Published : Aug 09, 2026, 06:54 AM ISTUpdated : Aug 09, 2026, 11:46 PM IST

India Latest News Live: ಜೀರೋ TO ಹೀರೋ, ಮೈಸೂರಿನಿಂದ ಅಮೆರಿಕಾ.. 'ಧರೆಗೆ ದೊಡ್ಡಣ್ಣ' ಆಗಿರೋ ರಾಕಿಂಗ್ ಸ್ಟಾರ್ ಯಶ್ ಹಿಂದಿರೋ ಸೀಕ್ರೆಟ್ ಇದು!

ಸಾರಾಂಶ

ನವದೆಹಲಿ: ಕೇಂದ್ರ ಸರ್ಕಾರವು ಯುವಕರನ್ನು ತಲುಪುವ ಉದ್ದೇಶದಿಂದ ಜೆನ್‌ ಝೀಗಳು ಹೆಚ್ಚಾಗಿ ಬಳಸುವ ಆ್ಯಪ್‌ಗಳಲ್ಲಿ ಸಕ್ರಿಯವಾಗುತ್ತಿರುವ ನಡುವೆ, ವಿದೇಶಾಂಗ ಇಲಾಖೆಯು ಸ್ನ್ಯಾಪ್‌ಚಾಟ್‌ನಲ್ಲಿ ಚಾನಲ್‌ ಆರಂಭಿಸಿದೆ. ಈ ಮೂಲಕ ಸ್ನ್ಯಾಪ್‌ ಬಳಸುತ್ತಿರುವ ಮೊದಲ ಇಲಾಖೆ ಎನಿಸಿಕೊಂಡಿದೆ. ಈ ಬಗ್ಗೆ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ ಹಾಗೂ ಖಾತೆಯನ್ನು ಹಿಂಬಾಲಿಸುವಂತೆ ಮನವಿ ಮಾಡಿದ್ದಾರೆ. 

ಸ್ನ್ಯಾಪ್‌ಚ್ಯಾಟ್‌ನಲ್ಲಿ ಫೋಟೋ, ವೀಡಿಯೊ, ಟೆಕ್ಸ್‌ಟ್‌ಗಳನ್ನು ಹಂಚಿಕೊಳ್ಳಬಹುದು. ಬಳಕೆದಾರರು ಅವುಗಳನ್ನು ನೋಡುತ್ತಿದ್ದಂತೆ ಆ ಪೋಸ್ಟ್‌ಗಳು ಡಿಲೀಟ್‌ ಆಗಿಬಿಡುತ್ತವೆ. ಅಂದರೆ ಒಮ್ಮೆ ಮಾತ್ರ ಪೋಸ್ಟ್‌ ವೀಕ್ಷಣೆ ಮಾಡಬಹುದು. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಂನಲ್ಲಿ ಆಗಾಗ ಸೆಲ್ಫಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರೆ, ಸಚಿವರು ಕೂಡ ಒಬ್ಬೊಬ್ಬರಾಗಿ ಈ ಕೆಲಸಕ್ಕಿಳಿಯುತ್ತಿದ್ದಾರೆ. ಹೀಗಿರುವಾಗಲೇ ಈ ಬೆಳವಣಿಗೆಯಾಗಿದೆ.

11:46 PM (IST) Aug 09

ಜೀರೋ TO ಹೀರೋ, ಮೈಸೂರಿನಿಂದ ಅಮೆರಿಕಾ.. 'ಧರೆಗೆ ದೊಡ್ಡಣ್ಣ' ಆಗಿರೋ ರಾಕಿಂಗ್ ಸ್ಟಾರ್ ಯಶ್ ಹಿಂದಿರೋ ಸೀಕ್ರೆಟ್ ಇದು!

ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ಇಂದು ಹಾಲಿವುಡ್ ಸಿನಿಮಾ ನಟರತ ಲೆವಲ್‌ಗೆ ಬೆಳೆದುನಿಂತಿದ್ದಾರೆ. ಅವರು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದ್ದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ..

Read Full Story

11:26 PM (IST) Aug 09

ತೆಲುಗು ಹುಡುಗಿ, ಅಕ್ಕಿನೇನಿ ಸೊಸೆ, ಆದ್ರೂ ಶೋಭಿತಾಗೆ ಟಾಲಿವುಡ್‌ನಲ್ಲಿ ಅವಕಾಶಗಳಿಲ್ಲ, ಯಾಕೆ?

