ನವದೆಹಲಿ: ಇರಾನ್‌ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್‌ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಮತ್ತು ಕತಾರ್‌ನ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮಾತುಕತೆ ನಡೆಸಿ, ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವೇಳೆ 3 ದೇಶಗಳ ಸಾರ್ವಭೌಮತ್ವದ ಉಲ್ಲಂಘನೆಯನ್ನು ಖಂಡಿಸಿದ ಅವರು, ಅಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ 2 ದಿನಗಳಲ್ಲಿ ಮೋದಿ, ಇಸ್ರೇಲ್, ಬಹ್ರೈನ್, ಸೌದಿ ಅರೇಬಿಯಾ ಸೇರಿ 8 ರಾಷ್ಟ್ರಗಳ ಮುಖ್ಯಸ್ಥರಿಗೆ ಕರೆ ಮಾಡಿ
10:51 PM (IST) Mar 04
ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅಮೆರಿಕ ಸಬ್‌ಮರೀನ್ ದಾಳಿಗೆ ಇರಾನ್ ನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ.
10:26 PM (IST) Mar 04
33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿದ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್, ಟಿ20 ವಿಶ್ವಕಪ್‌ನಲ್ಲಿ ಅತೀ ವೇಗದ ಸೆಂಚುರಿ ದಾಖಲಾಗಿದೆ. ಕೇವಲ 12.5 ಓವರ್‌ನಲ್ಲಿ ಪಂದ್ಯ ಮುಗಿಸಿ ನ್ಯೂಜಿಲೆಂಡ್ ಹೊಸ ಇತಿಹಾಸ ರಚಿಸಿದೆ.
09:40 PM (IST) Mar 04
ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ, ಹೈದರಾಬಾದ್‌ನಲ್ಲಿ ಸದ್ಯ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಸೆಲೆಬ್ರೆಟಿಗಳ ದಂಡೆ ಆಗಮಿಸಿದ್ದು, ಪ್ರಧಾನಿ ಮೋದಿ ಪಾಲ್ಗೊಳುವ ಸಾಧ್ಯತೆ ಕೇಳಿಬರುತ್ತಿದೆ.
09:07 PM (IST) Mar 04
ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್, ಅಧಿಕಾರಿಗೆ ಮುಂದೆ ಮೆಡಿಕಲ್ ಸರ್ಟಿಫಿಕೇಟ್, ಔಷಧಿ ಎಲ್ಲಾ ಮುಂದಿಟ್ಟರೂ ಅಧಿಕಾರಿ ನಂಬಲೇ ಇಲ್ಲ, ಬೇರೆ ದಾರಿ ಕಾಣದೆ ಪ್ಯಾಂಟ್ ಬಿಚ್ಚಿ ತೋರಿಸಿದ್ದಾನೆ.
08:04 PM (IST) Mar 04
ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ, ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್ , ಭಾರತ ವಾರ್ಷಿಕ ಶೇಕಡಾ 40 ರಷ್ಟು ಗ್ಯಾಸನ್ನು ಖತಾರ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಇದೀಗ ಏಕಾಏಕಿ ಪೂರೈಕೆ ಸ್ಥಗಿತ ಭಾರತಕ್ಕೆ ತೀವ್ರ ಸಂಕಷ್ಟ ತರಲಿದೆ.
07:42 PM (IST) Mar 04
07:28 PM (IST) Mar 04
'ಸೇಕ್ರೆಡ್ ಗೇಮ್ಸ್' ಖ್ಯಾತಿಯ ನಟಿ ರಾಜಶ್ರೀ ದೇಶಪಾಂಡೆ ಅವರಿಗೆ ಗ್ರೇಡ್ 1 ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಸಾಮಾನ್ಯ ತಪಾಸಣೆ ವೇಳೆ ರೋಗ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಹಿತಿ ನೀಡಿದ್ದಾರೆ.
