ಮುಂಬೈ: ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಬುಧವಾರ ಒಂದೇ ದಿನ 25 ಪೈಸೆ ಕುಸಿದು, ₹90.21ಗೆ ಇಳಿದಿದೆ. ಇದು ಅಮೆರಿಕದ ಕರೆನ್ಸಿ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ. ಮಂಗಳವಾರ ಸಹ ಸಾರ್ವಕಾಲಿಕ ಕನಿಷ್ಠ ಕಂಡಿದ್ದ ರುಪಾಯಿ ಮೌಲ್ಯ ಬುಧವಾರ ₹89.96 ನಿಂದ ವ್ಯವಹಾರ ಆರಂಭಿಸಿತು. ಮಧ್ಯಂತರ ಅವಧಿಯಲ್ಲಿ ಮೊದಲ ಬಾರಿ ₹90 ಗಡಿ ದಾಟಿದ ಅದು, ಒಂದು ಹಂತದಲ್ಲಿ 90.30ಗೆ ಕುಸಿತ ಕಂಡಿತ್ತಾದರೂ ಬಳಿಕ ಅಲ್ಪ ಚೇತರಿಕೆ ಕಂಡು ₹90.21ರಲ್ಲಿ ಅಂತ್ಯವಾಯಿತು. ಈ ಬಗ್ಗೆ ಪ್ರತಿಪಕ್ಷಗಳು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದು, ಅಚ್ಛೇ ದಿನ್ ಎಂದರೆ ಇದೇನಾ? ಎಂದು ಕಿಡಿಕಾರಿವೆ. ಅಮೆರಿಕ ಮತ್ತು ಭಾರತ ನಡುವೆ ಇನ್ನೂ ಏರ್ಪಡದ ವ್ಯಾಪಾರ ಒಪ್ಪಂದ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರಿಂದ ಭಾರೀ ಪ್ರಮಾಣದಲ್ಲಿ ಬಂಡವಾಳ ಹಿಂಪಡೆತ, ರುಪಾಯಿ ದರ ಕುಸಿತ ತಡೆಯಲು ಆರ್‌ಬಿಐ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಕಚ್ಚಾ ತೈಲದರ ಏರಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಕಂಡು ಬಂದಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

10:56 PM (IST) Dec 04
Rupee-vs-Ruble: ಒಂದು ಕಾಲದಲ್ಲಿ ವಿಶ್ವದಲ್ಲೇ ಸೂಪರ್ ಪವರ್ ಆಗಿದ್ದ ಸೋವಿಯತ್ ರಷ್ಯಾ ಪತನದ ನಂತರ, ಅದರ ಕರೆನ್ಸಿಯಾದ ರುಬೆಲ್‌ನ ಪ್ರಸ್ತುತ ಮೌಲ್ಯವು ಭಾರತೀಯ ರೂಪಾಯಿಗೆ ಹೋಲಿಸಿದರೆ ಎಷ್ಟಿದೆ?
10:41 PM (IST) Dec 04
ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿದ್ದಾರೆ, ಮತ್ತು ಈಗ ಅಮೆರಿಕದಿಂದ ಮತ್ತೊಂದು ದೊಡ್ಡ ಸುದ್ದಿ ಹೊರಬಂದಿದೆ, ಇದು ಭಾರತದ ಮೇಲೆ ಭಾರೀ ಪರಿಣಾಮ ಬೀರಬಹುದು ಎನ್ನಲಾಗಿದೆ.
10:15 PM (IST) Dec 04
ಬಾಲಿವುಡ್ ನಟ ಧರ್ಮೇಂದ್ರ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರು ತಮ್ಮ 89 ನೇ ವಯಸ್ಸಿನಲ್ಲಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಧರ್ಮೇಂದ್ರ ಅವರ ಮರಣದ ನಂತರ, ಅವರ ಕುಟುಂಬದಲ್ಲಿ ವಿವಾದಗಳು ಮುನ್ನೆಲೆಗೆ ಬರುತ್ತಿವೆ.