ನಟ ನಾಗ ಚೈತನ್ಯ ಜೊತೆ ಮದುವೆಯಾದ ಮೇಲೂ ನಟಿ ಶೋಭಿತಾ ಧೂಳಿಪಾಲಗೆ ತೆಲುಗು ಚಿತ್ರರಂಗದಲ್ಲಿ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಸದ್ಯ ಅವರು ಹಿಂದಿ ಮತ್ತು ತಮಿಳು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story

10:41 PM (IST) Aug 09

ಗಡ್ಡ, ರಗಡ್ ಲುಕ್, ಆಫ್ರಿಕಾ ಬ್ಯಾಕ್‌ಗ್ರೌಂಡ್ - ‘ವಾರಣಾಸಿ’ಯ ರುದ್ರನಾಗಿ ಮಹೇಶ್ ಬಾಬು

Mahesh Babu New Look: ನಟ ಮಹೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ, ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿನ ಅವರ 'ರುದ್ರ' ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

Read Full Story

10:15 PM (IST) Aug 09

JPSC Exam - ಪರೀಕ್ಷೆ ರದ್ದತಿಗೆ ಜಾರ್ಖಂಡ್ ಸರ್ಕಾರ ಒಲವು, ಆದ್ರೆ CBI ತನಿಖೆಗೇ ವಿದ್ಯಾರ್ಥಿಗಳ ಪಟ್ಟು!

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ ಜಾರ್ಖಂಡ್ ಸರ್ಕಾರ, ಮೂರು JPSC ಪರೀಕ್ಷೆಗಳನ್ನು ರದ್ದುಗೊಳಿಸಲು ಒಪ್ಪಿದೆ. ಆದರೆ, CGL ಪರೀಕ್ಷೆಯ ಬಗ್ಗೆ ಸರ್ಕಾರದ ನ್ಯಾಯಾಂಗ ತನಿಖೆ ಪ್ರಸ್ತಾಪವನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದು, CBI ತನಿಖೆಗೆ ಪಟ್ಟು.

Read Full Story

09:46 PM (IST) Aug 09

'ಟಾಕ್ಸಿಕ್' ಬೆಡಗಿ ಬ್ಯೂಟಿ ಸೀಕ್ರೆಟ್ ಏನು? ತಾರಾ ಸುತಾರಿಯಾ ತಿನ್ನೋದು ಇದನ್ನೇ ನೋಡಿ!

'ಟಾಕ್ಸಿಕ್' ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿರೋ ತಾರಾ ಸುತಾರಿಯಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಹೊಳೆಯೋ ತ್ವಚೆ, ಪರ್ಫೆಕ್ಟ್ ಫಿಗರ್ ಹಿಂದಿನ ಗುಟ್ಟೇನು? ಇಲ್ಲಿದೆ ನೋಡಿ ಡೀಟೇಲ್ಸ್.

Read Full Story

09:32 PM (IST) Aug 09

6, 6, 6, 6 - ಒಂದೇ ಓವರ್‌ನಲ್ಲಿ 4 ಭರ್ಜರಿ ಸಿಕ್ಸರ್‌! ಕೋಚ್ ಗಂಭೀರ್ ಮೆಚ್ಚುಗೆ ಪಡೆದ ಭಾರತೀಯ ಬೌಲರ್!

ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಗುರ್ನೂರ್ ಬ್ರಾರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ದೇವದತ್ ಪಡಿಕ್ಕಲ್ ಅವರ ಜವಾಬ್ದಾರಿಯುತ ಶತಕ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕೆಳಕ್ರಮಾಂಕದ ಬ್ಯಾಟರ್‌ಗಳ ಕೊಡುಗೆಯೂ ಗಮನಾರ್ಹವಾಗಿದ್ದು, ಮುಂಬರುವ ಟೆಸ್ಟ್ ಸರಣಿಗೆ ಇದು ಉತ್ತಮ ಮುನ್ಸೂಚನೆ ನೀಡಿದೆ.
Read Full Story

08:24 PM (IST) Aug 09

‘ಟಾಕ್ಸಿಕ್’ ಟ್ರೇಲರ್ ನೋಡಿ ಪತ್ನಿ ಕಿಯಾರಾಗೆ ಸಿದ್ಧಾರ್ಥ್ ಹೇಳಿದ ಮಾತು ವೈರಲ್ - ಅಷ್ಟಕ್ಕೂ ಏನಾಯ್ತು?