07:07 PM (IST) Mar 04
ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧ ತೀವ್ರಗೊಂಡಿದೆ. ನಾಯಕರ ಸಾವು ಮತ್ತು ಶಸ್ತ್ರಾಸ್ತ್ರ ನಷ್ಟದ ನಡುವೆಯೂ ಇರಾನ್ ಪ್ರತಿದಾಳಿ ನಡೆಸುತ್ತಿದ್ದು, ಪರ್ವತಗಳಡಿಯ 'ಕ್ಷಿಪಣಿ ನಗರ'ಗಳು ಅದರ ಪ್ರಮುಖ ಶಕ್ತಿಯಾಗಿವೆ. ಈ ಸಂಘರ್ಷವು ಜಾಗತಿಕ ತೈಲ ಬಿಕ್ಕಟ್ಟಿಗೆ ಕಾರಣವಾಗುವ ಆತಂಕ
07:00 PM (IST) Mar 04
27 ವರ್ಷಗಳ ದಾಂಪತ್ಯದ ನಂತರ, ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಗಂಭೀರ ಆರೋಪಗಳೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ವಿಜಯ್ ನ್ಯಾಯಾಲಯದ ಹೊರಗೆ ಪ್ರಕರಣವನ್ನು ಇತ್ಯರ್ಥಪಡಿಸಲು ಬಯಸಿದ್ದು, 250 ಕೋಟಿ ರೂ ಜೀವನಾಂಶವನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
06:40 PM (IST) Mar 04
ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ಪ್ರೇಮಕಥೆ ಫೇಸ್‌ಬುಕ್‌ನಲ್ಲಿ ಒಂದು 'Hi' ಸಂದೇಶದಿಂದ ಪ್ರಾರಂಭವಾಯಿತು. ಹಿಂದೂ ಧರ್ಮದ ಚಾರುಲತಾ ಮತ್ತು ಕ್ರೈಸ್ತ ಸಮುದಾಯದ ಸಂಜು, ತಮ್ಮ ಕುಟುಂಬಗಳನ್ನು ಒಪ್ಪಿಸಿ ಅಂತರ್ಧರ್ಮೀಯ ವಿವಾಹವಾದರು.
06:38 PM (IST) Mar 04
ತಮಿಳುನಾಡಿನ ನಂಬಿಯೂರಿನಲ್ಲಿ, ಆತ್ಮ*ಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ ತನ್ನ 27 ವರ್ಷದ ಮಗಳನ್ನು ರಕ್ಷಿಸಲು 55 ವರ್ಷದ ತಾಯಿ ಕೂಡಲೇ ಬಾವಿಗೆ ಹಾರಿದ್ದಾರೆ. ಅಗ್ನಿಶಾಮಕ ದಳದವರು ಬರುವವರೆಗೂ ಮಗಳನ್ನು ನೀರಿನಲ್ಲಿ ಮುಳುಗದಂತೆ ಹಿಡಿದಿಟ್ಟುಕೊಂಡು ತಾಯಿ ಸಾಹಸ ಮೆರೆದಿದ್ದಾಳೆ.
06:21 PM (IST) Mar 04
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಟ್ರೋಫಿ ಖಚಿತ, ಟಿ20 ವಿಶ್ವಕಪ್‌ನಲ್ಲಿದೆ ಸಂಪ್ರದಾಯ , ಕಳೆದ ಎರಡು ಬಾರಿ ಈ ಸಂಪ್ರದಾಯ ಸರಿಯಾಗಿದೆ. ಇದರ ಜೊತೆಗೆ ಎರಡು ಪ್ರಮುಖ ಮೈಲಿಗಲ್ಲು ರಚನೆಯಾಗಲಿದೆ.
05:55 PM (IST) Mar 04
ಪುಣೆಯ ವಿಮಾನ್ ನಗರದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದೆ. ಈ ವೇಳೆ, ರಾಮೇಶ್ವರಂ ಕೆಫೆ ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು ಫುಟ್‌ಪಾತ್ ಮೇಲೆ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
05:26 PM (IST) Mar 04
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಲಿದ್ದು, ಉತ್ತಮ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಅವರ ಕಳಪೆ ದಾಖಲೆ ತಂಡಕ್ಕೆ ಚಿಂತೆಗೀಡುಮಾಡಿದೆ. ವಿಶೇಷವಾಗಿ ವೇಗಿ ಜೋಫ್ರಾ ಆರ್ಚರ್ ಎದುರು ಸಂಜು ಪದೇ ಪದೇ ವಿಫಲರಾಗಿದ್ದು ಭಾರತದ ತಲೆನೋವು ಹೆಚ್ಚಿಸುವಂತೆ ಮಾಡಿದೆ.
