MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • 42ರ ಹರೆಯದಲ್ಲಿ ಕೈಫ್ ಗರ್ಭಿಣಿ, 40 ವರ್ಷದ ನಂತರ ಮಗುವಿಗೆ ಜನ್ಮ ನೀಡಿದ ನಟಿಯರಿವರು

42ರ ಹರೆಯದಲ್ಲಿ ಕೈಫ್ ಗರ್ಭಿಣಿ, 40 ವರ್ಷದ ನಂತರ ಮಗುವಿಗೆ ಜನ್ಮ ನೀಡಿದ ನಟಿಯರಿವರು

ಕತ್ರಿನಾ ಕೈಫ್ 42ನೇ ವಯಸ್ಸಿನಲ್ಲಿ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ, 40 ವರ್ಷ ದಾಟಿದ ನಂತರ ತಾಯ್ತನದ ಸುಖ ಕಂಡ ಕರೀನಾ ಕಪೂರ್, ಬಿಪಾಶಾ ಬಸು, ಭಾವನಾ ರಾಮಣ್ಣರಂತಹ ಭಾರತೀಯ ನಟಿಯರ ಪಟ್ಟಿಯನ್ನು ಈ ಲೇಖನವು ಒದಗಿಸುತ್ತದೆ.  

2 Min read
Gowthami K
Published : Sep 23 2025, 01:52 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

42ರಲ್ಲಿ ಖುಷಿ ಸುದ್ದಿ ಹಂಚಿಕೊಂಡ ನಟಿ

2021ರ 9 ಡಿಸೆಂಬರ್ ನಲ್ಲಿ ಮದುವೆಯಾದ ಬಾಲಿವುಡ್‌ ಸೆಲೆಬ್ರಿಟಿ ಜೋಡಿ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಕತ್ರಿನಾಗೆ ಈಗ 42 ವರ್ಷ ವಯಸ್ಸು, ಈ ಹಿನ್ನೆಲೆಯಲ್ಲಿ ಭಾರತೀಯ ನಟಿಯರು ಯಾರೆಲ್ಲ 40ರ ನಂತರ ಮಕ್ಕಳನ್ನು ಹಡೆದಿದ್ದಾರೆಂದು ಇಂಟರ್‌ನೆಟ್‌ ನಲ್ಲಿ ಸರ್ಚ್ ಆರಂಭವಾಗಿದೆ. ಭಾರತದಲ್ಲಿ 40ರ ನಂತರ ಮಗುವಿಗೆ ಜನ್ಮ ನೀಡಿದ ನಟಿಯರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

26
ನಟಿಯರ ಪಟ್ಟಿ
Image Credit : Instagram

ನಟಿಯರ ಪಟ್ಟಿ

  • ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ 2021ರಲ್ಲಿ ತನ್ನ ಎರಡನೇ ಮಗ ಜೆಹ್‌ಗೆ ಜನ್ಮ ನೀಡಿದಾಗ ಅವರ ವಯಸ್ಸು 40 ಆಗಿತ್ತು.
  • ನಟಿ ಅಮೃತಾ ರಾವ್ 40ನೇ ವಯಸ್ಸಿನಲ್ಲಿ ಪುತ್ರ ವೀರ್‌ಗೆ ತಾಯಿ ಆದರು.

Related Articles

Related image1
ಅವಳಿ ಮಕ್ಕಳ ಹುಟ್ಟು, ಸಾವು ಕಣ್ಮುಂದೇ ಘಟಿಸಿತು: ನಟಿ ಭಾವನಾ ರಾಮಣ್ಣ ಹೃದಯಸ್ಪರ್ಶಿ ಸಂದರ್ಶನ
Related image2
ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಸಂತಾನ ಭಾಗ್ಯ; 42ನೇ ವರ್ಷಕ್ಕೆ ಗರ್ಭಿಣಿ, 6 ತಿಂಗಳಲ್ಲಿ ಫಲ
36
ನಟಿಯರ ಪಟ್ಟಿ
Image Credit : actress katrina kaif and vicky kaushal instagram

ನಟಿಯರ ಪಟ್ಟಿ

  • ನಟಿ ನೇಹಾ ಧೂಪಿಯಾ 2021ರಲ್ಲಿ 40ನೇ ವಯಸ್ಸಿನಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು.
  • ಕನ್ನಡ ನಟಿ ಭಾವನಾ ರಾಮಣ್ಣ ಇತ್ತೀಚೆಗೆ 40ರ ವಯಸ್ಸಿನಲ್ಲಿ IVF ಮೂಲಕ ತಾಯಿಯಾಗಿ ಮಗುವಿಗೆ ಜನ್ಮ ನೀಡಿದರು.
  • ಬಿಪಾಶಾ ಬಸು 2022ರಲ್ಲಿ 44ನೇ ವಯಸ್ಸಿನಲ್ಲಿ ಪುತ್ರಿ ದೇವಿಗೆ ಜನ್ಮ ನೀಡಿದರು.
46
 40ರ ನಂತರ ಮಗುವಿನ ತಾಯಿಯಾದವರು
Image Credit : instagram