09:56 PM (IST) Dec 04
ಪರ್‌ದೇಸ್, ಧಡ್‌ಕನ್, ದೀವಾನೆಯಂಥ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ಬ್ಯೂಟಿ ಮಹಿಮಾ ಚೌಧರಿ ಮದುವೆಯಾಗಿರುವ ಬಗ್ಗೆ ರೂಮರ್‌ಗಳು ಹಬ್ಬಿದೆ. ಅದರಲ್ಲೂ ತನಗಿಂತ 10 ವರ್ಷ ಹಿರಿಯ 62 ವರ್ಷದ ಸಂಜಯ್ ಮಿಶ್ರಾ ಕೈಹಿಡಿದಿದ್ದಾರೆ ಎನ್ನುವ ವರದಿಯಾಗಿದೆ.
08:00 PM (IST) Dec 04
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಬದುಕಿನ ಅಪರಿಚಿತ ಸಂಗತಿಗಳು ಇಲ್ಲಿವೆ. ಅಮಂಡಾ ಪೂರ್ವಾಂಕರ ಜೊತೆಗಿನ ಅವರ ವಿವಾಹ, ವಿಚ್ಛೇದನ ಮತ್ತು ನಂತರದ ಸಂಬಂಧಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.
06:59 PM (IST) Dec 04
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮಾತನಾಡಿ, ಪಕ್ಷವು ಆರೋಪಗಳನ್ನು ಪರಿಶೀಲಿಸಿದ್ದು, ರಾಹುಲ್ ಮಮ್‌ಕೂಟತಿಲ್ ಅವರು ಇನ್ನು ಮುಂದೆ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.
06:56 PM (IST) Dec 04
ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ, ಇಂಗ್ಲೆಂಡ್‌ನ ಜೋ ರೂಟ್ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಈ ಶತಕದೊಂದಿಗೆ (40ನೇ), ಅವರು ಸಚಿನ್ ತೆಂಡೂಲ್ಕರ್ ಅವರ 51 ಶತಕಗಳ ದಾಖಲೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
06:56 PM (IST) Dec 04
ರಷ್ಯಾದ ಅಧ್ಯಕ್ಷ ಪುಟಿನ್ ದೆಹಲಿಯಲ್ಲಿ ತಂಗಲಿರುವ ರೂಂ ಬೆಲೆ ಎಷ್ಟಿದೆ? ಇಡೀ ಹೊಟೆಲ್ ಬುಕ್ ಮಾಡಲಾಗಿದೆ. ಅತೀ ದುಬಾರಿ ಐಟಿಸಿ ಮೌರ್ಯ ಹೊಟೆಲ್‌ನ ಎಲ್ಲಾ ರೂಂಗಳನ್ನು ಬುಕಿಂಗ್ ಮಾಡಲಾಗಿದೆ. ಪುಟಿನ್ ಉಳಿದುಕೊಳ್ಳುವ ಹೊಟೆಲ್, ರೂಂ ವಿವರ ಇಲ್ಲಿದೆ.
06:26 PM (IST) Dec 04
ವೆಂಕಟೇಶ್ ಪ್ರಸಾದ್ ನೇತೃತ್ವದ 'ಗೇಮ್ ಚೇಂಜರ್' ಬಣದಿಂದ KSCA ಚುನಾವಣೆಗೆ ಸ್ಪರ್ಧಿಸುತ್ತಿರುವ ನಾಗೇಂದ್ರ ಕೆ. ಪಂಡಿತ್, ಶಿವಮೊಗ್ಗ ವಲಯದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಲು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.
06:17 PM (IST) Dec 04
05:59 PM (IST) Dec 04
ಆಧಾರ್ ಕಾರ್ಡ್ ಕಳೆದುಹೋದರೆ ಮತ್ತು ಅದರ ಸಂಖ್ಯೆ ನೆನಪಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಯುಐಡಿಎಐ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಲಿಂಕ್ ಇಲ್ಲದಿದ್ದಲ್ಲಿ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದು. ಫುಲ್ ಡಿಟೇಲ್ಸ್ ಇಲ್ಲಿದೆ.
