- Home
- Business
- ಹೆಚ್ಚಿನ ಆದಾಯ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಯೋಗಿಯ ಉತ್ತರ ಪ್ರದೇಶ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಹೆಚ್ಚಿನ ಆದಾಯ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಯೋಗಿಯ ಉತ್ತರ ಪ್ರದೇಶ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Revenue Surplus States CAG Report ಮಹಾಲೇಖಪಾಲರ (ಸಿಎಜಿ) 2022-23ರ ವರದಿಯ ಪ್ರಕಾರ, ದೇಶದ 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ. ಈ ಪಟ್ಟಿಯಲ್ಲಿ ಕರ್ನಾಟಕವು ₹13,496 ಕೋಟಿ ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ.

ಮಹಾಲೇಖಪಾಲರು (ಸಿಎಜಿ) ಇದೇ ಮೊದಲ ಬಾರಿಗೆ ರಾಜ್ಯಗಳ ಹಣಕಾಸು ಸ್ಥಿತಿಗತಿಯ ಕುರಿತು ವರದಿ ಬಿಡುಗಡೆ ಮಾಡಿದ್ದು, 2022-23ರ ಸಾಲಿನಲ್ಲಿ ದೇಶದ ಒಟ್ಟು 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ ಎಂದು ತಿಳಿಸಿದೆ. ಈ ಪೈಕಿ ಕರ್ನಾಟಕವು 13,496 ಕೋಟಿ ರೂ. ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ.
ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: 37,000 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುವ ಮೂಲಕ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ (19,865 ಕೋಟಿ ರೂ.) ಮತ್ತು ಒಡಿಶಾ (19,456 ಕೋಟಿ ರೂ.) ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. 13,564 ಕೋಟಿ ರೂಪಾಯಿ ಆದಾಯದೊಂದಿಗೆ ಜಾರ್ಖಂಡ್ ನಾಲ್ಕನೇ ಸ್ಥಾನದಲ್ಲಿದೆ.
ಹೆಚ್ಚುವರಿ ಆದಾಯ ಗಳಿಸಿದ ಪ್ರಮುಖ ರಾಜ್ಯಗಳು: ಕರ್ನಾಟಕದ ನಂತರ ಛತ್ತೀಸ್‌ಗಢ (8,592 ಕೋಟಿ ರೂ), ತೆಲಂಗಾಣ (5,944 ಕೋಟಿ ರೂ.), ಉತ್ತರಾಖಂಡ (5310 ಕೋಟಿ ರೂ.), ಮಧ್ಯಪ್ರದೇಶ (4091 ಕೋಟಿ ರೂ.) ಮತ್ತು ಗೋವಾ (2,399 ಕೋಟಿ ರೂ.) ಸ್ಥಾನ ಪಡೆದಿವೆ. ಈ 16 ರಾಜ್ಯಗಳಲ್ಲಿ 10 ರಾಜ್ಯಗಳು ಬಿಜೆಪಿ ಆಡಳಿತದಲ್ಲಿವೆ.
ಹಿಂದುಳಿದ ರಾಜ್ಯಗಳ ಪ್ರಗತಿ: ಹಿಂದೆ 'ಬಿಮಾರು' ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಈ ಪಟ್ಟಿಯಲ್ಲಿ ಮೇಲಿದ್ದು, ಅವುಗಳ ಪ್ರಗತಿಯನ್ನು ವರದಿ ಎತ್ತಿ ತೋರಿಸಿದೆ.
ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯಗಳು: ಕೈಗಾರಿಕಾ ಪ್ರಗತಿಯನ್ನು ಹೊಂದಿದ್ದರೂ ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 12 ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ಬಿಹಾರದಂತಹ ರಾಜ್ಯಗಳು ಸೇರಿವೆ.