Published : Sep 26, 2025, 07:26 AM ISTUpdated : Sep 26, 2025, 11:15 PM IST

India Latest News Live: ಗಾಜಾ ಪ್ರಜೆಗಳ ಮೊಬೈಲ್‌ ಹ್ಯಾಕ್‌ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್‌ ಸೇನೆ!

ಸಾರಾಂಶ

ನವದೆಹಲಿ: ಕೇವಲ 20 ದಿನಗಳ ಹಿಂದೆ ಉತ್ತರಪ್ರದೇಶದ ಲಖನೌದಲ್ಲಿ ಆರಂಭಗೊಂಡು, ಬುಧವಾರ ಕರ್ನಾಟಕಕ್ಕೂ ವ್ಯಾಪಿಸಿದ್ದ 'ಐ ಲವ್ ಮೊಹಮ್ಮದ್' ವಿವಾದ ಇದೀಗ ಗುಜರಾತ್ ಗೂ ಹಬ್ಬಿದೆ. ಇದರೊಂದಿಗೆ ವಿವಾದ ಭುಗಿಲೆದ್ದ ರಾಜ್ಯಗಳ ಸಂಖ್ಯೆ 6ಕ್ಕೆ ಏರಿದೆ. ಮುಸ್ಲಿಮರ 'ಐ ಲವ್ ಮೊಹಮ್ಮದ್ ಮತ್ತು ಅದಕ್ಕೆ ಪ್ರತಿಯಾಗಿ ಹಿಂದೂಗಳ 'ಐ ಲವ್ ಮಹಾದೇವ್' ಪೋಸ್ಟರ್ ವಾರ್ 6 ರಾಜ್ಯಗಳಲ್ಲಿ ಹಿಂದೂ ಮುಸ್ಲಿಂ ಕಲಹಕ್ಕೆ ಕಾರಣವಾಗಿದೆ. ಇಂಥ ಗಲಭೆ ಸಂಬಂಧ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು, 38 ಜನರನ್ನು ಬಂಧಿಸಲಾಗಿದೆ. ಮೊದಲಿಗೆ ಕೇವಲ ಪೋಸ್ಟರ್ ವಾರ್‌ಗೆ ಸೀಮಿತವಾಗಿದ್ದ ಈ ವಿವಾದ ಇದೀಗ ಜಾಲತಾಣಗಳಲ್ಲಿ ವಿವಾದಿತ ವ ಸ್ಟೇಟಸ್ ವಾರ್‌ಗೂ ನಾಂದಿ ಹಾಡಿದೆ.

ಏನಿದು ವಿವಾದ?

ಉತ್ತರಪ್ರದೇಶದ ಕಾನ್ಸುರದಲ್ಲಿ ಸೆ.4ರಂದು ನಡೆದ ಈದ್ ಮಿಲಾದ್ ಉನ್ ನಬಿ ಮೆರವಣಿಗೆಯಲ್ಲಿ ಕೆಲ ಯುವಕರು 'ಐ ಲವ್ ಮೊಹಮ್ಮದ್' ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಟ್ರಾ ಫಿಕ್ ಜಂಕ್ಷನ್‌ಗಳು, ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಆದರೆ, 'ಇದು ಹೊಸ ಸಂಪ್ರದಾಯ, ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥ ಪೋಸ್ಟರ್ ಪ್ರದರ್ಶನ ಕೋಮುಸಾಮರಸ್ಯಕ್ಕೆ ಧಕ್ಕೆ ತರಬಹುದು' ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್ ಕಿತ್ತೆಸೆದರು. ಅಲ್ಲಿಂದ ದಂಗಲ್ ಆರಂಭವಾಯಿತು.

11:15 PM (IST) Sep 26

ಗಾಜಾ ಪ್ರಜೆಗಳ ಮೊಬೈಲ್‌ ಹ್ಯಾಕ್‌ ಮಾಡಿ, ನೆತನ್ಯಾಹು ವಿಶ್ವಸಂಸ್ಥೆ ಭಾಷಣ ಪ್ರಸಾರ ಮಾಡಿದ ಇಸ್ರೇಲ್‌ ಸೇನೆ!

IDF Hacks Gaza Phones to Stream Netanyahu UN Speech Amid UN Walkout ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ. 

