Published : Sep 23, 2025, 06:38 AM ISTUpdated : Sep 23, 2025, 09:18 PM IST

India Latest News Live: ಭಾರತ ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ, ನೊಬೆಲ್ ಪ್ರಶಸ್ತಿಗಾಗಿ ವಿಶ್ವಸಂಸ್ಥೆಯಲ್ಲಿ ಟ್ರಂಪ್ ರಾಗ

ಸಾರಾಂಶ

ನಾರಾಯಣಪುರ (ಛತ್ತೀಸ್‌ಗಢ): ಭದ್ರತಾ ಪಡೆ ಇಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ತಲಾ 40 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ನಕ್ಸಲ್ ನಾಯಕರನ್ನು ಹತ್ಯೆ ಮಾಡ ಲಾಗಿದೆ. ರಾಜು ದಾದಾ ಅಲಿಯಾಸ್ ಕಟ್ಟಾ ರಾಮಚಂದ್ರ ರೆಡ್ಡಿ (63) ಮತ್ತು ಕೋಸಾ ದಾದಾ ಅಲಿಯಾಸ್ ಕದರಿ ಸತ್ಯನಾರಾಯಣ ರೆಡ್ಡಿ (67) ಹತ ನಕ್ಸಲ್ ನಾಯಕರು. ಇವರು ಕೇಂದ್ರೀಯ ಮಾವೋವಾದಿ ಸಮಿತಿ ಸದಸ್ಯರಾ ಗಿದ್ದರು ಹಾಗೂ ತೆಲಂಗಾಣ, ಆಂಧ್ರದಲ್ಲಿ ಸಾಕಷ್ಟು ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಇವರ ಹತ್ಯೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭದ್ರತಾ ಪಡೆಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹತರಿಂದ 1 ಎಕೆ-47 ರೈಫಲ್, ಅಪಾರ ಪ್ರಮಾಣದ ಸ್ಫೋಟಕ ವಸ್ತು, ಮಾವೋವಾದಿ ಸಾಹಿತ್ಯ, ಪ್ರಚಾರ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌ಗಳಲ್ಲಿ 249 ನಕ್ಸಲರು ಹತರಾಗಿದ್ದಾರೆ.

 

09:18 PM (IST) Sep 23

ಭಾರತ ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ, ನೊಬೆಲ್ ಪ್ರಶಸ್ತಿಗಾಗಿ ವಿಶ್ವಸಂಸ್ಥೆಯಲ್ಲಿ ಟ್ರಂಪ್ ರಾಗ

ಭಾರತ ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ, ವಿಶ್ವಸಂಸ್ಥೆಯಲ್ಲಿ ನೊಬೆಲ್ ಪ್ರಶಸ್ತಿಗೆ ಟ್ರಂಪ್ ಪರೋಕ್ಷ ಮನವಿ, ಜನರಲ್ ಅಸೆಂಬ್ಲಿಯಲ್ಲಿ ಟ್ರಂಪ್ ಭಾಷಣದಲ್ಲಿ ಪ್ರಮುಖ ಹೈಲೈಟ್ ಭಾರತ. ಅಷ್ಟಕ್ಕೂ ಟ್ರಂಪ್ 7 ಯುದ್ಧ ನಿಲ್ಲಿಸಿದ್ದೇನೆ ಎಂದು ಸುಳ್ಳು ಹೇಳಿದ್ದೇಕೆ?

Read Full Story

07:16 PM (IST) Sep 23

ಕೋಲ್ಕತ್ತಾದಲ್ಲಿ 37 ವರ್ಷಗಳ ಬಳಿಕ ಬೊಬ್ಬಿರಿದ ವರುಣ, ನವರಾತ್ರಿ ಹಬ್ಬದ ಸಂಭ್ರಮ ಕಸಿದ ಮಳೆ, ಕನಿಷ್ಟ 8 ಮಂದಿ ಬಲಿ!