Sidharth Supports Kiara: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.

Read Full Story

05:18 PM (IST) Aug 09

Typhoon Dolphin - ಗಂಟೆಗೆ 216KM ವೇಗದಲ್ಲಿ ಕಡಲ ತೀರಕ್ಕೆ ಅಪ್ಪಳಿಸುತ್ತಿರುವ ಚಂಡಮಾರುತ, 1,300 ವಿಮಾನ ಹಾರಾಟ ರದ್ದು; ಭಾರತ ಮೇಲೆ ಏನೆಲ್ಲಾ ಪ್ರಭಾವ ಬೀರುತ್ತದೆ?

ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಸೃಷ್ಟಿಯಾದ 'ಡಾಲ್ಫಿನ್' ಸೂಪರ್ ಟೈಫೂನ್ ಜಪಾನ್, ಚೀನಾ ಮತ್ತು ತೈವಾನ್‌ಗಳಲ್ಲಿ ತೀವ್ರ ಹಾನಿ ಉಂಟುಮಾಡುತ್ತಿದೆ. ಈ ಚಂಡಮಾರುತದ ಅಬ್ಬರಕ್ಕೆ ಜಪಾನ್‌ನಲ್ಲಿ ಐವರು ಮೃತಪಟ್ಟಿದ್ದು, ಚೀನಾದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.

Read Full Story

04:51 PM (IST) Aug 09

10 ಸಾವಿರ ಹೂಡಿಕೆ, ಆರೇ ವರ್ಷದಲ್ಲಿ 1.5 ಕೋಟಿಯ ಒಡೆಯ - ಯುವಕ ಕೊಟ್ಟ ಟಿಪ್ಸ್​ ಈಗ ವೈರಲ್​

ಕರಣ್ ವಾಲಿಯಾ ಎಂಬ ಯುವಕ ಆರು ವರ್ಷಗಳ ಹಿಂದೆ ₹10,000 ಹೂಡಿಕೆ ಮಾಡಿ ಇಂದು ₹1.5 ಕೋಟಿ ಗಳಿಸಿದ್ದಾರೆ. ಮ್ಯೂಚುಯಲ್ ಫಂಡ್‌ಗಳ ಮೂಲಕ ತಮ್ಮ ಹೂಡಿಕೆ ಪಯಣ ಆರಂಭಿಸಿದ ಅವರು, ತಾಳ್ಮೆ ಮತ್ತು ಸಂಶೋಧನೆಯಿಂದ ದೀರ್ಘಾವಧಿಯಲ್ಲಿ ಹಣವನ್ನು ಹೇಗೆ ಬೆಳೆಸಬಹುದು ಎಂಬುದರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Read Full Story

03:42 PM (IST) Aug 09

ವೈದ್ಯೆ ಆಗಬೇಕಿದ್ದವಳು ICU ಸೇರಿದಳು.. ದೇಶದಲ್ಲಿ ಸಂಚಲ ಮೂಡಿಸಿದ ಕರಣಾಜನಕ ಕತೆ..

ಕುಡಿದ ಅಮಲಿನಲ್ಲಿದ್ದ ಚಾಲಕನ ಬೇಜವಾಬ್ದಾರಿಯಿಂದಾಗಿ ಮೆಡಿಕೋ ಪ್ರಿಯಾಂಕಾ ಹೈದರಾಬಾದ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಇದು ದೇಶಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳ ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಈ ದುರಂತವು ಮೆಡಿಕಲ್ ಕಾಲೇಜುಗಳ ಸುತ್ತಮುತ್ತ ಸುರಕ್ಷತಾ ತಪಾಸಣೆ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತದೆ.

