Published : May 27, 2026, 07:02 AM ISTUpdated : May 27, 2026, 10:45 PM IST

India Latest News Live: ವೈಭವ್ ಸೂರ್ಯವಂಶಿ ಔಟಾದಾಗ ಕಾವ್ಯಾ ಮಾರನ್ ಕೆಟ್ಟ ರಿಯಾಕ್ಷನ್ - ಸನ್‌ರೈಸರ್ಸ್‌ ಮಾಲೀಕಿಯ ನಡೆಗೆ ಕ್ರಿಕೆಟ್ ಪ್ರೇಮಿಗಳು ಫುಲ್ ಗರಂ!

ಸಾರಾಂಶ

ತಿರಮಲ: ವಾರಾಂತ್ಯ, ಬೇಸಿಗೆ ರಜೆ ಹಿನ್ನೆಲೆ ಪವಿತ್ರ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬರುತ್ತಿದ್ದು, ಭಾನುವಾರ ಒಂದೇ ದಿನ ಯ 98,058 ಭಕ್ತರು ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿರುವ ಇಂಟಿಗ್ರೇಟೆಡ್‌ ಕಂಟ್ರೋಲ್‌ ಸೆಂಟರ್‌ ಮೂಲಕ ಪ್ರಯಾಣಿಕರ ನಿಖರ ಲೆಕ್ಕ ಹಾಕಲಾಗಿತ್ತು. ಇನ್ನು ಸೋಮವಾರ ಕೊಂಚ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ತಿರುಪತಿಗೆ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರ ಭೇಟಿ ಈ ಬಾರಿ ದಾಖಲೆಯಾಗಿದೆ. 2016-17ರ ಅವಧಿಯಲ್ಲಿ ಒಂದೇ ದಿನ 1.01 ಲಕ್ಷ ಭಕ್ತರು ಭೇಟಿ ನೀಡಿದ್ದು ಇದುವರೆಗಿನ ಗರಿಷ್ಠ. ಆದರೆ ಆಗಿನದ್ದು ಅಂದಾಜು ಲೆಕ್ಕಾಚಾರವಾಗಿತ್ತು.

 

10:45 PM (IST) May 27

ವೈಭವ್ ಸೂರ್ಯವಂಶಿ ಔಟಾದಾಗ ಕಾವ್ಯಾ ಮಾರನ್ ಕೆಟ್ಟ ರಿಯಾಕ್ಷನ್ - ಸನ್‌ರೈಸರ್ಸ್‌ ಮಾಲೀಕಿಯ ನಡೆಗೆ ಕ್ರಿಕೆಟ್ ಪ್ರೇಮಿಗಳು ಫುಲ್ ಗರಂ!

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ, ಅವರು ಶತಕ ವಂಚಿತರಾಗಿ ಔಟಾದಾಗ, ಎಸ್‌ಆರ್‌ಎಚ್ ಮಾಲೀಕಿ ಕಾವ್ಯಾ ಮಾರನ್ ಕ್ರೀಡಾಸ್ಫೂರ್ತಿ ತೋರದೆ ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ.

Read Full Story

10:17 PM (IST) May 27

ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಕ್ರಿಸ್ ಗೇಲ್ ಸಾರ್ವಕಾಲಿಕ ಸಿಕ್ಸರ್ ರೆಕಾರ್ಡ್ ನುಚ್ಚುನೂರು!

ರಾಜಸ್ಥಾನ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (65) ಬಾರಿಸಿದ ಕ್ರಿಸ್ ಗೇಲ್ ಅವರ ವಿಶ್ವದಾಖಲೆಯನ್ನು ಮುರಿದಿದ್ದಾರೆ.
Read Full Story

10:13 PM (IST) May 27

Breaking - ಇಸ್ರೋ ಮುಡಿಗೆ ಮತ್ತೊಂದು ಗರಿ, ಚಂದ್ರನ ದಕ್ಷಿಣ ಧ್ರುವದ ಆಳದಲ್ಲಿ ‘ಹಿಮದ ನಿಕ್ಷೇಪ’ ಪತ್ತೆಹಚ್ಚಿದ ಚಂದ್ರಯಾನ-2 ಆರ್ಬಿಟರ್!