Read Full Story

10:43 PM (IST) Sep 26

ಭಾರತದ 7 ಯುದ್ಧವಿಮಾನ ಹೊಡೆದುರುಳಿಸಿದ್ದೇವೆ.. ವಿಶ್ವಸಂಸ್ಥೆಯಲ್ಲೂ ಸುಳ್ಳಿನ ಕಥೆ ಕಟ್ಟಿದ ಪಾಕ್‌ ಪ್ರಧಾನಿ

Shehbaz Sharif UNGA Lie ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, 'ಆಪರೇಷನ್ ಸಿಂಧೂರ್'ನಲ್ಲಿ ಭಾರತದ ವಿರುದ್ಧ ತಮ್ಮ ದೇಶ ಗೆದ್ದಿದೆ ಎಂದು ಹೇಳಿಕೊಂಡಿದ್ದಾರೆ.

Read Full Story

09:22 PM (IST) Sep 26

ಅಕ್ರಮ ವಲಸೆ ಅಪರಾಧವಲ್ಲ, ಭೂಮಿಯ ಮೇಲೆ ಯಾವ ಮಾನವ ಎಲ್ಲಿ ಬೇಕಾದರೂ ಹೋಗಬಹುದು - ಪ್ರಕಾಶ್‌ ರಾಜ್‌

Prakash Raj No Human is Illegal Slams Govt Over Gaza UAPA Arrests ನವದೆಹಲಿಯಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಭೂಮಿಯ ಮೇಲೆ ಯಾವ ಮಾನವನೂ ಅಕ್ರಮವಲ್ಲ ಮತ್ತು ವಲಸೆ ಅಪರಾಧವಲ್ಲ ಎಂದು ಪ್ರತಿಪಾದಿಸಿದ್ದಾರೆ. 

Read Full Story

08:41 PM (IST) Sep 26

ತಿರುಪತಿ ತಿಮ್ಮಪ್ಪನಿಗೆ ₹3.86 ಕೋಟಿ ಮೌಲ್ಯದ ವಜ್ರಖಚಿತ ಚಿನ್ನದ ಯಜ್ಞೋಪವೀತ ಅರ್ಪಿಸಿದ ದಂಪತಿ!

Couple Donates 3.86 KG Gold Yagnopaveetham to Tirupati ವಿಶಾಖಪಟ್ಟಣದ ದಂಪತಿಗಳು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹3.86 ಕೋಟಿ ಮೌಲ್ಯದ, 3.86 ಕೆಜಿ ತೂಕದ ಚಿನ್ನದ ಯಜ್ಞೋಪವೀತವನ್ನು ದೇಣಿಗೆಯಾಗಿ ನೀಡಿದ್ದಾರೆ. 

Read Full Story

07:02 PM (IST) Sep 26

ಹಬ್ಬದ ಸಂಭ್ರಮಕ್ಕೆ ಪರ್ಫೆಕ್ಟ್‌ ಫೋನ್‌ - OPPO Reno14 5G ದೀಪಾವಳಿ ಎಡಿಷನ್‌ನ ಸಂಪೂರ್ಣ ಡೀಟೇಲ್ಸ್‌ ಇಲ್ಲಿದೆ!

OPPO Reno14 5G Diwali Edition Launched ದೀಪಾವಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ OPPO Reno14 5G ದೀಪಾವಳಿ ಎಡಿಷನ್, ಉದ್ಯಮದಲ್ಲೇ ಮೊದಲ ಬಾರಿಗೆ ಹೀಟ್-ಸೆನ್ಸಿಟಿವ್, ಬಣ್ಣ ಬದಲಾಯಿಸುವ ತಂತ್ರಜ್ಞಾನವನ್ನು ಹೊಂದಿದೆ. 

Read Full Story

06:46 PM (IST) Sep 26

ಮದರಸಾ ಪರಿಶೀಲನೆ ವೇಳೆ ಟಾಯ್ಲೆಟ್‌ನಲ್ಲಿ ಬಂಧಿಯಾಗಿದ್ದ 40 ಅಪ್ರಾಪ್ತ ಬಾಲಕಿಯರು ಪತ್ತೆ!