40ರ ನಂತರ ಮಗುವಿನ ತಾಯಿಯಾದವರು

  • ಬಾಲಿವುಡ್ ಮತ್ತು ಮರಾಠಿ ನಟಿ ಶಿಲ್ಪಾ ಶಿರೋಡ್ಕರ್ 40ರ ವಯಸ್ಸಿನಲ್ಲಿ ಪುತ್ರಿಗೆ ಜನ್ಮ ನೀಡಿದರು.
  • ಅನಿತಾ ಹಸಾನಂದಾನಿ ತಮ್ಮ 40 ನೇ ವಯಸ್ಸಿನಲ್ಲಿ ತಮ್ಮ ಮಗ ಆರವ್‌ಗೆ ಜನ್ಮ ನೀಡಿದರು. ಕನ್ನಡದಲ್ಲಿ ವೀರ ಕನ್ನಡಿಗ, ಗಂಡುಗಲಿ ಕುಮಾರರಾಮ ಸಿನೆಮಾದಲ್ಲಿ ನಟಿಸಿದ್ದಾರೆ.
  • ಏಕ್ತಾ ಕಪೂರ್ – ಖ್ಯಾತ ನಿರ್ದೇಶಕಿ ಮತ್ತು ನಿರ್ಮಾಪಕಿ, 42ನೇ ವಯಸ್ಸಿನಲ್ಲಿ IVF ಮೂಲಕ ಮಗ ರವಿ ಕಪೂರ್‌ಗೆ ಜನ್ಮ ನೀಡಿದರು.
56
ಸರೋಗಸಿ ಮೂಲಕ ಮಗುವಿನ ತಾಯಿಯಾದವರು
Image Credit : instagram

ಸರೋಗಸಿ ಮೂಲಕ ಮಗುವಿನ ತಾಯಿಯಾದವರು

  • ಫರಾ ಖಾನ್ – ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ, 2008ರಲ್ಲಿ 43ನೇ ವಯಸ್ಸಿನಲ್ಲಿ IVF ಮೂಲಕ ತ್ರಿಶಿಶುಗಳಿಗೆ ಜನ್ಮ ನೀಡಿದರು.
  • ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ 2013ರಲ್ಲಿ ಸುಮಾರು 43ನೇ ವಯಸ್ಸಿನಲ್ಲಿ ಸರೊಗಸಿ ಮೂಲಕ ಅಬ್ರಾಂ ಜನಿಸಿದರು.
  • ಪ್ರೀತಿ ಜಿಂಟಾ – 2021ರಲ್ಲಿ 46ನೇ ವಯಸ್ಸಿನಲ್ಲಿ ಸರೊಗಸಿ ಮೂಲಕ ಅವಳಿ ಮಕ್ಕಳಿಗೆ ತಾಯಿ ಆದರು.
66
40ರ ನಂತರ ಸ್ವಾಭಾವಿಕವಾಗಿ ಗರ್ಭಿಣಿಯಾಗಬಹುದೇ?
Image Credit : instagram

40ರ ನಂತರ ಸ್ವಾಭಾವಿಕವಾಗಿ ಗರ್ಭಿಣಿಯಾಗಬಹುದೇ?

40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಫಲವತ್ತತೆ ವಯಸ್ಸಾಗುತ್ತಾ ಹೋದಂತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. 40 ರ ನಂತರವೂ ಮಗು ಪಡೆಯಬಹುದು, ಆದರೆ ವಯಸ್ಸಾದಂತೆ ಸಹಜವಾಗಿ ಗರ್ಭಿಣಿಯಾಗುವುದು ಹೆಚ್ಚು ಸವಾಲಾಗಿರುತ್ತದೆ.ಅಧಿಕ ರಕ್ತದೊತ್ತಡ, ಗರ್ಭಾವಸ್ಥೆಯ ಮಧುಮೇಹ, ಜರಾಯು ಸಮಸ್ಯೆಗಳು ಮತ್ತು ಸಿ-ವಿಭಾಗದ ಹೆರಿಗೆಯಂತಹ ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಗರ್ಭಿಣಿಯಾಗಲು ಪ್ರಯತ್ನಿಸುವ ಮೊದಲು ವೈದ್ಯರನ್ನು ಭೇಟಿಯಾಗಿ, ನಿಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯಿರಿ. ಗರ್ಭಧಾರಣೆಯ ಸಮಯದಲ್ಲಿ ನಿಯಮಿತ ತಪಾಸಣೆಗಳು ಮತ್ತು ವೈದ್ಯಕೀಯ ಆರೈಕೆ ಮುಖ್ಯವಾಗಿರುತ್ತವೆ. 40 ರ ನಂತರ ಮಗು ಹೊಂದಲು ಹೆಚ್ಚಿನ ಅಪಾಯವಿದೆ ಎಂದರ್ಥವಲ್ಲ ಸೂಕ್ತ ವೈದ್ಯರ ಸಲಹೆ ಮುಖ್ಯವಾಗಿರುತ್ತದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್
ನಟಿ
ಕತ್ರಿನಾ ಕೈಫ್
ವಿಕಿ ಕೌಶಲ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved