ಪೋಲೆಂಡ್‌ನ ಪರ್ವತಾರೋಹಿ ಆಂಡ್ರೆಜ್ ಬಾರ್ಗಿಯೆಲ್, ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ತೀವ್ರ ಹಿಮಪಾತದಂತಹ ಸವಾಲುಗಳನ್ನು ಎದುರಿಸಿ ಶಿಖರವನ್ನು ತಲುಪಿದ ಅವರು, ನಂತರ ಅಲ್ಲಿಂದ ಸ್ಕೀಯಿಂಗ್ ಮೂಲಕ ಇಳಿದು ಬಂದರು.
ಆಕ್ಸಿಜನ್ ಸಿಲಿಂಡರ್ ಇಲ್ಲದೇ ಎವರೆಸ್ಟ್ ಏರಿದ ಸಾಹಸಿ
ಪ್ರಪಂಚದ ಅತೀ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ್ನು ಏರುವುದು ಸುಲಭದ ಮಾತಲ್ಲ, ಇದನ್ನು ಏರುವಾಗ ಸಾಕಷ್ಟು ಸಿದ್ಧತೆ, ಔಷಧಿಗಳ ಜೊತೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಕೂಡ ಶಿಖರ ಏರುವವರು ಜೊತೆಗೆ ಹೊತ್ತುಕೊಂಡು ಸಾಗಬೇಕಾಗುತ್ತದೆ. ಏಕೆಂದರೆ ಎತ್ತರೆತ್ತರಕ್ಕೆ ಸಾಗುತ್ತಿದ್ದಂತೆ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ ಪೋಲೆಂಡ್‌ನ ವ್ಯಕ್ತಿಯೊಬ್ಬರು ಆಕ್ಸಿಜನ್ ಸಿಲಿಂಡರ್‌ನ ನೆರವಿಲ್ಲದೇ ಜಗತ್ತಿನ ಅತೀ ಎತ್ತರದ ಶಿಖರ ಎನಿಸಿದ ಹಿಮಾಲಯವನ್ನು ಏರಿ ಸಾಧನೆ ಮಾಡಿದ್ದಾರೆ.
ಪೋಲೆಂಡ್‌ನ ಆಂಡ್ರೆಜ್ ಬಾರ್ಗಿಯೆಲ್ ಎಂಬುವವರಿಂದ ಸಾಧನೆ
ಪೋಲೆಂಡ್‌ನ ಆಂಡ್ರೆಜ್ ಬಾರ್ಗಿಯೆಲ್ ಎಂಬುವವರೇ ಈ ಸಾಧನೆ ಮಾಡಿದವರು. ಈ ಮೂಲಕ ಅವರು ಆಮ್ಲಜನಕ ಸಿಲಿಂಡರ್ ನೆರವಿಲ್ಲದೇ ಮೌಂಟ್ ಎವರೆಸ್ಟ್ ಅನ್ನು ಏರಿದ ಮಾಡಿದ ಮೊದಲ ವ್ಯಕ್ತಿಯಾಗಿ ಎಂಬ ಸಾಧನೆಗೆ ಭಾಜನರಾಗಿದ್ದಾರೆ. 37 ವರ್ಷದ ಬಾರ್ಗಿಯೆಲ್ ಅವರು 2018ರಲ್ಲಿ ಪ್ರಪಂಚದ 2ನೇ ಅತಿ ಎತ್ತರದ ಶಿಖರ ಎನಿಸಿದ ಕೆ2 ಶೀಖರವನ್ನು ಏರುವ ಮೂಲಕ ಸಾಧನೆ ಮಾಡಿದ್ದರು.
ಈಗ ಅವರು ಸಮುದ್ರ ಮಟ್ಟದಿಂದ 8,849 ಮೀಟರ್ ಎತ್ತರದಲ್ಲಿರುವ ಪ್ರಪಂಚದ ಅತೀ ಎತ್ತರದ ಶಿಖರ ಎನಿಸಿರುವ ಹಿಮಾಲಯದ ಮೌಂಟ್ ಎವರೆಸ್ಟ್ ಅನ್ನು ಏರುವ ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೇ ಏರುವ ಮೂಲಕ ಯಾರು ಮಾಡದ ಸಾಧನೆಯನ್ನು ಮಾಡಿದ್ದಾರೆ. ಬಾರ್ಗಿಯೆಲ್ ಅವರು ಮೌಂಟ್ ಎವರೆಸ್ಟ್ ಏರುವ ವೇಳೆ ತೀವ್ರವಾದ ಹಿಮಪಾತ ಉಂಟಾಗಿದ್ದರಿಂದ ಅವರು ಎವರೆಸ್ಟ್ ಏರುವುದಕ್ಕೆ ನಿಗದಿಗಿಂತ ಹೆಚ್ಚು ಸಮಯವನ್ನು ವ್ಯಯಿಸಬೇಕಾಯ್ತು ಎಂದು ಅವರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಪೂರಕ ಆಮ್ಲಜನಕದ ಬಳಕೆಯಿಲ್ಲದಿದ್ದರೆ ಸಾವಿನ ವಲಯ ಎನಿಸುವ ಹಿಮಾಲಯದ 8,000 ಮೀ ಗಿಂತ ಹೆಚ್ಚಿನ ಎತ್ತರದಲ್ಲಿ ಅವರು 16 ಗಂಟೆಗಳ ಕಾಲ ಶಿಖರವನ್ನು ಏರಿದರು. ವಿಶ್ವದ ಅತಿ ಎತ್ತರದ ಪರ್ವತದ ಶಿಖರದ ಮೇಲೆ ಕೆಲವೇ ನಿಮಿಷಗಳನ್ನು ಅವರು ಕಳೆದರು, ನಂತರ ತಮ್ಮ ಸ್ಕೀಗಳನ್ನು ಕಟ್ಟಿಕೊಂಡು ಸೂರ್ಯಾಸ್ತಮಾನದ ವಿರುದ್ಧ ಓಡುತ್ತಾ ಐತಿಹಾಸಿಕ ಇಳಿಯುವಿಕೆಯನ್ನು ಪ್ರಾರಂಭಿಸಿದರು ಎಂದು ಅವರ ತಂಡ ಹೇಳಿಕೆ ನೀಡಿದೆ.
ಬಾರ್ಗಿಯೆಲ್ ಅವರ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೊದಲ್ಲಿ ಅವರು ಅತೀ ಎತ್ತರದ ಮಂಜು ತುಂಬಿದ ಶಿಖರವನ್ನು ಏರುವ ಹಾಗೂ ಇಳಿಯುವ ದೃಶ್ಯವಿದೆ. ರಾತ್ರಿಯ ಸಮಯವಾದ್ದರಿಂದ ಬಾರ್ಗಿಯೆಲ್ ಸಮುದ್ರ ಮಟ್ಟದಿಂದ ಸುಮಾರು 6,400 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ 2 ರಲ್ಲಿ ನಿಲ್ಲಬೇಕಾಯಿತು. ನಂತರ ಸೂರ್ಯೋದಯವಾಗುತ್ತಿದ್ದಂತೆ ಅವರು ಇಳಿಯುವುದಕ್ಕೆ ಆರಂಭಿಸಿದರು ಎಂದು ಅವರ ತಂಡ ತಿಳಿಸಿದೆ.
ಇವರ ಈ ಸಾಧನೆಗೆ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಧನ್ಯವಾದ ತಿಳಿಸಿದ್ದಾರೆ. ಆಕಾಶವೇ ಮಿತಿ. ಆದರೆ ಪೋಲೆಂಡಿಗರಿಗೆ ಅಲ್ಲ, ಆಂಡ್ರೆಜ್ ಬಾರ್ಗಿಯೆಲ್ ಮೌಂಟ್ ಎವರೆಸ್ಟ್ ಅನ್ನು ಸ್ಕೀಯಿಂಗ್ ಮಾಡಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡು ಶುಭ ಹಾರೈಸಿದ್ದಾರೆ. 1980 ರ ದಶಕದಲ್ಲಿ ಪೋಲಿಷ್ ಹಿಮಾಲಯ ಪರ್ವತಾರೋಹಣವು ಐಸ್ ವಾರಿಯರ್ಸ್ ಎಂದೇ ಖ್ಯಾತಿ ಪಡೆದಿದ್ದ ಜೆರ್ಜಿ ಕುಕುಜ್ಕಾ ಮತ್ತು ದಿವಂಗತ ವಂಡಾ ರುಟ್ಕಿವಿಚ್‌ರಂತಹವರಿಂದ ಪ್ರಸಿದ್ಧವಾಯಿತು, ಅವರು ಹಿಮಾಲಯದಲ್ಲಿ ದಂಡಯಾತ್ರೆಗಳನ್ನು ನಡೆಸಿದರು. ವಿಶೇಷವಾಗಿ ಚಳಿಗಾಲದಲ್ಲಿ ಹಿಮಾಲಯವನ್ನು ಏರಿದ್ದಲ್ಲದೇ ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸಿದರು.
