ಸಿಡ್ನಿ: ಕ್ರಿಕೆಟ್ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ 1947-48ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ನಡೆದ ಟೆಸ್ಟ್ ಸರಣಿ ವೇಳೆ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜುಗೊಳ್ಳುತ್ತಿದೆ. ಆ ಸರಣಿಯ ವೇಳೆ ಬ್ರಾಡ್ಮನ್ ತಮ್ಮ ಕ್ಯಾಪ್ ಅನ್ನು ಭಾರತದ ಆಲ್ರೌಂಡರ್ ಶ್ರೀರಂಗ ವಾಸುದೇವ್ ಸೊಹೊನಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಆ ಕ್ಯಾಪ್ 75 ವರ್ಷ ಸೊಹೊನಿ ಅವರ ಕುಟುಂಬಸ್ಥರ ಬಳಿಯೇ ಇತ್ತು. ಅದನ್ನು ಸಾರ್ವಜನಿಕವಾಗಿ ಎಲ್ಲೂ ಪ್ರದರ್ಶಿಸಲಾಗಿರಲಿಲ್ಲ. ಆ ಕ್ಯಾಪ್ ಈಗ ಆಸ್ಟ್ರೇಲಿಯಾದ ಹರಾಜು ಸಂಸ್ಥೆಗಳಲ್ಲಿ ಒಂದಾದ ಲಾಯ್ಡ್ಸ್ ಆಕ್ಷನ್ಸ್ ಕೈಸೇರಿದೆ. ಸಂಸ್ಥೆಯು ಆನ್‌ಲೈನ್‌ನಲ್ಲಿ ಹರಾಜು ನಡೆಸುತ್ತಿದೆ. ಜ.26ರ ವರೆಗೂ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಕ್ಯಾಪ್‌ಗೆ 3.15 ಲಕ್ಷ ಆಸ್ಟ್ರೇಲಿಯನ್ ಡಾಲರ್ (ಅಂದಾಜು 1.89 ಕೋಟಿ ರು.) ಬಿಡ್ ಸಲ್ಲಿಕೆಯಾಗಿದೆ.