05:24 PM (IST) Dec 04
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ದಂತಕಥೆ ವಾಸೀಂ ಅಕ್ರಂ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
05:21 PM (IST) Dec 04
ಅಹಮದಾಬaದ್ ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯಲ್ಲಿ, ಬ್ರಿಟನ್‌ಗೆ ಕಳುಹಿಸಲಾದ ಸಂತ್ರಸ್ತರ ಮೃತದೇಹಗಳಲ್ಲಿ ಅಪಾಯಕಾರಿ ಮಟ್ಟದ ಫಾರ್ಮಾಲಿನ್‌ನಂತಹ ವಿಷಕಾರಿ ರಾಸಾಯನಿಕಗಳು ಪತ್ತೆಯಾಗಿವೆ ಎಂದು ಬ್ರಿಟಿಷ್ ನ್ಯಾಯಾಂಗ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
04:30 PM (IST) Dec 04
ಟೀಂ ಇಂಡಿಯಾ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ತಮ್ಮ ಹುಟ್ಟುಹಬ್ಬದಂದು ಶುಭಾಶಯಗಳಿಗಿಂತ ಹೆಚ್ಚಾಗಿ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ರೋಹಿತ್, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರ ವೃತ್ತಿಜೀವನದ ಅಂತ್ಯ ಮತ್ತು ತಂಡದಲ್ಲಿನ ಇತರ ಬದಲಾವಣೆಗಳಂತಹ ನಿರ್ಧಾರಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
04:28 PM (IST) Dec 04
ರಾಜಸ್ಥಾನದ ಜೈಪುರದಲ್ಲಿ, ಗಂಡನ ಸಾವಿನ ನಂತರ ಅನೈತಿಕ ಸಂಬಂಧ ಹೊಂದಿದ್ದ ವಿಧವೆ ಮತ್ತು ಆಕೆಯ ಪ್ರಿಯಕರನನ್ನು ಮಹಿಳೆಯ ಕುಟುಂಬದವರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
04:24 PM (IST) Dec 04
ನ್ಯೂಜಿಲೆಂಡ್‌ನಲ್ಲಿ, 32 ವರ್ಷದ ವ್ಯಕ್ತಿಯೊಬ್ಬ 17 ಲಕ್ಷ ರೂಪಾಯಿ ಮೌಲ್ಯದ ಫ್ಯಾಬರ್ಜ್ ಆಕ್ಟೋಪಸ್ ಪೆಂಡೆಂಟ್ ಅನ್ನು ಕದ್ದು ನುಂಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ಕಳ್ಳ ಮಲವಿಸರ್ಜನೆ ಮೂಲಕ ಪೆಂಡೆಂಟ್‌ಅನ್ನು ಹೊರಹಾಕುವುದನ್ನೇ ಕಾಯುತ್ತಿದ್ದಾರೆ.
02:50 PM (IST) Dec 04
Breaking ದೆಹಲಿಯಲ್ಲಿ ಹೈ ಅಲರ್ಟ್, ಸ್ನೈಪರ್ ಸೇರಿ ಭಾರಿ ಭದ್ರತಾ ಪಡೆಗಳಿಂದ ಇಂಚಿಂಚು ತಪಾಸಣೆ, ಸ್ವಾಟ್ ಸೇರಿದಂತೆ ಹಲವು ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಾಹನಗಳ ತಪಾಸಣೆ ನಡೆಯುತ್ತಿದೆ.
02:35 PM (IST) Dec 04
ರುವಾಂಡಾದ 71 ವರ್ಷದ ಕಲಿಸ್ಟೆ ನಝಮವಿಟಾ, ಮಹಿಳೆಯರ ಮೇಲಿನ ತೀವ್ರ ಭಯದಿಂದಾಗಿ ಕಳೆದ 55 ವರ್ಷಗಳಿಂದ ಒಂಟಿಯಾಗಿ ತಮ್ಮನ್ನು ತಾವು ಮನೆಯೊಳಗೆ ಬಂಧಿಸಿಕೊಂಡು ವಾಸ ಮಾಡುತ್ತಿದ್ದಾರೆ. ಈತನ ಈ ಭಯಕ್ಕೆ ಕಾರಣ ಏನು ಇಲ್ಲಿದೆ ಡಿಟೇಲ್ ಸ್ಟೋರಿ.