ಭಾರತದ ಚಂದ್ರಯಾನ-2 ಆರ್ಬಿಟರ್, ಚಂದ್ರನ ಅತ್ಯಂತ ಕತ್ತಲೆಯ ಮತ್ತು ತಂಪಾದ ದಕ್ಷಿಣ ಧ್ರುವದ ಕುಳಿಗಳ ಆಳದಲ್ಲಿ ಭಾರಿ ಪ್ರಮಾಣದ ಮಂಜುಗಡ್ಡೆ ಇರುವುದಕ್ಕೆ ಬಲವಾದ ವೈಜ್ಞಾನಿಕ ಪುರಾವೆಗಳನ್ನು ಪತ್ತೆಹಚ್ಚಿದೆ. 

Read Full Story

09:35 PM (IST) May 27

ಐಪಿಎಲ್‌ ವೈಫಲ್ಯಕ್ಕೆ ಹಾರ್ದಿಕ್‌ ಪಾಂಡ್ಯ ಬೇಸರ, ಕಠಿಣ ನಿರ್ಧಾರ ಮಾಡಿದ ಮುಂಬೈ ಇಂಡಿಯನ್ಸ್‌ ನಾಯಕ!

ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ದಿಢೀರನೆ ಡಿಲೀಟ್ ಮಾಡಿದ್ದಾರೆ. ವೈಯಕ್ತಿಕ ವೈಫಲ್ಯ ಮತ್ತು ನಾಯಕತ್ವದ ಬಗ್ಗೆ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

09:17 PM (IST) May 27

ಹಳೆ ಕಥೆ ಬೇಡ.. ನಟ ಪ್ರಭು ಜೊತೆ ಮದುವೆ, ವಿಚ್ಛೇದನದ ಬಗ್ಗೆ ರವಿಚಂದ್ರನ್ ಹೀರೋಯಿನ್ ಹೇಳಿದ್ದೇನು?

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಅಂಜದ ಗಂಡು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟಿ ಖುಷ್ಬೂ ಸದ್ಯ 'ಜಬರ್ದಸ್ತ್' ಶೋ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇದೀಗ ನಟ ಪ್ರಭು ಜೊತೆಗಿನ ಮದುವೆ ಹಾಗೂ ವಿಚ್ಛೇದನದ ವದಂತಿಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

Read Full Story

08:35 PM (IST) May 27

29 ಎಸೆತದಲ್ಲಿ 97 ರನ್‌..ಶತಕ ಮಿಸ್‌ ಮಾಡಿಕೊಂಡ ವೈಭವ್‌ ಸೂರ್ಯವಂಶಿ, 14 ವರ್ಷಗಳಿಂದ ಇದ್ದ ಗೇಲ್‌ ರೆಕಾರ್ಡ್‌ ಬ್ರೇಕ್‌

ಐಪಿಎಲ್ ನಾಕೌಟ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್‌ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ ಸಿಡಿಸುವ ಮೂಲಕ, ಅವರು ಕ್ರಿಸ್ ಗೇಲ್ ಅವರ ಒಂದು ಸೀಸನ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳ ದಾಖಲೆಯನ್ನು ಮುರಿದು ಆರೆಂಜ್ ಕ್ಯಾಪ್ ಪಡೆದರು.
Read Full Story

07:54 PM (IST) May 27

ರಾಮ್ ಚರಣ್ ಜೊತೆ ಡ್ಯಾನ್ಸ್ ಮಾಡಿದ್ರೆ ಸಣ್ಣಗಾಗ್ತೀರಾ - ಶ್ರೀದೇವಿ ಮಗಳು ಹೀಗೆ ಹೇಳೋದಕ್ಕೂ ಕಾರಣವಿದ್ಯಾ?

ರಾಮ್ ಚರಣ್ ನಾಯಕರಾಗಿ ಮತ್ತು ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ 'ಪೆದ್ದಿ' ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

Read Full Story

07:50 PM (IST) May 27

ಪಾರ್ಸೆಲ್ ಸೀಲ್ ಒಡೆದು ಕಾಮದ ಆಫರ್ ನೀಡಿದ ಕಾಮುಕ - 'ನನ್ನನ್ನೇ ಯೂಸ್ ಮಾಡ್ಕೋ..' ಎಂದ ಬ್ಲಿಂಕಿಟ್ ಡೆಲಿವರಿ ಏಜೆಂಟ್!