05:16 PM (IST) Mar 04
ಪತಿ, ನಟ ಕೊಲ್ಲಂ ಸುಧಿ ಅವರ ನಿಧನದ ಮೂರು ವರ್ಷಗಳ ನಂತರ, ಮಾಡೆಲ್ ರೇಣು ಸುಧಿ ಅವರು ಮರುಮದುವೆಯ ಬಗ್ಗೆ ಮಾತನಾಡಿದ್ದಾರೆ. ಒಂಟಿ ಜೀವನದಿಂದ ಬೇಸತ್ತಿದ್ದು, ತನ್ನನ್ನು ಹಾಗೂ ತನ್ನ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಸಂಗಾತಿಯೊಬ್ಬರು ಬೇಕು ಎಂದು ಅವರು ಹೇಳಿಕೊಂಡಿದ್ದಾರೆ.
05:03 PM (IST) Mar 04
ಪ್ರಯೋಗಾಲಯದಲ್ಲಿ ತಯಾರಿಸಿದ ಚಿನ್ನವು ರಾಸಾಯನಿಕವಾಗಿ ಮತ್ತು ಭೌತಿಕವಾಗಿ ಗಣಿಗಾರಿಕೆಯ ಚಿನ್ನವನ್ನೇ ಹೋಲುತ್ತದೆ. ಈ ಲೇಖನವು ಲ್ಯಾಬ್ ಗೋಲ್ಡ್ ತಯಾರಿಸುವ ವಿಧಾನ, ಅದರ ಬೆಲೆ, ಮರುಮಾರಾಟ ಮೌಲ್ಯ, ಮತ್ತು ಹೂಡಿಕೆಯಾಗಿ ಅದರ ಸುರಕ್ಷತೆಯ ಬಗ್ಗೆ ವಿವರಿಸುತ್ತದೆ.
04:52 PM (IST) Mar 04
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ನಾಲ್ಕೇ ದಿನಗಳಲ್ಲಿ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶವು 2,000 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ಹೊರೆಯನ್ನು ಹೊತ್ತಿದೆ.
04:44 PM (IST) Mar 04
ದಳಪತಿ ವಿಜಯ್ ದಾಂಪತ್ಯವು ವಿಚ್ಛೇದನದ ಅಂಚಿನಲ್ಲಿದ್ದು, ಇದಕ್ಕೆ ನಟಿ ತ್ರಿಷಾ ಜೊತೆಗಿನ ಅವರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಊಹಾಪೋಹಗಳ ಮಧ್ಯೆ, ವಿಜಯ್ ಅವರೊಂದಿಗೆ ತ್ರಿಷಾ ಕೂಡ ರಾಜಕೀಯಕ್ಕೆ ಪ್ರವೇಶಿಸಿ, ಜಯಲಲಿತಾ ಅವರಂತೆ ಆಗುತ್ತಾರೆಯೇ ಎಂಬ ಚರ್ಚೆ ತಮಿಳುನಾಡಿನಲ್ಲಿ ತೀವ್ರಗೊಂಡಿದೆ.
04:34 PM (IST) Mar 04
ಇರಾನ್ ತನ್ನ ಬೃಹತ್ ಭೂಗತ ಕ್ಷಿಪಣಿ ನಗರವನ್ನು ಅನಾವರಣಗೊಳಿಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಸಂಘರ್ಷವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಆರ್ಥಿಕವಾಗಿ ದುಬಾರಿಯಾಗುತ್ತಿದೆ.
04:23 PM (IST) Mar 04
ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ, ಸಚಿನ್ ತನಗಿಂತ ಹಿರಿಯ ಅಂಜಲಿಯನ್ನು ಪ್ರೀತಿಸಿ ವಿವಾಹವಾಗಿದ್ದರೆ, ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರೀತಿ ಕೂಡ ಇದೇ ದಾರಿಯಲ್ಲಿ ಸಾಗಿದೆ.
03:56 PM (IST) Mar 04
ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಇರಾನ್‌ನ 'ಐರಿಸ್ ದೇನಾ' ಯುದ್ಧನೌಕೆ ಮುಳುಗಡೆಯಾಗಿದ್ದು, ಶ್ರೀಲಂಕಾ ಸೇನೆಯು 30 ನಾವಿಕರನ್ನು ರಕ್ಷಿಸಿದೆ. ಈ ಘಟನೆಯಲ್ಲಿ ಇನ್ನೂ 108 ಮಂದಿ ನಾಪತ್ತೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಭಾರತದ ಸಮೀಪಕ್ಕೂ ತಲುಪಿದಂತಾಗಿದೆ.