Read Full Story

03:09 PM (IST) Aug 09

Pakistan - ಭಾರತದಲ್ಲಿ ಸಾವನ್ನಪ್ಪಿದ್ದ ಉಗ್ರರ ಕುಟುಂಬಗಳಿಗೆ ಹಣ ಕೊಡ್ತಿದ್ದ, ಲಷ್ಕರ್ ಕಮಾಂಡರ್ ಪಾಕ್‌ನಲ್ಲಿ ಅನುಮಾಸ್ಪದ ಸಾವು

ಭಾರತದಲ್ಲಿ ಹತರಾದ ಉಗ್ರರ ಕುಟುಂಬಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಲಷ್ಕರ್-ಎ-ತೊಯ್ಬಾದ ಹಿರಿಯ ಕಮಾಂಡರ್ ಖಾರಿ ಸಯೀದ್ ಅಬ್ದುಲ್ ಅಜೀಜ್, ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

Read Full Story

02:52 PM (IST) Aug 09

ಕೆಲಸ ಬೇಕಿದ್ದರೆ ಬಾಸ್ ಜೊತೆ ಇರಬೇಕು ರಿಲೇಶನ್‌ಶಿಪ್, ಆಘಾತಕಾರಿ ಚಾಟ್ ಹಂಚಿಕೊಂಡ ಗಾಯಕಿ

ಕೆಲಸ ಬೇಕಾ, ಬಾಸ್ ಜೊತೆ ಎಲ್ಲವನ್ನೂ ಹಂಚಿಕೊಳ್ಳಬೇಕು. ಯುವ ಮಹಿಳೆಗೆ ಸಂದರ್ಶನದ ಬಳಿಕ ಸೂಚನೆ ನೀಡಲಾಗಿದೆ. ಇದೀಗ ಈ ವ್ಯಾಟ್ಸಾಪ್ ಚಾಟ್ ಬಹಿರಂಗವಾಗಿದೆ. ಗಾಯಕಿ ಚನ್ಮಯಿ ಶ್ರೀಪಾದ ಈ ಕುರಿತು ಪ್ರಶ್ನಿಸಿದ್ದಾರೆ.

Read Full Story

02:38 PM (IST) Aug 09

ಜಸ್ಟ್ 2 ಗಂಟೆ 9 ನಿಮಿಷ; ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯೋ ಥ್ರಿಲ್ಲರ್ ಮಲಯಾಳಂ ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು ಶಾಪಗ್ರಸ್ಥ ಅರಣ್ಯದಲ್ಲಿ ನಡೆಯುವ ನಿಗೂಢ ಕಥೆಯನ್ನು ಹೊಂದಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ಈ ಸಿನಿಮಾವು ಪ್ರತಿಯೊಂದು ದೃಶ್ಯದಲ್ಲೂ ರೋಚಕ ತಿರುವುಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಡುತ್ತದೆ.

Read Full Story

02:24 PM (IST) Aug 09

ಪಾಕಿಸ್ತಾನದ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಎಷ್ಟು ದಂಡ ಹಾಕ್ತಾರೆ ?

ಪಾಕಿಸ್ತಾನದ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತೀರಾ? ಎಚ್ಚರ! ಇಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಈ ದಂಡದ ಲೆಕ್ಕಾಚಾರ ಹೇಗೆ? ತಿಳಿಯಲು ಕ್ಲಿಕ್ ಮಾಡಿ.

Read Full Story

01:46 PM (IST) Aug 09

ಜೈಸ್ವಾಲ್ ಏನೂ ಮಾತಾಡಲಿಲ್ಲ.. ಆದರೆ ಮೃಣಾಲ್ ಸುಮ್ಮನೆ ಕೂರಲಿಲ್ಲ.. ಈಗ ಹೊಸ ಟ್ವಿಸ್ಟ್..!

ಮೃಣಾಲ್ ಠಾಕೂರ್ ಹಾಗೂ ಯಶಸ್ವಿ ಜೈಸ್ವಾಲ್ ಮಧ್ಯೆ ಏನೋ ನಡೀತಿದೆ ಎಂಬ ವದಂತಿ ಬಗ್ಗೆ ಸ್ವತಃ ನಟಿಯೇ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಡೇಟಿಂಗ್ ವದಂತಿಗಳಿಗೆ ಒಂದು ಕ್ಲಾರಿಟಿ ಸಿಕ್ಕಿದೆ.