ಪಶ್ಚಿಮ ಬಂಗಾಳದಲ್ಲಿ ಸುರಿದ 37 ವರ್ಷಗಳ ದಾಖಲೆಯ ಮಳೆಯಿಂದಾಗಿ ಕೋಲ್ಕತ್ತಾ ಸಂಪೂರ್ಣ ಜಲಾವೃತವಾಗಿದೆ. ಈ ದುರಂತದಲ್ಲಿ ವಿದ್ಯುತ್ ಆಘಾತದಿಂದ ಕನಿಷ್ಠ 8 ಮಂದಿ ಮೃತಪಟ್ಟಿದ್ದು, ದುರ್ಗಾ ಪೂಜೆಯ ಸಂಭ್ರಮಕ್ಕೆ ಅಡ್ಡಿಯಾಗಿದೆ. ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.
Read Full Story

07:07 PM (IST) Sep 23

ಕನ್ನಡದ 'ಕಂದೀಲು' ಸೇರಿ National Film Award ಪ್ರದಾನ - 30 ವರ್ಷ ಬಳಿಕ Shahrukh Khanಗೆ ಒಲಿದ ಪ್ರಶಸ್ತಿ

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ 'ಕಂದೀಲು: ದಿ ರೇ ಆಫ್‌ ಹೋಪ್' ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಇದೇ ವೇಳೆ, ನಟ ಶಾರುಖ್ ಖಾನ್ ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು.

Read Full Story

06:44 PM (IST) Sep 23

ಕೇವಲ ₹44 ಸಾವಿರಕ್ಕೆ ಐಫೋನ್ 16, ಹತ್ತು ಸಾವಿರಕ್ಕೆ ಟಿವಿ, ಜಿಯೋ ಮಾರ್ಟ್‌ನಲ್ಲಿ ಹಬ್ಬದ ಆಫರ್

ಕೇವಲ ₹44 ಸಾವಿರಕ್ಕೆ ಐಫೋನ್ 16, ಹತ್ತು ಸಾವಿರಕ್ಕೆ ಟಿವಿ, ಜಿಯೋ ಮಾರ್ಟ್‌ನಲ್ಲಿ ಹಬ್ಬದ ಆಫರ್, ಹಬ್ಬದ ಸೀಸನ್‌ನಲ್ಲಿ ಜಿಯೋ ಮಾರ್ಟ್ ಭಾರಿ ಡಿಸ್ಕೌಂಟ್ ಘೋಷಿಸಿದೆ. ಅತೀ ಕಡಿಮೆ ಬೆಲೆಯಲ್ಲಿ ವಾಷಿಂಗ್ ಮಶೀನ್, ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನ ಲಭ್ಯವಿದೆ.

Read Full Story

06:38 PM (IST) Sep 23

ಸರ್ಕಾರದ ಹಣದಲ್ಲಿ ಕರುಣಾನಿಧಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತರಾಟೆ

Supreme Court has criticized the Tamil Nadu government ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಪ್ರತಿಮೆಯನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪಿಸುವ ತಮಿಳುನಾಡು ಸರ್ಕಾರದ ಯೋಜನೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

Read Full Story

06:23 PM (IST) Sep 23

ಭಾರತ-ಪಾಕ್ ಪಂದ್ಯ - ಭಾರತದ ಮೇಲೆ ಆಯ್ತು, ಈಗ ಅಂಪೈರ್ ಮೇಲೆ ದೂರು ಕೊಟ್ಟ ಪಾಕಿಸ್ತಾನ!

ಭಾರತ ವಿರುದ್ಧದ ಪಂದ್ಯದಲ್ಲಿ ಫಖರ್ ಜಮಾನ್ ಅವರ ವಿವಾದಾತ್ಮಕ ಕ್ಯಾಚ್ ಕುರಿತು ಪಾಕಿಸ್ತಾನ ತಂಡವು ಟಿವಿ ಅಂಪೈರ್ ವಿರುದ್ಧ ಐಸಿಸಿಗೆ ದೂರು ನೀಡಿದೆ. ಈ ತಪ್ಪು ನಿರ್ಧಾರವು ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದು ಪಾಕ್ ವಾದಿಸಿದೆ.

Read Full Story

05:55 PM (IST) Sep 23

ದಿಢೀರ್ ಸಿಕ್ ಲೀವ್ ಮೆಸೇಜ್ ಕಳುಹಿಸಿದ ಉದ್ಯೋಗಿ, ಮ್ಯಾನೇಜರ್ ಉತ್ತರ ಈಗ ವೈರಲ್

ದಿಢೀರ್ ಸಿಕ್ ಲೀವ್ ಮೆಸೇಜ್ ಕಳುಹಿಸಿದ ಉದ್ಯೋಗಿ, ಮ್ಯಾನೇಜರ್ ಉತ್ತರ ಈಗ ವೈರಲ್, ಹುಷಾರಿಲ್ಲದ ಕಾರಣ ವಿಶ್ರಾಂತಿಯ ಅಗತ್ಯವಿದೆ. ನಾಳೆ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯೋಗಿ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಮ್ಯಾನೇಜರ್ ಬೆಂಕಿ ಪ್ರತಿಕ್ರಿಯೆ ನೀಡಿದ್ದಾರೆ.

 

Read Full Story

05:06 PM (IST) Sep 23

ಆಸ್ಟ್ರೇಲಿಯಾ 'ಎ' ಎದುರಿನ ಮ್ಯಾಚ್‌ಗೂ ಮುನ್ನ ದಿಢೀರ್ ಎನ್ನುವಂತೆ ಭಾರತ 'ಎ' ತಂಡ ತೊರೆದ ಶ್ರೇಯಸ್ ಅಯ್ಯರ್!

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತ 'ಎ' ತಂಡದ ನಾಯಕ ಶ್ರೇಯಸ್ ಅಯ್ಯರ್, ಆಸ್ಟ್ರೇಲಿಯಾ 'ಎ' ವಿರುದ್ದದ ಪ್ರಥಮ ದರ್ಜೆ ಪಂದ್ಯ ಆರಂಭಕ್ಕೂ ಮೊದಲೇ ದಿಢೀರ್ ಎನ್ನುವಂತೆ ತಂಡ ತೊರೆದಿದ್ದಾರೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.

 

Read Full Story

05:05 PM (IST) Sep 23

ಹನುಮಾನ್ ನಕಲಿ ದೇವರು, ಟೆಕ್ಸಾಸ್ ರಿಪಬ್ಲಿಕನ್ ನಾಯಕನ ವಿವಾದಿತ ಹೇಳಿಕೆಗೆ ಭಾರಿ ವಿರೋಧ

ಹನುಮಾನ್ ನಕಲಿ ದೇವರು, ಪ್ರತಿಮೆ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತಡಿಸಿದ ಅಮೆರಿಕ ನಾಯಕ, ರಿಪಬ್ಲಿಕನ್ ನಾಯಕನ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಜಗತ್ತಲ್ಲೇ ಇಲ್ಲದ ದೇವರ ವಿಗ್ರಹ, ಪ್ರತಿಮೆ ಇಲ್ಲಿ ಯಾಕೆ ಎಂದು ವಿವಾದ ಸೃಷ್ಟಿಸಿದ್ದಾರೆ.

Read Full Story

04:52 PM (IST) Sep 23

ಪಿತೃಗಳಿಗೆ ಪಿಂಡಪ್ರದಾನ ಮಾಡಿದ ವಿದೇಶಿ ಪ್ರವಾಸಿಗರು - ವೀಡಿಯೋ ವೈರಲ್

Foreigners Perform Pind Daan: ಸ್ಪೇನ್, ರಷ್ಯಾ ಹಾಗೂ ಉಕ್ರೇನ್ ದೇಶಗಳ ಪ್ರವಾಸಿಗರು ವಾರಣಾಸಿಯ ಗಯಾದಲ್ಲಿ ಪಿತೃಪಕ್ಷದ ಮಹತ್ವವನ್ನು ಅರಿತು ತಮ್ಮ ಪೂರ್ವಜರಿಗೆ ಪಿಂಡಪ್ರದಾನ ಮಾಡಿದ್ದಾರೆ. ಸ್ಥಳೀಯ ಪುರೋಹಿತರ ಮಾರ್ಗದರ್ಶನದಲ್ಲಿ ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿವಿಧಾನಗಳನ್ನು ಪಾಲಿಸಿದ್ದಾರೆ.

