಕ 2029ರ ಲೋಕಸಭೆ ಚುನಾವಣೆಯಿಂದ ಶೇ.33 ಮಹಿಳಾ ಮೀಸಲು ಜಾರಿಗೊಳಿಸುವ ಮೋದಿ ಸರ್ಕಾರದ ಕನಸು ಭಗ್ನವಾಗಿದೆ. ಸಾಂವಿಧಾನಿಕ ತಿದ್ದುಪಡಿ ಆದ ಕಾರಣ ಅಂಗೀಕಾರಕ್ಕೆ ಅಗತ್ಯವಾಗಿದ್ದ 3ನೇ 2ರಷ್ಟು ಬಹುಮತ ಬಾರದೇ ಮಸೂದೆಗೆ 54 ಮತ ಅಂತರದಿಂದ ಸೋಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

08:45 PM (IST) Apr 18

ನಾರಿಶಕ್ತಿ ವಂದನಾ ಮಸೂದೆಗೆ ಸೋಲು - ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ

ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಸೂದೆ ವಿಫಲವಾಗಲು ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಆರೋಪಿಸಿದ ಅವರು, ವಿಪಕ್ಷಗಳು ನಾರಿಶಕ್ತಿಗೆ ಅವಮಾನ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.

Read Full Story

08:13 PM (IST) Apr 18

ನಂಬಿ ಬಂದ ನಟಿಗೆ ಸೆಟ್‌ನಲ್ಲೇ ಅವಮಾನ - ಚಿರಂಜೀವಿ ಚಿತ್ರದಲ್ಲಿ ರಾಧಿಕಾಗೆ ಆಗಿದ್ದೇನು?

1981ರಲ್ಲಿ ಕ್ರಾಂತಿ ಕುಮಾರ್ ನಿರ್ಮಾಣದಲ್ಲಿ 'ಕಿರಾಯಿ ರೌಡಿಲು' ಚಿತ್ರ ತೆರೆಕಂಡಿತ್ತು. ಇದರಲ್ಲಿ ಚಿರಂಜೀವಿ, ಮೋಹನ್ ಬಾಬು, ರಾಧಿಕಾ ಮುಖ್ಯಭೂಮಿಕೆಯಲ್ಲಿದ್ದರು. ಕೋದಂಡ ರಾಮಿರೆಡ್ಡಿ ಈ ಚಿತ್ರದ ನಿರ್ದೇಶಕರು.

Read Full Story

08:03 PM (IST) Apr 18

ಮಲವಿಸರ್ಜನೆಗೆ ತೆರಳಿದಾಗ ಅತಿ ಆಯಾಸದಿಂದ 10 ವರ್ಷದ ಸ್ಮರಣ ಶಕ್ತಿ ಕಳೆದುಕೊಂಡ ಮಹಿಳೆ

ಮಹಿಳೆಯೊಬ್ಬರು ಮಲಬದ್ಧತೆಯಿಂದಾಗಿ ಶೌಚಾಲಯದಲ್ಲಿ ಅತಿಯಾಗಿ ಆಯಾಸಗೊಂಡ ಪರಿಣಾಮ, ತಮ್ಮ 10 ವರ್ಷಗಳ ನೆನಪಿನ ಶಕ್ತಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಈ ಬಗ್ಗೆ ವೈದ್ಯರು ಏನು ಹೇಳ್ತಾರೆ? ಈ ಸಮಸ್ಯೆಗೆ ಕಾರಣ ಏನು?

Read Full Story

07:38 PM (IST) Apr 18

'ಡಕಾಯಿತ್' ಹಿಟ್ ಆಗ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ಅಡಿವಿ ಶೇಷ್? ಈಗ ಡಿಮ್ಯಾಂಡ್ ಎಷ್ಟು ಕೋಟಿ?

ಡಕಾಯಿತ್ ಸಿನಿಮಾ ಯಶಸ್ಸಿನ ನಂತರ ನಟ ಅಡಿವಿ ಶೇಷ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕಂಟೆಂಟ್ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುವ ಈ ನಟ, ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಅವರು ಎಷ್ಟು ಕೋಟಿ ಬೇಡಿಕೆ ಇಡುತ್ತಿದ್ದಾರೆ?

Read Full Story

07:21 PM (IST) Apr 18

ಅಕ್ಷಯ್ ಕುಮಾರ್ ಮಗ ಹೀರೋ ಆಗಲ್ವಂತೆ - ಮಾಡ್ತಿರೋದು ಬರೀ ಇಷ್ಟು ಸಾವಿರದ ಕೆಲಸ!

ಸಿನಿಮಾ ಇಂಡಸ್ಟ್ರಿಯಲ್ಲಿ ನಟರ ಮಕ್ಕಳು ನಟರಾಗೋದೇ ಹೆಚ್ಚು. ಆದರೆ 'ಭೂತ್ ಬಂಗ್ಲಾ' ಸ್ಟಾರ್ ಅಕ್ಷಯ್ ಕುಮಾರ್ ಮಗನ ವಿಷಯದಲ್ಲಿ ಇದು ಸುಳ್ಳಾಗಿದೆ. ಅಕ್ಷಯ್ ಪ್ರಕಾರ, ಅವರ ಮಗ ಆರವ್ ಭಾಟಿಯಾಗೆ ಸಿನಿಮಾಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲವಂತೆ.

Read Full Story

06:23 PM (IST) Apr 18

ಕರೆದಿದ್ದು ಊಟಕ್ಕೆ ಮುಂದೆ ನಡೆದಿದ್ದೇ ಬೇರೆ; 27 ವರ್ಷಗಳ ಹಿಂದಿನ ಮಾಧವನ್ ಲವ್ ಸ್ಟೋರಿ ವೈರಲ್!

ಸಿನೆಮಾ ರಂಗದ ಗ್ಲಾಮರ್ ಜಗತ್ತಿನಲ್ಲಿದ್ದರೂ ಮಾಧವನ್ ಎಂದಿಗೂ ವಿವಾದಗಳಿಗೆ ಸಿಲುಕಿದವರಲ್ಲ. ಸರಿತಾ ಸದಾ ಮಾಧವನ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂದಿಗೂ ಸಿನೆಮಾ ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇವರಿಗೆ ವೇದಾಂತ್ ಎಂಬ ಮಗನಿದ್ದಾನೆ. 

Read Full Story

06:21 PM (IST) Apr 18

ಮೂಗಿನೊಳಗೆ ಸಿಲುಕಿದ ಯುವತಿ ಮೂಗುತಿ; ಅಗ್ನಿಶಾಮಕದಳದ ಸಿಬ್ಬಂದಿಯಿಂದ ಯಶಸ್ವಿ ಆಪರೇಷನ್!

ಪಟ್ಟಮಟ್ಟಂ ನಿವಾಸಿ ಯುವತಿಯೊಬ್ಬರ ಮೂಗುತಿ ಮೂಗಿನೊಳಗೆ ಆಳವಾಗಿ ಸಿಲುಕಿಕೊಂಡು ಆತಂಕ ಸೃಷ್ಟಿಸಿತ್ತು. ಕುಟುಂಬದ ಪ್ರಯತ್ನ ವಿಫಲವಾದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೂಗುತಿಯನ್ನು ಸುರಕ್ಷಿತವಾಗಿ ಹೊರತೆಗೆದು ಯುವತಿಯನ್ನು ರಕ್ಷಿಸಿದರು.
Read Full Story

06:06 PM (IST) Apr 18

RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 'ಗೋ ಗ್ರೀನ್' ಉಪಕ್ರಮದ ಭಾಗವಾಗಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಾದ ಈ ವಿಶೇಷ ಜರ್ಸಿಯಲ್ಲಿ ತಂಡದ ಪ್ರದರ್ಶನದ ಇತಿಹಾಸ ಮತ್ತು ಪಂದ್ಯದ ಸಂಕ್ಷಿಪ್ತ ವರದಿಯನ್ನು ಈ ಲೇಖನ ಒಳಗೊಂಡಿದೆ.
Read Full Story

05:54 PM (IST) Apr 18

ಆಗ ಬಾಲಿವುಡ್​ ನಟಿ, ಈಗ ಜರ್ಮನ್​ ಬ್ಯೂಟಿ - ವಿರಾಟ್​ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್​ಚಲ್​

ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆಯು ಜರ್ಮನ್ ಪ್ರಭಾವಿಯೊಬ್ಬರ ಫೋಟೋವನ್ನು ಲೈಕ್ ಮಾಡಿ, ನಂತರ ಅನ್‌ಲೈಕ್ ಮಾಡಿದ್ದು ರಾತ್ರೋರಾತ್ರಿ ವೈರಲ್ ಆಗಿದೆ. ಈ ಹಿಂದೆ ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದಾಗಲೂ ಇದೇ ರೀತಿ ವಿವಾದ ಸೃಷ್ಟಿಯಾಗಿತ್ತು. ಈ ಘಟನೆಯ ಬಗ್ಗೆ ಸ್ವತಃ ಜರ್ಮನ್ ನಟಿ ಬೇಸರ ವ್ಯಕ್ತಪಡಿಸಿದ್ದು, ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
Read Full Story

05:52 PM (IST) Apr 18

ನನ್ನ ಹೃದಯದಲ್ಲಿ ನಿರಂತರ ನೋವಿದೆ - ಅಮ್ಮನ ನೆನಪಲ್ಲಿ ಕಣ್ಣೀರಿಟ್ಟ ನಟಿ ಜರೀನ್ ಖಾನ್

ತಾಯಿ ಪರ್ವೀನ್ ಖಾನ್ ನಿಧನದ ನಂತರ ನಟಿ ಜರೀನ್ ಖಾನ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಮ್ಮನೇ ನನ್ನ ಪ್ರಪಂಚ, ನನ್ನ ಎಲ್ಲವೂ ಆಗಿದ್ದರು. ನನ್ನ ಹೃದಯದಲ್ಲಿ ನಿರಂತರ ನೋವಿದೆ ಮತ್ತು ಖಾಲಿತನ ಕಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

Read Full Story

05:38 PM (IST) Apr 18

ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ನಟ ವಿದ್ಯುತ್ ಜಮ್ವಾಲ್ - ಮಂತ್ರಮುಗ್ಧರಾದ ಸ್ಟಾರ್ಸ್

ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಈವೆಂಟ್‌ನಲ್ಲಿ ನಟ ವಿದ್ಯುತ್ ಜಮ್ವಾಲ್ ತಮ್ಮ 'ಸ್ಟ್ರೀಟ್ ಫೈಟರ್' ಚಿತ್ರದ ಟ್ರೈಲರ್ ಲಾಂಚ್ ವೇಳೆ ಗಾಯತ್ರಿ ಮಂತ್ರ ಪಠಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಸಹನಟರಾದ ನೋವಾ ಸೆಂಟಿನಿಯೊ ಮತ್ತು ಜೇಸನ್ ಮೊಮೊವಾ ಮಂತ್ರಮುಗ್ಧರಾಗಿದ್ದಾರೆ.

Read Full Story

05:31 PM (IST) Apr 18

ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅತಿವೇಗವಾಗಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

05:05 PM (IST) Apr 18

'ದುಪಟ್ಟಾ ಬಿಸಿ ಮಾಡಿ ಕಣ್ಣಿಗಿಡುತ್ತಿದ್ದರು' - ಅಮ್ಮನ ನೆನಪಲ್ಲಿ ಭಾವುಕರಾದ ಅಮಿತಾಭ್ ಬಚ್ಚನ್!

ಈ ಪೋಸ್ಟ್‌ನ ಮುಖ್ಯ ಉದ್ದೇಶವೇ ದಿವಂಗತ ತಾಯಿ ತೇಜಿ ಬಚ್ಚನ್ ಅವರನ್ನು ನೆನಪಿಸಿಕೊಳ್ಳುವುದಾಗಿತ್ತು. ಬಾಲ್ಯದಲ್ಲಿ ತಾಯಿ ತಮಗೆ ಮಾಡುತ್ತಿದ್ದ 'ಮನೆಮದ್ದು' ಉಪಚಾರವನ್ನು ಅಮಿತಾಭ್ ವಿವರಿಸಿದ್ದಾರೆ.

Read Full Story

04:47 PM (IST) Apr 18

ಪಾದಯಾತ್ರೆಯಲ್ಲಿ ದೀದೀ ಜೀವ ಬಾಯಿಗೆ ತಂದ ಅಭಿಮಾನಿ - ಹೃದಯ ಅರೆಕ್ಷಣ ಸ್ತಬ್ಧ- Video Viral

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾದಯಾತ್ರೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ದಿಢೀರನೆ ಅವರ ಕಾಲಿಗೆ ಬೀಳಲು ಬಂದಾಗ ದೀದಿ ಬೆಚ್ಚಿಬಿದ್ದಿದ್ದು, ಈ ಘಟನೆಯು ರಾಜಕೀಯ ನಾಯಕರ ಭದ್ರತೆಯ ಆತಂಕವನ್ನು ನೆನಪಿಸಿದೆ.
Read Full Story

04:45 PM (IST) Apr 18

ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್‌ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಅವರ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸುವಂತೆ ಸಲಹೆ ನೀಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.  

Read Full Story

04:44 PM (IST) Apr 18

ಮದ್ವೆ ನಂತರ ನಾಲ್ಕು ನಾಯಿಗಳ ಜೊತೆ ಬಂದ ವಿಜಯ್ ದೇವರಕೊಂಡ - ಪೌರಾಣಿಕ ಲೋಕದಲ್ಲಿ ಭರ್ಜರಿ ಎಂಟ್ರಿ

'ಹಾಯ್ ನಾನ್ನ' ಖ್ಯಾತಿಯ ನಿರ್ದೇಶಕ ಶೌರ್ಯುವ್ ಜೊತೆ ನಟ ವಿಜಯ್ ದೇವರಕೊಂಡ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಇದೊಂದು ದೊಡ್ಡ ಮಟ್ಟದ, ಪೌರಾಣಿಕ ಹಿನ್ನೆಲೆಯುಳ್ಳ ಚಿತ್ರವಾಗಲಿದೆ.

Read Full Story

03:58 PM (IST) Apr 18

ಕೋವಿಡ್​ನಲ್ಲಿ ರೀಲ್ಸ್​ ನೋಡಿದ್ದೇ ಬದಲಾಗೋಯ್ತು ಬದುಕು - 21ನೇ ವಯಸ್ಸಲ್ಲಿ ಕೋಟಿ ಕೋಟಿ ಗಳಿಕೆ

ಕೋವಿಡ್ ಸಮಯದಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆದ 16 ವರ್ಷದ ದಿಗ್ವಿಜಯ ಸಿಂಗ್, ಮನೆಯಲ್ಲಿಯೇ ಚಾಕಲೇಟ್ ತಯಾರಿಸಲು ಆರಂಭಿಸಿದರು. ಹವ್ಯಾಸವಾಗಿ ಶುರುವಾದ ಈ ಚಾಕಲೇಟ್ ತಯಾರಿಕೆ, ಇಂದು 'ಸಾರಮ್' ಎಂಬ ಬ್ರ್ಯಾಂಡ್‌ನಡಿಯಲ್ಲಿ ಕೋಟಿ ರೂಪಾಯಿ ವ್ಯವಹಾರವಾಗಿ ಬೆಳೆದು, ಅವರನ್ನು ಯುವ ಉದ್ಯಮಿಯನ್ನಾಗಿಸಿದೆ.
Read Full Story

03:55 PM (IST) Apr 18

ದೇಶವನ್ನದ್ದುದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ 8 ಗಂಟೆ ಅಲ್ಲ, 8.30 ಯಾಕೆ?

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಸರ್ಕಾರದ ಪ್ರಯತ್ನ ವಿಫಲವಾಗಿದೆ.

Read Full Story

03:20 PM (IST) Apr 18

25ನೇ ವಯಸ್ಸಿಗೆ ಮಾಡಿದ ಆ ಒಂದು ನಿರ್ಧಾರವೇ ನನ್ನ ಜೀವನದ ಮಹಾ ದೊಡ್ಡ ತಪ್ಪು - ನಟಿ ಜಯಪ್ರದಾ ಹೇಳಿದ ಸೀಕ್ರೆಟ್!

ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮೆರೆದ ಜಯಪ್ರದಾ ಅವರ ಈ ಮಾತುಗಳು ಸಿನೆಮಾ ರಂಗದ ಗ್ಲಾಮರ್ ಅಡಿಯಲ್ಲೂ ಎಂತಹ ಕರಾಳ ಸತ್ಯಗಳು ಅಡಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿಮಾನಿಗಳು ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದು, "ನೀವು ಇಂದಿಗೂ ನಮಗೆ ಸ್ಫೂರ್ತಿ" ಎಂದಿದ್ದಾರೆ.

Read Full Story

02:28 PM (IST) Apr 18

Exclusive Interview - ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ

ಬೆಂಗಳೂರಿನಲ್ಲಿ ನಡೆದ ಮಿಸ್​ ಯೂನಿವರ್ಸ್​ ಕರ್ನಾಟಕ 2026ರ ಸೌಂದರ್ಯ ಸ್ಪರ್ಧೆಯಲ್ಲಿ ಲೇಖನಾ ಹೆಗ್ಡೆ ವಿಜೇತರಾಗಿದ್ದಾರೆ. ಬಾಸ್ಕೆಟ್​ ಬಾಲ್​ ಆಟಗಾರ್ತಿಯಾಗುವ ಕನಸು ಕಂಡಿದ್ದ ಲೇಖನಾ, ಗಾಯದ ಕಾರಣದಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಮಿಸ್​ ಯೂನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Read Full Story

01:31 PM (IST) Apr 18

'ನಾನು ಜಾತ್ಯತೀತಳು, ಯಾರನ್ನಾದ್ರೂ ಮದ್ವೆ ಆಗ್ತೇನೆ' ಎಂದ ನಟಿ ಹಿಂದೂ ಧರ್ಮಕ್ಕೆ ವಾಪಸ್​ - ಕರಾಳ ದಿನಗಳ ನೆನೆದ ತಾರೆ

ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.

Read Full Story

01:16 PM (IST) Apr 18

ಆರ್ಥಿಕ ಸಂಕಷ್ಟದ ನಡುವೆ ಮಗನ ಬಹುದಿನಗಳ ಬಿರಿಯಾನಿ ಕನಸು ಈಡೇರಿಸಿದ ತಂದೆ, ಜನ ಭಾವುಕ

ಆರ್ಥಿಕ ಸಂಕಷ್ಟದ ನಡುವೆ ಮಗನ ಬಹುದಿನಗಳ ಬಿರಿಯಾನಿ ಕನಸು ಈಡೇರಿಸಿದ ತಂದೆ, ಜನ ಭಾವುಕ, ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಬಿರಿಯಾನಿ ಬೆಲೆಯಿಂದ ಖರೀದಿ ಸಾಧ್ಯವಾಗಿರಲಿಲ್ಲ. ಮಗನ ಖುಷಿ, ತಂದೆ ಸಾರ್ಥಕತೆಯ ಭಾವಕ್ಕೆ ಹಲವರು ಕಮೆಂಟ್ ಮಾಡಿದ್ದಾರೆ.

Read Full Story

12:48 PM (IST) Apr 18

ಅಕ್ಷಯ ತೃತೀಯ ದಿನ ಈ ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ! ನಿಮಗೂ ಈ ಕನಸು ಬಿದ್ದಿದೆಯಾ?

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಬೀಳುವ ಕನಸುಗಳು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ನಂಬಲಾಗಿದೆ. ಹಾಗಾದರೆ, ಯಾವ ಕನಸು ಕಂಡರೆ ಏನು ಫಲ ಸಿಗುತ್ತದೆ ಎಂದು ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ.
Read Full Story

12:47 PM (IST) Apr 18

ಅಣ್ಣ-ತಮ್ಮನ ಒಟ್ಟಿಗೇ ಮದ್ವೆಯಾದಾಕೆ ಈಗ ಮಗುವಿನ ಅಮ್ಮ- ಒಬ್ಬ ಅಪ್ಪ ಸ್ವದೇಶಿ, ಇನ್ನೊಬ್ಬ ವಿದೇಶಿ

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುನೀತಾ ಚೌಹಾಣ್, 'ಜೋಡಿದಾರ್' ಪದ್ಧತಿಯಂತೆ ಇಬ್ಬರು ಸಹೋದರರನ್ನು ವಿವಾಹವಾಗಿದ್ದರು. ಇದೀಗ ಅವರು ಮಗುವಿಗೆ ಜನ್ಮ ನೀಡಿದ್ದು, ಸಂಪ್ರದಾಯದ ಪ್ರಕಾರ ಈ ಮಗುವಿಗೆ ಇಬ್ಬರೂ ಅಪ್ಪಂದಿರಾಗಿದ್ದಾರೆ.
Read Full Story

