MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

I Love Muhammad: ಯಾಕೆ ಈ ಟ್ರೆಂಡ್ ವೈರಲ್ ಆಗ್ತಿದೆ? ಏನಿದರ ಸತ್ಯ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ #ILoveMuhammad ಟ್ಯಾಗ್‌ನ ಮೂಲ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಾಗಿದೆ. ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ.

2 Min read
Mahmad Rafik
Published : Sep 23 2025, 02:35 PM IST
Share this Photo Gallery
  • FB
  • TW
  • Linkdin
  • Whatsapp
17
#ILoveMuhammad
Image Credit : Nargis Bano/X

#ILoveMuhammad

ಕಳೆದ 10-12 ದಿನಗಳಿಂದ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ #ILoveMuhammad ಎಂಬ ಟ್ಯಾಗ್ ವೈರಲ್ ಆಗುತ್ತಿವೆ. ಈ ಟ್ಯಾಗ್ ಜೊತೆಯಲ್ಲಿ ಮುಸ್ಲಿಮರು ಕೆಲವೊಂದು ಫೋಟೋ ಮತ್ತು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಶುರುವಾಗಿದ್ಯಾಕೆ? ಈ ಟ್ಯಾಗ್ ಬಳಸುತ್ತಿರೋದು ಯಾಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

27
ಈದ್ ಮಿಲಾದ್
Image Credit : Abu Asim Azmi/X

ಈದ್ ಮಿಲಾದ್

ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದ ರಾವತ್‌ಪುರದಲ್ಲಿ ಈದ್ ಮಿಲಾದ್ ಹಿನ್ನೆಲೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಕೆಲವರು "ಐ ಲವ್ ಮುಹಮ್ಮದ್" ಪದವುಳ್ಳ ಬ್ಯಾನರ್‌ ಹಾಕಿದ್ದರು. ಮತ್ತೊಂದಿಷ್ಟು ಜನರು "ಐ ಲವ್ ಮುಹಮ್ಮದ್" ಎಂಬ ಫಲಕಗಳನ್ನು ಹಿಡಿದುಕೊಂಡಿದ್ದರು. ಈ ನಡೆಯನ್ನು ಖಂಡಿಸಿದ್ದ ಹಿಂದೂ ಸಂಘಟನೆಗಳು, ಈ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನಡಿ ಹಾಕ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

Related Articles

Related image1
Fact Check: ಉರ್ದು ಬಳಕೆ ಬಗ್ಗೆ ಹಿಂದಿ ನ್ಯೂಸ್ ಚಾನೆಲ್‌ಗಳಿಗೆ ನೋಟಿಸ್ ನೀಡಿಲ್ಲ; ಪಿಐಬಿ ಸ್ಪಷ್ಟನೆ
Related image2
ದಸರಾ ಉದ್ಘಾಟನೆಗೂ ಮುನ್ನ ಬಾನು ಮುಸ್ತಾಕ್ ಇಸ್ಲಾಂ ಕುರಿತು ಸ್ಪಷ್ಟನೆ ನೀಡಲಿ: ಶಾಸಕ ಯತ್ನಾಳ್
37
"ಐ ಲವ್ ಮುಹಮ್ಮದ್" ಬ್ಯಾನರ್ ಹಿಡಿದು ಪ್ರತಿಭಟನೆ
Image Credit : Abu Asim Azmi/X

"ಐ ಲವ್ ಮುಹಮ್ಮದ್" ಬ್ಯಾನರ್ ಹಿಡಿದು ಪ್ರತಿಭಟನೆ

ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಾಗದಿದ್ದರೂ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದರು. ಈ ಸಂಬಂಧ ಅಶಾಂತಿಗೆ ಕಾರಣರಾದ 24 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕಾನ್ಪುರ ಘಟನೆಗಳ ಬಳಿಕ ಉನ್ನಾವೋದಲ್ಲಿಯೂ ಯುವಕರು "ಐ ಲವ್ ಮುಹಮ್ಮದ್" ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವು ಸ್ಥಳದಲ್ಲಿ ಕಲ್ಲು ತೂರಾಟವೂ ನಡೆಯಿತು. ಈ ಸಂಬಂಧ ಐವರ ಬಂಧನ ಆಗಿತ್ತು.

47
64 ಜನರ ವಿರುದ್ಧ ಪ್ರಕರಣ
Image Credit : Abu Asim Azmi/X

64 ಜನರ ವಿರುದ್ಧ ಪ್ರಕರಣ

ಮಹಾರಾಜಗಂಜ್‌ನಲ್ಲಿಯೂ ಪೊಲೀಸರು ಮುಸ್ಲಿಮರ ಮೆರವಣಿಗೆಯನ್ನು ತಡೆದು 64 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹಾಗೆಯೇ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕೆಲ ಯುವಕರು ಉಗ್ರಗಾಮಿ ಘೋಷಣೆಗಳನ್ನು ಕೂಗಿರುವ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಕೌಶಾಂಬಿಯಲ್ಲಿ ಉದ್ವಿಘ್ನತೆ ಹೆಚ್ಚಾಗಿತ್ತು. ಈ ಘಟನೆ ಸಂಬಂಧವೂ ಪೊಲೀಸರು ಡಜನ್‌ಗಟ್ಟಲೇ ಜನರನ್ನು ಬಂಧಿಸಿದ್ದರು.