Read Full Story

03:44 PM (IST) Sep 23

'ದಿ ವಾಲ್, ಜ್ಯಾಮಿ' ಇವೆರಡರಲ್ಲಿ ದ್ರಾವಿಡ್‌ಗೆ ಇಷ್ಟವಾದ ನಿಕ್‌ನೇಮ್ ಯಾವುದು? ಯಾಕೆ?

ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೊದಲ ಬಾರಿಗೆ ತಮ್ಮ ನಿಕ್‌ನೇಮ್‌ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದಷ್ಟೇ ಅಲ್ಲದೇ ಯಾರಾದರೂ ಅಪರಿಚಿತರು ತಮ್ಮ ನಿಕ್‌ನೇಮ್ ಕರೆದಾಗ ಯಾವ ರೀತಿ ಅನುಭವ ಆಗುತ್ತೆ ಎನ್ನುವುದರ ಬಗ್ಗೆ ಮೌನಮುರಿದಿದ್ದಾರೆ.

 

Read Full Story

03:34 PM (IST) Sep 23

ಇದು ಉತ್ತರ ಪ್ರದೇಶ, ಮಹಿಳಾ ಪೊಲೀಸರಿಂದ ದೇಶದಲ್ಲೇ ಮೊದಲ ಎನ್‌ಕೌಂಟರ್

ಇದು ಉತ್ತರ ಪ್ರದೇಶದ,ಮಹಿಳಾ ಪೊಲೀಸರಿಂದ ದೇಶದಲ್ಲೇ ಮೊದಲ ಎನ್‌ಕೌಂಟರ್, ಕುಖ್ಯಾತ ಕ್ರಿಮಿನಲ್ ವಿರುದ್ಧ ಮಹಿಳಾ ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದಾರೆ. ಈ ಮೂಲಕ ಯುಪಿ ಮಹಿಳಾ ಪೊಲೀಸರು ಹೊಸ ಇತಿಹಾಸ ರಚಿಸಿದ್ದಾರೆ.

Read Full Story

03:32 PM (IST) Sep 23

ಒಯೋದಿಂದ ಹೊಸ ಅಧ್ಯಾಯ - ಗ್ರಾಹಕರಿಗೆ ಗುಡ್‌ನ್ಯೂಸ್, ಒಂದಲ್ಲ ಎರಡು ಬೆನೆಫಿಟ್

ಒಯೋ ತನ್ನ ಗ್ರಾಹಕರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಆಪ್ ಮೂಲಕ, ಬಜೆಟ್ ಹೋಟೆಲ್‌ಗಳ ಬದಲಾಗಿ ಪ್ರೀಮಿಯಂ ಹೋಟೆಲ್‌ಗಳು, ಐಷಾರಾಮಿ ವಿಲ್ಲಾಗಳು ಮತ್ತು ವಿಶಿಷ್ಟ ಪ್ರಯಾಣದ ಅನುಭವಗಳನ್ನು ಬುಕ್ ಮಾಡಬಹುದು.

Read Full Story

03:07 PM (IST) Sep 23

ತಮಿಳುನಾಡು ಶಾಲಾ ಪಠ್ಯದಲ್ಲಿ ಇಸ್ಲಾಮಿಕ್‌ ವಿಚಾರ ಸೇರಿಸಿದ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌!

Tamil Nadu CM M.K. Stalin has announced that Islamic teachings ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತ ಇಸ್ಲಾಮಿಕ್ ವಿಚಾರಗಳನ್ನು ಸೇರಿಸುವುದಾಗಿ ಘೋಷಿಸಿದ್ದಾರೆ. 