03:28 PM (IST) Mar 04
ತಾಂತ್ರಿಕ ಸಮಸ್ಯೆಯಿಂದ ಫೇಸ್‌ಬುಕ್ ತಾತ್ಕಾಲಿಕ ಸ್ಥಗಿತ, ನಿಮಗೂ ಸಮಸ್ಯೆಯಾಗುತ್ತಿದ್ದರೆ ಹೀಗೆ ಮಾಡಿ, ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಲು ಸಾಧ್ಯವಾಗದೇ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ.
03:25 PM (IST) Mar 04
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡಿದ್ದು, ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಯುದ್ಧನೌಕೆಯ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇತ್ತ ಇಸ್ರೇಲ್ ಟೆಹ್ರಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ನಿರ್ಣಾಯಕ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ವಶಕ್ಕೆ ಪಡೆದಿರುವುದಾಗಿ ಇರಾನ್ ಘೋಷಿಸಿದೆ.
03:01 PM (IST) Mar 04
ಪುರಿಯ ಶ್ರೀ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ವನ್ನು 46 ವರ್ಷಗಳ ನಂತರ ಆಭರಣಗಳ ಎಣಿಕೆಗಾಗಿ ತೆರೆಯಲಾಗುತ್ತಿದೆ. ಮಾರ್ಚ್ 25ರಂದು ಆರ್‌ಬಿಐ ಮೇಲ್ವಿಚಾರಣೆಯಲ್ಲಿ ನಡೆಯಲಿರುವ ಈ ಪ್ರಕ್ರಿಯೆಯು, 1978ರ ನಂತರ ಮೊದಲ ಬಾರಿಗೆ ದೇವಾಲಯದ ಅಪಾರ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಪಟ್ಟಿಯನ್ನು ನವೀಕರಿಸಲಿದೆ.
02:46 PM (IST) Mar 04
02:25 PM (IST) Mar 04
ಈಗಂತೂ ಮನೆಯೊಳಗೆ ಬೆಳೆಸಬಹುದಾದ ಹಲವು ಬಗೆಯ ಗಿಡಗಳು ಸಿಗುತ್ತವೆ. ಅವುಗಳಲ್ಲಿ ಲಕ್ಕಿ ಬ್ಯಾಂಬೂ ಕೂಡ ಒಂದು. ಇದಕ್ಕೆ ಹೆಚ್ಚು ಕಾಳಜಿ ಬೇಕಿಲ್ಲ, ಸುಲಭವಾಗಿ ಬೆಳೆಯುತ್ತೆ. ಆದರೂ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಲಕ್ಕಿ ಬ್ಯಾಂಬೂ ಬೆಳೆಸುವಾಗ ತಿಳಿಯಬೇಕಾದ ಮುಖ್ಯ ಅಂಶಗಳಿವು.
02:23 PM (IST) Mar 04
02:17 PM (IST) Mar 04
01:59 PM (IST) Mar 04
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ, ಮಾಜಿ ಕೋಚ್ ರವಿಶಾಸ್ತ್ರಿ ತಂಡದಲ್ಲಿ ಬದಲಾವಣೆಗೆ ಸಲಹೆ ನೀಡಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಬದಲು ಇಶಾನ್ ಕಿಶನ್‌ರನ್ನು ಓಪನರ್ ಆಗಿ ಆಡಿಸಬೇಕು ಎಂದು ಅವರು ಹೇಳಿದ್ದಾರೆ.