12:40 PM (IST) Apr 18

ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜರ ವಿರುದ್ಧ ಗರಂ

ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜರ ವಿರುದ್ಧ ಬಿಜೆಪಿ ಗರಂ ಆಗಿದೆ. ಕಟ್ಟಿದ ರಿಬ್ಬನ್ ತೆಗಿಸಿ ಸುರಕ್ಷಿತವಾಗಿಡುವಂತೆ ಓಮರ್ ಅಬ್ದುಲ್ಲಾ ಸೂಚಿಸಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.

Read Full Story

12:35 PM (IST) Apr 18

ನಟಿಯ ಬ್ಯಾಗ್‌ನಿಂದ 50 ಸಾವಿರ ಕದ್ದ ಸಿಬ್ಬಂದಿ, ಹಣ ಸಮೇತ ಸಿಕ್ಕಿಬಿದ್ದು ಸಿನಿಮಾ ಸೆಟ್‌ನಿಂದ ಕಿಕ್‌ಔಟ್!

ನಟಿ ರಾಶಿ ಖನ್ನಾ ಅವರ ಕ್ಯಾರವಾನ್‌ನಿಂದ 50,000 ರೂಪಾಯಿ ನಗದು ಕಳವಾಗಿತ್ತು. ತನಿಖೆ ನಡೆಸಿದಾಗ, ಕ್ಯಾರವಾನ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ಆ ಹಣ ನಟಿಯ ಮ್ಯಾನೇಜರ್‌ಗೆ ಸೇರಿದ್ದೆಂದು ಅವರ ತಂಡ ಸ್ಪಷ್ಟಪಡಿಸಿದೆ.
Read Full Story

11:57 AM (IST) Apr 18

Akshaya Tritiya 2026 - ಅಕ್ಷಯ ತೃತೀಯ ಯಾವಾಗ? ದಿನಾಂಕ, ಪೂಜಾ ಮುಹೂರ್ತ, ವಿಧಾನದ ಸಂಪೂರ್ಣ ಮಾಹಿತಿ

ಬೆಂಗಳೂರು: ಧರ್ಮಗ್ರಂಥಗಳಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಜನರು ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಯಾವುದೇ ಮುಹೂರ್ತ ನೋಡದೆ ಈ ದಿನ ಮಾಡುತ್ತಾರೆ. ಈ ದಿನ ಚಿನ್ನ ಖರೀದಿಸುವುದಕ್ಕೂ ವಿಶೇಷ ಮಹತ್ವವಿದೆ.

 

Read Full Story

11:51 AM (IST) Apr 18

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್

ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ, ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್, ಗುರೂಜಿ ಜೈಲು ಸೇರಿದ್ದರೂ ಪ್ರಭಾವ ಬಳಸಿ ತನ್ನ ವಿರುದ್ಧ ಸಾಕ್ಷ್ಯ ಸಿಗದಂತೆ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

Read Full Story

11:39 AM (IST) Apr 18

ಎರಡೂ ಕೈಗಳಿಲ್ಲದಿದ್ದರೂ ಮುಖದಲ್ಲಿ ನಂದಾದೀಪದಂತಹ ನಗು; ಗೆಳೆಯರ ಆಟ ನೋಡಿ ಸಂಭ್ರಮಿಸಿದ ಪುಟ್ಟ ಬಾಲಕಿ!

ಎರಡೂ ಕೈಗಳಿಲ್ಲದ ಪುಟ್ಟ ಬಾಲಕಿಯೊಬ್ಬಳು ತನ್ನ ಗೆಳೆಯರು ಆಟವಾಡುವುದನ್ನು ನೋಡಿ ಸಂತೋಷಪಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೈಹಿಕ ಸವಾಲಿನ ನಡುವೆಯೂ ಆಕೆಯ ಮುಖದಲ್ಲಿರುವ ನಿಷ್ಕಲ್ಮಶ ನಗು ಮತ್ತು ಸಕಾರಾತ್ಮಕ ಮನೋಭಾವ ನೆಟ್ಟಿಗರ ಹೃದಯವನ್ನು ಗೆದ್ದು, ಅವರನ್ನು ಭಾವುಕರನ್ನಾಗಿಸಿದೆ.
Read Full Story

09:59 AM (IST) Apr 18

ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌!