Read Full Story

01:32 PM (IST) Aug 09

Miss Universe India - ಫೈನಲ್‌ಗೂ ಮುನ್ನ ಇಂದೋರ್‌ನಲ್ಲಿ ಸೂಫಿ ನೈಟ್! 52 ಸ್ಪರ್ಧಿಗಳ ರಿಲ್ಯಾಕ್ಸ್

ಮಿಸ್ ಯೂನಿವರ್ಸ್ ಇಂಡಿಯಾ 2026ರ 52 ಫೈನಲಿಸ್ಟ್‌ಗಳು ತಮ್ಮ 10 ದಿನಗಳ ತರಬೇತಿ ಕಾರ್ಯಕ್ರಮದ ಭಾಗವಾಗಿ ಇಂದೋರ್‌ನಲ್ಲಿ ನಡೆದ ಸೂಫಿ ನೈಟ್‌ನಲ್ಲಿ ಭಾಗವಹಿಸಿದ್ದರು. ಗ್ಲಾಮಾನಂದ್ ಗ್ರೂಪ್ ಆಯೋಜಿಸುತ್ತಿರುವ ಈ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಆಗಸ್ಟ್ 23 ರಂದು ಜೈಪುರದಲ್ಲಿ ನಡೆಯಲಿದೆ.

Read Full Story

01:23 PM (IST) Aug 09

IND vs SL, Free Entry - ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್, ಟೀಂ ಇಂಡಿಯಾ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಉಚಿತವಾಗಿ ನೋಡಿ!

ಕ್ರಿಕೆಟ್ ಅಭಿಮಾನಿಗಳಿಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಗುಡ್‌ನ್ಯೂಸ್ ನೀಡಿದೆ. ಭಾರತ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ಕುಳಿತು ಉಚಿತವಾಗಿ ವೀಕ್ಷಣೆ ಮಾಡಲು ಅವಕಾಶ ನೀಡಿದೆ.

Read Full Story

12:56 PM (IST) Aug 09

Jharkhand Protest - ದೆಹಲಿ ಪ್ರತಿಭಟನೆಗೆ ಕೇಂದ್ರದ ನಿರ್ಲಕ್ಷ್ಯ, ಜಾರ್ಖಂಡ್ ಸರ್ಕಾರದ ನಡೆಗೆ ಕಾಂಗ್ರೆಸ್ ಮೆಚ್ಚುಗೆ

JPSC ಮತ್ತು JSSC ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದ ನಿಲುವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಕೇಶ್ ಸಿನ್ಹಾ, ಜಾರ್ಖಂಡ್ ಸರ್ಕಾರದ ಮಾತುಕತೆಯನ್ನು ಶ್ಲಾಘಿಸಿದ್ದಾರೆ.

Read Full Story

12:32 PM (IST) Aug 09

Vijay Sangeetha Divorce Update - ವಿಚ್ಛೇದನ ಅರ್ಜಿಯನ್ನು ಹಿಂಪಡೆದ ಸಿಎಂ ವಿಜಯ್ ಪತ್ನಿ ಸಂಗೀತ, ಮುಂದೇನು? ತ್ರಿಶಾ ಜೊತೆಗಿನ ರಿಲೇಷನ್ ನಿಜನಾ?

ತಮಿಳುನಾಡು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತ ಅವರ ನಡುವಿನ ವಿಚ್ಛೇದನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಏಕಾಏಕಿ ಸಂಗೀತಾ ಅವರು ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದರ ನಡುವೆ ಇಬ್ಬರ ನಡುವಿನ ಮುನಿಸು ದೂರ ಆಗಿ ಒಂದಾಗುತ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

Read Full Story

12:30 PM (IST) Aug 09

ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದಿದ್ದ ವಿದ್ಯಾರ್ಥಿನಿ ಬಳಿ 10 ಬುಲೆಟ್ಸ್ ಪತ್ತೆ.. ಅಪ್ರಾಪ್ತೆಯ ಕಾರಣ ಕೇಳಿ ಪೊಲೀಸರೇ ಶಾಕ್

10 ಬುಲೆಟ್ಸ್ ಜೇಬನಲ್ಲಿ ಇಟ್ಕೊಂಡು ಪ್ರಿಯಕರನ ಭೇಟಿಗಾಗಿ ಜೈಲಿಗೆ ಬಂದ ಅಪ್ರಾಪ್ತೆ.. ಅನುಮಾನಗೊಂಡ ಪೊಲೀಸರು ಆಕೆಯನ್ನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕಾರಣ ನೀಡಿದ್ದಾಳೆ. ಅದನ್ನು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.. ಸ್ಟೋರಿಯ ವಿವರ ಇಲ್ಲಿದೆ.

