ಇಂದು ಎಸ್.ಎಲ್ ಭೈರಪ್ಪ ಅಂತ್ಯಕ್ರಿಯೆ ಸರ್ಕಾರವನ್ನೇ ಯಮಾರಿಸಿದ್ದ ಬುರುಡೆ ಗ್ಯಾಂಗ್ಆಫ್ರಿಕಾ, ಗುಜರಾತ, ಸ್ಮಶಾನ ತೋರಿಸುವ ಗಣತಿ ಲೊಕೇಷನ್ಮಿಗ್-21 ಯುದ್ಧವಿಮಾನ ನಿವೃತ್ತಿ97 ತೇಜಸ್ ಖರೀದಿಗೆ ಸೇನೆ ಡೀಲ್
SL Bhyrappa: ಇಂದು ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ
ಹೃದಯಾಘಾತದಿಂದ ಬುಧವಾರ ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಅವರ ಪಾರ್ಥೀವ ಶರೀರವನ್ನು ಗುರುವಾರ ಮೈಸೂರಿಗೆ ತರಲಾಗಿದ್ದು, ಇಂದು ಬೆಳಗ್ಗೆ 8.30ಕ್ಕೆ ಭೈರಪ್ಪ ಅವರ ಮನೆಯಲ್ಲಿ ಅಂತಿಮ ವಿಧಿ ವಿಧಾನ ನಡೆದು, ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಸುಪ್ರೀಂಕೋರ್ಟ್ ಛೀಮಾರಿ ಬಚ್ಚಿಟ್ಟು ಸರ್ಕಾರವನ್ನೇ ಯಮಾರಿಸಿದ್ದ ಬುರುಡೆ ಗ್ಯಾಂಗ್
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬುರುಡೆ ಪ್ರಕರಣದ ಎಫ್‌ಐಆರ್ ದಾಖಲಿಸುವುದಕ್ಕೂ ಮೊದಲೇ ಸುಪ್ರೀಂಕೋರ್ಟ್‌ಗೆ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಲಾಗಿತ್ತು. ಮೇ 5ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು. ಇದು ನಿಜವಾದ ಅರ್ಥದಲ್ಲಿ ‘ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್’ ಅಲ್ಲ, ಬದಲಾಗಿ ‘ಪೈಸಾ ಇಂಟರೆಸ್ಟ್ ಲಿಟಿಗೇಶನ್’ ಎಂದು ಛೀಮಾರಿ ಹಾಕಿತ್ತು ಎಂಬ ಸಂಗತಿ ಬಯಲಾಗಿದೆ.
Karnataka Caste survey: ಗಣತಿ ಲೊಕೇಷನ್ ಆಫ್ರಿಕಾ, ಗುಜರಾತ, ಸ್ಮಶಾನಕ್ಕೆ ಹೋಗುತ್ತೆ!
ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹತ್ತಾರು ಸಮಸ್ಯೆಗಳು ಎದುರಾಗಿವೆ. ಜೆಸ್ಕಾಂ ಆರ್‌ಆರ್ ಸಂಖ್ಯೆ ಆಧಾರದ ಮೇಲೆ ರಚಿಸಿದ ಯುಎಚ್‌ಐಡಿ ಲೋಕೇಷನ್, ಸಮೀಕ್ಷೆ ಕೈಗೊಂಡಿರುವ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ಮತ್ತು ಗುಜರಾತ್‌ಗೆ ಕರೆದುಕೊಂಡು ಹೋಗುತ್ತದೆ. ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹೀಗಾದರೆ, ನಾವು ಹೇಗೆ ಕೆಲಸ ಮಾಡಬೇಕು ಎಂಬುದು ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಗಣತಿದಾರರು ಅಳಲು ತೋಡಿಕೊಂಡಿದ್ದಾರೆ.
Caste survey: ಜಾತಿ ಕೇಳುವಂತಿಲ್ಲ.. ಸಮೀಕ್ಷೆಗೆ ಬಂದವರನ್ನ ವಾಪಸ್ ಕಳಿಸಿದ ವ್ಯಕ್ತಿ!
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೊಪ್ಪಳ ನಗರದ 28ನೇ ವಾರ್ಡ್‌ನ ರಾಮಣ್ಣ ಮಂಗಳೂರು ಎಂಬುವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕ್ಷೇಪಣೆಯ ಕುರಿತು ಲಿಖಿತ ಪತ್ರ ನೀಡಿ, ಸಮೀಕ್ಷೆಗೆ ಬಂದವರನ್ನು ವಾಪಸ್ಸು ಕಳುಹಿಸಿದ್ದಾರೆ. ಸಮೀಕ್ಷೆಯಲ್ಲಿ ಮಾನವಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಸುಪ್ರೀಂಕೋರ್ಟ್ ನೀಡಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೂ ಪೆಟ್ಟು ಬಿದ್ದಿದೆ. ಹೀಗಾಗಿ, ಈ ಸಮೀಕ್ಷೆ ಸರಿಯಲ್ಲ ಎಂದಿದ್ದಾರೆ. ಈ ಕುರಿತು ತಮ್ಮದೇ ಆದ ವಿವರಣೆಗಳೊಂದಿಗೆ 8 ಅಂಶಗಳ ಪಟ್ಟಿ ಮಾಡಿದ್ದಾರೆ.
6 ದಶಕಗಳಷ್ಟು ಸುದೀರ್ಘ ಕೆಲಸ : ಥ್ಯಾಂಕ್ ಯು ಮಿಗ್-21... ಗುಡ್‌ಬೈ
6 ದಶಕಗಳಷ್ಟು ಸುದೀರ್ಘ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕೆಲಸ ಮಾಡಿದ ಮಿಗ್-21 ಯುದ್ಧವಿಮಾನ ಶುಕ್ರವಾರ ನಿವೃತ್ತಿ ಪಡೆಯಲಿದೆ. ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್’ ಹೆಸರಿನ ಮಿಗ್-21ಕ್ಕೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ. ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಿಮಾನದ ಕೊನೆಯ ಹಾರಾಟ ನಡೆಸಿ, ವಿದಾಯ ಹೇಳಲಿದ್ದಾರೆ. ಮಿಗ್-21 ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಏನಿದರ ವಿಶೇಷತೆ? ‘ಹಾರುವ ಶವಪೆಟ್ಟಿಗೆ’ ಎಂಬ ಅಪಖ್ಯಾತಿ ಬಂದಿದ್ದಾದರೂ ಏಕೆ? ಇಲ್ಲಿದೆ ಒಂದಿಷ್ಟು ಮಾಹಿತಿ.
₹ 62,370 ಕೋಟಿ ವೆಚ್ಚದಲ್ಲಿ 97 ತೇಜಸ್ ಖರೀದಿಗೆ ಸೇನೆ ಡೀಲ್
ನವದೆಹಲಿ: ರಕ್ಷಣಾ ಇಲಾಖೆಯು ಗುರುವಾರ 97 ಅತ್ಯಾಧುನಿಕ ತೇಜಸ್ ಮಾರ್ಕ್1ಎ ಯುದ್ಧ ವಿಮಾನಗಳ ಖರೀದಿಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿ.(ಎಚ್‌ಎಎಲ್) ಜತೆಗೆ 62,370 ಕೋಟಿ ರು. ಮೊತ್ತದ ಒಪ್ಪಂದಕ್ಕೆ ಸಹಿಹಾಕಿದೆ. ಈ ಯುದ್ಧವಿಮಾನಗಳ ಪೂರೈಕೆ ಕಾರ್ಯ 2027-28ರಲ್ಲಿ ಆರಂಭವಾಗಲಿದೆ. ಆರು ವರ್ಷಗಳಲ್ಲಿ ವಿಮಾನಗಳ ಪೂರೈಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಐ ಲವ್ ಮಹಮ್ಮದ್ V/S ಮಹಾದೇವ ದಂಗಲ್
ಉತ್ತರಪ್ರದೇಶದಲ್ಲಿ ಇಸ್ಲಾಮಿಕ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಹುಟ್ಟಿಕೊಂಡ ಐ ಲವ್ ಮೊಹಮ್ಮದ್ ಪೋಸ್ಟರ್ ವಿವಾದ ಮತ್ತು ಅದಕ್ಕೆ ಪ್ರತಿಯಾಗಿ ಐ ಲವ್ ಮಹಾದೇವ್ ಪೋಸ್ಟರ್ ವಾರ್ ಇದೀಗ ದೇಶದ 8 ರಾಜ್ಯಕ್ಕೆ ಹಬ್ಬಿದೆ. ಹಲವು ರಾಜ್ಯಗಳಲ್ಲಿ ಈ ವಿಷಯ ಹಿಂದೂ- ಮುಸ್ಲಿಂ ಗಲಭೆಗೆ ಕಾರಣವಾಗಿದೆ.