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಕ್ಯಾಮರೂನ್ ಗ್ರೀನ್ ಬಾರಿಸಿದ ಸಿಕ್ಸರ್, ಮೈದಾನದಲ್ಲಿದ್ದ 'ಟಾಟಾ ಸಿಯೆರಾ' ಕಾರಿಗೆ ಬಡಿಯಿತು. ಈ ಕಾರಣದಿಂದಾಗಿ, ಟಾಟಾ ಸಂಸ್ಥೆಯು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಲಿದೆ.

Read Full Story

09:58 AM (IST) Apr 18

ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ!

ತವರಿನಲ್ಲಿ ಸತತ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಮಧ್ಯಮ ಓವರ್‌ಗಳಲ್ಲಿ ಮಿಂಚುತ್ತಿರುವ ರಜತ್ ಪಾಟೀದಾರ್ ತಂಡದ ಪ್ರಮುಖ ಶಕ್ತಿಯಾಗಿದ್ದು, ಕಳೆದ ಬಾರಿ ತವರಿನಲ್ಲೇ ಸೋತಿದ್ದ ಆರ್‌ಸಿಬಿ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.
Read Full Story

09:14 AM (IST) Apr 18

IPL 2026 - ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಶುಭ್‌ಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಐದನೇ ಸೋಲನ್ನು ಅನುಭವಿಸಿದರೆ, ಗುಜರಾತ್ ತನ್ನ ಮೂರನೇ ಗೆಲುವನ್ನು ದಾಖಲಿಸಿತು.
Read Full Story

07:34 AM (IST) Apr 18

ತಮಿಳುನಾಡು, ಬಿಹಾರ ಬಳಿಕ ಇದೀಗ ರಾಜ್ಯಕ್ಕೆ ಕಾಲಿಟ್ಟ ಹಕ್ಕಿಜ್ವರ, 7444 ಕೋಳಿ ನಾಶ!

ಬೆಂಗಳೂರಿನ ಹೆಸರಘಟ್ಟದ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ (ಹಕ್ಕಿ ಜ್ವರ) ಪತ್ತೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ, 7,444 ಕೋಳಿಗಳನ್ನು ನಾಶಪಡಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ಇರಿಸಲಾಗಿದೆ. ಇದು ಈ ವರ್ಷ ರಾಜ್ಯದಲ್ಲಿ ವರದಿಯಾದ ಮೊದಲ ಹಕ್ಕಿ ಜ್ವರ ಪ್ರಕರಣವಾಗಿದೆ.

 

Read Full Story

07:33 AM (IST) Apr 18

Women s Reservation Defeat: ವಿಪಕ್ಷಗಳಿಗೆ ಮಹಿಳಾ ವಿರೋಧಿ ಹಣೆಪಟ್ಟಿ, ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ರಾಜಕೀಯ ಅಸ್ತ್ರ?

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯು ಸೋಲು ಕಂಡಿದೆ. ಈ ಸೋಲನ್ನು ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಸಜ್ಜಾಗಿದ್ದರೆ, ವಿಪಕ್ಷಗಳು ಇದನ್ನು ಸಂವಿಧಾನಕ್ಕೆ ಸಂದ ಜಯವೆಂದು ಸಂಭ್ರಮಿಸುತ್ತಿವೆ. ಈ ಬೆಳವಣಿಗೆಯ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

 

Read Full Story

07:33 AM (IST) Apr 18

'ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ': ರಾಹುಲ್ ಗಾಂಧಿ | ಪ್ರಿಯಾಂಕಾ ನೋಡಿ ಕಲಿಯಿರಿ ಎಂದ ಶಾ

ಮಹಿಳಾ ಮೀಸಲು ಮಸೂದೆ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮಗೂ ಮತ್ತು ಪ್ರಧಾನಿ ಮೋದಿಗೂ 'ಪತ್ನಿ ಸಮಸ್ಯೆ' ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆಗಡಲು ಉಂಟಾಯಿತು, ಇದಕ್ಕೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು.

 

Read Full Story

More Trending News