Read Full Story

12:12 PM (IST) Aug 09

'ಐಸಿಯು'ನಲ್ಲೂ ಹಾಡಿದ ಸೋನು ನಿಗಮ್.. 'ನೋವಿನಲ್ಲೂ ಗಾಯನ' ಪೋಸ್ಟ್‌ ಭಾರೀ ವೈರಲ್! ಗಾಯಕನಿಗೆ ಆಗಿದ್ದೇನು?

ನೋವಿನಲ್ಲೂ ನಲಿವಿನಲ್ಲೂ ವೇದಿಕೆಯಲ್ಲೂ, ಮನೆಯಲ್ಲೂ ಹಾಗೂ ಆಸ್ಪತ್ರೆಯಲ್ಲೂ ಎಲ್ಲೇ ಇರಲಿ, ಗಾಯಕ ಸೋನು ನಿಗಮ್ ಅವರಿಗೆ ಸಂಗೀತವೇ ಉಸಿರು, ಸಂಗೀತವೇ ಬದುಕು. ಈ ವಿಡಿಯೋ ಮೂಲಕ ಜಗತ್ತು ಈ ಗಾಯಕನ ಬಗ್ಗೆ ಕಂಡುಕೊಂಡ ಸತ್ಯವೇನು? ಈ ಸ್ಟೋರಿ ನೋಡಿ..

Read Full Story

12:00 PM (IST) Aug 09

ಕೋಟಿ ಕೋಟಿ ಒಡೆಯ ಧೋನಿಗೆ ಬಿಸಿಸಿಐನಿಂದ ತಿಂಗಳಿಗೆ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ?

ಎಂಎಸ್‌ ಧೋನಿ ಅವರು ಈಗಲೂ ಬಿಸಿಸಿಐನಿಂದ ಹಣ ಪಡೆಯುತ್ತಿದ್ದಾರೆ. ಅವರಿಗೆ ತಿಂಗಳಿಗೆ ಎಷ್ಟು ಸಾವಿರ ಹಣ ಪಿಂಚಣಿ ರೂಪದಲ್ಲಿ ಬರುತ್ತಿದೆ ಗೊತ್ತಾ? ಕಂಪ್ಲೀಟ್ ಮಾಹಿತಿ ಸ್ಟೋರಿಯಲ್ಲಿದೆ..

Read Full Story

11:08 AM (IST) Aug 09

ಐಪಿಎಲ್ ಮಾದರಿಯಲ್ಲಿ ಮತ್ತೊಂದು ಕ್ರಿಕೆಟ್ ಲೀಗ್.. 450ಕ್ಕೂ ಹೆಚ್ಚು ಆಟಗಾರರ ಭವಿಷ್ಯ ಇವತ್ತೇ ನಿರ್ಧಾರ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳು ತಮ್ಮದೇ ಆದ ಪ್ರಾದೇಶಿಕ ಕ್ರಿಕೆಟ್ ಲೀಗ್‌ಗಳನ್ನು ಆರಂಭಿಸುತ್ತಿವೆ. ಇದೀಗ ಆ ಸಾಲಿಗೆ ಪಂಜಾಬ್ ಕೂಡ ಸೇರ್ಪಡೆಯಾಗಿದೆ.

Read Full Story

09:50 AM (IST) Aug 09

WTC ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತದ ಸ್ಥಾನ ಏನು..? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ಶ್ರೀಲಂಕಾ ಎದುರು ಟೆಸ್ಟ್‌ ಸರಣಿ ಆಡಲು ಎಕ್ಸೈಟ್ ಆಗಿರುವ ಟೀಂ ಇಂಡಿಯಾ ಹಾದಿ ಅಷ್ಟು ಸುಲಭವಾಗಿಲ್ಲ. WTC ಪಾಯಿಂಟ್ಸ್ ಪಟ್ಟಿಯಲ್ಲಿ ಬಾಂಗ್ಲಾದೇಶಕ್ಕಿಂತ ಕಡೆಯಾಗಿದೆ. ಹೀಗಾಗಿ ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಭರ್ಜರಿಯಾಗಿ ಗೆದ್ದರಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಆಸೆಯನ್ನ ಜೀವಂತವಾಗಿಟ್ಟುಕೊಳ್ಳಬಹುದು.