ಬ್ಲಿಂಕಿಟ್ ಮೂಲಕ ಲೈಂಗಿಕ ಕ್ಷೇಮ ಉತ್ಪನ್ನವನ್ನು ಆರ್ಡರ್ ಮಾಡಿದ್ದ ಯುವತಿಗೆ ಡೆಲಿವರಿ ಏಜೆಂಟ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಉತ್ಪನ್ನವನ್ನು ನೋಡಿ ಯುವತಿಯ ವೈಯಕ್ತಿಕ ಸಂಖ್ಯೆಗೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದು, ದೂರಿನ ನಂತರ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ.
Read Full Story

07:19 PM (IST) May 27

ಕುಡಿದ ಮತ್ತಲ್ಲಿ ಇಬ್ಬರ ಕೊಂದ ಬಾಲಕನಿಗೆ ಪ್ರಬಂಧ ಬರೆಯೋ ಶಿಕ್ಷೆ - ಸಾಕ್ಷಿ ನಾಶಕ್ಕೆ ನೋಡಿದ ಅಪ್ಪನಿಗೆ ಜಾಮೀನು

2024ರ ಪುಣೆ ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಎಂಜಿನಿಯರ್‌ಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ ಆರೋಪದ ಮೇಲೆ ಬಂಧಿತನಾಗಿದ್ದ ಅಪ್ರಾಪ್ತನ ತಂದೆ ವಿಶಾಲ್ ಅಗರ್‌ವಾಲ್‌ಗೆ ಇದೀಗ ಜಾಮೀನು ಸಿಕ್ಕಿದ್ದು, ಆತನ ಕುಟುಂಬ ನೋಟಿನ ಹಾರ ಹಾಕಿ ಸಂಭ್ರಮಿಸಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

06:33 PM (IST) May 27

8th Pay Commission - ಬರುತ್ತಾ 5 ಹಂತಗಳ ‘ಫಿಟ್‌ಮೆಂಟ್ ಫ್ಯಾಕ್ಟರ್’ - ಹಿರಿಯ ಅಧಿಕಾರಿಗಳ ಬೇಸಿಕ್ ಪೇ ನೇರ ₹10.95 ಲಕ್ಷಕ್ಕೆ ಜಿಗಿತ!

8ನೇ ವೇತನ ಆಯೋಗದ ಮುಂದೆ ನೌಕರರ ಸಂಘಟನೆಗಳು ಹೊಸ 5 ಹಂತದ ಫಿಟ್‌ಮೆಂಟ್ ಫ್ಯಾಕ್ಟರ್ ಸೂತ್ರವನ್ನು ಪ್ರಸ್ತಾಪಿಸಿವೆ. ಈ ಪ್ರಸ್ತಾಪವು ಅಂಗೀಕಾರವಾದರೆ, ಕೆಲವು ಹಿರಿಯ ಅಧಿಕಾರಿಗಳ ವೇತನದಲ್ಲಿ ಶೇ. 400ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಇದು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

06:25 PM (IST) May 27

Diarrhea - ಪದೇ ಪದೇ ಭೇದಿ ಆಗ್ತಿದ್ಯಾ? ಈ ಗಂಭೀರ ಕಾಯಿಲೆಗಳ ಲಕ್ಷಣವಿರಬಹುದು, ಹುಷಾರ್!

ಕೆಲವರಿಗೆ ವಾರಗಟ್ಟಲೆ ಭೇದಿ ನಿಲ್ಲುವುದೇ ಇಲ್ಲ, ಅಥವಾ ಪದೇ ಪದೇ ಮರುಕಳಿಸುತ್ತಿರುತ್ತದೆ. ಇದು ಯಾವುದೋ ದೀರ್ಘಕಾಲದ ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣವಾಗಿರಬಹುದು. ಇದನ್ನು ಕಡೆಗಣಿಸುವುದು ಒಳ್ಳೆಯದಲ್ಲ.