Read Full Story

02:44 PM (IST) Sep 23

ಟ್ರಂಪ್​ಗಾಗಿ ಪತಿಗೆ ಡಿವೋರ್ಸ್​ ಕೊಡಲು ಮುಂದಾದ ಭಾರತೀಯ ಮಹಿಳೆ - ಹಲ್​ಚಲ್​ ಸೃಷ್ಟಿಸಿದ ಪೋಸ್ಟ್​

ಅಮೆರಿಕದ H-1B ವೀಸಾ ಮೇಲೆ ದುಬಾರಿ ಶುಲ್ಕ ವಿಧಿಸಿದ್ದರಿಂದ, ಭಾರತೀಯ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಿ ಗ್ರೀನ್ ಕಾರ್ಡ್ ಹೊಂದಿರುವ ಸಹೋದ್ಯೋಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ. ಈ ಕುರಿತು ಸಲಹೆ ಕೇಳಿ ಆಕೆ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. 

Read Full Story

02:35 PM (IST) Sep 23

I Love Muhammad - ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ #ILoveMuhammad ಟ್ಯಾಗ್‌ನ ಮೂಲ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಾಗಿದೆ. ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

Read Full Story

01:52 PM (IST) Sep 23

42ರ ಹರೆಯದಲ್ಲಿ ಕೈಫ್ ಗರ್ಭಿಣಿ, 40 ವರ್ಷದ ನಂತರ ಮಗುವಿಗೆ ಜನ್ಮ ನೀಡಿದ ನಟಿಯರಿವರು

ಕತ್ರಿನಾ ಕೈಫ್ 42ನೇ ವಯಸ್ಸಿನಲ್ಲಿ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ, 40 ವರ್ಷ ದಾಟಿದ ನಂತರ ತಾಯ್ತನದ ಸುಖ ಕಂಡ ಕರೀನಾ ಕಪೂರ್, ಬಿಪಾಶಾ ಬಸು, ಭಾವನಾ ರಾಮಣ್ಣರಂತಹ ಭಾರತೀಯ ನಟಿಯರ ಪಟ್ಟಿಯನ್ನು ಈ ಲೇಖನವು ಒದಗಿಸುತ್ತದೆ.  

Read Full Story

01:44 PM (IST) Sep 23

Palestine Protests - ಪ್ಯಾಲೇಸ್ತಿನ್ ಕಿಚ್ಚು; ಪ್ರತಿಭಟನಾಕಾರರ ಆಕ್ರೋಶಕ್ಕೆ ತತ್ತರಿಸಿದ ಇಟಲಿ

Italy unrest over Gaza war:  ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಪ್ಯಾಲೇಸ್ತೀನ್‌ ಅನ್ನು ರಾಷ್ಟ್ರವನ್ನಾಗಿ ಗುರುತಿಸಲು ನಿರಾಕರಿಸಿದ್ದರಿಂದ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರು ರಸ್ತೆ ಮತ್ತು ಬಂದರುಗಳನ್ನು ಬಂದ್ ಮಾಡಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.

Read Full Story

01:41 PM (IST) Sep 23

ಈ ಸುಳ್ಳು ಸುದ್ದಿ ನಂಬ್ಕೊಂಡು ತಿರುಪತಿಗೆ ಹೋದ್ರೆ ಸಮಸ್ಯೆಗೆ ಸಿಲುಕೋದು ಗ್ಯಾರಂಟಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ತಿರುಪತಿ ನವಜೋಡಿ ವಿಶೇಷ ದರ್ಶನದ ಸುದ್ದಿ ಸಂಪೂರ್ಣ ಸುಳ್ಳು ಎಂದು ಟಿಟಿಡಿ ಸ್ಪಷ್ಟನೆ ನೀಡಿದೆ. ಇಂತಹ ಯಾವುದೇ ವಿಶೇಷ ದರ್ಶನದ ವ್ಯವಸ್ಥೆ ಇಲ್ಲವೆಂದು ತಿಳಿಸಿ, ಭಕ್ತರು ಮೋಸ ಹೋಗಬಾರದೆಂದು ಎಚ್ಚರಿಸಿದೆ.