01:28 PM (IST) Mar 04
ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಮರಣದ ನಂತರ, ಅವರ ಪುತ್ರ ಮೊಜ್ತಾಬಾ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಈ ನೇಮಕಾತಿಯ ಬೆನ್ನಲ್ಲೇ, ಇಸ್ರೇಲ್ ರಕ್ಷಣಾ ಸಚಿವರು ಹೊಸ ನಾಯಕನನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
12:48 PM (IST) Mar 04
ಇರಾನ್ ಸರ್ವಾಧಿಕಾರಿ ಅಲಿ ಖಮೇನಿ ಸಾವಿಗೆ ಕೆಲವರು ಸಂಭ್ರಮಿಸುತ್ತಿರುವುದರ ಹಿಂದಿನ ಕಾರಣಗಳನ್ನು ಈ ಲೇಖನ ವಿವರಿಸುತ್ತದೆ. ಹಿಜಾಬ್ ವಿಚಾರವಾಗಿ ಅವರ ಆಡಳಿತದಲ್ಲಿ ನಡೆದ ಕ್ರೌರ್ಯಕ್ಕೆ ಬಲಿಯಾದ ಡಾ. ಐದಾ ರಸ್ತೋಮಿ, ಅತಾಫಿ ರಜಾಬಿ ಹಾಗೂ ಮಾರ್ಜಿ ಇಸ್ಫಹಾನ್‌ರಂತಹ ಮಹಿಳೆಯರ ಕಥೆಗಳನ್ನು ಇದು ತೆರೆದಿಡುತ್ತದೆ
12:46 PM (IST) Mar 04
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು, ಭಾರತ ಮತ್ತೊಂದು ಸಂಘರ್ಷಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಯುದ್ಧದ ಹಾದಿ ಬಿಟ್ಟು ಮಾತುಕತೆಗೆ ಮರಳುವಂತೆ ನವದೆಹಲಿಗೆ ಒತ್ತಾಯಿಸಿದ ಅವರು, ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸಿದ್ದನ್ನು 'ಜಲ-ಭಯೋತ್ಪಾದನೆ' ಎಂದು ಕರೆದಿದ್ದಾರೆ.
12:30 PM (IST) Mar 04
12:17 PM (IST) Mar 04
PM Modi YouTube channel crosses 30M subscribers ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್ 3 ಕೋಟಿ ಚಂದಾದಾರರ ಗಡಿ ದಾಟಿ ವಿಶ್ವ ದಾಖಲೆ ಬರೆದಿದೆ! ಜಾಗತಿಕ ನಾಯಕರಲ್ಲಿ ನಂ.1 ಸ್ಥಾನ. ಈ ಚಾನೆಲ್‌ನಿಂದ ಆದಾಯ ಬರುತ್ತದೆಯೇ? ತಿಳಿಯಲು ಸುದ್ದಿ ಓದಿ.
12:13 PM (IST) Mar 04
ಇರಾನ್‌ನಲ್ಲಿ ಅಧಿಕಾರದ ಆಟ ಇದ್ದಕ್ಕಿದ್ದಂತೆ ಬದಲಾಯಿತೇ? ಅಲಿ ಖೊಮೇನಿ ಅವರ ಸಾವಿನ ನಂತರ, ಅವರ ಮಗ ಮೊಜ್ತಬಾ ಖೊಮೇನಿಯನ್ನು ಸದ್ದಿಲ್ಲದೆ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಲಾಗಿದೆಯೇ? ಆಂತರಿಕ ಮತದಾನ, ಬಾಹ್ಯ ದಾಳಿ ಮತ್ತು ತೀವ್ರಗೊಳ್ಳುತ್ತಿರುವ ಯುದ್ಧದ ನಡುವೆ ಸತ್ಯ ಯಾವುದು? ಜಗತ್ತು ಯಾಕೆ ಆತಂಕದಲ್ಲಿದೆ?
11:22 AM (IST) Mar 04
10:56 AM (IST) Mar 04
10:24 AM (IST) Mar 04
ಹಾವಿನ ಮೊಟ್ಟೆ ಸೇವನೆ ಸುರಕ್ಷಿತವೇ ಎಂಬ ಚರ್ಚೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಾವಿನ ಮೊಟ್ಟೆ ಸೇವನೆ ಸುರಕ್ಷಿತವೇ ಎಂಬುದರ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾವಿನ ಮೊಟ್ಟೆ ವಿಷಕಾರಿ ಅಲ್ಲವಾ?
10:09 AM (IST) Mar 04
ಇಸ್ರೇಲ್ ಅಮೆರಿಕಾದ ಇರಾನ್ ಮೇಲೆ ನಡೆಸಿದ ಜಂಟಿ ದಾಳಿ ವೇಳೆ ಇರಾನ್‌ನ ಶಾಲಾ ಕಟ್ಟಡದ ಮೇಲೆ ಬಾಂಬ್ ಬಿದ್ದು 165 ಮಕ್ಕಳು ಸಾವನ್ನಪ್ಪಿದ್ದರು ಅವರೆಲ್ಲರನ್ನು ಒಂದೇ ಜಾಗದಲ್ಲಿ ಇರಿಸಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ.
09:52 AM (IST) Mar 04