Read Full Story

06:05 PM (IST) May 27

ಸಂಜು, ಶ್ರೇಯಸ್ ಅಯ್ಯರ್ ಅಲ್ಲವೇ ಅಲ್ಲ, ಭಾರತದ ಮುಂದಿನ T20 ಕ್ಯಾಪ್ಟನ್ ಇವರಾಗಲಿ - ಅಚ್ಚರಿಯ ಹೆಸರು ಸೂಚಿಸಿದ ರವಿಚಂದ್ರನ್ ಅಶ್ವಿನ್

ಭಾರತದ ಮುಂದಿನ T20 ನಾಯಕನಾಗಿ ಶ್ರೇಯಸ್ ಅಯ್ಯರ್ ಅಥವಾ ಸಂಜು ಸ್ಯಾಮ್ಸನ್ ಬದಲಿಗೆ ರಜತ್ ಪಾಟಿದಾರ್ ಸೂಕ್ತ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‌ನಲ್ಲಿ ಪಾಟಿದಾರ್ ಅವರ ಸ್ಫೋಟಕ ಪ್ರದರ್ಶನ, ವಿಶೇಷವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಅರ್ಧಶತಕವು ಅವರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಗೆ ತಂದಿದೆ ಎಂದು ಅಶ್ವಿನ್ ಹೇಳಿದ್ದಾರೆ.
Read Full Story

05:56 PM (IST) May 27

ಗಂಡನ ಮುಂದೆಯೇ ಸಮಂತಾಗೆ ಪ್ರಪೋಸ್ ಮಾಡಿದ ಫ್ಯಾನ್ - ನಟಿ ಮಾಡಿದ ಕೆಲಸ ನೋಡಿ ಎಲ್ರೂ ಶಾಕ್!

ನಟಿ ಸಮಂತಾ ಅವರ ಪತಿ ರಾಜ್ ನಿಡಿಮೋರು ಅವರ ಮುಂದೆಯೇ ಅಭಿಮಾನಿಯೊಬ್ಬ ಪ್ರಪೋಸ್ ಮಾಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಸಮಯದಲ್ಲಿ ಸ್ಟಾರ್ ನಟಿ ಏನು ಮಾಡಿದರು ಗೊತ್ತಾ? ಸಮಂತಾ ಮಾಡಿದ ಕೆಲಸಕ್ಕೆ ಅಲ್ಲಿದ್ದವರು ಶಾಕ್ ಆಗಿದ್ದಾರೆ.

Read Full Story

05:47 PM (IST) May 27

ಒಂದು ವಿಕೆಟ್‌ಗೆ ₹4.50 ಕೋಟಿ..! ಈ ಬಾರಿಯ ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಇವರೇ ನೋಡಿ! ಬುಮ್ರಾಗೆ ಎಷ್ಟನೇ ಸ್ಥಾನ?

2026ರ ಐಪಿಎಲ್ ಟೂರ್ನಿಯಲ್ಲಿ ಕೆಲವು ಸ್ಟಾರ್ ಬೌಲರ್‌ಗಳ ವೈಫಲ್ಯ ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ಕೆಲವು ಸ್ಟಾರ್ ಬೌಲರ್‌ಗಳು ಲೀಗ್ ಹಂತದಲ್ಲಿ ವಿಕೆಟ್ ಕಬಳಿಸಲು ಪರದಾಡಿದ್ದು, ತಂಡದ ನಾಕೌಟ್ ಕನಸನ್ನು ನುಚ್ಚುನೂರು ಮಾಡಿತು. ಐಪಿಎಲ್‌ನ ಟಾಪ್-5 ದುಬಾರಿ ಬೌಲರ್‌ಗಳು ಯಾರು ನೋಡೋಣ ಬನ್ನಿ.

 

Read Full Story

05:10 PM (IST) May 27

ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡ್ತಿ ಇಬ್ಬರಿಗೂ ರಕ್ಷಣೆ - ಜೂನ್ 1 ರಿಂದ ಖರೀದಿಗೆ ಸಿಗಲಿವೆ ಎಲ್‌ಐಸಿಯ ಸೂಪರ್ ಪ್ಲಾನ್‌ಗಳು!