57
 ನಮ್ಮ ಸಾಂವಿಧಾನಿಕ ಹಕ್ಕು
Image Credit : Abu Asim Azmi/X

ನಮ್ಮ ಸಾಂವಿಧಾನಿಕ ಹಕ್ಕು

ಈ ಎಲ್ಲಾ ಘಟನೆಗಳನ್ನು ಖಂಡಿಸಿ ಲಕ್ನೋದಲ್ಲಿ ಮಹಿಳೆಯರು ವಿಧಾನಸಭೆಗೆ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ "ಐ ಲವ್ ಮುಹಮ್ಮದ್" ಘೋಷಣೆ ಕೂಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಾಮಾಜಿಕ ಕಾರ್ಯಕರ್ತೆ ಸುಮಯಾ ರಾಣಾ, ಐ ಲವ್ ಮುಹಮ್ಮದ್ ಎಂದು ಹೇಳುವುದು ನಮ್ಮ ಸಾಂವಿಧಾನಿಕ ಹಕ್ಕು. ಈ ರೀತಿಯಾಗಿ ಪ್ರಕರಣಗಳನ್ನು ದಾಖಲಿಸೋದು ತಪ್ಪು ಎಂದು ಹೇಳಿದ್ದರು.

ಇದನ್ನೂ ಓದಿ: ನಮಾಜ್‌ಗೂ ಮುನ್ನ ಮುಸ್ಲಿಮರು ವಜು ಮಾಡಿಕೊಳ್ಳೋದು ಏಕೆ? ಏನಿದರ ಮಹತ್ವ?

67
ದೇಶದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ
Image Credit : X: @ShabrezEram @TheIndMuslim @Imlucknowi @naseerCorpGhmc

ದೇಶದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ

ಈ ಘಟನೆಗಳ ಬಳಿಕ ಹೈದರಾಬಾದ್ ಮತ್ತು ನಾಗ್ಪುರದಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ನೇತೃತ್ವದಲ್ಲಿ ಧಾರ್ಮಿಕ ಗುಂಪುಗಳು ಮತ್ತು ರಾಜಕೀಯ ನಾಯಕರು ದೇಶದ ಹಲವು ಪ್ರದೇಶಗಳಲ್ಲಿ ಪ್ರತಿಭಟನೆ ನಡೆದಿವೆ. ಉತ್ತರಾಖಂಡದ ಕಾಶಿಪುರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟಾಗಿದ್ದರಿಂದ ಕಲ್ಲು ತೂರಾಟ ನಡೆದಿದ್ದರಿಂದ ಹಲವು ವಾಹನಗಳು ಜಖಂಗೊಂಡಿದ್ದವು.

लखनऊ विधानसभा के सामने मुस्लिम महिलाओं ने कानपुर मे हुई FIR के विरोध मे ज़बरदस्त विरोध प्रदर्शन किया , प्रदर्शन के दौरान सभी महिलाओं को पुलिस ने डिटेन कर लिया ,

कानपुर पुलिस की नज़र मे I Love मोहम्मद लिखना गुनाह है ,#ILoveMuhammadpic.twitter.com/VXCUdFUXkH

— Nargis Bano (@Nargis_Bano78) September 20, 2025

77
ಯಾರು ಏನು ಹೇಳಿದರು?
Image Credit : x

ಯಾರು ಏನು ಹೇಳಿದರು?

  • ಸಮಾಜವಾದಿ ಪಕ್ಷ: ನಾನು ರಾಮನನ್ನು ಪ್ರೀತಿಸುತ್ತೇನೋ ಅಂತ ಹೇಳಿವುದು ನನ್ನ ಸ್ವಾತಂತ್ರ್ಯವೋ, ಅವರು ಮಹಮ್ಮದ್‌ನನ್ನು ಪ್ರೀತಿಸೋದಾಗಿ ಹೇಳಿದ್ದಾರೆ. ಇದು ನಮ್ಮ ಸ್ವಾತಂತ್ರ್ಯವಾಗಿದೆ.
  • ಬಿಜೆಪಿ: ಕಾನೂನು ಉಲ್ಲಂಘನೆಯಾದ್ರೆ ಖಂಡಿತವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
  • ಧಾರ್ಮಿಕ ಮುಖಂಡರು: ಜಮಾತ್ ರಝಾ-ಎ-ಮುಸ್ತಫಾ, ವಿಶ್ವ ಸೂಫಿ ವೇದಿಕೆ ಹಿಂಸಾಚಾರವನ್ನು ಖಂಡಿಸುತ್ತವೆ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಕರೆ ನೀಡುತ್ತವೆ ಎಂದು ಪ್ರತಿಕ್ರಿಯೆ ನೀಡುತ್ತೇವೆ.
  • ಅಸಾದುದ್ದೀನ್ ಓವೈಸಿ: ನಾನು ಮುಹಮ್ಮದ್ ಅವರನ್ನು ಪ್ರೀತಿಸುತ್ತೇನೆ ಎಂದು ಹೇಳುವುದು ಅಪರಾಧವಲ್ಲ. ಇದು ಧಾರ್ಮಿಕ ಸ್ವಾತಂತ್ರ್ಯ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಕಾನ್ಪುರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಝಮ್ ಝಮ್ ನೀರಿನ ರಹಸ್ಯ: ನಿಂತು ಕುಡಿಯೋದ್ಯಾಕೆ? ವಿಶ್ವದ ಅತ್ಯಂತ ಶುದ್ಧ ಜಲ ಅಂತ ಕರೆಯೋದ್ಯಾಕೆ?

बिस्मिल्लाह... 🙌
Start now #ILoveMuhammad#ILoveMuhammadﷺpic.twitter.com/lo5nm1a6OJ

— Azam Khan ( 𝗽𝗮𝗿𝗼𝗱𝘆 ) (@Azam_khan022) September 21, 2025

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭಾರತ ಸುದ್ದಿ
ಇಸ್ಲಾಮ್
ಪ್ರತಿಭಟನೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved