ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ಯಾರೀಕೆ ಸೀರೆಯುಟ್ಟು ಮಿಂಚಿದ 6 ವರ್ಷದ ಪೋರಿ
Trisha Thosar Steals the Show: ಆರು ವರ್ಷದ ಮರಾಠಿ ನಟಿ ತ್ರಿಶಾ ತೋಶರ್, 'ನಾಲ್ 2' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6ರ ಹರೆಯದ ತ್ರಿಶಾ ತೋಶರ್‌ಗೆ ರಾಷ್ಟ್ರ ಪ್ರಶಸ್ತಿ ಗರಿ
ಕೆಲ ದಿನಗಳ ಹಿಂದಷ್ಟೇ ರಾಷ್ಟ್ರಪತಿ ಚಲನಚಿತ್ರ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ರಾಣಿ ಮುಖರ್ಜಿ, ಶಾರುಖ್ ಖಾನ್, ವಿಕ್ರಾಂತ್ ಮೆಸ್ಸಿ, ವಿಜಯ್ ರಾಘವನ್ ಸೇರಿದಂತೆ ಚಿತ್ರರಂಗದ ಗಣ್ಯರಿಗೆ, ಅತ್ಯುತ್ತಮ ನಟ, ನಟಿ ಹಾಗೂ ಪೋಷಕ ನಟ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುಟ್ಟ ಬಾಲಕಿ ಸೀರೆಯುಟ್ಟು ಬಂದು ಎಲ್ಲರ ಗಮನ ಸೆಳೆದಿದ್ದಳು.
ಸೀರೆಯುಟ್ಟು ಗಮನಸೆಳೆದ ಪುಟಾಣಿ
ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಸಮಾರಂಭಗಳಲ್ಲಿ ಸೀರೆಯ ಬದಲು ಆಧುನಿಕ ಸಿಂಗಲ್ ಫೀಸ್ ಧರಿಸುತ್ತಾರೆ. ಆದರೆ ಈ ಪುಟಾಣಿ ಬಾಲಕಿ ಆರು ವರ್ಷದ ತ್ರಿಶಾ ತೋಶರ್ ಅವರು ತಮ್ಮ ಚೊಚ್ಚಲ ರಾಷ್ಟ್ರಪ್ರಶಸ್ತಿಯನ್ನು ಪಡೆಯುವ ವೇಳೆ ಶ್ವೇತಬಣ್ಣದ ಸೀರೆಯುಟ್ಟು ಬಂದು ಗೌರವಯುತವಾಗಿ ಪ್ರಶಸ್ತಿ ಸ್ವೀಕರಿಸಿದ ದೃಶ್ಯ ಎಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತು.
ನಾಲ್ 2 ಸಿನಿಮಾದಲ್ಲಿ ನಟಿಸಿರುವ ತ್ರಿಶಾ
ಯಾರಪ್ಪ ಈ ಪುಟಾಣಿ ಹುಡುಗಿ ಅಂತ ಸೀರೆಯುಟ್ಟು ಮೆರೆಯುತ್ತಿರೋದು ಅಂತ ಅಚ್ಚರಿ ಪಟ್ಟಿದ್ದರು. ಅಂದಹಾಗೆ ಈ ಬಾಲಕಿ ಹೆಸರು ತ್ರಿಶಾ ತೋಶರ್, ಮರಾಠಿ ನಟಿಯಾಗಿರುವ ಈಕೆ ನಾಲ್ 2 ಸಿನಿಮಾದಲ್ಲಿ ನಟಿಸಿದ್ದಾಳೆ. ಈಗ ರಾಷ್ಟ್ರಪ್ರಶಸ್ತಿ ಗಳಿಸುವ ಮೂಲಕ ಆಕೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಅತ್ಯತ ಕಿರಿಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಾರುಖ್ ರಾಣಿ ಮುಖರ್ಜಿ ಜೊತೆ ತ್ರಿಶಾ
ಆರು ವರ್ಷದ ಪುಟಾಣಿ ತನ್ನ ಬಿಳಿ ಬಣ್ಣದ ಸೀರೆಯ ನೆರಿಗೆಯನ್ನು ಹಿಡಿದುಕೊಂಡು ಮೆಟ್ಟಿಲುಗಳನ್ನು ಹತ್ತಿಕೊಂಡು ವೇದಿಕೆ ಮೇಲೆ ಬರುತ್ತಿದ್ದರೆ, ಅನೇಕರಿಗೆ ಪುಟಾಣಿ ದೇವತೆಯೊಬ್ಬಳು ಬಂದಂತೆ ಭಾಸವಾಗಿದೆ.
ತ್ರಿಶಾ ತೋಶರ್
ಇದೇ ಸಮಾರಂಭದಲ್ಲಿ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಶಾರುಖ್ ಖಾನ್ ಅವರಿಗೂ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಇದೇ ಸಮಾರಂಭದಲ್ಲಿ ತ್ರಿಶಾ ತೋಶರ್ ಸೀರೆಯುಟ್ಟು ರಾಷ್ಟ್ರಪ್ರಶಸ್ತಿಗಳಿಂದ ಪ್ರಶಸ್ತಿ ಸ್ವೀಕರಿಸಿ ಮಿಂಚಿದರು. ಆಕೆಯ ಈ ಸಾಧನೆ ಕೇವಲ ಆಕೆಯ ಪ್ರತಿಭೆಗೆ ಮಾತ್ರ ಸಾಕ್ಷಿಯಾಗಲಿಲ್ಲ, ಬದಲಾಗಿ ಮರಾಠಿ ಸಿನಿಮಾ ರಂಗಕ್ಕೂ ಹೆಮ್ಮೆಯ ಕ್ಷಣ ಎನಿಸಿದೆ.