ಭಾರತೀಯ ಜೀವ ವಿಮಾ ನಿಗಮ (LIC) ದಂಪತಿಗಳಿಗಾಗಿ 'ನ್ಯೂ ಜೀವನ್ ಸಾಥಿ' ಹೆಸರಿನ ಎರಡು ಹೊಸ ಜಂಟಿ ಜೀವ ವಿಮಾ ಯೋಜನೆಗಳನ್ನು (ಪ್ಲಾನ್ 888 ಮತ್ತು 889) ಬಿಡುಗಡೆ ಮಾಡಿದೆ. ಈ ಯೋಜನೆಗಳು ಉಳಿತಾಯ ಮತ್ತು ರಕ್ಷಣೆಯ ಜೊತೆಗೆ ಸಿಂಗಲ್ ಪ್ರೀಮಿಯಂ ಹಾಗೂ ಲಿಮಿಟೆಡ್ ಪ್ರೀಮಿಯಂ ಪಾವತಿ ಆಯ್ಕೆ ಒದಗಿಸುತ್ತವೆ.

Read Full Story

04:42 PM (IST) May 27

ಉಕ್ಕಿನ ವಲಯದಲ್ಲಿ ಭಾರತದ ಐತಿಹಾಸಿಕ ಸಾಧನೆ - ವಿಶ್ವದ ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿದ AM/NS ಇಂಡಿಯಾ!

ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ (AM/NS ಇಂಡಿಯಾ) ವಿಶ್ವದಲ್ಲೇ ಮೊದಲ ಬಾರಿಗೆ EQ70 ಗ್ರೇಡ್‌ನ ಅತ್ಯುನ್ನತ ಸಾಮರ್ಥ್ಯದ ವೆಲ್ಡೆಡ್ ಪೈಪ್‌ಗಳನ್ನು ವಾಣಿಜ್ಯಿಕವಾಗಿ ಉತ್ಪಾದಿಸಿ ಇತಿಹಾಸ ನಿರ್ಮಿಸಿದೆ. ಈ ಸಾಧನೆಯು 'ಆತ್ಮನಿರ್ಭರ ಭಾರತ'ಕ್ಕೆ ದೊಡ್ಡ ಯಶಸ್ಸು ತಂದಿದ್ದು, ಸಮುದ್ರದಾಳದ ಯೋಜನೆಗಳಿಗೆ ವಿದೇಶಿ ಅವಲಂಬನೆಯನ್ನು ಕೊನೆಗೊಳಿಸಿದೆ.
Read Full Story

04:27 PM (IST) May 27

ಯಾರು ಈ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ - ಮೆಗಾ ಪವರ್ ಸ್ಟಾರ್‌ಗೆ ಇವರೇ ರಕ್ಷಾಕವಚ!

ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಮಾತ್ರವಲ್ಲ, ನಮ್ಮ ಸೌತ್ ಹೀರೋಗಳು ಕೂಡ ಬಾಡಿಗಾರ್ಡ್‌ಗಳಿಗಾಗಿ ಭಾರಿ ಹಣ ಖರ್ಚು ಮಾಡುತ್ತಾರೆ. ಪ್ಯಾನ್ ಇಂಡಿಯಾ ಹೀರೋ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಬಾಡಿಗಾರ್ಡ್ ಯಾರು? ಅವರಿಗೆ ಚರಣ್ ಎಷ್ಟು ಸಂಬಳ ಕೊಡುತ್ತಾರೆ ಗೊತ್ತಾ?

Read Full Story

04:23 PM (IST) May 27

ತಲೆ ಬೋಳಿಸಿ, ಕೈಕೋಳ ಹಾಕಿ ಟಿಎಂಸಿ ಗೂಂಡಾಗಳ ಅರೆಬೆತ್ತಲೆ ಪರೇಡ್‌ ಮಾಡಿಸಿದ ಬಂಗಾಳ ಪೊಲೀಸ್‌

ಪಶ್ಚಿಮ ಬಂಗಾಳದಲ್ಲಿ, ಟಿಎಂಸಿ ಹಿನ್ನೆಲೆಯುಳ್ಳ ಪ್ರಭಾವಿ ರೌಡಿಗಳನ್ನು ಪೊಲೀಸರು ಒಳ ಉಡುಪಿನಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಈ ಕಠಿಣ ಕ್ರಮವನ್ನು ಟಿಎಂಸಿ 'ಮಾನವ ಹಕ್ಕುಗಳ ಉಲ್ಲಂಘನೆ' ಎಂದು ತೀವ್ರವಾಗಿ ಖಂಡಿಸಿದೆ.