01:43 PM (IST) Dec 04
01:39 PM (IST) Dec 04
ವಿಚ್ಛೇದಿತ ಮುಸ್ಲಿಂ ಮಹಿಳೆಯು ಮದುವೆ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನಾಭರಣಗಳನ್ನು ಮರಳಿ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಈ ಹಕ್ಕನ್ನು ಎತ್ತಿಹಿಡಿದಿದೆ.
01:02 PM (IST) Dec 04
ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ, ವಿದ್ಯುತ್ ಆಘಾತದಿಂದ ಪ್ರಜ್ಞೆ ಕಳೆದುಕೊಂಡಿದ್ದ ಹಾವಿಗೆ ವನ್ಯಜೀವಿ ರಕ್ಷಕರೊಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಮುಖೇಶ್ ವಯಾದ್ ಎಂಬ ರಕ್ಷಕರು, ಹಾವಿಗೆ ಬಾಯಿಯಿಂದ ಬಾಯಿಗೆ ಉಸಿರು ನೀಡಿ ಬದುಕಿಸಿದ್ದಾರೆ.
01:01 PM (IST) Dec 04
ಏರ್‌ಪೋರ್ಟ್ ಬಳಿ F16 ಯುದ್ಧ ವಿಮಾನ ಪತನ, ಸುರಕ್ಷಿತವಾಗಿ ಹೊರಬಂದ ಪೈಲೆಟ್ ವಿಡಿಯೋ, ತೇಜಸ್ ವಿಮಾನ ಪತನದ ಬೆನ್ನಲ್ಲೇ ಇದೀಗ ಯುದ್ಧ ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷದಲ್ಲಿ ಎಫ್16 ಥಂಡರ್‌ಬರ್ಡ ಪತನಗೊಂಡಿದೆ.
12:28 PM (IST) Dec 04
ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ವಾಪಸಾಗಿದ್ದಾರೆ. ಆದರೆ, ಫಿನಿಶರ್ ರಿಂಕು ಸಿಂಗ್ ಅವರನ್ನು ಕೈಬಿಟ್ಟಿರುವುದು ಸೇರಿದಂತೆ ಕೆಲವು ನಿರ್ಧಾರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
11:59 AM (IST) Dec 04
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ವಿರುದ್ಧ ಅವರ ಪತ್ನಿ ದಿವ್ಯಾ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಮತ್ತು ಕೊಲೆ ಯತ್ನದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
11:41 AM (IST) Dec 04
ಬೆಂಗಳೂರು: ಬೆಂಗಳೂರಿನ ದತ್ತುಪುತ್ರ, ಟೀಂ ಇಂಡಿಯಾ ರನ್ ಮಷೀನ್, ಮುಂಬರುವ ವಿಜಯ್ ಹಜಾರೆ ಟ್ರೋಫಿ ಆಡಲು ಸಜ್ಜಾಗಿದ್ದಾರೆ. ಡೆಲ್ಲಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಕೊಹ್ಲಿ ಆಟವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣ್ತುಂಬಿಕೊಳ್ಳಲು ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
10:52 AM (IST) Dec 04
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 358 ರನ್‌ಗಳ ಬೃಹತ್ ಮೊತ್ತ ಗಳಿಸಿದರೂ ಟೀಂ ಇಂಡಿಯಾ ಸೋಲನುಭವಿಸಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಕೆ ಎಲ್ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿನ ತೀವ್ರ ಇಬ್ಬನಿಯಿಂದಾಗಿ ಬೌಲರ್‌ಗಳಿಗೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ.
10:52 AM (IST) Dec 04
ಈತ ಮೂರು ತಿಂಗಳ ಹಿಂದಷ್ಟೇ ಹೊಸ ಕೆಟಿಎಂ ಬೈಕ್ ಖರೀದಿಸಿದ್ದ 18 ವರ್ಷದ ಪ್ರಿನ್ಸ್ ಪಟೇಲ್ ಎಂಬ ಯುವಕ ಭೀಕರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಅತಿ ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
08:43 AM (IST) Dec 04