LIVE NOW
Published : Jan 21, 2026, 07:02 AM ISTUpdated : Jan 21, 2026, 10:00 AM IST

India Latest News Live: ಮುಂಬೈ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ-ಆಫ್‌ ಕನಸು ಜೀವಂತ! ಹರ್ಮನ್‌ಪ್ರೀತ್ ಕೌರ್ ಪಡೆಗೆ ಸಂಕಷ್ಟ

ಸಾರಾಂಶ

ನವದೆಹಲಿ: 2026ರ ಐಪಿಎಲ್‌ಗೂ ಮುನ್ನ ಟೂರ್ನಿಯಲ್ಲಿ ಗೂಗಲ್‌ನ ಎಐ ಪ್ಲಾಟ್‌ಫಾರ್ಮ್‌ ಆಗಿರುವ ಜೆಮಿನಿ ಪ್ರಾಯೋಜಕತ್ವ ಪಡೆದಿದೆ. 3 ವರ್ಷಗಳ ಅವಧಿಗೆ ₹270 ಕೋಟಿಗೆ ಈ ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಟಾಟಾ ಗ್ರೂಪ್‌ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದರ ಅವಧಿ 2028ರ ವರೆಗೂ ಇರಲಿದೆ. ಸಹ ಪ್ರಾಯೋಜಕರಾಗಿ ಈ ಬಾರಿ ಗೂಗಲ್‌ ಜೆಮಿನಿ ಸೇರ್ಪಡೆಯಾಗಿದೆ. ಇನ್ನು, ಬಿಸಿಸಿಐ ಆಯೋಜಿಸುತ್ತಿರುವ ಡಬ್ಲ್ಯುಪಿಎಲ್‌(ವುಮೆನ್ಸ್‌ ಪ್ರೀಮಿಯರ್‌ ಲೀಗ್‌)ನಲ್ಲಿ ಚಾಟ್‌ಜಿಪಿಟಿ ಪ್ರಾಯೋಜಕತ್ವ ಹೊಂದಿದೆ. ಈ ಸಂಸ್ಥೆಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಗೂಗಲ್‌ ಜೆಮಿನಿ ಈಗ ಐಪಿಎಲ್‌ನಲ್ಲಿ ಪ್ರಾಯೋಜಕತ್ವ ಪಡೆದಿದೆ. ಎರಡು ದೊಡ್ಡ ಎಐ ಬ್ರ್ಯಾಂಡ್‌ಗಳು ಕ್ರಿಕೆಟ್‌ನಲ್ಲಿ ಭಾಗಿಯಾಗುತ್ತಿರುವುದು ಆಸಕ್ತಿದಾಯಕವಾಗಿದೆ. ಇದರಿಂದ ಕ್ರಿಕೆಟ್ ಲೋಕದಲ್ಲಿ ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಮೌಲ್ಯ ಇನ್ನೂ ಹೆಚ್ಚಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 2026ರ ಐಪಿಎಲ್‌ ಪಂದ್ಯಗಳು ಮಾ.26ಕ್ಕೆ ಆರಂಭಗೊಳ್ಳಲಿದ್ದು, ಮೇ 31ರ ವರೆಗೂ ನಡೆಯಲಿವೆ.

10:00 AM (IST) Jan 21

ಮುಂಬೈ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ-ಆಫ್‌ ಕನಸು ಜೀವಂತ! ಹರ್ಮನ್‌ಪ್ರೀತ್ ಕೌರ್ ಪಡೆಗೆ ಸಂಕಷ್ಟ

ವಡೋದರಾ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ.

 

Read Full Story

08:54 AM (IST) Jan 21

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಕೊನೆಯ ಚಾಲೆಂಜ್‌; ಇಂದು ಭಾರತ-ಕಿವೀಸ್ ಮೊದಲ ಫೈಟ್

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡವು ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ತಂಡಕ್ಕೆ ಬೂಮ್ರಾ, ಹಾರ್ದಿಕ್‌ ಪಾಂಡ್ಯರ ವಾಪಸಾತಿಯಿಂದ ಬಲ ಬಂದಿದ್ದು, ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.  

Read Full Story

08:33 AM (IST) Jan 21

ಬಾಂಗ್ಲಾದೇಶ - ನಾಪತ್ತೆಯಾಗಿದ್ದ ಹಿಂದೂ ವಿದ್ಯಾರ್ಥಿ ಶವ ನದಿಯಲ್ಲಿ ಪತ್ತೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ನಾಪತ್ತೆಯಾಗಿದ್ದ ಅಭಿ ಎಂಬ ಹಿಂದೂ ವಿದ್ಯಾರ್ಥಿಯ ಶವ ನವೊಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗಿದೆ.

Read Full Story

07:34 AM (IST) Jan 21

ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ

ಮಧುರೈ ಎಲ್‌ಐಸಿ ಕಚೇರಿಯಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ಇದೀಗ ಪೊಲೀಸರ ತನಿಖೆಯಿಂದ ಇದೊಂದು ಆಕಸ್ಮಿಕ ಘಟನೆಯಲ್ಲ, ಬದಲಿಗೆ ಡೆತ್ ಕ್ಲೇಮ್ ಫೈಲ್‌ಗಳನ್ನು ನಾಶಮಾಡಲು ಸಹೋದ್ಯೋಗಿಯೇ ನಡೆಸಿದ ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.
Read Full Story

More Trending News