Read Full Story

03:58 PM (IST) May 27

'ಎಣ್ಣೆ ಹೊಡೆಯೋದು ಬಿಟ್ಟ ಮೇಲೆ ಬದುಕು ಟ್ರ್ಯಾಕಿಗೆ ಬಂತು' - ಖಾಸಗಿ ಬದುಕಿನ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!

Yuzvendra Chahal Opens Up on Quitting Alcohol After Divorce 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಅಭಿಯಾನ ಲೀಗ್ ಹಂತದಲ್ಲೇ ಮುಕ್ತಾಯವಾಗಿದೆ. ಪಂಜಾಬ್ ಕಿಂಗ್ಸ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಮ್ಮ ಖಾಸಗಿ ಬದುಕಿನ ಅತ್ಯಂತ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

Read Full Story

03:34 PM (IST) May 27

ಅತಿಯಾದ ಇಂಧನ ವೆಚ್ಚ, ದೇಶೀಯ ವಿಮಾನ ಸೇವೆ ಕಡಿತ ಮಾಡಿದ ಏರ್‌ ಇಂಡಿಯಾ

ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಜೂನ್ ಮತ್ತು ಆಗಸ್ಟ್ 2026 ರ ನಡುವೆ ಆಯ್ದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಿದೆ. 

Read Full Story

03:03 PM (IST) May 27

ವೈಭವ್ ಸೂರ್ಯವಂಶಿ ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಐಪಿಎಲ್ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಹೊಸದೊಂದು ಫೋಟೋ ವೈರಲ್

Vaibhav Suryavanshi Family Photo 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಕುಟುಂಬದ ಫೋಟೋ ವೈರಲ್ ಆಗಿದೆ.

 

Read Full Story

01:04 PM (IST) May 27

ಬಕ್ರೀದ್​ಗೆಂದು ಅವ್ರು ಕುರಿ ತಂದ್ರೆ, ಇವ್ರು ಹಂದಿ ತಂದ್ರು! ಹಂದಿ ಹಿಡಿದು ಓಡಿದ ಪೊಲೀಸ್ರು - ವಿಡಿಯೋ ವೈರಲ್​

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಕುರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಂದಿಯನ್ನು ತಂದು ಗಲಾಟೆ ಸೃಷ್ಟಿಸಿದ್ದಾನೆ. ಮುಸ್ಲಿಮರು ಹಂದಿಯನ್ನು ಅಶುದ್ಧವೆಂದು ಪರಿಗಣಿಸುವುದರಿಂದ ಈ ಕೃತ್ಯ ಎಸಗಲಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Read Full Story

12:36 PM (IST) May 27

RCB ಫೈನಲ್ ಪ್ರವೇಶಿಸಿದರೂ, ಕಳೆದೊಂದು ದಶಕದಿಂದ ಕನಸಾಗಿಯೇ ಉಳಿದ ವಿರಾಟ್ ಕೊಹ್ಲಿಯ ಅದೊಂದು ಬಯಕೆ!

ಐಪಿಎಲ್ 2026ರ ಕ್ವಾಲಿಫೈಯರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲರಾಗಿದ್ದು, ಅವರ ಪ್ಲೇ-ಆಫ್ ಅರ್ಧಶತಕದ ಬರ 10 ವರ್ಷಗಳಿಂದ ಮುಂದುವರಿದಿದೆ. ಆದರೆ, ರಜತ್ ಪಟಿದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಗುಜರಾತ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
Read Full Story

11:19 AM (IST) May 27

IPL ಕ್ವಾಲಿಫೈಯರ್-1 ಪಂದ್ಯದಲ್ಲಿ 4 ಅಪರೂಪದ ದಾಖಲೆ ಬರೆದ RCB..! ಬೆಂಗಳೂರು ಆರ್ಭಟಕ್ಕೆ CSK, ಗುಜರಾತ್ ರೆಕಾರ್ಡ್ಸ್‌ ನುಚ್ಚುನೂರು