Read Full Story

12:58 PM (IST) Sep 23

ಗುಂಡಿಗಳಿಂದ ನಿಮ್ಮ ಕಾರಿಗೆ ಹಾನಿ ಆದರೆ ರಿಪೇರಿ ಹಣ ಸರ್ಕಾರವೇ ಕೊಡುತ್ತೆ, ಅದನ್ನು ಕ್ಲೇಮ್‌ ಮಾಡೋದು ಹೇಗೆ?

Pothole Damage How to Claim Compensation from the Government in India ರಸ್ತೆ ಗುಂಡಿಗಳಿಂದ ನಿಮ್ಮ ವಾಹನಕ್ಕೆ ಹಾನಿಯಾದರೆ, 2019ರ ಗ್ರಾಹಕ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಸರ್ಕಾರದಿಂದ ಪರಿಹಾರ ಪಡೆಯುವ ಹಕ್ಕು ನಿಮಗಿದೆ.

Read Full Story

12:47 PM (IST) Sep 23

ಪ್ರೈಮ್ ವಾಲಿಬಾಲ್‌ ಲೀಗ್ - ಕನ್ನಡಿಗ ಕೆ ಎಲ್ ರಾಹುಲ್ ಗೋವಾ ತಂಡದ ಕೋ-ಓನರ್‌!

ಪಣಜಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್, ಇದೀಗ ಪ್ರೈಮ್ ವಾಲಿಬಾಲ್‌ ಲೀಗ್ ಟೂರ್ನಿಯಲ್ಲಿ ವಾಲಿಬಾಲ್ ತಂಡವೊಂದರ ಸಹ ಮಾಲೀಕರಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

12:22 PM (IST) Sep 23

ಒಂದೇ ತಿಂಗಳಲ್ಲಿ ಎರೆಡರಡು ಬಾರಿ ಬೆಂಕಿಯುಗುಳಿದ ದೇಶದ ಏಕೈಕ ಜೀವಂತ ಜ್ವಾಲಾಮುಖಿ - ವೀಡಿಯೋ

ಭಾರತದ ಏಕೈಕ ಜ್ವಾಲಾಮುಖಿ ಎನಿಸಿರುವ ಬ್ಯಾರೆನ್ ದ್ವೀಪದಲ್ಲಿರುವ ಜ್ವಾಲಾಮುಖಿ ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿ ಕೆಂಡವುಗುಳಿದೆ. ಈ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

11:37 AM (IST) Sep 23

ಏಷ್ಯಾಕಪ್‌ನಲ್ಲಿಂದು ಪಾಕ್, ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ!

ಅಬುಧಾಬಿ: ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕಾದಾಡಲಿವೆ. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಡು ಆರ್ ಡೈ ಮ್ಯಾಚ್ ಎನಿಸಿಕೊಂಡಿದೆ.

Read Full Story

11:14 AM (IST) Sep 23

ಹೆಚ್ಚಿನ ಆದಾಯ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಯೋಗಿಯ ಉತ್ತರ ಪ್ರದೇಶ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Revenue Surplus States CAG Report ಮಹಾಲೇಖಪಾಲರ (ಸಿಎಜಿ) 2022-23ರ ವರದಿಯ ಪ್ರಕಾರ, ದೇಶದ 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ. ಈ ಪಟ್ಟಿಯಲ್ಲಿ ಕರ್ನಾಟಕವು ₹13,496 ಕೋಟಿ ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ.

Read Full Story

11:01 AM (IST) Sep 23

ಮುನಿರ್ ಆರಂಭಿಕ ಆಟಗಾರನಾಗಿ ಆಡಿದ್ರೆ ಮಾತ್ರ ಭಾರತವನ್ನ ಸೋಲಿಸಲು ಸಾಧ್ಯ - ಇಮ್ರಾನ್ ವ್ಯಂಗ್ಯ!