40 Minor Girls Found Locked in Toilet During Madrassa Inspection in UP ಲಕ್ನೋ ಸಮೀಪದ ನೋಂದಣಿಯಾಗದ ಮದರಸಾವೊಂದರಲ್ಲಿ ತಪಾಸಣೆ ನಡೆಸಿದಾಗ, 40 ಬಾಲಕಿಯರು ಶೌಚಾಲಯದಲ್ಲಿ ಬಂಧಿಯಾಗಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಕಟ್ಟಡವನ್ನು ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Read Full Story

05:51 PM (IST) Sep 26

ಸ್ವಾಮಿ ಚೈತನ್ಯಾನಂದ ಸರಸ್ವತಿ ಲೈಂಗಿಕ ಕಿರುಕುಳ ಪ್ರಕರಣ, ನಿರೀಕ್ಷಾಣಾ ಜಾಮೀನು

ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ನಿರ್ದೇಶಕ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ತೀವ್ರಗೊಂಡಿವೆ. ಗುಪ್ತ ಕ್ಯಾಮೆರಾಗಳು, ಅಶ್ಲೀಲ ಸಂದೇಶಗಳಂತಹ ಗಂಭೀರ ದೂರುಗಳ ಹಿನ್ನೆಲೆಯಲ್ಲಿ 17 ವಿದ್ಯಾರ್ಥಿನಿಯರು ದೂರು ನೀಡಿದ್ದು, ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
Read Full Story

05:51 PM (IST) Sep 26

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಭಾರತ ತಂಡದಲ್ಲಿ 2 ಮೇಜರ್ ಚೇಂಜ್, ಇಲ್ಲಿದೆ ಸಂಭಾವ್ಯ ತಂಡ!

ದುಬೈ: ಭಾರತ ಹಾಗೂ ಶ್ರೀಲಂಕಾ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

 

Read Full Story

04:31 PM (IST) Sep 26

'ಫೈನಲ್‌ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' - ಹ್ಯಾರಿಸ್ ರೌಫ್ ಮುಂದೆ ಗೋಳಾಡಿದ ಪಾಕಿ ಅಭಿಮಾನಿ!

ಬಾಂಗ್ಲಾದೇಶವನ್ನು ಸೋಲಿಸಿ ಏಷ್ಯಾಕಪ್ ಫೈನಲ್‌ಗೆ ಪ್ರವೇಶಿಸಿದ ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್‌ಗೆ ಅಭಿಮಾನಿಯೊಬ್ಬರು 'ಫೈನಲ್‌ನಲ್ಲಿ ಭಾರತವನ್ನು ಸುಮ್ಮನೆ ಬಿಡಬೇಡಿ' ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.  

Read Full Story

04:22 PM (IST) Sep 26

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ - ಯಾರೀಕೆ ಸೀರೆಯುಟ್ಟು ಮಿಂಚಿದ 6 ವರ್ಷದ ಪೋರಿ

Trisha Thosar Steals the Show: ಆರು ವರ್ಷದ ಮರಾಠಿ ನಟಿ ತ್ರಿಶಾ ತೋಶರ್, 'ನಾಲ್ 2' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Read Full Story

04:20 PM (IST) Sep 26

ಲಡಾಖ್‌ ಹಿಂಸಾಚಾರಕ್ಕೆ ಕಾರಣರಾದ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್ಚುಕ್‌ ಬಂಧನ!

Sonam Wangchuk Arrested Under NSA Over Ladakh Protest Violence ಲೇಹ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. 

Read Full Story

03:03 PM (IST) Sep 26

ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೇ ಮೌಂಟ್ ಎವರೆಸ್ಟ್ ಏರಿದ ಯುವಕ - ಈ ಸಾಧನೆಗೆ ಇದೇ ಮೊದಲು

ಪೋಲೆಂಡ್‌ನ ಪರ್ವತಾರೋಹಿ ಆಂಡ್ರೆಜ್ ಬಾರ್ಗಿಯೆಲ್, ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ತೀವ್ರ ಹಿಮಪಾತದಂತಹ ಸವಾಲುಗಳನ್ನು ಎದುರಿಸಿ ಶಿಖರವನ್ನು ತಲುಪಿದ ಅವರು, ನಂತರ ಅಲ್ಲಿಂದ ಸ್ಕೀಯಿಂಗ್ ಮೂಲಕ ಇಳಿದು ಬಂದರು.
Read Full Story

02:50 PM (IST) Sep 26

Navratri 2025 - ಪ್ರಧಾನಿ ಮೋದಿಯವರ ಉಪವಾಸ ಭಕ್ತಿಯಲ್ಲ, ಅವರ ಆಧ್ಯಾತ್ಮಿಕ ಶಕ್ತಿಯ ರಹಸ್ಯ ತಿಳಿಯಿರಿ

Navratri 2025: ಪ್ರಧಾನಿ ನರೇಂದ್ರ ಮೋದಿಯವರ ನವರಾತ್ರಿ ಉಪವಾಸವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದೊಂದು ಕಠಿಣ ಆಧ್ಯಾತ್ಮಿಕ ತಪಸ್ಸು. ಒಂಬತ್ತು ದಿನಗಳ ಕಾಲ ಕೇವಲ ನೀರು ಅಥವಾ ಒಂದೇ ಬಗೆಯ ಹಣ್ಣನ್ನು ಸೇವಿಸಿ ಇಂದ್ರಿಯ ನಿಗ್ರಹ ಆತ್ಮಶುದ್ಧೀಕರಣವನ್ನು ಸಾಧಿಸುತ್ತಾರೆ. ನವರಾತ್ರಿ ಉಪವಾಸದ ಬಗ್ಗೆ ತಿಳೀಯೋಣ.

Read Full Story

01:58 PM (IST) Sep 26

ಏಷ್ಯಾಕಪ್ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ನೇರ ವಾರ್ನಿಂಗ್ ಕೊಟ್ಟ ಪಾಕಿಸ್ತಾನ ಕ್ಯಾಪ್ಟನ್!

ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ನಿರೀಕ್ಷೆಯಂತೆಯೇ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಹೀಗಿರುವಾಗಲೇ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಭಾರತ ತಂಡಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

 

Read Full Story

01:37 PM (IST) Sep 26

ನಿಷೇಧಿತ ಶ್ವಾನವನ್ನು ಸಾಕ್ತಿದ ದಂಪತಿ - 10 ವರ್ಷದ ಮಗಳು ಶ್ವಾನದ ದಾಳಿಗೆ ಬಲಿ

Banned dog breed kills child: ಕಾನೂನುಬದ್ಧವಾಗಿ ಸಾಕುತ್ತಿದ್ದ ನಿಷೇಧಿತ ಎಕ್ಸ್ ಎಲ್ ಬುಲ್ಲಿ ತಳಿಯ ನಾಯಿಯೊಂದು 10 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಯಾವುದೇ ಆಕ್ರಮಣಕಾರಿ ಲಕ್ಷಣಗಳನ್ನು ತೋರದಿದ್ದ ಈ ಶ್ವಾನವು, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಮಗುವನ್ನು ಬಲಿ ಪಡೆದಿದೆ.

Read Full Story

12:54 PM (IST) Sep 26

Narendra Modi - ನವರಾತ್ರಿ ಹಬ್ಬಕ್ಕೆ ಬಂಪರ್ ಗಿಫ್ಟ್, ಬಿಹಾರದ ಮಹಿಳೆಯರ ಖಾತೆಗೆ ₹10,000 ಜಮಾ!

Mukhyamantri Mahila Udyami Yojana ಬಿಹಾರ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ 'ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ'ಯಡಿ 7.5 ಮಿಲಿಯನ್ ಮಹಿಳೆಯರ ಖಾತೆಗೆ ತಲಾ ₹10,000 ಜಮಾ ಮಾಡಿರುವುದಾಗಿ ಘೋಷಿಸಿದ್ದಾರೆ. ನವರಾತ್ರಿ ವೇಳೆ ಈ ಘೋಷಣೆ. ನಿತೀಶ್ ಕುಮಾರ್ ಸರ್ಕಾರ ಬಣ್ಣಿಸಿದ್ದಾರೆ.

Read Full Story

12:41 PM (IST) Sep 26

ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಸೋಲಿಸಲು ಪಾಕ್‌ಗೆ ಮಾಸ್ಟರ್ ಪ್ಲಾನ್ ಹೇಳಿಕೊಟ್ಟ ಶೋಯೆಬ್ ಅಖ್ತರ್!

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ದಾರೆ. ಏನದು ನೋಡೋಣ ಬನ್ನಿ.

Read Full Story

12:23 PM (IST) Sep 26

26 ಜನರ ಬಲಿ ಪಡೆದ ಪಹಲ್ಗಾಮ್ ದಾಳಿಕೋರರಿಗೆ ದಾರಿ ತೋರಿದ್ದು ಒಬ್ಬ ಶಿಕ್ಷಕ!

Kashmiri Teacher Held: ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ನೆರವು ನೀಡಿದ ಆರೋಪದ ಮೇಲೆ ಶಿಕ್ಷಕ ಮೊಹಮ್ಮದ್ ಯೂಸುಫ್ ಕಟಾರಿಯನ್ನು ಬಂಧಿಸಲಾಗಿದೆ. ಈತನ ಕೈವಾಡ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯ ನಂತರ ಬೆಳಕಿಗೆ ಬಂದಿತ್ತು.

Read Full Story

11:14 AM (IST) Sep 26

ಪೆಹಲ್ಗಾಂ ಬಗ್ಗೆ ಉಲ್ಲೇಖ - ಸೂರ್ಯಗೆ ಶಾಕ್ ಕೊಟ್ಟ ಐಸಿಸಿ!

ದುಬೈ: ಪಹಲ್ಗಾಂ ಉಗ್ರದಾಳಿಯ ವಿಚಾರದ ಕುರಿತಂತೆ ಬಹಿರಂಗವಾಗಿ ತಮ್ಮ ಅನಿಸಿ ಹಂಚಿಕೊಂಡ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್‌ಗೆ ಐಸಿಸಿ ಎಚ್ಚರಿಕೆ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story

10:47 AM (IST) Sep 26

ಭಾರತದ ಜೊತೆಗೆ ತೆರಿಗೆ ಮುನಿಸು - ಭಾರತದ ಶತ್ರು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡ್ತಿರುವ ಟ್ರಂಪ್

Trump's anti-India policy: ಅಮೆರಿಕ ಅಧ್ಯಕ್ಷ ಟ್ರಂಪ್, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥರ ಭೇಟಿಯಾಗಿ 'ಶ್ರೇಷ್ಠ ನಾಯಕರು' ಎಂದು ಹೊಗಳಿದ್ದಾರೆ. ಭಾರತದೊಂದಿಗೆ ತೆರಿಗೆ ಸಮರ ನಡೆಯುತ್ತಿರುವ ಹೊತ್ತಲ್ಲೇ ನಡೆದ ಈ ಭೇಟಿಯು ಬದಲಾಗುತ್ತಿರುವ ರಾಜಕೀಯ ಸಮೀಕರಣದ ಸಂಕೇತವಾಗಿದೆ.

Read Full Story

09:09 AM (IST) Sep 26

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ಗೆ ಬಲಿಷ್ಠ ಭಾರತ ತಂಡ ಪ್ರಕಟ, ಪಡಿಕ್ಕಲ್ ಇನ್, ಕರುಣ್ ನಾಯರ್ ಔಟ್!

ವೆಸ್ಟ್‌ಇಂಡೀಸ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದ್ದು, ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲರಾಗಿದ್ದ ಕರ್ನಾಟಕದ ಕರುಣ್ ನಾಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
Read Full Story

08:26 AM (IST) Sep 26

ಏಷ್ಯಾಕಪ್ ಫೈನಲ್ - ಬದ್ಧವೈರಿಗಳ ಐತಿಹಾಸಿಕ ಮುಖಾಮುಖಿಗೆ ವೇದಿಕೆ ಸಜ್ಜು! ಭಾನುವಾರ ಇಂಡೋ-ಪಾಕ್ ಫೈಟ್

ಏಷ್ಯಾಕಪ್ ಟಿ20 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಪಾಕಿಸ್ತಾನವು ಬದ್ಧವೈರಿ ಭಾರತವನ್ನು ಎದುರಿಸಲಿದ್ದು, ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ.
Read Full Story

08:07 AM (IST) Sep 26

Today Top News - ಭೈರಪ್ಪ ಅಂತ್ಯಕ್ರಿಯೆ, ಸರ್ಕಾರವನ್ನೇ ಯಮಾರಿಸಿದ್ದ ಬುರುಡೆ ಗ್ಯಾಂಗ್, ಐ ಲವ್ ಮೊಹಮ್ಮದ್ ವಿವಾದ, ಮಿಗ್‌-21 ನಿವೃತ್ತಿ

ಇಂದು ಎಸ್‌.ಎಲ್ ಭೈರಪ್ಪ ಅಂತ್ಯಕ್ರಿಯೆ

 ಸರ್ಕಾರವನ್ನೇ ಯಮಾರಿಸಿದ್ದ ಬುರುಡೆ ಗ್ಯಾಂಗ್

ಆಫ್ರಿಕಾ, ಗುಜರಾತ, ಸ್ಮಶಾನ ತೋರಿಸುವ ಗಣತಿ ಲೊಕೇಷನ್

ಮಿಗ್‌-21 ಯುದ್ಧವಿಮಾನ ನಿವೃತ್ತಿ

97 ತೇಜಸ್‌ ಖರೀದಿಗೆ ಸೇನೆ ಡೀಲ್‌

Read Full Story

More Trending News