ಈ ಸುಳ್ಳು ಸುದ್ದಿ ನಂಬ್ಕೊಂಡು ತಿರುಪತಿಗೆ ಹೋದ್ರೆ ಸಮಸ್ಯೆಗೆ ಸಿಲುಕೋದು ಗ್ಯಾರಂಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ತಿರುಪತಿ ನವಜೋಡಿ ವಿಶೇಷ ದರ್ಶನದ ಸುದ್ದಿ ಸಂಪೂರ್ಣ ಸುಳ್ಳು ಎಂದು ಟಿಟಿಡಿ ಸ್ಪಷ್ಟನೆ ನೀಡಿದೆ. ಇಂತಹ ಯಾವುದೇ ವಿಶೇಷ ದರ್ಶನದ ವ್ಯವಸ್ಥೆ ಇಲ್ಲವೆಂದು ತಿಳಿಸಿ, ಭಕ್ತರು ಮೋಸ ಹೋಗಬಾರದೆಂದು ಎಚ್ಚರಿಸಿದೆ.

ತಿರುಪತಿಗೆ ಸಂಬಂಧಿಸಿದ ಸುಳ್ಳು ಸುದ್ದಿ
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತಿರುಪತಿಗೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ವೈರಲ್ ಆಗಿದೆ. ಒಂದು ವೇಳೆ ನೀವು ಸುದ್ದಿಯನ್ನು ನಂಬಿಕೊಂಡು ತಿರುಪತಿಗೆ ಹೋದ್ರೆ ಖಂಡಿತ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಸಂಬಂಧ ಟಿಟಿಡಿ ಅಧಿಕೃತ ಹೇಳಿಕೆಯನ್ನು ನೀಡಿದೆ.
ಏನಿದು ಸುಳ್ಳು ಸುದ್ದಿ?
ಮದುವೆಯಾದ ಒಂದು ವಾರದೊಳಗೆ ನವಜೋಡಿ ಫೋಟೋ ಮತ್ತು ಆಧಾರ್ ಕಾರ್ಡ್ ತೋರಿಸಿದ್ರೆ ನೇರವಾಗಿ ಶ್ರೀನಿವಾಸ ಸ್ವಾಮಿಯ ದರ್ಶನ ಸಿಗುತ್ತದೆ. ನವಜೋಡಿ ಸರತಿ ಸಾಲಿನಲ್ಲಿವ ಕಷ್ಟ ತಪ್ಪಲಿದೆ ಎಂಬ ಬರಹವುಳ್ಳ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಟಿಟಿಡಿ ಸ್ಪಷ್ಟನೆ
ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟಿಟಿಡಿ ಸ್ಪಷ್ಟನೆಯನ್ನು ನೀಡಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿಯ ಮಾಹಿತಿಯಂತೆ ನವಜೋಡಿಗೆ ಯಾವುದೇ ವಿಶೇಷ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಹೇಳಿದೆ. ಪ್ರಸ್ತುತ 300 ರೂಪಾಯಿಯ ಟಿಕೆಟ್ ದರ್ಶನ, ಶ್ರೀವಾಣಿ ಟ್ರಸ್ಟ್ ದರ್ಶನ, ಅಂಗ ಪ್ರದಕ್ಷಿಣೆ, ವಿಐಪಿ ಬ್ರೇಕ್ ದರ್ಶನಗಳು ಮತ್ತು ಅರ್ಜಿತ ಸೇವೆಗಳ ಮೂಲಕ ದರ್ಶನದ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದೆ. ಈ ಮೂಲಕ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ದೃಢಪಡಿಸಿದೆ.
ಇದನ್ನೂ ಓದಿ: ಮಂಗಳೂರು, ಹಾಸನ, ಸಕಲೇಶಪುರದ ತಿರುಪತಿ ಭಕ್ತಾದಿಗಳಿಗೆ ಗುಡ್‌ನ್ಯೂಸ್; ಪ್ರಯಾಣ ಸುಲಭ, ಆರಾಮದಾಯಕ!
ಕಹಿ ಅನುಭವ
ಇತ್ತೀಚೆಗೆ ಬೆಂಗಳೂರು ಮೂಲದ ಭಕ್ತರೊಬ್ಬರು ತಿರುಪತಿಯಲ್ಲಿ ತಮಗಾದ ಕಹಿ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಿರುಪತಿಯ ಹೋಟೆಲ್, ಲಾಡ್ಜ್ ಸಿಬ್ಬಂದಿ ಭಕ್ತರನ್ನು ಹೇಗೆ ದೋಚುತ್ತಾರೆ ಎಂಬು ಸುದೀರ್ಘವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ಬಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ
ದಾನ ಪೆಟ್ಟಿಗೆಯಿಂದ 100 ಕೋಟಿ ಕಳ್ಳತನ
ಜಗನ್ ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ 100 ಕೋಟಿ ರೂ. ಕಳ್ಳತನ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ರಿಲೀಸ್ ಮಾಡಲಾಗಿದೆ. ಇಲ್ಲಿ ಕಳ್ಳತನ ಮಾಡಲಾದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತಿರುಪತಿ ಹುಂಡಿಯಿಂದ ಕದ್ದ 100 ಕೋಟಿ ಹೋಗಿದ್ದೆಲ್ಲಿಗೆ? CCTV ದೃಶ್ಯ ಬಿಡುಗಡೆ
⚠️ Fake News Alert ⚠️
TTD appeals to devotees not to believe or share the fake information circulating about “Newly Married Couple Darshan” at Tirumala.
For official updates, follow only TTD channels.#TTDevasthanams#FakeNewsAlertpic.twitter.com/No6cP6b5YU— Tirumala Tirupati Devasthanams (@TTDevasthanams) September 4, 2025