ಏಷ್ಯಾಕಪ್‌ನಲ್ಲಿ ಭಾರತದೆದುರು ಪಾಕಿಸ್ತಾನ ಸೋತಿದ್ದಕ್ಕೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯಂಗ್ಯವಾಡಿದ್ದಾರೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಆರಂಭಿಕರಾಗಿ ಆಡಿದರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
Read Full Story

10:41 AM (IST) Sep 23

ಜನಸಾಮಾನ್ಯರಿಗೆ ಚಿನ್ನ ಖರೀದಿ ಇನ್ನು ಕನಸೇ - ದಾಖಲೆಯ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲೂ ಏರಿಕೆ

ಚಿನ್ನದ ದರದಲ್ಲಿಇಂದು ದಾಖಲೆಯ ಏರಿಕೆ ಕಂಡುಬಂದಿದ್ದು,  ಜನಸಾಮಾನ್ಯರು ಚಿನ್ನ ಖರೀದಿಸುವುದು ಇನ್ನು ಕನಸೇ ಎಂಬಂತಾಗಿದೆ. ದರ ಏರಿಕೆಯ ಬಳಿಕ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ, ಪ್ರಮುಖ ನಗರಗಳಲ್ಲಿನ ಬೆಲೆಯ ವಿವರ ಇಲ್ಲಿದೆ..

Read Full Story

10:34 AM (IST) Sep 23

'ಐ ಡೋಂಟ್ ಕೇರ್' - ಎಕೆ-47 ಗನ್ ಶಾಟ್ ಸಮರ್ಥಿಸಿಕೊಂಡ ಪಾಕ್ ಬ್ಯಾಟರ್ ಫರ್ಹಾನ್!

ಭಾರತ-ಪಾಕ್ ಏಷ್ಯಾಕಪ್ ಪಂದ್ಯದಲ್ಲಿ, ಪಾಕ್ ಆಟಗಾರ ಶಾಹಿಬ್‌ಝಾದ್‌ ಫರ್ಹಾನ್ AK-47 ಗನ್ ಶಾಟ್ ರೀತಿ ಸಂಭ್ರಮಿಸಿ ವಿವಾದ ಸೃಷ್ಟಿಸಿದ್ದಾರೆ. ಮತ್ತೊಂದೆಡೆ, ವೇಗಿ ಹ್ಯಾರಿಸ್ ರೌಫ್ ಭಾರತೀಯ ಅಭಿಮಾನಿಗಳತ್ತ ಯುದ್ಧದ ಸನ್ನೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Read Full Story

09:06 AM (IST) Sep 23

ಪ್ರೊ ಕಬಡ್ಡಿ ಲೀಗ್ - ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್!

ಗುಜರಾತ್ ಜೈಂಟ್ಸ್ ವಿರುದ್ಧದ ಹೈವೋಲ್ಟೇಜ್ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 28-24 ಅಂಕಗಳಿಂದ ಜಯಭೇರಿ ಬಾರಿಸಿದೆ. ಈ ಮೂಲಕ ಸತತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ ಬುಲ್ಸ್, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.
Read Full Story

07:15 AM (IST) Sep 23

ಹಾವನ್ನು ಕೊರಳಿಗೆ ಸುತ್ತಿಕೊಂಡು ಸ್ಟಂಟ್ ಮಾಡಲು ಹೋಗಿ ಜೀವ ಬಿಟ್ಟ ಯುವಕ

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ವೈರಲ್ ವಿಡಿಯೋಗಾಗಿ ಹಾವಿನೊಂದಿಗೆ ಸ್ಟಂಟ್ ಮಾಡಲು ಯತ್ನಿಸಿದ ಯುವಕನೋರ್ವ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ. ಪಕ್ಕದ ಮನೆಗೆ ಬಂದಿದ್ದ ಹಾವನ್ನು ಹಿಡಿದ ನಂತರ ಈ ಘಟನೆ ನಡೆದಿದೆ. 

Read Full Story

More Trending News