Read Full Story

09:39 AM (IST) Aug 09

ಭಾರತದ ಜತೆ ರೈಲ್ವೆ ಸಂಪರ್ಕ - ರಷ್ಯಾ ಪ್ರಸ್ತಾಪ; ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಜಾಲ

ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಹೋರ್ಮುಜ್ ಜಲಸಂಧಿಯಲ್ಲಿನ ಭದ್ರತಾ ಭೀತಿಯಿಂದಾಗಿ, ರಷ್ಯಾವು ಭಾರತದೊಂದಿಗೆ ಸಂಪರ್ಕ ಸಾಧಿಸಲು ಪರ್ಯಾಯ ಭೂಮಾರ್ಗವನ್ನು ಹುಡುಕುತ್ತಿದೆ. ಈ ನಿಟ್ಟಿನಲ್ಲಿ, ತುರ್ಕ್ಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ್ ಮೂಲಕ ಹಿಂದೂ ಮಹಾಸಾಗರಕ್ಕೆ ನೇರ ರೈಲ್ವೆ ಸಂಪರ್ಕ ಜಾಲ ನಿರ್ಮಿಸುವ ಪ್ರಸ್ತಾಪವನ್ನು ರಷ್ಯಾ ಮುಂದಿಟ್ಟಿದೆ.
Read Full Story

09:30 AM (IST) Aug 09

ನೀನು ಕೊಲ್ಲದಿದ್ರೆ ಗಂಡನ ನಾನೇ ಹ*ತ್ಯೆ ಮಾಡ್ತೀನಿ - ಲವರ್‌ಗೆ ಮೆಸೇಜ್‌ ಕಳುಹಿಸಿದ ಮಹಿಳೆ

ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ. ಪತ್ನಿಯ ಇನ್‌ಸ್ಟಾಗ್ರಾಂ ಸಂದೇಶಗಳನ್ನು ನೋಡಿದ ಪತಿ, ಈ ಕೊಲೆ ಸಂಚನ್ನು ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story

07:53 AM (IST) Aug 09

ಕಾವೇರಿ ನೀರು ಬರದಿದ್ರೂ ತಮಿಳುನಾಡಿನ ಈ ನದಿ ಬತ್ತಲ್ಲ! 365 ದಿನ ಹರಿಯೋ ರಹಸ್ಯವೇನು?

ತಮಿಳುನಾಡಿನಲ್ಲಿ ವರ್ಷದ 365 ದಿನವೂ ಹರಿಯುವ ಏಕೈಕ ಜೀವ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು, ತನ್ನ ನೀರಿನಲ್ಲಿನ ತಾಮ್ರದ ಅಂಶದಿಂದ ಹೆಸರುವಾಸಿಯಾಗಿದ್ದು, ಹಲವು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಪ್ರಮುಖ ಆಧಾರವಾಗಿದೆ.

Read Full Story

07:18 AM (IST) Aug 09

ರಷ್ಯಾದಿಂದ ತೈಲ ಖರೀದಿಸುವ ಭಾರತಕ್ಕೆ 100% ತೆರಿಗೆ? ಅಮೆರಿಕ ಸೆನೆಟ್‌ನಲ್ಲಿ ಬಿಲ್ ಪಾಸ್!

ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅಮೆರಿಕದ ಸೆನೆಟ್‌ನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಈ ಕಾಯ್ದೆಯು ಜಾರಿಯಾದರೆ, ಜಾಗತಿಕ ತೈಲ ದರ ಏರಿಕೆ ಮತ್ತು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.
Read Full Story

07:09 AM (IST) Aug 09

ಕೃತಕ ಬುದ್ಧಿಮತ್ತೆ (AI) ಬಳಸಿ ವೈರಸ್‌ಗಳನ್ನು ಸೃಷ್ಟಿಸುವಲ್ಲಿ ವಿಜ್ಞಾನಿಗಳು ಯಶಸ್ವಿ

ಕೃತಕ ಬುದ್ಧಿಮತ್ತೆ (ಎಐ) ಬಳಸಿ ವಿಜ್ಞಾನಿಗಳು ವೈರಸ್‌ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ವೈರಸ್‌ಗಳು ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಪಡಿಸುತ್ತವೆಯಾದರೂ, ಭವಿಷ್ಯದಲ್ಲಿ ಇದು ಮಾನವರಿಗೆ ಮಾರಕವಾಗಬಲ್ಲ ವೈರಸ್‌ಗಳ ಸೃಷ್ಟಿಗೆ ಕಾರಣವಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
Read Full Story

More Trending News