2026ರ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್‌ಗಳಿಂದ ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್‌ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ, ಆರ್‌ಸಿಬಿ ತಂಡವು ಪ್ಲೇ ಆಫ್‌ನಲ್ಲಿ ಗರಿಷ್ಠ ಬೌಂಡರಿ, ಗರಿಷ್ಠ ಸ್ಕೋರ್ ಸೇರಿದಂತೆ ನಾಲ್ಕು ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ.
Read Full Story

10:14 AM (IST) May 27

'ನಾವು ಬರ್ತಾ ಇದ್ದೇವೆ..' - ಗುಜರಾತ್ ಟೈಟಾನ್ಸ್ ಬಗ್ಗುಬಡಿದು ಎದುರಾಳಿಗಳ ಮೇಲೆ ಗುಡುಗಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್!

2026ರ ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಪಂದ್ಯದ ನಂತರ ಎದುರಾಳಿಗಳಿಗೆ ನೀಡಿದ ಖಡಕ್ ಎಚ್ಚರಿಕೆಯು ಪಂದ್ಯದ ಪ್ರಮುಖ ಹೈಲೈಟ್ ಆಗಿದೆ.
Read Full Story

09:22 AM (IST) May 27

ಇಂದು ಸನ್‌ರೈಸರ್ಸ್‌ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್‌ ಎಲಿಮಿನೇಟರ್‌ ಫೈಟ್! ಸೋತರೇ ಟೂರ್ನಿಯಿಂದ ಔಟ್!

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡ ಕ್ವಾಲಿಫೈಯರ್‌-2 ಪ್ರವೇಶಿಸಲಿದೆ. ಈ ಪಂದ್ಯವು ವೈಭವ್ ಸೂರ್ಯವಂಶಿ ಮತ್ತು ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟರ್‌ಗಳ ನಡುವಿನ ಸೆಣಸಾಟವಾಗಲಿದೆ.
Read Full Story

09:03 AM (IST) May 27

IPL 2026 - ಆರ್‌ಸಿಬಿ 2ನೇ ಕಪ್‌ ಗೆಲ್ಲಲು ಇನ್ನೊಂದೇ ಹೆಜ್ಜೆ! ಬೆಂಗಳೂರು ಆರ್ಭಟಕ್ಕೆ ಗುಜರಾತ್ ಧೂಳೀಪಟ

ಹಾಲಿ ಚಾಂಪಿಯನ್‌ ಆರ್‌ಸಿಬಿ, ಕ್ವಾಲಿಫೈಯರ್‌-1 ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು 92 ರನ್‌ಗಳಿಂದ ಮಣಿಸಿ ಸತತ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ರಜತ್ ಪಾಟೀದಾರ್ ಅವರ ಅಜೇಯ 93 ರನ್‌ಗಳ ನೆರವಿನಿಂದ ಆರ್‌ಸಿಬಿ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೆ, ಗುಜರಾತ್ 162 ರನ್‌ಗಳಿ ಸೋಲುಂಡಿತು.

Read Full Story

09:01 AM (IST) May 27

ಪರಾರಿ ಆಗಿದ್ದ ಕೈದಿ, ಮೋಹನ್‌ಲಾಲ್‌-ಬಚ್ಚನ್‌ ಜತೆ ಸಿನಿಮಾದಲ್ಲಿ ನಟನೆ! 12 ವರ್ಷಗಳಲ್ಲಿ 12 ಹೆಸರು

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ, ಪರೋಲ್ ಮೇಲೆ ಪರಾರಿಯಾಗಿ 12 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಈ ಅವಧಿಯಲ್ಲಿ, ಆತ ಹಲವು ಹೆಸರುಗಳನ್ನು ಬದಲಿಸಿಕೊಂಡು ಅಮಿತಾಭ್ ಬಚ್ಚನ್ ಮತ್ತು ಮೋಹನ್‌ಲಾಲ್ ಅವರಂತಹ ಖ್ಯಾತ ನಟರೊಂದಿಗೆ ಸಿನಿಮಾಗಳಲ್ಲಿ ನಟಿಸಿದ್ದ. 12 ವರ್ಷಗಳ ನಂತರ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

More Trending News