ನವದೆಹಲಿ: ಶಾಂತಿ ಬಾಂಡ್‌ಗೆ ಸಹಿ ಹಾಕುವಂತೆ ನೋಟಿಸ್ ನೀಡಿದ ದೆಹಲಿ ಪೊಲೀಸರ ಕ್ರಮ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ವಿದ್ಯಾರ್ಥಿ ಹೋರಾಟಗಾರ್ತಿ ನೇಹಾ ಬೋರಾ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
‘ನಾನು ರಿಟ್ ಅರ್ಜಿಯನ್ನು ತಿರಸ್ಕರಿಸುತ್ತಿದ್ದೇನೆ’ ಎಂದು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ತೀರ್ಪು ಪ್ರಕಟಿಸಿದರು. ಈ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಿದ್ಯಾರ್ಥಿ ನಾಯಕಿಗೆ ಒದಗಿಸುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ (ಎಸ್‌ಇಎಂ) ಜಡ್ಜ್ ಸೂಚಿಸಿದರು.
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟದ ವೇಳೆ ಅನುಮತಿಯಿಲ್ಲದೆ ರಾಷ್ಟ್ರಧ್ವಜ ಹಾರಿಸಿದ್ದರು. ಹೀಗಾಗಿ ಎಸ್‌ಇಎಂ ಮುಂದೆ ಶಾಂತಿ ಬಾಂಡ್ ಸಲ್ಲಿಸುವಂತೆ ನೇಹಾಗೆ ಪೊಲೀಸರು ಅ.17ರಂದು ನೋಟಿಸ್ ನೀಡಿದ್ದರು.
08:26 AM (IST) Oct 24
07:48 AM (IST) Oct 24